ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವರಾತ್ರಿ ಅಂಗವಾಗಿ ಓಂಕಾರ್ ಹಿಲ್ಸ್ ಸುತ್ತೋಣ ಬನ್ನಿ

By ಗುರುರಾಜ್ ಪೋಶೆಟ್ಟಿಹಳ್ಳಿ
|
Google Oneindia Kannada News

ಮಾಘ ಕೃಷ್ಣ ತ್ರಯೋದಶಿ ದಿನ ಶಿವರಾತ್ರಿ ಅಂಗವಾಗಿ ವಿಶೇಷ ಅಭಿಷೇಕ, ವೇದ ಮಂತ್ರ ಘೋಷ, ರುದ್ರ ಪಠಣ, ಪೂಜಾಕಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗರಣೆ ಬೆಂಗಳೂರಿನ ವಿವಿಧ ಶಿವಾಲಯಗಳಲ್ಲಿ ಆಯೋಜನೆಗೊಂಡಿದೆ. ಶಿವರಾತ್ರಿಯ ನಿಮಿತ್ತ ಬೆಂಗಳೂರಿನ ಪ್ರಮುಖ ಶಿವಾಲಯ ಓಂಕಾರ ಆಶ್ರಮದ ಬಗ್ಗೆ ಲೇಖನ ಇಲ್ಲಿದೆ

ಬೆಂಗಳೂರಿನ ಓಂಕಾರ ಆಶ್ರಮ ಪ್ರೇಕ್ಷಣೀಯ ಸ್ಥಳವೂ ಹೌದು, ಧಾರ್ಮಿಕ ಕ್ಷೇತ್ರವೂ ಹೌದು. ಸುತ್ತಣದ ಹಚ್ಚ ಹಸಿರ ರಮಣೀಯ ದೃಶ್ಯದ ಝೇಂಕಾರ ಈ ಪುಣ್ಯ ಕ್ಷೇತ್ರ ಹಲವು ವಿಶಿಷ್ಟತೆಗಳಿಂದ ಕೂಡಿದೆ. ರಾಜ್ಯದ ಏಕೈಕ ಮತ್ಸ್ಯ ನಾರಾಯಣ ದೇವಸ್ಥಾನ ಇರುವುದು ಇದೇ ಕ್ಷೇತ್ರದಲ್ಲಿ. ಮಹಾಶಿವರಾತ್ರಿಯನ್ನು ಇಲ್ಲಿ ಅತ್ಯಂತ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಶಿವರಾತ್ರಿಯ ಸಂಭ್ರಮದಲ್ಲಿ ಆಶ್ರಮದ ಕಿರು ಪರಿಚಯ ಇಲ್ಲಿದೆ.

ಬೆಂಗಳೂರಿನ ಕೆಂಗೇರಿ - ಉತ್ತರಹಳ್ಳಿಗೆ ಹೋಗುವ ಮಾರ್ಗದಲ್ಲಿ ಆಶ್ರಮ ಮತ್ತು ಎಲ್ಲಕ್ಕೂ ಕಲಸವಿಟ್ಟಂತೆ ಶ್ವೇತವರ್ಣದ ವೈಭವದಲ್ಲಿ ನಿರ್ಮಾಣಗೊಂಡಿರುವ ಶ್ರೀದ್ವಾದಶ ಜ್ಯೋತಿರ್ಲಿಂಗ ಭವ್ಯದೇವಸ್ಥಾನವಿದೆ. ಒಟ್ಟು 16 ಎಕರೆ ಜಾಗದಲ್ಲಿ ಈ ಆಶ್ರಮವನ್ನು ನಿರ್ಮಿಸಲಾಗಿದೆ. ವೇದಪಾಠ ಶಾಲೆ, ಯಾಗ ಶಾಲೆ ಮತ್ತು ಗೋ ಶಾಲೆಗಳು ಆಶ್ರಮದಲ್ಲಿವೆ.

ಆಶ್ರಮದ ಇತಿಹಾಸ

ಆಶ್ರಮದ ಇತಿಹಾಸ

1994ರಲ್ಲಿ ಸದ್ಗುರು ಶ್ರೀ ಶಿವಪುರಿ ಮಹಾಸ್ವಾಮಿಗಳು ಭಕ್ತಾಧಿಗಳ ಅನುಕೂಲಕ್ಕೆ ಒಂದೇ ಸ್ಥಳದಲ್ಲಿ ದ್ವಾದಶ ಜ್ಯೋತಿರ್ಲಿಂಗ ದರ್ಶನ ವ್ಯವಸ್ಥೆ ಮಾಡುವ ಉದ್ದೇಶದಿಂದ ಒಂದೊಂದು ಲಿಂಗಕ್ಕೂ ಪ್ರತ್ಯೇಕ ದೇವಸ್ಥಾನ ನಿರ್ಮಿಸುವ ಯೋಜನೆ ಹಮ್ಮಿಕೊಂಡರು. ಅವರ ಆಣತಿಯಂತೆ 2000ರಲ್ಲಿ ದೇವಸ್ಥಾನ ನಿರ್ಮಾಣ ಕಾಮಗಾರಿ ಪ್ರಾರಂಭವಾಯಿತು. 2007ರಲ್ಲಿ ಶಿವಪುರಿಶ್ರೀಗಳು ಬ್ರಹ್ಮಲೀನರಾದನಂತರ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಮಧುಸೂದನಾನಂದಪುರಿ ಸ್ವಾಮಿಜಿ ಪೀಠವನ್ನು ಆಲಂಕರಿಸಿ ಗುರುಗಳ ಅಣತಿಯಂತೆ 2011 ಫೆ.16ರಂದು ಜ್ಯೋತಿರ್ಲಿಂಗ ದೇವಸ್ಥಾನಗಳನ್ನು ಲೋಕಾರ್ಪಣೆ ಮಾಡಿರುತ್ತಾರೆ.

ದ್ವಾದಶ ಜ್ಯೋತಿರ್ಲಿಂಗ ದರ್ಶನ

ದ್ವಾದಶ ಜ್ಯೋತಿರ್ಲಿಂಗ ದರ್ಶನ

ರಾಮೇಶ್ವರದಿಂದ ಕೇದಾರದವರೆಗೂ 12 ಜ್ಯೋತಿರ್ಲಿಂಗಗಳು ನೆಲೆಯಾಗಿವೆ. ಭಕ್ತಾಧಿಗಳ ಕೆಲವು ಅನನುಕೂಲಗಳಿಂದಾಗಿ ಎಲ್ಲ ಜ್ಯೋತಿರ್ಲಿಂಗ ದೇವಸ್ಥಾನಗಳನ್ನು ಒಟ್ಟಿಗೆ ದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ಓಂಕಾರ ಆಶ್ರಮದಲ್ಲಿ 12 ಜ್ಯೋತಿರ್ಲಿಂಗಗಳ ದರ್ಶನ ಭಾಗ್ಯ ಭಕ್ತರಿಗೆ ಸಾಧ್ಯವಾಗಲಿದೆ.

ಪ್ರಧಾನ ದೇವರಾಗಿ 108 ಅಡಿ ಗೋಪುರದ ಗರ್ಭಗುಡಿಯಲ್ಲಿ ಓಂಕಾರೇಶ್ವರ ಲಿಂಗದ ಜೊತೆ ಸ್ಪತಿಕದ ಶ್ರೀಚಕ್ರವಿದ್ದು ದೇವಾಲಯವಿದ್ದು ಓಂಕಾರ ಆಶ್ರಮದಲ್ಲಿ 12 ಜ್ಯೋತಿರ್ಲಿಂಗ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರೆ 13 ಸಾವಿರ ಬಾಣಲಿಂಗ ದರ್ಶನದ ಫಲ ಪ್ರಾಪ್ರಿಯಾಗುತ್ತದೆ

‘ಮಹಾ’ ಶಿವರಾತ್ರಿ

‘ಮಹಾ’ ಶಿವರಾತ್ರಿ

ಓಂಕಾರ ಆಶ್ರಮದಲ್ಲಿ ಶಿವರಾತ್ರಿಯನ್ನು ವಿಶೇಷವಾಗಿ ಮತ್ತು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಅಂದು ಮುಂಜಾನೆ 6ರಿಂದ 24 ಗಂಟೆಗಳ ಕಾಲ ನಿರಂತರ ಧಾರ್ಮಿಕ ಕಾರ್ಯಗಳು ನೆರವೇರುತ್ತವೆ, ರಥೋತ್ಸವ, ಪಲ್ಲಕ್ಕಿ ಉತ್ಸವ, ನಾಲ್ಕು ಯಾಮ ಪೂಜೆ. ಗಂಗಾಜಲ ಅಭಿಷೇಕ ,ಭಜನೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇನ್ನೊಂದು ವಿಶೇಷ ಎಂದರೆ, ಶಿವರಾತ್ರಿಯಂದು ಭಕ್ತಾಧಿಗಳಿಗೆ ಓಂಕಾರೇಶ್ವರ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ದೇವಪ್ರಯಾಗದಿಂದ ಗಂಗಾಜಲವನ್ನು ತರಿಸಲಾಗುತ್ತದೆ. ಆ ಜಲದಿಂದ ಶಿವನಿಗೆ ಅಭಿಷೇಕ ಮಾಡುವ ಸೌಭಾಗ್ಯವನ್ನು ಭಕ್ತರಿಗೆ ನೀಡಲಾಗುತ್ತದೆ. ಶಿವನಿಗೆ ಗಂಗಾಜಲ ಅಭಿಷೇಕ ಮಾಡುವುದರಿಂದ ಸರ್ವ ಪಾಪಗಳು ನಿವಾರಣೆಯಾಗುತ್ತವೆ.

ಸರ್ವಧರ್ಮಗಳ ಸಮನ್ವಯ ಕೇಂದ್ರ

ಸರ್ವಧರ್ಮಗಳ ಸಮನ್ವಯ ಕೇಂದ್ರ

ಈ ಓಂಕಾರ ಪರಿಸರ ನಿಜಕ್ಕೂ ಇದು ಸರ್ವಧರ್ಮಗಳ ಸಮನ್ವಯ ಕೇಂದ್ರವೇ ಹೌದು. ಜಗತ್ತಿನ ದೊಡ್ಡ ಗಡಿಯಾರವನ್ನು ಹೊಂದಿರುವ ಗುಡ್ಡದ ಪರಿಸರದಲ್ಲಿ ಓಂಕಾರೇಶ್ವರ, ವನದುರ್ಗೆಯ ಮಡಿಲನ್ನು ಆವರಿಸಿಕೊಂಡಿರುವ ಹಿಂದು, ಕ್ರೈಸ್ತ, ಮುಸಲ್ಮಾನ, ಬೌದ್ಧ, ಜೈನ ಹೀಗೆ ಎಲ್ಲಾ ಧರ್ಮಗಳು ಇಲ್ಲಿ ಪ್ರತಿಷ್ಠಾಪಿತಗೊಂಡಿದೆ.
ಮೊದಲ ನೋಟದಲ್ಲೇ ಮನಸೂರೆಗೊಳ್ಳುವಂತಹ ಲಂಡನ್ನಿನ ಬಿಗ್‍ಬೆನ್ ಗೋಪುರ ಗಡಿಯಾರಕ್ಕಿಂತಲೂ ದೊಡ್ಡದಾದ ಬೆಂಗಳೂರಿನ ಅತಿ ದೊಡ್ಡದಾದ 40 ಅಡಿ ಎತ್ತರದ ವಿಶ್ವದ ಬೃಹತ್ ಗಡಿಯಾರವು ತನ್ನ ಭವ್ಯತೆಯಿಂದ, ಭಿನ್ನತೆಯಿಂದ ಇಡೀ ದೈವಿಕ ಪರಿಸರಕ್ಕೆ ತನ್ನದೇ ಆದ ಶೋಭೆ ತಂದಿದೆ. ಹೆಚ್.ಎಮ್.ಟಿ.ಯವರ ಬೃಹತ್ ಗಡಿಯಾರವನ್ನು ಕಣ್ತುಂಬಿಕೊಂಡು ಸುಮಾರು 50 ಮೆಟ್ಟಿಲುಗಳನ್ನೇರಿ ನಿಂತಲ್ಲಿ ಎದುರಾಗುತ್ತದೆ ಸರ್ವಧರ್ಮಗಳ ಬೀಡು.

ಪಂಚಲೋಹದ ಅತಿದೊಡ್ಡ ಗಂಟೆ

ಪಂಚಲೋಹದ ಅತಿದೊಡ್ಡ ಗಂಟೆ

ದ್ವಾದಶಲಿಂಗ ದೇಗುಲದ ದರ್ಶನ ಮಾಡಿಕೊಂಡು ಕೆಳಗೆ ಬಂದಲ್ಲಿ ಶ್ರೀ ಶಿವಪುರ ಸ್ವಾಮಿಗಳು ಸಮಾಧಿ ಸ್ಥಳದ ಎದುರಿಗೆ 1200 ಕೆ.ಜಿ. ಭಾರವಿರುವ ಪಂಚಲೋಹದ ಅತಿದೊಡ್ಡ ಗಂಟೆ ಗಮನ ಸೆಳೆಯುತ್ತದೆ. ಮುಂದೆ ಕಲ್ಲಿನಲ್ಲಿ ಕಡೆದ ಕೇವಲ ತನ್ನ ಕೊಕ್ಕಿನ ಬ್ಯಾಲೆನ್ಸ್‍ನಿಂದ ಹಾರುವ ರೀತಿಯಲ್ಲಿ ಕೆತ್ತಲ್ಪಟ್ಟಿರುವ ಗರುಡ, ಗರುಡನ ಎದುರಿನ ಶಿಲ್ಪಕಲಾಕೃತಿಗಳು ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತದೆ.

ಮೆಜೆಸ್ಟಿಕ್‍ನಿಂದ ಪದ್ಮನಾಭನಗರ, ಉತ್ತರಹಳ್ಳಿ, ಚನ್ನಸಂದ್ರ ಮಾರ್ಗದಲ್ಲಿ ಕೇಂಗೇರಿಗೆ ಹೋಗುವ ಮಾರ್ಗದಲ್ಲಿ ಕೇವಲ 20ಕಿ.ಮೀ. ದೂರದಲ್ಲಿದೆ ಈ ರಮಣೀಯ ಪರಿಸರ.

English summary
Maha Shivaratri Special : Know the history, specialty of Omkara Hills Temple, Uttarahalli main road in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X