ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಗ್ರಹಣ 2021: ಗರ್ಭಿಣಿಯರು ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೀರಾ?

|
Google Oneindia Kannada News

ಇಂದು ಅತ್ಯಂತ ಸುದೀರ್ಘವಾದ ಚಂದ್ರಗ್ರಹಣ ಸಂಭವಿಸಿದ್ದು, ಇದು ಸುಮಾರು 580 ವರ್ಷಗಳ ನಂತರ ಸಂಭವಿಸುವ ದೀರ್ಘಾವಧಿಯ ಚಂದ್ರಗ್ರಹಣ ಆಗಿದೆ. ಇದಕ್ಕೂ ಮೊದಲು 18 ಫೆಬ್ರವರಿ 1440 ರಂದು ಅಂತಹ ದೀರ್ಘ ಚಂದ್ರಗ್ರಹಣ ಸಂಭವಿಸಿದೆ.

ಇಂದು ನಡೆಯುವ ಚಂದ್ರಗ್ರಹಣವು ಈ ಭಾಗಶಃ ಚಂದ್ರಗ್ರಹಣದ ಅವಧಿ 3 ಗಂಟೆ 28 ನಿಮಿಷ 24 ಸೆಕೆಂಡುಗಳು ಇರಲಿದೆ. ಸುಮಾರು 1:30 ನಂತರ ಪೂರ್ಣ ಚಂದ್ರಗ್ರಹಣವು ಪೂರ್ಣ ಪ್ರಮಾಣದಲ್ಲಿರಲಿದೆ. ಈ ಸಂದರ್ಭದಲ್ಲಿ ಭೂಮಿಯು 97 ಪ್ರತಿಶತದಷ್ಟು ಪೂರ್ಣ ಚಂದ್ರನನ್ನು ಸೂರ್ಯನ ಕಿರಣಗಳಿಂದ ಮರೆಮಾಡುತ್ತದೆ ಎಂದು ನಾಸಾ ಹೇಳಿದೆ. ಭಾರತದಲ್ಲಿ ಈ ಭಾಗಶಃ ಚಂದ್ರಗ್ರಹಣ ನವೆಂಬರ್ 19 ರಂದು ಮಧ್ಯಾಹ್ನ 12:48 ಕ್ಕೆ ಪ್ರಾರಂಭವಾಗಲಿದ್ದು ಸಂಜೆ 4:17 ರವರೆಗೆ ಗೋಚರಿಸುತ್ತದೆ.

ಚಂದ್ರ ಅಪರೂಪಕ್ಕೆ ಈ ರೀತಿ ಕಾಣುತ್ತದೆ, ಇಲ್ಲಿದೆ ನೋಡಿ ವಿಧಗಳು..ಚಂದ್ರ ಅಪರೂಪಕ್ಕೆ ಈ ರೀತಿ ಕಾಣುತ್ತದೆ, ಇಲ್ಲಿದೆ ನೋಡಿ ವಿಧಗಳು..

ಇದು 2021 ರ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಿದೆ. ಈ ಹಿಂದೆ ಮೇ 26ರಂದು ಚಂದ್ರಗ್ರಹಣ ಸಂಭವಿಸಿತ್ತು. ಇದು ಸಂಪೂರ್ಣವಾಗಿ ಕೆಂಪು ಬಣ್ಣದ್ದಾಗಿತ್ತು, ಆದ್ದರಿಂದ ಇದನ್ನು ಸೂಪರ್ ಮೂನ್ ಅಥವಾ ರೆಡ್ ಬ್ಲಡ್ ಮೂನ್ ಎಂದೂ ಕರೆಯುತ್ತಾರೆ. ಈ ಭಾಗಶಃ ಚಂದ್ರಗ್ರಹಣದ ನಂತರ 15 ದಿನಗಳ ನಂತರ ಅಂದರೆ ಡಿಸೆಂಬರ್ 4 ರಂದು ಸಂಪೂರ್ಣ ಸೂರ್ಯಗ್ರಹಣ ಕೂಡ ಸಂಭವಿಸಲಿದೆ. ಇನ್ನು ಈ ಚಂದ್ರಗ್ರಹಣದ ಸಂದರ್ಭದಲ್ಲಿ ಸಾಮಾನ್ಯವಾಗಿಯೇ ಕೆಲವೊಂದು ಪ್ರಕೃತಿ ಅಸಮತೋಲನ ನಡೆಯುತ್ತದೆ. ಈ ಸಂದರ್ಭದಲ್ಲಿ ಆಹಾರದಲ್ಲಿ ಫಂಗಸ್‌ಗಳು ಉಂಟಾಗುತ್ತದೆ ಎಂಬ ಕಾರಣಕ್ಕೆ ಆಹಾರವನ್ನು ಸೇವನೆ ಮಾಡುವುದಿಲ್ಲ.

Lunar Eclipse 2021: Precautions For Pregnant Women and Other Crucial Things to Remember

ಈ ಚಂದ್ರಗ್ರಹಣ ಸಂದರ್ಭದಲ್ಲಿ ಗರ್ಭಿಣಿಯರು ಯಾವ ಸುರಕ್ಷತಾ ಕ್ರಮವನ್ನು ಕೈಗೊಳ್ಳಬೇಕು ಎಂಬುವುದನ್ನು ಇಲ್ಲಿ ವಿವರಿಸಲಾಗಿದೆ. ಹಾಗೂ ನೀವು ಈ ಸುರಕ್ಷತೆಯನ್ನು ಕೈಗೊಂಡಿದ್ದೀರಾ? ಎಂಬುವುದನ್ನು ಖಚಿತಪಡಿಸಿಕೊಳ್ಳಿ

'ಬ್ಲಡ್ ಮೈಕ್ರೋ ಮೂನ್': ಈ ಚಂದ್ರಗ್ರಹಣ ಏಕೆ ಅಪರೂಪ?'ಬ್ಲಡ್ ಮೈಕ್ರೋ ಮೂನ್': ಈ ಚಂದ್ರಗ್ರಹಣ ಏಕೆ ಅಪರೂಪ?

ಗರ್ಭಿಣಿಯರು ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೀರಾ?

* ಚಂದ್ರಗ್ರಹಣದ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರು ಮನೆಯೊಳಗೆ ಇರಬೇಕು. ಈ ಚಂದ್ರಗ್ರಹಣ ಸಂದರ್ಭದಲ್ಲಿ ಚಂದ್ರ ನಮ್ಮ ದೇಹದಲ್ಲಿರುವ ನೀರಿನ ಪ್ರಮಾಣವನ್ನು ನಿಯಂತ್ರಣ ಮಾಡುತ್ತದೆ ಎಂಬ ನಂಬಿಕೆ ಇದೆ. ಗರ್ಭಿಣಿ ಮಹಿಳೆಯರ ದೇಹದಲ್ಲಿ ನೀರಿನ ಅಂಶ ಅಧಿಕವಾಗಿ ಇರುವ ಕಾರಣ ಈ ಚಂದ್ರಗ್ರಹಣ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರು ಮನೆಯಲ್ಲಿಯೇ ಇರಬೇಕು.
* ಇನ್ನು ನೀವು ಈ ಚಂದ್ರಗ್ರಹಣದ ಸಂದರ್ಭದಲ್ಲಿ ಹೊಸ ಕೆಲಸಗಳನ್ನು ಆರಂಭ ಮಾಡದಿದ್ದರೆ ಉತ್ತಮ.
* ಇನ್ನು ಈ ಚಂದ್ರಗ್ರಹಣವು ಗರ್ಭಿಣಿಯರಿಗೆ ಅಧಿಕವಾಗಿ ಪ್ರಭಾವ ಬೀರುತ್ತದೆ, ಜನಿಸುವ ಮಗುವಿಗೆ ಸಮಸ್ಯೆಯನ್ನು ಉಂಟು ಮಾಡುತ್ತದೆ ಎಂಬ ನಂಬಿಕೆ ಇದೆ.
* ಈ ಚಂದ್ರಗ್ರಹಣ ಸಂದರ್ಭದಲ್ಲಿ ಯಾವುದೇ ಆಹಾರವನ್ನು ಗರ್ಭಿಣಿಯರು ಸೇವಿಸಬಾರದು.

ಮುಂದಿನ ಚಂದ್ರಗ್ರಹಣವು ಮೇ 16, 2022ರಂದು ಸಂಭವಿಸಲಿದೆ. ಆದರೆ, ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಭಾರತದಲ್ಲಿ ಗೋಚರಿಸುವ ಮುಂದಿನ ಚಂದ್ರಗ್ರಹಣವು ನವೆಂಬರ್ 8, 2022ರಂದು ಸಂಭವಿಸಲಿದೆ. ಪುರಾಣಗಳ ಪ್ರಕಾರ, ಪಾಪಗ್ರಹ (ರಾಹು ಅಥವಾ ಕೇತು) ಚಂದ್ರನನ್ನು ಬಂಧಿಸಿದಾಗ ಮತ್ತು ಅದರ ಬೆಳಕನ್ನು ನಿರ್ಬಂಧಿಸಿದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಈ ವರ್ಷ ಮೇ 26 ರಂದು ಸೂಪರ್ ಫ್ಲವರ್ ಬ್ಲಡ್ ಮೂನ್ ಮೊದಲ ಚಂದ್ರಗ್ರಹಣವನ್ನು ಕಂಡಿತು. ನವೆಂಬರ್ 19 ರಂದು ಸಂಭವಿಸಲಿರುವ ಮುಂಬರುವ ಭಾಗಶಃ ಚಂದ್ರಗ್ರಹಣವು ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಿದೆ. ಪುರಾಣಗಳ ಪ್ರಕಾರ ಚಂದ್ರಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಆಹಾರವನ್ನು ಸೇವಿಸಬಾರದು. ಮುಖ್ಯವಾಗಿ ಗರ್ಭಿಣಿಯರು ಈ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಮತ್ತು ಹೊರಗಡೆ ತಿರುಗಾಡುವುದನ್ನು ತಪ್ಪಿಸಬೇಕು

Recommended Video

ರೈತರ ಕಾಯ್ದೆಗಳನ್ನು ಹಿಂಪಡೆದ ನರೇಂದ್ರ ಮೋದಿ | Oneindia Kannada

(ಒ‌ನ್‌ಇಂಡಿಯಾ)

English summary
Lunar Eclipse 2021: Precautions For Pregnant Women and Other Crucial Things to Remember.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X