ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವರಾತ್ರಿ ವಿಶೇಷ: ಅಂತರಗಂಗೆ ದಕ್ಷಿಣಮುಖ ನಂದಿತೀರ್ಥ ಕಲ್ಯಾಣಿ

By ಕೆ.ವಿ ಪದ್ಮಾವತಿ
|
Google Oneindia Kannada News

ಬೆಂಗಳೂರು ಐತಿಹಾಸಿಕವಾಗಿಯೂ, ಆಧುನಿಕ ವಿಜ್ಞಾನ ಪ್ರಗತಿಗೂ ಹಾಗೂ ಆಧ್ಯಾತ್ಮಿಕ ವಿಚಾರ ಪ್ರಚೋದನೆಗಳಿಗೆ ಆವಾಸ ಸ್ಥಾನವಾಗಿರುವಂತೆ ದೇವಮಂದಿರಗಳ ಬೀಡು ಹೌದು! ಬೆಂಗಳೂರಿನ ಪೂರ್ವಭಾಗ ಮಾಂಡವ್ಯ ಕ್ಷೇತ್ರವೆಂದು, ಪಶ್ಚಿಮ ಭಾಗ ಗೌತಮ ಕ್ಷೇತ್ರವೆಂದು ಖ್ಯಾತಿ ಹೊಂದಿದೆ.

ದಿನೇ ದಿನೇ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತ ಭಾರತ ದೇಶದ ಪ್ರಮುಖ ನಗರಗಳಲ್ಲೊಂದಾಗಿ ಮೆರೆಯುತ್ತಿರುವ ಬೆಂಗಳೂರು ವಿವಿಧ ಭಾಷೆ, ಕೋಮಿನ ಜನಗಳ ಸಂಗಮ ಸ್ಥಳವಾಗಿದ್ದು ಭಾವೈಕ್ಯತೆಯ ಪ್ರತೀಕವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ನಗರದ ಹೃದಯ ಭಾಗದಂತಿರುವ ಮಲ್ಲೇಶ್ವರ ನಗರದ ಜಂಜಡದಿಂದ ತುಂಬಿದ್ದರೂ, ಅನೇಕ ಐತಿಹಾಸಿಕ ದೇಗುಲಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಮಲ್ಲೇಶ್ವರದ 2ನೇ ದೇವಸ್ಥಾನದ ರಸ್ತೆಯಲ್ಲಿರುವ ದಕ್ಷಿಣ ಮುಖ ನಂದಿಕೇಶ್ವರ ಸ್ವಾಮಿ ದೇಗುಲವೂ ಅತಿ ವಿಶಿಷ್ಟವೂ, ವಿಸ್ಮಯಕರವೂ ಆಗಿದೆ. ಯಾವುದೇ ಪ್ರಚಾರದ ಭರಾಟೆಯಿಲ್ಲದೆಯೂ ಅದು ತನ್ನತ್ತ ಸಹಸ್ರಾರು ಭಕ್ತರನ್ನು ಸೆಳೆಯುತ್ತಿದೆ.

ಮಲ್ಲೇಶ್ವರ ಪ್ರದೇಶವು ಹಿಂದೆ ದಟ್ಟವಾದ ಕಾಡಿನಿಂದ ಕೂಡಿದ್ದಿತು. ಅದರ ಮಧ್ಯಭಾಗದಲ್ಲಿ ಬೃಹತ್ತಾದ ಬಂಡೆಯೊಂದಿತ್ತು. ಬೆಂಗಳೂರಿಗೆ ಉತ್ತರ ದಿಕ್ಕಿನಿಂದ ಬರುವ ಪ್ರಯಾಣಿಕರು ರಾತ್ರಿ ಹೊತ್ತಿನಲ್ಲಿ ಈ ಬಂಡೆಯ ಮೇಲೆ ಬೀಡು ಬಿಡುತ್ತಿದ್ದರು.

ಶಿವರಾತ್ರಿ ಅಂಗವಾಗಿ ಓಂಕಾರ್ ಹಿಲ್ಸ್ ಸುತ್ತೋಣ ಬನ್ನಿಶಿವರಾತ್ರಿ ಅಂಗವಾಗಿ ಓಂಕಾರ್ ಹಿಲ್ಸ್ ಸುತ್ತೋಣ ಬನ್ನಿ

ಈ ಬಂಡೆಯ ಪೂರ್ವಕ್ಕೆ ಮಲ್ಲಪುರವೆಂಬ ಗ್ರಾಮ ಅದರ ಪಕ್ಕದಲ್ಲೆ ಜಕ್ಕಸಂದ್ರ ಗ್ರಾಮವು ಇದ್ದು, ಇದರ ಉತ್ತರ ಭಾಗದ ಮೇಲ್ಭಾಗಕ್ಕೆ ದೊಡ್ಡಕೆರೆಯೊಂದಿತ್ತು, ಈ ಕೆರೆ ಹಿಂದೆ ಫಲವತ್ತಾದ ಭೂಮಿ ಇದ್ದು ಮಲ್ಲಪುರದ ಜನ ಇದರಲ್ಲಿ ವ್ಯವಸಾಯ ಮಾಡಿಕೊಂಡಿದ್ದರು. ಆ ಕೆರೆ ಈಗಲೂ ಇದ್ದು, ಗಂಧದ ಕೋಠಿ ಕೆರೆ, ಸ್ಯಾಂಕಿ ಕೆರೆ ಎಂದು ಕರೆಯಲಾಗುತ್ತಿದೆ.

ಗಂಧದ ಕೋಠಿ ಕೆರೆ, ಸ್ಯಾಂಕಿ ಕೆರೆ

ಗಂಧದ ಕೋಠಿ ಕೆರೆ, ಸ್ಯಾಂಕಿ ಕೆರೆ

ಮಲ್ಲೇಶ್ವರಂ ಪ್ರದೇಶವು ಹಿಂದೆ ದಟ್ಟವಾದ ಕಾಡಿನಿಂದ ಕೂಡಿದ್ದಿತು. ಅದರ ಮಧ್ಯಭಾಗದಲ್ಲಿ ಬೃಹತ್ತಾದ ಬಂಡೆಯೊಂದಿತ್ತು. ಬೆಂಗಳೂರಿಗೆ ಉತ್ತರ ದಿಕ್ಕಿನಿಂದ ಬರುವ ಪ್ರಯಾಣಿಕರು ರಾತ್ರಿ ಹೊತ್ತಿನಲ್ಲಿ ಈ ಬಂಡೆಯ ಮೇಲೆ ಬೀಡು ಬಿಡುತ್ತಿದ್ದರು.

ಈ ಬಂಡೆಯ ಪೂರ್ವಕ್ಕೆ ಮಲ್ಲಪುರವೆಂಬ ಗ್ರಾಮ ಅದರ ಪಕ್ಕದಲ್ಲೆ ಜಕ್ಕಸಂದ್ರ ಗ್ರಾಮವು ಇದ್ದು, ಇದರ ಉತ್ತರ ಭಾಗದ ಮೇಲ್ಭಾಗಕ್ಕೆ ದೊಡ್ಡಕೆರೆಯೊಂದಿತ್ತು, ಈ ಕೆರೆ ಹಿಂದೆ ಫಲವತ್ತಾದ ಭೂಮಿ ಇದ್ದು ಮಲ್ಲಪುರದ ಜನ ಇದರಲ್ಲಿ ವ್ಯವಸಾಯ ಮಾಡಿಕೊಂಡಿದ್ದರು. ಆ ಕೆರೆ ಈಗಲೂ ಇದ್ದು, ಗಂಧದ ಕೋಠಿ ಕೆರೆ, ಸ್ಯಾಂಕಿ ಕೆರೆ ಎಂದು ಕರೆಯಲಾಗುತ್ತಿದೆ.

800 ವರ್ಷಗಳಿಗೂ ಹಿಂದಿನ ತೀರ್ಥಮಂಟಪ

800 ವರ್ಷಗಳಿಗೂ ಹಿಂದಿನ ತೀರ್ಥಮಂಟಪ

ಇಲ್ಲಿಯ ತೀರ್ಥಮಂಟಪ 800 ವರ್ಷಗಳಿಗೂ ಹಿಂದಿನದೆಂದೂ ತಿಳಿದುಬಂದರೂ ಹೆಚ್ಚಿನ ಪ್ರಚಾರವಿಲ್ಲದೆ ಬೆಳಕಿಗೆ ಬಾರದೇ ಹೋಗಿದ್ದು; 500 ವರ್ಷಗಳ ಹಿಂದೆ ಪ್ರಯಾಣಿಕರ ತಂಡ ಒಂದರಿಂದ ಪ್ರಕಟಣೆಗೊಂಡ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ (ಕಾಡುಮಲ್ಲೇಶ್ವರ) ಉದ್ಭವ ಲಿಂಗದಿಂದಾಗಿ ಈ ದೇವಸ್ಥಾನವೂ ಪ್ರಚಾರಕ್ಕೆ ಬಂದಿತೆಂದರೆ ತಪ್ಪಾಗಲಾರದು.

ಪೌರಾಣಿಕ ಆಖ್ಯಾಯಿಕೆಯ ಪ್ರಕಾರ ಗೌತಮಿ ಋಷಿಗಳು ಋಷಭಾವತಿ ನದಿ ತೀರಕ್ಕೆ(ಈಗಿನ ದೊಡ್ಡ ಬಸವಣ್ಣನ ದೇವಸ್ಥಾನ) ಆಗಮಿಸಿ ಇಲ್ಲಿಯ ಗಂಗಾಧರೇಶ್ವರನನ್ನು ಪ್ರತಿಷ್ಠಾಪಿಸಿದರು. ಇದರ ಉತ್ತರ ದಿಕ್ಕಿಗೆ ಕಾಡಿನ ಮಧ್ಯೆ ಇದ್ದ ಬಂಡೆಯ ಮೇಲೆ ಕೆಲಕಾಲ ಪರಮೇಶ್ವರನನ್ನು ಕುರಿತು ತಪಸ್ಸುಗೈದುದರ ಫಲವಾಗಿ ಲಿಂಗರೂಪಿಯಾಗಿ ದರ್ಶನವಿತ್ತನು.

ಆ ಲಿಂಗವೇ ಈಗಿನ ಮಲ್ಲಿಕಾರ್ಜುನ ಸ್ವಾಮಿ

ಆ ಲಿಂಗವೇ ಈಗಿನ ಮಲ್ಲಿಕಾರ್ಜುನ ಸ್ವಾಮಿ

ಆ ಲಿಂಗವೇ ಈಗಿನ ಮಲ್ಲಿಕಾರ್ಜುನ ಸ್ವಾಮಿ, ಪರಮಾತ್ಮ ಬಂದಮೇಲೆ ಅವನ ವಾಹನವೂ ಬರಬೇಕಲ್ಲ. ಗೌತಮರು ವೃಷಭನನ್ನು ಕುರಿತು ವಾಯುವ್ಯ ದಿಕ್ಕಿನತ್ತ ನದಿಯ ರೂಪದಲ್ಲಿ ಹರಿಯುತ್ತಿರುವ ವೃಷಭನೇ ಗುಪ್ತಗಾಮಿನಿಯಾಗಿ ಉತ್ತರ ದಿಕ್ಕಿನತ್ತ ಪರಮೇಶ್ವರನ ಅಭಿಷೇಕಕ್ಕೆ ಉಪಯೋಗವಾಗು ಎಂದು ಪ್ರಾರ್ಥಿಸಲಾಗಿ ಬಂಡೆಯ ಕೆಳಭಾಗದಲ್ಲಿ ಕಾಣಿಸಿಕೊಂಡಿತು ವೃಷಭಾವತಿ. ಅದೇ ಈಗಿನ ಬಸವದೇವರ ತೀರ್ಥದ ಕಲ್ಯಾಣಿ.

ಈ ತೀರ್ಥವನ್ನು ಮೇಲಿನ ಮಲ್ಲಿಕಾರ್ಜುನ ದೇವರ ಅಭಿಷೇಕಕ್ಕೂ ತೆಗೆದುಕೊಂಡು ಹೋಗುವ ಪದ್ಧತಿ ಇದ್ದಿತು. ಈ ಕಾರಣದಿಂದ ಇದಕ್ಕೆ ಬಸವಣ್ಣ ದೇವರತೀರ್ಥ, ಚಕ್ರತೀರ್ಥ, ವಸಂತ ಮಂಟಪದ ಕಲ್ಯಾಣಿ ಮುಂತಾಗಿ ಕರೆಯುವ ವಾಡಿಕೆ ಇದೆ.

ಕೃಷ್ಣ ಶಿಲೆಯಿಂದ ಕಡೆದಿರುವ ಬಸವ

ಕೃಷ್ಣ ಶಿಲೆಯಿಂದ ಕಡೆದಿರುವ ಬಸವ

ಕೃಷ್ಣ ಶಿಲೆಯಿಂದ ಕಡೆದಿರುವ ಬಸವ ಅತಿಸುಂದರವಾಗಿದ್ದು ಶಿಲ್ಪಿಯ ಕೈಚಳಕವನ್ನೆತ್ತಿ ತೋರಿಸುತ್ತಿದೆ. ಆಭರಣಗಳಿಂದ ಶೃಂಗಾರ ಗೊಂಡಿರುವ ಬಸವನ ಕೊರಳಲ್ಲಿ ಮೂರು ರೀತಿಯ ಸರಗಳ ಕೆತ್ತನೆಗಳು ಮೂಡಿಬಂದಿದ್ದು ಮತ್ತೊಮ್ಮೆ ಮಗದೊಮ್ಮೆ ನೋಡಬೇಕೆನ್ನಿಸುವುದು.

ಬಸವ ಕೊಂಚ ನೈರುತ್ಯ ದಿಕ್ಕಿನತ್ತ ತಿರುಗಿದ್ದು ಬಸವನಗುಡಿಯ (ವೃಷಭಾವತಿ ಜನ್ಮಸ್ಥಳ) ದೊಡ್ಡ ಬಸವನನ್ನು ನೋಡುತ್ತಿರುವಂತಿದೆ. ಬಸವನ ಹಿಂಭಾಗದಿಂದ ಬಾಯಿತನಕ ಮೂರು ಅಡಿ ಉದ್ದದಷ್ಟು ರಂಧ್ರವಿದ್ದು, ಈ ರಂಧ್ರವನ್ನು ಹೇಗೆ ಕೊರೆಯಲಾಯಿತು? ಎಂಬುದೇ ಆಶ್ಚರ್ಯದ ಸಂಗತಿಯಾಗಿದೆ. ಮಾತ್ರವಲ್ಲ ಇಂದಿನ ಆಧುನಿಕ ತಂತ್ರಜ್ಞಾನದ ಶಿಲ್ಪಿಗಳನ್ನು ಬೆಚ್ಚಚೆರಗಾಗಿಸಿದೆ.

ಈಶ್ವರನ ಲಿಂಗದ ಎದುರು ಭಾಗದಲ್ಲಿ ಕಲ್ಯಾಣಿ

ಈಶ್ವರನ ಲಿಂಗದ ಎದುರು ಭಾಗದಲ್ಲಿ ಕಲ್ಯಾಣಿ

ಬಸವನ ಹಿಂಭಾಗದಲ್ಲಿ ಗುಪ್ತಗಾಮಿನಿಯಾಗಿ ಹರಿದು ಬರುವ ಗಂಗೆ ಬಸವನ ಹಿಂಭಾಗದ ರಂಧ್ರದ ಮೂಲಕ ಪ್ರವೇಶಿಸಿ ಬಾಯಿಂದ ಹೊರಬಂದು ಬಸವನ ಮುಂದಿರುವ ಗುಂಡನಾದ ರಂಧ್ರದ ಮೂಲಕ ಈಶ್ವರನ ಲಿಂಗದ ಮೇಲೆ ಬೀಳುವಂತೆ ಮಾಡಿರುವ ಶಿಲ್ಪಿಯ ಚಮತ್ಕಾರ ಮೆಚ್ಚುವಂತದ್ದೇ ಆಗಿದೆ.

ಅನೇಕ ಶಿಲ್ಪಿಗಳು ಬಂದು ಆಶ್ಚರ್ಯ ವ್ಯಕ್ತಪಡಿಸುತ್ತಿರುವುದು ಭಾರತ ಖಂಡದಲ್ಲೇ ಮತ್ತೆಲ್ಲೂ ಇಂತಹ ಅದ್ಭುತ ಕಾಣಬರುವುದಿಲ್ಲವೆಂಬ ಅಭಿಪ್ರಾಯಕ್ಕೆ ಬಂದಿರುತ್ತಾರೆ.

ಈಶ್ವರನ ಲಿಂಗದ ಎದುರು ಭಾಗದಲ್ಲಿ ಕಲ್ಯಾಣಿ ಇದ್ದು ಇದರ ಮಧ್ಯ ಭಾಗದಲ್ಲಿ 9 ಅಡಿ ಆಳದ ಬಾವಿ ಇದೆ. ಇದರಲ್ಲೂ ಜಲದ ಸೆಲೆ ಇದೆ. ಈಶ್ವರನಿಗೆ ಅಭಿಷೇಕವಾದ ನೀರು ನಿಲ್ಲುವ ವ್ಯವಸ್ಥೆ ಇದ್ದು ಹೆಚ್ಚಾದ ನೀರು ಹೊರಹೋಗುವ ವ್ಯವಸ್ಥೆ ಮಾಡಿರುವುದು ಆಗಿನ ತಂತ್ರಜ್ಞಾನದ ಶ್ರೇಷ್ಠತೆ ತೋರುತ್ತದೆ.

ಇಲ್ಲಿ ದೀಪೋತ್ಸವ ನೋಡಲು ಚೆಂದ

ಇಲ್ಲಿ ದೀಪೋತ್ಸವ ನೋಡಲು ಚೆಂದ

ಪೌರಾಣಿಕ ಚಾರಿತ್ರಿಕ ಹಿನ್ನೆಲೆಯುಳ್ಳ ಈ ಕಲ್ಯಾಣಿ ಭಕ್ತಾದಿಗಳ ಶ್ರದ್ಧೆಯ ಕೊರೆತೆಯಿಂದಲೋ ಅಥವಾ ಮತ್ಯಾವ ಕಾರಣದಿಂದಲೋ ಹೊರಗಿನ ಸಂಪರ್ಕವನ್ನು ಕಳೆದುಕೊಂಡು ಖಾಸಗಿ ಸ್ವತ್ತಾಗಿ ಪರಿಣಮಿಸಿ ಕಲ್ಯಾಣಿಯನ್ನು ತಮ್ಮ ಸ್ವಂತದ್ದೆಂದು ಹೇಳಿಕೊಂಡು ಇಲ್ಲಿ ಕಟ್ಟಡ ನಿರ್ಮಾಣಕ್ಕೆ ತೊಡಗಿದಾಗ ಇಲ್ಲಿಯ ಸ್ಥಳೀಯರು ಎಚ್ಚರಗೊಂಡರು. ಮಲಗಿದ್ದ ಬಸವ ಎದ್ದುನಿಂತು ಗುಟುರು ಹಾಕಿದಂತೆ!

ಸ್ಥಳೀಯರು ಮುಖಂಡರ ಮುಂದಾಳತ್ವದಲ್ಲಿ ಕಟ್ಟಡ ನಿರ್ಮಾಣವನ್ನು ಪ್ರತಿಭಟಿಸಿ ಅವರು ಹಿಮ್ಮೆಟ್ಟುವಂತೆ ಮಾಡಿ, ದೇವಸ್ಥಾನದ ಜೀರ್ಣೋದ್ಧಾರವನ್ನು ಮಾಡುವ ಕಾರ್ಯಕ್ಕೆ ಸನ್ನದ್ಧರಾಗಿ ಪುನರ್ ನಿರ್ಮಾಣ ಮಾಡಿದರು. ಬಸವಣ್ಣದೇವರ ಬಲಭಾಗಕ್ಕೆ ಇದ್ದ ಗರ್ಭಗುಡಿಯಲ್ಲಿ ಇದೀಗ ಪ್ರಸನ್ನ ಬಾಲಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಕಾರ್ತಿಕ ಮಾಸದ ಕಡೆಯ ಸೋಮವಾರದಂದು ಇಲ್ಲಿ ದೀಪೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ಗಂಗಮ್ಮ ದೇವಸ್ಥಾನ, ಶಿರಡಿ ಸಾಯಿಬಾಬಾ ಮಂದಿರ, ರಾಘವೇಂದ್ರ ಸ್ವಾಮಿಗಳ ಮಠಗಳಿಂದ ಕೂಡಿದ ಈ ದೇವಾಲಯದ ಪರಿಸರವು ಪುಣ್ಯಕ್ಷೇತ್ರವಾಗಿ ಕಂಗೊಳಿಸುತ್ತಿದೆ.

English summary
Maha Shivaratri Special : Know the significance and history of Sri Dakshinamukha Nandi Tirtha Kalyani Kshetra located at Malleswaram, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X