ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಹಿಸುದ್ದಿ: ಎಲ್‌ಪಿಜಿ ಗ್ರಾಹಕರ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ; ಪರಿಶೀಲಿಸುವುದು ಹೇಗೆ?

|
Google Oneindia Kannada News

ನವದೆಹಲಿ, ನವೆಂಬರ್ 24: ಭಾರತದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದೆ. ಕಳದ ಏಳು ವರ್ಷಗಳಲ್ಲಿ ಅಡುಗೆ ಅನಿಲದ ಬೆಲೆಯು ಬಹುತೇಕ ಡಬಲ್ ಆಗಿರುವುದರ ನಡುವೆ ಗ್ರಾಹಕರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದೆ.

ದೇಶದಲ್ಲಿ ಎಲ್‌ಪಿಜಿ ಗ್ಯಾಸ್ ಗ್ರಾಹಕರಿಗೆ ಸಹಾಯಧನವನ್ನು ನೀಡಲಾಗುತ್ತಿದೆ. ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿ ಹಣವು ಜಮಾ ಆಗಲಿದೆ. ಮೂಲಗಳ ಪ್ರಕಾರ, ಗ್ರಾಹಕರಿಗೆ ಒಂದು ಎಲ್‌ಪಿಜಿ ಸಿಲಿಂಡರ್ ಮೇಲೆ 79.26 ರೂಪಾಯಿ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಈ ಹಿಂದೆ ನವೆಂಬರ್ ಮೊದಲ ದಿನವೇ ಪೆಟ್ರೋಲಿಯಂ ಕಂಪನಿಗಳು ಗ್ಯಾಸ್ ಬೆಲೆಯನ್ನು ಏರಿಸಿದ್ದವು. ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 265 ರೂಪಾಯಿಯಷ್ಟು ಹೆಚ್ಚಾಗಿದ್ದು, ಇದು ಕಮರ್ಷಿಯಲ್ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯವಾಗುತ್ತವೆ.

ದೀಪಾವಳಿಗೂ ಮುನ್ನವೇ ಗ್ರಾಹಕರಿಗೆ ಬರೆ ಎಳೆದ ಎಲ್‌ಪಿಜಿ, 266 ರೂ. ಹೆಚ್ಚಳದೀಪಾವಳಿಗೂ ಮುನ್ನವೇ ಗ್ರಾಹಕರಿಗೆ ಬರೆ ಎಳೆದ ಎಲ್‌ಪಿಜಿ, 266 ರೂ. ಹೆಚ್ಚಳ

ಎಲ್‌ಪಿಜಿ ಸಿಲಿಂಡರ್ ಹೊಂದಿರುವ ಕೆಲವು ಗ್ರಾಹಕರು 158.52 ರೂಪಾಯಿ ಸಬ್ಸಿಡಿ ಪಡೆಯುತ್ತಿರುವುದಾಗಿ ಹೇಳಿದರೆ, ಮತ್ತೆ ಕೆಲವರ ಬ್ಯಾಂಕ್ ಖಾತೆಗೆ 237.78 ರೂಪಾಯಿ ಜಮೆ ಆಗಿದೆ ಎಂದು ಹೇಳಲಾಗುತ್ತಿದೆ. ಈ ಹಂತದಲ್ಲಿ ಗೊಂದಲ ಮುಂದುವರಿದಿದೆ.

ಕಳೆದ ಕೆಲವು ದಿನಗಳಿಂದ ಎಲ್‌ಪಿಜಿ ಸಿಲಿಂಡರ್ ಪಡೆದ ಗ್ರಾಹಕರ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣವೇ ಜಮಾ ಆಗಿಲ್ಲ ಎಂಬ ಆರೋಪಗಳೂ ಕೇಳಿ ಬಂದಿವೆ. ಈಗ ಇಂಥ ಎಲ್ಲ ದೂರುಗಳಿಗೆ ಅವಕಾಶವೇ ಇರುವುದಿಲ್ಲ. ನಿಮ್ಮ ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿ ಹಣ ಎಷ್ಟು ಬಂದಿದೆ ಎಂಬುದನ್ನು ನೀವೇ ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸುವ ಮೂಲಕ ತಿಳಿದುಕೊಳ್ಳಬಹುದು. ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿ ಹಣವನ್ನು ಪರಿಶೀಲನೆ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿ.

LPG Subsidy: LPG Subsidy again being credited into your account, Here is how to check in online

ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿ ಪರಿಶೀಲನೆ ಹೇಗೆ?:

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣವನ್ನು ಚೆಕ್ ಮಾಡುವುದಕ್ಕೆ ಎರಡು ವಿಧಾನಗಳಿವೆ. ಒಂದು ನೊಂದಾಯಿತ ಮೊಬೈಲ್ ಸಂಖ್ಯೆ, ಎರಡು ಗ್ಯಾಸ್ ಪಾಸ್ ಬುಕ್ ನಲ್ಲಿ ಬರೆದಿರುವ ನಿಮ್ಮ ಎಲ್‌ಪಿಜಿ ಐಡಿ. ಈ ಎರಡು ವಿಧಾನಗಳ ಮೂಲಕ ಸಬ್ಸಿಡಿ ಹಣವನ್ನು ಪರಿಶೀಲಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ.

* ಮೊದಲು http://mylpg.in/ ವೆಬ್ ಸೈಟ್ ಲಾಗಿನ್ ಆಗಬೇಕು.

* ನಂತರದ ಅಲ್ಲಿರುವ ಎಲ್‌ಪಿಜಿ ಸಬ್ಸಿಡಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.

* ಇಲ್ಲಿ ನಿಮಗೆ ಕಾಣಿಸಿಕೊಳ್ಳುವ ಮೂರು ಎಲ್‌ಪಿಜಿ ಕಂಪನಿಗಳ ಪೈಕಿ ನಿಮ್ಮ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಿರಿ. ಒಂದು ವೇಳೆ ನೀವು ಇಂಡಿಯನ್ ಗ್ಯಾಸ್ ಹೊಂದಿದ್ದರೆ, ಇಂಡಿಯನ್ ಗ್ಯಾಸ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿರಿ.

* ಕಂಪ್ಲೆಂಟ್ ಅನ್ನು ಆಯ್ಕೆ ಮಾಡಿದ ಮಾಡಿದ ನಂತರದಲ್ಲಿ ನೆಕ್ಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿರಿ.

* ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನು ಒಳಗೊಂಡಿರುವ ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಸಬ್ಸಿಡಿ ಹಣ ಎಷ್ಟು ಜಮಾ ಆಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಸಬ್ಸಿಡಿಗಳ ಮೇಲೆ ಕೇಂದ್ರ ಸರ್ಕಾರದ ವೆಚ್ಚ:

2021ನೇ ಆರ್ಥಿಕ ಸಾಲಿನಲ್ಲಿ ಕೇಂದ್ರ ಸರ್ಕಾರವು ಸಹಾಯಧನಕ್ಕಾಗಿ (ಸಬ್ಸಿಡಿ) 3,559 ಕೋಟಿ ಹಣವನ್ನು ಖರ್ಚು ಮಾಡಿದೆ. ಅದೇ ರೀತಿ 2020ನೇ ಆರ್ಥಿಕ ಸಾಲಿನಲ್ಲಿ 24,468 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿದೆ. 2015ರ ಜನವರಿಯಲ್ಲಿ ಜಾರಿಗೊಳಿಸಲಾದ DBTL ಯೋಜನೆ ಅಡಿಯಲ್ಲಿ ಗ್ರಾಹಕರು ತಾವು ಪಡೆಯುವ ಎಲ್‌ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನೂ ಸೇರಿದಂತೆ ಹಣ ಪಾವತಿಸಬೇಕು. ತದನಂತರದಲ್ಲಿ ಸರ್ಕಾರದಿಂದ ಸಬ್ಸಿಡಿ ಹಣವು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

English summary
LPG Subsidy: LPG Subsidy again being credited into your account, Here is how to check in online
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X