ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಚಂದ್ರಗ್ರಹಣ: ಯಾವುದನ್ನು ಮಾಡಬಾರದು? ಏನು ಮಾಡಬೇಕು?

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

2020ರ ವರ್ಷ ಮತ್ತು ಈ ದಶಕದ ಕೊನೆಯ ಚಂದ್ರಗ್ರಹಣ ಸೋಮವಾರ ಜರುಗಲಿದೆ. ಆಕಾಶ ವಿಸ್ಮಯದ ಬಗ್ಗೆ ಆಸಕ್ತಿ ಉಳ್ಳುವರಿಗೆ ಇದು ಮತ್ತೊಂದು ಮಹತ್ವದ ದಿನವಾಗಿದೆ. ಕಾರ್ತಿಕ ಪೂರ್ಣಿಮೆಯಂದು ಇದು ನಡೆಯುತ್ತಿರುವುದು ವಿಶೇಷ. ಕಳೆದ ಚಂದ್ರಗ್ರಹಣದಂತೆಯೇ ಇದು ಕೂಡ ಉಪಛಾಯಾ ಚಂದ್ರಗ್ರಹಣವಾಗಿರಲಿದೆ. ಅಂದರೆ, ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಪ್ರವೇಶಿಸಿ ಈ ಚಂದ್ರಗ್ರಹಣ ಸಂಭವಿಸಲಿದೆ.

ಮಧ್ಯಾಹ್ನ 1:04ರಿಂದ ಸಂಜೆ 5:22ರವರೆಗೆ ಚಂದ್ರಗ್ರಹಣ ಸಂಭವಿಸಲಿದ್ದು, 3:13ಕ್ಕೆ ಔನ್ನತ್ಯಕ್ಕೆ ತಲುಪಲಿದೆ. ಎಲ್ಲ ಚಂದ್ರಗ್ರಹಣಗಳಂತೆಯೇ ಇದನ್ನು ಕೂಡ ಬರಿಗಣ್ಣಿಗೆ ವೀಕ್ಷಿಸಬಹುದಾಗಿ. ಗ್ರಹಣವು ಸಾಂಪ್ರದಾಯಿಕ ಆಚರಣೆಗಳಲ್ಲಿ ಮಹತ್ವ ಪಡೆದುಕೊಂಡಿದೆ. ಹೀಗಾಗಿ ಕೆಲವೆಡೆ ಈ ಅವಧಿಯಲ್ಲಿ ಅನೇಕ ಚಟುವಟಿಕೆಗಳ ಮೇಲೆ ನಿರ್ಬಂಧಗಳಿವೆ. ಜನರು ಈ ಸಮಯದಲ್ಲಿ ತಿನ್ನಬಾರದು, ಕೆಲಸ ಮಾಡಬಾರದು ಮುಂತಾದ ಸಲಹೆಗಳಿವೆ. ಹಾಗೆಯೇ ಊಟದ ವಿಚಾರದಲ್ಲಿ ಅನೇಕ ನಂಬಿಕೆಗಳಿವೆ.

ದಶಕದ ಕೊನೆಯ ಚಂದ್ರಗ್ರಹಣ ಇಂದು ಗೋಚರ: ಎಲ್ಲಿ? ಯಾವ ಸಮಯ?ದಶಕದ ಕೊನೆಯ ಚಂದ್ರಗ್ರಹಣ ಇಂದು ಗೋಚರ: ಎಲ್ಲಿ? ಯಾವ ಸಮಯ?

ಗ್ರಹಣದ ಸಂದರ್ಭದಲ್ಲಿ ಆಹಾರ ಸೇವಿಸಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ ಎನ್ನುವುದು ಪುರಾತನ ನಂಬಿಕೆ. ಆದರೆ ಆಧುನಿಕ ವಿಜ್ಞಾನ ಇದನ್ನು ಒಪ್ಪುವುದಿಲ್ಲ. ಹಾಗಿದ್ದರೂ ಸಾಂಪ್ರದಾಯಿಕ ಕುಟುಂಬಗಳಲ್ಲಿ ಗ್ರಹಣದ ಸಂಬಂಧ ಆಹಾರ ಸೇವನೆ ಮತ್ತು ಪೂಜೆ ಪುನಸ್ಕಾರಗಳ ಕುರಿತು ಅನೇಕ ನಂಬಿಕೆಗಳಿವೆ. ಇದು ಬದಾವಣೆಯ ಮುನ್ಸೂಚನೆ ಮತ್ತು ಕೆಡುಗಿನ ಪ್ರತಿನಿಧಿ ಎಂದೂ ಪರಿಗಣಿಸಲಾಗುತ್ತಿದೆ. ಈ ಕಾರಣದಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಅದರಲ್ಲಿಯೂ ಗರ್ಭಿಣಿಯರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಮತ್ತು ಅಪಾಯಕಾರಿ ವಸ್ತುಗಳಿಂದ ದೂರ ಇರಬೇಕು ಎನ್ನಲಾಗುತ್ತದೆ. ಮುಂದೆ ಓದಿ.

ಮಾನವನ ದೇಹದ ಮೇಲೆ ಪರಿಣಾಮ

ಮಾನವನ ದೇಹದ ಮೇಲೆ ಪರಿಣಾಮ

ನಂಬಿಕೆಗಳ ಪ್ರಕಾರ ಚಂದ್ರಗ್ರಹಣವು ಮಾನವನ ದೇಹದ ಮೇಲೆ ಪರಿಣಾಮ ಬೀರುತ್ತದೆ. ಚಂದ್ರನ ಚಟುವಟಿಕೆಗಳು ನಮ್ಮ ದೇಹದ ಮೇಲೆ ವೈಜ್ಞಾನಿಕವಾಗಿ, ಮಾನಸಿಕವಾಗಿ ಪ್ರಭಾವ ಬೀರುತ್ತದೆ. ಜತೆಗೆ ನಮ್ಮ ಶಕ್ತಿ ಸಾಮರ್ಥ್ಯದ ಚಟುವಟಿಕೆಯನ್ನೂ ಪ್ರಭಾವಿಸುತ್ತದೆ. ನಾವು ಆ ಅವಧಿಯಲ್ಲಿ ಸೇವಿಸುವ ಯಾವುದೇ ಆಹಾರ ಜೀರ್ಣವಾಗಲು ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ನಮ್ಮ ದೇಹದ ಶಕ್ತಿಯು ಸುಮಾರು 28 ದಿನಗಳಷ್ಟು ಸಮಯ ಕುಂದಿರುತ್ತದೆ. ಈ ಕಾರಣದಿಂದ ಗ್ರಹಣದ ದಿನದಂದು ಕಚ್ಚಾ ಆಹಾರಗಳನ್ನು ಸೇವಿಸುವುದನ್ನು ತಡೆಯಲಾಗುತ್ತದೆ.

ಪೌಷ್ಟಿಕತೆ ಹಾಳುಮಾಡುತ್ತದೆ

ಪೌಷ್ಟಿಕತೆ ಹಾಳುಮಾಡುತ್ತದೆ

ಗ್ರಹಣದ ಸಂದರ್ಭದಲ್ಲಿ ಯಾವ ಆಹಾರ ಸೇವಿಸಬೇಕು, ಯಾವ ಆಹಾರ ಮುಟ್ಟಬಾರದು ಎಂಬ ಬಗ್ಗೆ ಸಾಮಾನ್ಯ ನಂಬಿಕೆಗಳಿವೆ. ಧಾರ್ಮಿಕ ಗ್ರಂಥಗಳ ಪ್ರಕಾರ ಚಂದ್ರನ ಶಕ್ತಿಶಾಲಿ ಕಿರಣಗಳು ಆಹಾರದ ಪೌಷ್ಟಿಕಾಂಶಗಳನ್ನು ಹಾಳುಮಾಡಬಹುದು ಮತ್ತು ಅವು ಸೇವನೆಗೆ ಯೋಗ್ಯವಲ್ಲದಂತೆ ಮಾಡಬಹುದು.

ಚಂದ್ರನ ಅಂಗಳದಲ್ಲಿ ಮತ್ತಷ್ಟು ನೀರು: ನಾಸಾ ಅಧ್ಯಯನಚಂದ್ರನ ಅಂಗಳದಲ್ಲಿ ಮತ್ತಷ್ಟು ನೀರು: ನಾಸಾ ಅಧ್ಯಯನ

ಅಡುಗೆ ಮಾಡಿಯೂ ಇಡುವಂತಿಲ್ಲ

ಅಡುಗೆ ಮಾಡಿಯೂ ಇಡುವಂತಿಲ್ಲ

ಸಾಂಪ್ರದಾಯಿಕ ಆಚರಣೆಗಳ ಪ್ರಕಾರ ಅನೇಕ ಸಮುದಾಯಗಳಲ್ಲಿ ಗ್ರಹಣದ ದಿನಗಳಲ್ಲಿ ಕಚ್ಚಾ ಆಹಾರ, ಕೆಲವು ಹಣ್ಣು ಮತ್ತು ತರಕಾರಿಗಳನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಇದು ಮದ್ಯಪಾನ, ಮಾಂಸಾಹಾರ ಮುಂತಾದವುಗಳಿಗೂ ಅನ್ವಯಿಸುತ್ತದೆ. ಹಾಗೆಯೇ ಮೊದಲೇ ಅಡುಗೆಮನೆಯಲ್ಲಿ ಅಡುಗೆ ಮಾಡಿ ಇರಿಸುವಂತಿಲ್ಲ.

ತುಳಸಿ ದಳ ಬಳಕೆ

ತುಳಸಿ ದಳ ಬಳಕೆ

ಗ್ರಹಣ ಮುಗಿದ ಬಳಿಕ ಸ್ನಾನ ಮಾಡುವ ಅಭ್ಯಾಸ ಅನೇಕರಿಗೆ ಇದೆ. ಗ್ರಹಣದ ಸಮಯದಲ್ಲಿ ಅಡುಗೆ ಮಾಡುವುದನ್ನೂ ನಿರ್ಬಂಧಿಸಲಾಗುತ್ತದೆ. ಚಂದ್ರನಿಂದ ಗ್ರಹಣದ ಸಮಯದಲ್ಲಿ ಹೊರಬರುವ ಪ್ರಬಲ ಅಂಶಗಳು ಆಹಾರವನ್ನು ಕಲುಷಿತಗೊಳಿಸುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಅನೇಕ ಕುಟುಂಬಗಳು ಗ್ರಹಣದ ದಿನ ಅಡುಗೆ ಮಾಡುವುದಿಲ್ಲ, ಗ್ರಹಣದ ವೇಳೆ ಆಹಾರ ಸೇವನೆ ಮಾಡುವುದಿಲ್ಲ. ಅದರ ಬದಲು ಲಘು ಉಪಾಹಾರ ಸೇವಿಸುತ್ತಾರೆ. ಇದಕ್ಕೂ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಹಾಗೆಯೇ ಗ್ರಹಣದ ದಿನ ಮಾಡುವ ಎಲ್ಲ ಪದಾರ್ಥಗಳಿಗೂ ತುಳಸಿ ದಳ ಹಾಕುವುದು ಕಡ್ಡಾಯ. ತುಳಸಿ ದಳಕ್ಕೆ ಗ್ರಹಣದ ಕೆಟ್ಟ ಪರಿಣಾಮಗಳನ್ನು ತಡೆಯುವ ಶಕ್ತಿ ಇದೆ ಎನ್ನಲಾಗುತ್ತದೆ.

English summary
Lunar Eclipse 2020: Traditional beliefs says it is not safe to eat food during the day of eclipse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X