ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖುಷಿ ಸುದ್ದಿ: ನಾಸಲ್ ಸ್ಪ್ರೇ ಬಳಸಿದರೆ ಕೊರೊನಾ ವೈರಸ್ ಹತ್ತಿರಕ್ಕೂ ಬರುವುದಿಲ್ಲ!

|
Google Oneindia Kannada News

ನವದೆಹಲಿ, ಜುಲೈ 19: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವುದಕ್ಕೆ ಲಸಿಕೆಗಳನ್ನು ವಿತರಿಸುತ್ತಿರುವು ಓಲ್ಡ್ ಮಾಡೆಲ್ ಆಗಿದೆ. ಭಾರತದಲ್ಲಿ ಇನ್ಮುಂದೆ ಜಸ್ಟ್ 24 ಗಂಟೆಗಳಲ್ಲೇ ಕೋವಿಡ್-19 ಸೋಂಕನ್ನು ನಿವಾರಣೆ ಮಾಡುವಂತಹ ಔಷಧಿಯೊಂದು ಪತ್ತೆಯಾಗಿದೆ.

ಭಾರತದಲ್ಲೇ ಸಂಶೋಧಿಸಿರುವ ನಾಸಲ್ ಸ್ಪ್ರೇ ಔಷಧಿಯು ಕೊರೊನಾ ವೈರಸ್ ಸೋಂಕಿಗೆ ರಾಮಬಾಣ ಎಂದು ಹೇಳಲಾಗುತ್ತಿದೆ. ಮೊದಲ ಡೋಸ್, ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ ಲಸಿಕೆ ವಿತರಣೆ ಬಗ್ಗೆ ನಾಸಲ್ ಸ್ಪ್ರೇ ಹೇಗೆ ಪರಿಣಾಮಕಾರಿ ಎಂಬುದನ್ನು ಸಂಶೋಧನೆಯೊಂದು ತೆರೆದಿಟ್ಟಿದೆ.

ಕೊರೊನಾ ಸೋಂಕಿತರಿಗೆ ಲಸಿಕೆ ಜತೆ ಇದೀಗ ನೇಸಲ್ ಸ್ಪ್ರೇ ಕೂಡ ಲಭ್ಯಕೊರೊನಾ ಸೋಂಕಿತರಿಗೆ ಲಸಿಕೆ ಜತೆ ಇದೀಗ ನೇಸಲ್ ಸ್ಪ್ರೇ ಕೂಡ ಲಭ್ಯ

ಒಂದು ಬಾರಿ ಈ ನಾಸಲ್ ಸ್ಪ್ರೇ ಬಳಸಿದರೆ 24 ಗಂಟೆಗಳಲ್ಲಿ ಕೋವಿಡ್-19 ಸೋಂಕಿನ ಪರಿಣಾಮವೇ ತಗ್ಗಿ ಹೋಗುತ್ತದೆ. 48 ಗಂಟೆಗಳಲ್ಲಿ ದೇಹದಿಂದಲೇ ಸೋಂಕು ಮಂಗ ಮಾಯವಾಗುತ್ತದೆ ಎಂದು ವೈದ್ಯಕೀಯ ಸಂಶೋಧನೆಯು ಹೇಳುತ್ತಿದೆ. ಈ ಸಂಶೋಧನೆಯಲ್ಲಿ ಉಲ್ಲೇಖಿಸಿದ ಅಂಶಗಳು ಯಾವುವು?, ನಾಸಲ್ ಸ್ಪ್ರೇ ಬಗ್ಗೆ ನಡೆಸಿದ ಸಮೀಕ್ಷೆ ಹೇಗಿತ್ತು?, ಲಸಿಕೆಗಿಂತ ನಾಸಲ್ ಸ್ಪ್ರೇ ಎಷ್ಟು ಪರಿಣಾಮಕಾರಿ ಆಗಿರುತ್ತೆ?, ನಾಸಲ್ ಸ್ಪ್ರೇ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

24 ಗಂಟೆಗಳಲ್ಲಿ 100ಕ್ಕೆ 98ರಷ್ಟು ಕೊರೊನಾ ಮಾಯ

24 ಗಂಟೆಗಳಲ್ಲಿ 100ಕ್ಕೆ 98ರಷ್ಟು ಕೊರೊನಾ ಮಾಯ

"ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇ (NONS) ಅಂಶವು ಕೋವಿಡ್-19 ಸೋಂಕಿನ ಪ್ರಮಾಣವನ್ನು ಶರವೇಗದಲ್ಲಿ ತಗ್ಗಿಸುತ್ತದೆ. 24 ಗಂಟೆಗಳಲ್ಲಿ ಶೇ.94ರಷ್ಟು ಪ್ರಮಾಣ ಕಡಿಮೆ ಆಗಲಿದ್ದು, ಒಟ್ಟು 48 ಗಂಟೆಗಳಲ್ಲಿ ಶೇ.99ರಷ್ಟು ಪ್ರಭಾವವನ್ನು ತಗ್ಗಿಸುವಷ್ಟು ಪರಿಣಾಮಕಾರಿಯಾಗಿದೆ," ಎಂದು ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್ ಸೌಂತ್-ಈಸ್ಟ್ ಏಷ್ಯಾ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ತಿಳಿಸಿದೆ.

ಕೊರೊನಾ ಚಿಕಿತ್ಸೆಗೆ ಫಾಬಿಸ್ಪ್ರೇ ಹೆಸರಿನಲ್ಲಿ ಬಿಡುಗಡೆ

ಕೊರೊನಾ ಚಿಕಿತ್ಸೆಗೆ ಫಾಬಿಸ್ಪ್ರೇ ಹೆಸರಿನಲ್ಲಿ ಬಿಡುಗಡೆ

ಕೊರೊನಾ ವೈರಸ್ ಸೋಂಕಿನಿಂದ ಅತಿಹೆಚ್ಚು ಅಪಾಯವನ್ನು ಎದುರಿಸುತ್ತಿರುವ ವಯಸ್ಕರಿಗೆ ಚಿಕಿತ್ಸೆ ನೀಡುವುದಕ್ಕಾಗಿಯೇ 'ಫಾಬಿಸ್ಪ್ರೇ' ಎಂಬ ಹೆಸರಿನಲ್ಲಿ ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇ ಅನ್ನು ಬಳಸುವುದಕ್ಕೆ ಅನುಮೋದನೆ ನೀಡಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ಪ್ರಾಯೋಗಿಕ ಹಂತದಲ್ಲಿ ವಯಸ್ಕರ ಮೇಲೆ ಅದನ್ನು ಪ್ರಯೋಗಿಸುವುದಕ್ಕೆ ಅನುಮತಿಸಲಾಯಿತು.

ವೈದ್ಯಕೀಯ ಪ್ರಯೋಗ ನಡೆಸಿದ ವೈಖರಿ ಹೇಗಿತ್ತು?

ವೈದ್ಯಕೀಯ ಪ್ರಯೋಗ ನಡೆಸಿದ ವೈಖರಿ ಹೇಗಿತ್ತು?

ಮುಂಬೈ ಮೂಲದ ಔಷಧೀಯ ಕಂಪನಿ ಗ್ಲೆನ್‌ಮಾರ್ಕ್, ಭಾರತದಲ್ಲಿನ 20 ಪ್ರಾಯೋಗಿಕ ಪ್ರದೇಶಗಳಲ್ಲಿ ಲಸಿಕೆ ಹಾಕಿದ ಅಥವಾ ಇಲ್ಲದಿರುವ ಸೌಮ್ಯ ಸ್ವರೂಪದ COVID-19 ರೋಗದ ಲಕ್ಷಣಗಳನ್ನು ಹೊಂದಿರುವ 306 ರೋಗಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಕೊರೊನಾ ವೈರಸ್ ರೂಪಾಂತರ ತಳಿ ಆಗಿರುವ ಡೆಲ್ಟಾ ಮತ್ತು ಓಮಿಕ್ರಾನ್ ಸೋಂಕಿತ ಪ್ರಕರಣಗಳು ಶರವೇಗದಲ್ಲಿ ಏರಿಕೆ ಆಗುತ್ತಿದ್ದ ಸಂದರ್ಭದಲ್ಲಿ ಈ ವೈದ್ಯಕೀಯ ಪ್ರಯೋಗವನ್ನು ನಡೆಸಲಾಯಿತು. ಸೌಮ್ಯ ಲಕ್ಷವನ್ನು ಹೊಂದಿರುವ ರೋಗಿಗಳಿಗೆ ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇ (NONS) ಅನ್ನು ನೀಡುವ ಮೂಲಕ ಔಷಧಿಯ ಪ್ರಭಾವ ಪರಿಶೀಲನೆ ಮಾಡಲಾಯಿತು. ಈ ಪ್ರಭಾವವನ್ನು ಇಟ್ಟುಕೊಂಡು ಅಧ್ಯಯನವನ್ನು ನಡೆಸಲಾಯಿತು.

ಒಂದೇ ದಿನದಲ್ಲಿ ಕೋವಿಡ್-19 ತೀವ್ರತೆ ಕಡಿಮೆ

ಒಂದೇ ದಿನದಲ್ಲಿ ಕೋವಿಡ್-19 ತೀವ್ರತೆ ಕಡಿಮೆ

ಕೊರೊನಾ ವೈರಸ್ ಸೋಂಕಿಗೆ ಪ್ರಾಯೋಗಿಕ ವೈದ್ಯಕೀಯ ಚಿಕಿತ್ಸೆ ಸಂದರ್ಭದಲ್ಲಿ ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇ(NONS) ಅನ್ನು ಏಳು ದಿನಗಳವರೆಗೆ ನೀಡಲಾಯಿತು. ಒಂದು ಹೊತ್ತಿಗೆ ಎರಡು ಸ್ಪ್ರೇ ರೀತಿಯಲ್ಲಿ ದಿನಕ್ಕೆ ಒಟ್ಟು ಆರು ಬಾರಿ ನಾಸಲ್ ಸ್ಪ್ರೇ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ನಾಸಲ್ ಸ್ಪ್ರೇ ಅನ್ನು ಏಳು ದಿನಗಳವರೆಗೆ ಬಳಸಲಾಯಿತು. ಈ ವೈದ್ಯಕೀಯ ಪ್ರಯೋಗದ ನಂತರದಲ್ಲಿ ನಡೆಸಿದ ಅಧ್ಯಯನದಿಂದ ಹಲವು ಅಂಶಗಳು ಬೆಳಕಿಗೆ ಬಂದವು. ಈ ಅಧ್ಯಯನದ ಪ್ರಕಾರ, ಕೋವಿಡ್-19 ಸೋಂಕಿನಿಂದ ಅತಿಹೆಚ್ಚು ಅಪಾಯವನ್ನು ಎದುರಿಸುತ್ತಿರುವ ರೋಗಿಯ ಆರೋಗ್ಯವು 24 ಗಂಟೆಗಳಲ್ಲೇ ಸುಧಾರಿಸಿರುವುದು ಕಂಡು ಬಂದಿದೆ. ಏಳು ದಿನಗಳ ವೈದ್ಯಕೀಯ ಥೆರೆಪಿ ಸಂದರ್ಭದಲ್ಲಿ ಲಸಿಕೆ ಪಡೆದುಕೊಂಡವರು ಮತ್ತು ಲಸಿಕೆ ಪಡೆದುಕೊಳ್ಳದವರಿಬ್ಬರೂ ಇದ್ದರು ಎಂಬುದನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ.

ನಾಸಲ್ ಸ್ಪ್ರೇ ರೋಗವನ್ನು ಹೇಗೆ ನಿಯಂತ್ರಿಸುವುದು?

ನಾಸಲ್ ಸ್ಪ್ರೇ ರೋಗವನ್ನು ಹೇಗೆ ನಿಯಂತ್ರಿಸುವುದು?

ಕೊರೊನಾ ವೈರಸ್ ತೀವ್ರತೆ ಪ್ರಮಾಣವನ್ನು ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇ ಮೂಲಕ ಕ್ಷಿಪ್ರಗತಿಯಲ್ಲಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಏಕೆಂದರೆ ನೈಟ್ರಿಕ್ ಆಕ್ಸೈಡ್ ಎಂಬ ಔಷಧಿಯು ಮೂಗಿನ ಮೂಲಕ ಸೋಂಕು ಹರಡುವಿಕೆಯನ್ನು ನಿಯಂತ್ರಿಸುತ್ತದೆ. ಅಲ್ಲದೇ ರೋಗಾಣುಗಳನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದ್ದು, ಕೋವಿಡ್-19 ಸೋಂಕು ಮತ್ತೆ ಹುಟ್ಟಿಕೊಳ್ಳದಂತೆ ತಡೆಯುತ್ತದೆ ಎಂಬುದನ್ನು ಅಧ್ಯಯನ ಹೇಳಿದೆ.

Recommended Video

ಮದುವೆ ಸಮಾರಂಭಕ್ಕೆ ಅಪ್ಪಳಿಸಿದ ದೈತ್ಯ ಅಲೆಗಳು: ಅಲ್ಲಿದ್ದವರ ಕಥೆ ಏನಾಯ್ತು ಅಂತ ನೋಡಿ.. *viral |OneIndia Kannada

English summary
According to a study published in The Lancet Regional Health Southeast Asia journal, Made in India nitric oxide nasal spray (NONS) efficient in reducing viral load by 94% within 24 hours and by 99% within 48 hours. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X