• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸತತ ಮೂರು ಬಾರಿ ಸೋತಿದ್ದ ಈ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳುವುದೇ?

|
Google Oneindia Kannada News

ಸತತ ಮೂರು ಬಾರಿಯಿಂದಲೂ ಬೆಂಗಳೂರು ನಗರದಲ್ಲಿ ಬಿಜೆಪಿಯು ಗೆಲ್ಲಲಾಗದ ಕ್ಷೇತ್ರ ಮಹಾಲಕ್ಷ್ಮೀ ಲೇಔಟ್. ಜೆಡಿಎಸ್‌ನಿಂದ ಸತತ ಎರಡು ಬಾರಿ ಗೆಲುವು ಸಾಧಿಸಿದ್ದ ಕೆ ಗೋಪಾಲಯ್ಯ ಜೆಡಿಎಸ್ ಪಕ್ಷದಿಂದ ಉಚ್ಛಾಟನೆಗೊಂಡಿದ್ದಾರೆ.

ಇದೇ ಗೋಪಾಲಯ್ಯ ವಿರುದ್ಧ 2013ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ನೆ.ಲ. ನರೇಂದ್ರ ಬಾಬು 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಹೀನಾಯವಾಗಿ ಸೋತಿದ್ದರು.

ಕ್ಷೇತ್ರ ಪರಿಚಯ: ಕಾಂಗ್ರೆಸ್ ಭದ್ರಕೋಟೆ ಶಿವಾಜಿನಗರ ಸಮಸ್ಯೆಗಳ ಆಗರಕ್ಷೇತ್ರ ಪರಿಚಯ: ಕಾಂಗ್ರೆಸ್ ಭದ್ರಕೋಟೆ ಶಿವಾಜಿನಗರ ಸಮಸ್ಯೆಗಳ ಆಗರ

2013ಕ್ಕಿಂತಲೂ ಹೆಚ್ಚಿನ ಅಂತರದಲ್ಲಿ ಗೋಪಾಲಯ್ಯ ಗೆದ್ದಿರುವುದು ಗೋಪಾಲಯ್ಯ ಪ್ರಭಾವ ಹೆಚ್ಚಾಗಿರುವುದು ಗೋಚರಿಸುತ್ತದೆ. ಆದಾಗ್ಯೂ ಈ ಬಾರಿಯ ಉಪ ಚುನಾವಣೆಯಲ್ಲಿ ಎಲ್ಲವೂ ಅಭ್ಯರ್ಥಿಗಳ ಆಯ್ಕೆಯ ಮೇಲೆ ನಿರ್ಧಾರವಾಗಲಿದೆ.

ಗೋಪಾಲಯ್ಯ ಸ್ಪರ್ಧೆಗೆ ಸುಪ್ರೀಂಕೋರ್ಟ್‌ನಿಂದ ಅನುಮತಿ ಸಿಗದಿದ್ದರೆ ಅವರ ಪತ್ನಿ ಹಾಗೂ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಅವರು ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

ಆದರೆ ಗೋಪಾಲಯ್ಯ ಅವರ ಸ್ಪರ್ಧೆಗೆ ಅನುಮತಿ ಸಿಗಲಿಲ್ಲವೆಂದಾಕ್ಷಣ ಗೋಪಾಲಯ್ಯ ಅವರ ಪತ್ನಿಗೆ ಟಿಕೆಟ್ ನೀಡಲು ಬಿಜೆಪಿ ಸಮ್ಮತಿಸಲಿದೆಯೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಬಿಜೆಪಿಯಿಂದ ನೆ.ಲ. ನರೇಂದ್ರ ಬಾಬು ಅವರಿಗೆ ಟಿಕೆಟ್ ಸಿಗದೆ ಇದ್ದರೆ, ಕಾಂಗ್ರೆಸ್‌ಗೆ ನೆ.ಲ. ನರೇಂದ್ರ ಬಾಬು ಮರಳಿ ಸ್ಪರ್ಧಿಸಲಿದ್ದಾರೆಯೇ ಎನ್ನುವ ಅನುಮಾನವೂ ಇದೆ.

ಯಶವಂತಪುರ ಕ್ಷೇತ್ರ ಪರಿಚಯ: ಯಶಸ್ಸು ಯಾರಿಗೂ ಸುಲಭವಲ್ಲಯಶವಂತಪುರ ಕ್ಷೇತ್ರ ಪರಿಚಯ: ಯಶಸ್ಸು ಯಾರಿಗೂ ಸುಲಭವಲ್ಲ

ಅನರ್ಹ ಶಾಸಕರ ಪತ್ನಿ ಹಾಗೂ ಮಾಜಿ ಉಪ ಮೇಯರ್ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಹೀಗಾಗಲಿ ನೆ.ಲ ನರೇಂದ್ರಬಾಬು ಮತ್ತೆ ಕಾಂಗ್ರೆಸ್ ಕದ ತಟ್ಟಿದರೂ ಆಶ್ಚರ್ಯವಿಲ್ಲ.

ವಾರ್ಡ್‌ಗಳು:ನಂದಿನಿ ಲೇಔಟ್, ಮಾರಪ್ಪನಪಾಳ್ಯ, ನಾಗಪುರ, ಮಹಾಲಕ್ಷ್ಮೀಪುರಂ, ಶಕ್ತಿ ಗಣಪತಿ ನಗರ, ಶಂಕರಮಠ, ವೃಷಭಾವತಿ ನಗರ ವಾರ್ಡ್‌ಗಳು ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 7 ವಾರ್ಡ್‌ಗಳಲ್ಲಿ 4 ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ನಾಯಕರು ಜಯಗಳಿಸಿದ್ದಾರೆ.

ಕ್ಷೇತ್ರ ಜಾತಿ ಲೆಕ್ಕಾಚಾರ : ಒಕ್ಕಲಿಗರು 80,000, ಹಿಂದುಳಿದ ವರ್ಗ 50,000, ಎಸ್ಸಿ 30,000, ಲಿಂಗಾಯತ 22,000, ಮುಸ್ಲಿಂ 7000
2018ರ ವಿಧಾನಸಭಾ ಫಲಿತಾಂಶ-ಕೆ.ಗೋಪಾಲಯ್ಯ(ಜೆ)-88,218
ನೆ.ಲ ನರೇಂದ್ರಬಾಬು(ಬಿ)-47,118, ಮಂಜುನಾಥ್ (ಕಾ)-20.

English summary
Karnataka By-Elections 2019: Read all about Mahalakshmi Layout assembly constituency of Bengaluru. Get election news from Bengaluru. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X