ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಹ್ಮಾಂಡದ ಹುಟ್ಟಿನ ರಹಸ್ಯ ಬಯಲು, ‘ಮ್ಯಾಗ್ನೆಟಿಕ್ ಫೀಲ್ಡ್’ ಮೂಲ ಪತ್ತೆ..!

|
Google Oneindia Kannada News

ಬ್ರಹ್ಮಾಂಡದ ಮೂಲ ಬೆದಕುತ್ತಿದ್ದ ಬಾಹ್ಯಾಕಾಶ ವಿಜ್ಞಾನಿಗಳಿಗೆ ದೊಡ್ಡ ಗೆಲುವು ಸಿಕ್ಕಿದೆ. ಮ್ಯಾಗ್ನೆಟಿಕ್ ಫೀಲ್ಡ್ ಎಂದರೆ ಕಾಂತಕ್ಷೇತ್ರದ ಮೂಲದ ಬಗ್ಗೆ ಮಹತ್ವದ ಮಾಹಿತಿ ಲಭಿಸಿದೆ. ಈ ಬ್ರಹ್ಮಾಂಡದ ಉದಯಕ್ಕೆ ಮುನ್ನ ಮ್ಯಾಗ್ನೆಟಿಕ್ ಫೀಲ್ಡ್ (Magnetic field) ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಕೇಂಬ್ರಿಡ್ಜ್ ವಿವಿ ವಿಜ್ಞಾನಿಗಳಿಗೆ ಸಾಕ್ಷಿ ಲಭಿಸಿದೆ.

ಈಗ ವಿಜ್ಞಾನಿಗಳಿಗೆ ಲಭಿಸಿರುವ ಮಾಹಿತಿಯಿಂದ ಬ್ರಹ್ಮಾಂಡದ ಮೂಲ ಎಂದರೆ 'ಬಿಗ್ ಬ್ಯಾಂಗ್' ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ. ಇದಿಷ್ಟೇ ಅಲ್ಲದೆ ನಕ್ಷತ್ರಗಳ ಹುಟ್ಟು ಮತ್ತು ಅವುಗಳ ಸಾವಿನ ಕುರಿತಾಗಿಯೂ ಅಧ್ಯಯನ ಸುಲಭವಾಗಲಿದೆ. ಈ ಮೂಲಕ ಭೂಮಿ ಮೇಲೆ ಸೂರ್ಯನ ಅತಿಯಾದ ಶಾಖದಿಂದ ಉಂಟಾದ ಸಮಸ್ಯೆಗಳಿಗೆ ಸುಲಭ ಪರಿಹಾರ ಸಿಗಲಿದೆ.

ಯುರೇಕಾ..! ಇಲ್ಲಿ ಎಲ್ಲವೂ ಉಲ್ಟಾ, ನಕ್ಷತ್ರಕ್ಕೂ ಮೊದಲೇ ಹುಟ್ಟಿತು ಗ್ರಹ..!ಯುರೇಕಾ..! ಇಲ್ಲಿ ಎಲ್ಲವೂ ಉಲ್ಟಾ, ನಕ್ಷತ್ರಕ್ಕೂ ಮೊದಲೇ ಹುಟ್ಟಿತು ಗ್ರಹ..!

ಹಾಗೇ ಬ್ರಹ್ಮಾಂಡದ ರಾಕ್ಷಸ ಸಮೂಹ, 'ಬ್ಲ್ಯಾಕ್ ಹೋಲ್‌'ಗಳ ಕುರಿತು ಅರಿಯಬಹುದಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಹೊಸ ಹೊಸ ಗ್ರಹಗಳ ಸಂಶೋಧನೆಗೂ ಸಹಾಯಕ ಎಂದು ಈ ಸಂಶೋಧನೆಯಲ್ಲಿ ಭಾಗವಹಿಸಿದ್ದ ಕೇಂಬ್ರಿಡ್ಜ್ ವಿವಿ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಹೀಗೆ ಹಲವು ವರ್ಷಗಳಿಂದ ಕಗ್ಗಂಟಾಗಿಯೇ ಉಳಿದಿದ್ದ ಮ್ಯಾಗ್ನೆಟಿಕ್ ಫೀಲ್ಡ್ ಪ್ರಶ್ನೆಗೆ ಉತ್ತರ ಸಿಕ್ಕೇಬಿಟ್ಟಿದೆ.

ಚೀನಿ ಗ್ಯಾಂಗ್ ಪರದಾಟ..!

ಚೀನಿ ಗ್ಯಾಂಗ್ ಪರದಾಟ..!

ಹೌದು, ಇಷ್ಟುದಿನ ಅಕ್ಕಪಕ್ಕದ ದೇಶಗಳ ಮೇಲೆ ಕಣ್ಣು ಹಾಕುತ್ತಿದ್ದ ಚೀನಾ ಇದೀಗ ಬಾಹ್ಯಾಕಾಶದ ಮೇಲೆ ಹೊಂಚು ಹಾಕಿ ಕೂತಿದೆ. ಇದೇ ಕಾರಣಕ್ಕೆ ದಿನದಿನಕ್ಕೂ ಬಾಹ್ಯಾಕಾಶ ಸಂಶೋಧನೆ ಮೇಲಿನ ಹೂಡಿಕೆಯನ್ನ ಕೂಡ ಚೀನಾ ಹೆಚ್ಚಿಸುತ್ತಿದೆ.

ಇತ್ತೀಚೆಗೆ ಮ್ಯಾಗ್ನೆಟಿಕ್ ಫೀಲ್ಡ್ (Magnetic field) ಅಥವಾ ಕಾಂತಕ್ಷೇತ್ರದ ಬಗ್ಗೆ ಅಧ್ಯಯನ ನಡೆಸಲು ಚೀನಾ ಉಪಗ್ರಹ ಉಡಾಯಿಸಿತ್ತು. ಉಪಗ್ರಹದ ಮೂಲ ಉದ್ದೇಶ ಮ್ಯಾಗ್ನೆಟಿಕ್ ಫೀಲ್ಡ್ ಬಗ್ಗೆ ಅಧ್ಯಯನ ನಡೆಸುವುದೇ ಆಗಿದ್ದರೂ, ಇದರ ಹಿಂದೆ ಚೀನಾ ಬೇರೆಯದ್ದೇ ಉದ್ದೇಶ ಹೊಂದಿದೆ. ಹೆಚ್ಚುತ್ತಿರುವ ಬಾಹ್ಯಾಕಾಶ ಸ್ಪರ್ಧೆಯಲ್ಲಿ ಇತರರನ್ನು ಮೀರಿಸಲು ಚೀನಾ ಈ ಮೂಲಕ ಪರದಾಡುತ್ತಿದೆ.

ಹೊಸ ಗ್ರಹಗಳ ಸಂಶೋಧನೆ ಸುಲಭ

ಹೊಸ ಗ್ರಹಗಳ ಸಂಶೋಧನೆ ಸುಲಭ

ಮಾನವ ಭೂಮಿಯ ಹೊರತು, ಮತ್ತೊಂದು ಮನೆ ಹುಡುಕುವ ಯತ್ನದಲ್ಲಿದ್ದಾನೆ. ಇದು ಹಳೇ ವಿಚಾರವೇ ಆಗಿದ್ದರೂ ಇದೀಗ ಕೇಂಬ್ರಿಡ್ಜ್ ವಿವಿ ವಿಜ್ಞಾನಿಗಳು ನಡೆಸಿರುವ ಸಂಶೋಧನೆ ಹೊಸ ಗ್ರಹಗಳ ಸಂಶೋಧನೆಗೆ ಮತ್ತಷ್ಟು ಮೆರಗು ನೀಡಲಿದೆ.

ಕಪ್ಪುಕುಳಿಗೂ ಕೂದಲು, ಬ್ಲ್ಯಾಕ್ ಹೋಲ್‌ನ ಭಯಾನಕ ರಹಸ್ಯಕಪ್ಪುಕುಳಿಗೂ ಕೂದಲು, ಬ್ಲ್ಯಾಕ್ ಹೋಲ್‌ನ ಭಯಾನಕ ರಹಸ್ಯ

ನಕ್ಷತ್ರ ಹಾಗೂ ನಕ್ಷತ್ರ ಪುಂಜಗಳ ಹುಟ್ಟಿನ ಬಗ್ಗೆ ತಿಳಿದರೆ ಹೊಸ ಗ್ರಹಗಳನ್ನು ಹುಡುಕುವುದು ಸುಲಭವಾಗಲಿದೆ. ಹೀಗೆ ಹೊಸ ಗ್ರಹಗಳ ಶೋಧ ನಡೆದಾಗ, ಅವುಗಳ ವಾತಾವರವನ್ನು ಭೂಮಿಯಿಂದಲೇ ಅಳೆಯುವುದು ಕೂಡ ಸುಲಭವಾಗಲಿದೆ. ಹೀಗಾಗಿ ಕೇಂಬ್ರಿಡ್ಜ್ ವಿವಿ ವಿಜ್ಞಾನಿಗಳು ಕಾಂತಕ್ಷೇತ್ರದ ಬಗ್ಗೆ ಮತ್ತಷ್ಟು ಆಳವಾದ ಅಧ್ಯಯನದಲ್ಲಿ ತೊಡಗಿದ್ದಾರೆ.

ನಕ್ಷತ್ರದ ಜನನ ಹೇಗೆ..?

ನಕ್ಷತ್ರದ ಜನನ ಹೇಗೆ..?

ಬ್ರಹ್ಮಾಂಡದ ಉಗಮವಾಗಿ ಸುಮಾರು 1375 ಕೋಟಿ ವರ್ಷವಾಗಿದೆ. 1375 ಕೋಟಿ ವರ್ಷದಲ್ಲಿ ಬಿಲಿಯನ್ ಲೆಕ್ಕದಲ್ಲಿ ಗ್ಯಾಲಕ್ಷಿಗಳು ಜನ್ಮತಾಳಿವೆ. ಪ್ರತಿಯೊಂದು ಗ್ಯಾಲಕ್ಸಿಯಲ್ಲೂ ಮತ್ತೊಂದಿಷ್ಟು ಬಿಲಿಯನ್ ನಕ್ಷತ್ರಗಳು, ಗ್ರಹಗಳು ಕೂಡ ಹರಡಿವೆ. ಈ ಸಮೂಹದಲ್ಲಿ ಸೌರಮಂಡಲವೂ ಒಂದು.

ಭೂಮಿಯಲ್ಲಿ ಜೀವ ಉಗಮ ಹೇಗಾಯ್ತು? ಇಲ್ಲಿದೆ ಉತ್ತರಭೂಮಿಯಲ್ಲಿ ಜೀವ ಉಗಮ ಹೇಗಾಯ್ತು? ಇಲ್ಲಿದೆ ಉತ್ತರ

ಹೀಗೆ ಬ್ರಹ್ಮಾಂಡದಲ್ಲಿ ನಕ್ಷತ್ರಗಳಿಗೆ ವಿಶೇಷ ಸ್ಥಾನಮಾನವಿದೆ. ನಕ್ಷತ್ರಗಳ ಹುಟ್ಟು ಹಾಗೂ ಬೆಳವಣಿಗೆ ಕೋಟಿ ಕೋಟಿ ವರ್ಷಗಳ ಪ್ರಕ್ರಿಯೆ. ಅದು ದಿಢೀರ್ ಎಂದು ಸಂಭವಿಸುವುದಿಲ್ಲ. ದಟ್ಟ ಧೂಳಿನ ಮೋಡಗಳು ಗುರತ್ವದ ಬಲದಿಂದ ಒಂದುಗೂಡಿ, ನಂತರ ಮೋಡದ ಒಳಗೆ ಗುರತ್ವದ ಬಲದಿಂದ ಶಾಖ ಏರ್ಪಡುತ್ತದೆ.

ಊಹೆಗೆ ನಿಲುಕದಷ್ಟು ಶಾಖ ಬಿಡುಗಡೆ

ಊಹೆಗೆ ನಿಲುಕದಷ್ಟು ಶಾಖ ಬಿಡುಗಡೆ

ಬಿಸಿ ಹೆಚ್ಚಾಗುತ್ತಾ ಸಾಗಿ ಬೈಜಿಕ ಸಮ್ಮಿಲ ಕ್ರಿಯೆ ಆರಂಭವಾಗುತ್ತದೆ. ಇದನ್ನ ಸಾಮಾನ್ಯವಾಗಿ ಹೇಳುವುದಾದರೆ ಭೂಮಿ ವಿನಾಶಕ್ಕೆ ಮನುಷ್ಯ ಕಂಡುಹಿಡಿದ ಅಣುಬಾಂಬ್ ಅಥವಾ ನ್ಯೂಕ್ಲಿಯರ್ ವೆಪನ್ಸ್ ಇದೇ ಮಾದರಿ ಅನುಸರಿಸುತ್ತವೆ.

ಮೊದಲ ಬಾರಿಗೆ ಕಪ್ಪು ಕುಳಿಯ ಚಿತ್ರ ಬಿಡುಗಡೆ, ಐನ್ ಸ್ಟೀನ್ ಲೆಕ್ಕಾಚಾರ ನಿಜ!ಮೊದಲ ಬಾರಿಗೆ ಕಪ್ಪು ಕುಳಿಯ ಚಿತ್ರ ಬಿಡುಗಡೆ, ಐನ್ ಸ್ಟೀನ್ ಲೆಕ್ಕಾಚಾರ ನಿಜ!

ಆದರೆ ಮಾನವನ ಬಾಂಬ್ ಬೈಜಿಕ ವಿದಳನ ಕ್ರಿಯೆಯಿಂದ ಆಗುತ್ತದೆ. ಆದರೆ ನಕ್ಷತ್ರಗಳಲ್ಲಿ ಬೈಜಿಕ ಸಮ್ಮಿಲನ ಕ್ರಿಯೆ (Nuclear Fusion) ಮೂಲಕ ಅಪಾರ ಪ್ರಮಾಣದಲ್ಲಿ ಶಾಖ ಹಾಗೂ ಶಕ್ತಿ ಬಿಡುಗಡೆಯಾಗುತ್ತದೆ. ಇದೇ ಪ್ರಕ್ರಿಯೆ ಮುಂದೆ ನಕ್ಷತ್ರ ರೂಪಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹೈಡ್ರೋಜನ್ (H1) + ಹೈಡ್ರೋಜನ್ (H1) ಒಂದುಗೂಡಿ ಹೀಲಿಯಂ (H2) ಆಗುತ್ತದೆ. ಮುಂದೆ ಹೀಲಿಯಂ (H2) + ಹೀಲಿಯಂ (H2) ಒಂದುಗೂಡಿ ಬೆರಿಲಿಯಂ (Be4) ಆಗುತ್ತದೆ. ನಕ್ಷತ್ರಗಳ ಬೈಜಿಕ ಸಮ್ಮಿಲನ 1+1ರ ಸೂತ್ರ ಅವಲಂಬಿಸಿರುತ್ತದೆ.

English summary
The Cambridge University scientists has been found the source of Magnetic field. Scientists confirmed that, Magnetic field where existed early time of the Big Bang.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X