ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Lunar Eclipse 2021 : ಮೇ 26ರಂದು ಒಂದೇ ದಿನ ಚಂದ್ರಗ್ರಹಣ, ಬ್ಲಡ್ ಮೂನ್, ಸೂಪರ್ ಮೂನ್, ಎಲ್ಲೆಲ್ಲಿ ಗೋಚರ?

|
Google Oneindia Kannada News

ನವದೆಹಲಿ, ಮೇ 25: ಈ ವರ್ಷದ ಮೊದಲ ಚಂದ್ರಗ್ರಹಣ ಮೇ 26ಕ್ಕೆ ಘಟಿಸಲಿದ್ದು, ಅದೇ ದಿನ ಸೂಪರ್ ಮೂನ್, ಬ್ಲಡ್ ಮೂನ್ ಎರಡೂ ವಿದ್ಯಾಮಾನವೂ ಗೋಚರವಾಗಲಿದೆ.

ಭಾರತದ ಈಶಾನ್ಯ ಭಾಗಗಳು (ಸಿಕ್ಕಿಂ ಹೊರತುಪಡಿಸಿ), ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಒಡಿಶಾ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇ 26 ರಂದು ಭಾಗಶಃ ಚಂದ್ರ ಗ್ರಹಣ ಗೋಚರಿಸುತ್ತದೆ ಎಂದು ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ.

ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ಅಂಟಾರ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರವನ್ನು ಒಳಗೊಂಡ ಪ್ರದೇಶದಲ್ಲಿ ಇದು ಗೋಚರಿಸುತ್ತದೆ.

ದಶಕದ ಕೊನೆಯ ಚಂದ್ರಗ್ರಹಣ ಇಂದು ಗೋಚರ: ಎಲ್ಲಿ? ಯಾವ ಸಮಯ?ದಶಕದ ಕೊನೆಯ ಚಂದ್ರಗ್ರಹಣ ಇಂದು ಗೋಚರ: ಎಲ್ಲಿ? ಯಾವ ಸಮಯ?

ಹುಣ್ಣಿಮೆಯ ದಿನದಂದು ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಎಲ್ಲಾ ಮೂರು ವಸ್ತುಗಳನ್ನು ಜೋಡಿಸಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಇಡೀ ಚಂದ್ರನು ಭೂಮಿಯ ನೆರಳಿನಲ್ಲಿ ಬಂದಾಗ ಮತ್ತು ಚಂದ್ರನ ಒಂದು ಭಾಗ ಮಾತ್ರ ಭೂಮಿಯ ನೆರಳಿನಲ್ಲಿ ಬಂದಾಗ ಭಾಗಶಃ ಚಂದ್ರ ಗ್ರಹಣ ಸಂಭವಿಸುತ್ತದೆ.

ಸೂಪರ್‌ ಮೂನ್‌ ಈ ವರ್ಷದ ಅತಿ ಸಮೀಪದ ಸೂಪರ್‌ ಮೂನ್‌. ಈ ದಿನ ಚಂದ್ರ ಭೂಮಿಗೆ ಸುಮಾರು 3,57,462 ಕಿ.ಮೀ. ಹತ್ತಿರ ಬರಲಿದ್ದಾನೆ. (ಸರಾಸರಿ ದೂರ 3,84,000 ಕಿ.ಮೀ.).

 ಸೂಪರ್ ಮೂನ್ ಕುರಿತು ಮಾಹಿತಿ

ಸೂಪರ್ ಮೂನ್ ಕುರಿತು ಮಾಹಿತಿ

ಭೂಮಿಯ ಸನಿಹಕ್ಕೆ ಚಂದ್ರ ಬಂದಿ ಎಂದಿಗಿಂತ ದೊಡ್ಡದಾಗಿ ಕಾಣುವುದನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಇದು ಹುಣ್ಣಿಮೆಯ ದಿನ ಘಟಿಸುತ್ತದೆ. ಭೂಮಿಯ ನೆರಳು ಹುಣ್ಣಿಮೆಯ ದಿನ ಚಂದ್ರನ ಏಲೆ ಬಿದ್ದಾಗ ಚಂದ್ರ ಮರೆಯಾಗುತ್ತಾನೆ, ಇದನ್ನು ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ಭೂಮಿಯ ಸಂಪೂರ್ಣ ನೆರಳಿನಿಂದ ಚಂದ್ರ ಆವೃತ್ತವಾಗಿ ಕೆಂಪುಬಣ್ಣ ಗೋಚರವಾದರೆ ಅದನ್ನು ಬ್ಲಡ್ ಮೂನ್ ಎಂದು ಕರೆಯುತ್ತಾರೆ.

 ಗ್ರಹಣ ಕಾಲ

ಗ್ರಹಣ ಕಾಲ

ಗ್ರಹಣದ ಭಾಗಶಃ ಹಂತವು ಮಧ್ಯಾಹ್ನ 3.15 ರ ಸುಮಾರಿಗೆ ಪ್ರಾರಂಭವಾಗುತ್ತದೆ ಮತ್ತು 6.23ರವರೆಗೆ ಇರಲಿದೆ ಎಂದು ಸಚಿವಾಲಯ ತಿಳಿಸಿದೆ. ಸಂಜೆ 5.38ರಿಂದ ಪೋರ್ಟ್ ಬ್ಲೇರ್‌ನಿಂದ 45 ನಿಮಿಷಗಳ ಕಾಲ ಗ್ರಹಣ ವೀಕ್ಷಿಸಬಹುದು, ಸಂಜೆ 6.21ರಿಂದ ಪುರಿ ಮತ್ತು ಮಾಲ್ಡಾದಿಂದ ನೋಡಬಹುದು, ಆದರೆ ಎರಡು ನಿಮಿಷ ಮಾತ್ರ ಕಾಣಿಸುತ್ತದೆ. ಸಂಪೂರ್ಣ ಚಂದ್ರಗ್ರಹಣ ಸಂಜೆ 4.39ಕ್ಕೆ ಪ್ರಾರಂಭವಾಗಿ ಸಂಜೆ 4.58ಕ್ಕೆ ಕೊನೆಗೊಳ್ಳಲಿದೆ.0

 ಎಲ್ಲೆಲ್ಲಿ ಚಂದ್ರಗ್ರಹಣ ಗೋಚರ?

ಎಲ್ಲೆಲ್ಲಿ ಚಂದ್ರಗ್ರಹಣ ಗೋಚರ?

ಫೆಸಿಫಿಕ್ ಸಾಗರದ ಮಧ್ಯಭಾಗ, ಆಸ್ಟ್ರೇಲಿಯಾ, ಏಷ್ಯಾದ ಪೂರ್ವ ಕರಾವಳಿ, ಅಮೆರಿಕದ ಪಶ್ಚಿಮ ಕರಾವಳಿ, ಈಶಾನ್ಯ ಭಾರತದಲ್ಲಿ ಚಂದ್ರಗ್ರಹಣ, ಸೂಪರ್ ಮೂನ್, ರೆಡ್ ಬ್ಲಡ್ ಮೂನ್ ಕಾಣಿಸಲಿದೆ.

Recommended Video

HALO SUN ಬಗ್ಗೆ ಸಂಪೂರ್ಣ ಮಾಹಿತಿ ! | Oneindia Kannada
 ಮುಂದಿನ ಚಂದ್ರಗ್ರಹಣ

ಮುಂದಿನ ಚಂದ್ರಗ್ರಹಣ

ಮುಂದಿನ ಚಂದ್ರಗ್ರಹಣವು ನವೆಂಬರ್ 19 ರಂದು ಭಾರತದಿಂದ ಗೋಚರಿಸುತ್ತದೆ ಮತ್ತು ಇದು ಭಾಗಶಃ ಚಂದ್ರ ಗ್ರಹಣವಾಗಿರುತ್ತದೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಈಶಾನ್ಯ ಭಾಗಗಳಿಂದ ಚಂದ್ರೋದಯದ ನಂತರ ಭಾಗಶಃ ಹಂತದ ಅಂತ್ಯವು ಬಹಳ ಕಡಿಮೆ ಅವಧಿಗೆ ಗೋಚರಿಸುತ್ತದೆ.

English summary
Lunar Eclipse 2021: A total lunar eclipse will occur on Wednesday and will be visible from parts of northeastern states of India, parts of West Bengal, some coastal parts of Odisha and Andaman and Nicobar Islands, according to a release by the ministry of earth science.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X