ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಎದುರು ಹಿನ್ನಡೆ, ಏಷ್ಯಾದ 4ನೇ ಶಕ್ತಿಶಾಲಿ ದೇಶ ಭಾರತ: ವರದಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 19: ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಪ್ರಭಾವ ಬೀರುತ್ತಿರುವ ಅತ್ಯಂತ ಶಕ್ತಿಶಾಲಿ ದೇಶಗಳಲ್ಲಿ ಚೀನಾವು ಅಮೆರಿಕದ ಸಮೀಪಕ್ಕೆ ಬಂದಿದೆ. ಕೋವಿಡ್ ಸೋಂಕಿನ ಪಿಡುಗನ್ನು ನಿಭಾಯಿಸುತ್ತಿರುವ ರೀತಿಯಿಂದ ಅಮೆರಿಕದ ವರ್ಚಸ್ಸು ಕುಸಿದಿದ್ದು, ಚೀನಾ ಮತ್ತಷ್ಟು ಪ್ರಭಾವಶಾಲಿಯಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಏಷ್ಯಾ ಪೆಸಿಫಿಕ್ ಪ್ರದೇಶದ ಟಾಪ್ ಸೂಪರ್ ಪವರ್ ದೇಶಗಳ ಪಟ್ಟಿಯಲ್ಲಿ ಅಮೆರಿಕ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಎರಡು ವರ್ಷಗಳ ಹಿಂದೆ ಚೀನಾ ವಿರುದ್ಧ 10 ಅಂಕಗಳಷ್ಟು ಮುಂದಿದ್ದ ಅಮೆರಿಕದ ಅಂಕಗಳು ಈಗ ಅರ್ಧದಷ್ಟು ಇಳಿಕೆಯಾಗಿದೆ ಎಂದು ಸಿಡ್ನಿ ಮೂಲದ ಲೋವಿ ಸಂಸ್ಥೆಯ ಏಷ್ಯಾ ಪವರ್ ಇಂಡೆಕ್ಸ್ 2020 ವರದಿ ಹೇಳಿದೆ. 26 ದೇಶ ಹಾಗೂ ಪ್ರದೇಶಗಳು ಈ ಅಧ್ಯಯನಲ್ಲಿ ಒಳಗೊಂಡಿವೆ.

ಪ್ರತಿ ನಾಲ್ವರು ಭಾರತೀಯರಲ್ಲಿ ಒಬ್ಬರಿಗೆ ಕೊರೊನಾ ವೈರಸ್ಪ್ರತಿ ನಾಲ್ವರು ಭಾರತೀಯರಲ್ಲಿ ಒಬ್ಬರಿಗೆ ಕೊರೊನಾ ವೈರಸ್

ಕೊರೊನಾ ವೈರಸ್ ಸೋಂಕಿನ ನಿರ್ವಹಣೆಯಲ್ಲಿನ ವೈಫಲ್ಯ, ಬಹು ವ್ಯಾಪಾರ ವಿವಾದಗಳು ಮತ್ತು ಬಹುಪಕ್ಷೀಯ ಒಪ್ಪಂದ ಹಾಗೂ ಸಂಸ್ಥೆಗಳನ್ನು ಹಿಂದಕ್ಕೆ ಪಡೆಯುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರಗಳು ಅಮೆರಿಕದ ವರ್ಚಸ್ಸಿಗೆ ಧಕ್ಕೆ ಉಂಟುಮಾಡಿವೆ ಎಂದು ಲೋವಿ ಏಷ್ಯಾನ್ ಪವರ್ ಮತ್ತು ಡಿಪ್ಲೊಮಸಿ ಪ್ರೋಗ್ರಾಮ್‌ನ ಸಂಶೋಧನಾ ಮುಖ್ಯಸ್ಥ ಹೆರ್ವೆ ಲೆಮಾಹಿಯು ಹೇಳಿದ್ದಾರೆ. ಮುಂದೆ ಓದಿ.

ಅಮೆರಿಕ ಚೇತರಿಸಿಕೊಳ್ಳಲು ಸಮಯ

ಅಮೆರಿಕ ಚೇತರಿಸಿಕೊಳ್ಳಲು ಸಮಯ

ಕೊರೊನಾ ವೈರಸ್ ಪೂರ್ವದ ಮಟ್ಟಕ್ಕೆ ಸುಧಾರಿಸಿಕೊಳ್ಳಲು ಅಮೆರಿಕಕ್ಕೆ 2024ರವರೆಗೂ ಸಮಯ ಬೇಕಾಗಬಹುದು. ಇದಕ್ಕೆ ವಿರುದ್ಧವಾಗಿ ಚೀನಾದ ಆರ್ಥಿಕತೆಯು ವೈರಸ್ ಹೊಡೆತದಿಂದ ಎದ್ದು ನಿಂತಿದ್ದು, 2020ರಲ್ಲಿ ಚೇತರಿಕೆ ಕಂಡ ಏಕೈಕ ದೊಡ್ಡ ಆರ್ಥಿಕತೆಯಾಗಿದೆ. ಇದು ನೆರೆಯ ದೇಶಗಳ ವಿರುದ್ಧ ಚೀನಾಕ್ಕೆ ಮುಂದಿನ ದಶಕದವರೆಗೂ ಮತ್ತಷ್ಟು ಲಾಭ ತಂದುಕೊಡಲಿದೆ ಎಂದು ಸಂಸ್ಥೆ ತಿಳಿಸಿದೆ.

ಚೀನಾ ಪ್ರಭಾವಳಿ

ಚೀನಾ ಪ್ರಭಾವಳಿ

ಸತತ ಮೂರನೇ ವರ್ಷ ಚೀನಾ ಎರಡನೆಯ ಸ್ಥಾನದಲ್ಲಿ ದೃಢವಾಗಿದೆ. ವುಹಾನ್‌ನಲ್ಲಿ ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡಿದ ಮಾಹಿತಿಯನ್ನು ಜಾಗತಿಕ ಸಮುದಾಯದಿಂದ ಮುಚ್ಚಿಟ್ಟ ಕಾರಣಕ್ಕೆ ವ್ಯಾಪಕ ಟೀಕೆಗೆ ಗುರಿಯಾಗಿ ರಾಜತಾಂತ್ರಿಕ ಹಿನ್ನಡೆ ಅನುಭವಿಸಿದರೂ ಚೀನಾ ಪ್ರಭಾವಳಿ ಕಡಿಮೆಯಾಗಿಲ್ಲ.

ಕೊರೊನಾ ವೈರಸ್ ಕುರಿತಾದ ಸುಳ್ಳು ಸುದ್ದಿ: ಮುಂಚೂಣಿಯಲ್ಲಿ ಭಾರತಕೊರೊನಾ ವೈರಸ್ ಕುರಿತಾದ ಸುಳ್ಳು ಸುದ್ದಿ: ಮುಂಚೂಣಿಯಲ್ಲಿ ಭಾರತ

ಜೋ ಬಿಡೆನ್ ಆಯ್ಕೆಯಿಂದ ಲಾಭ

ಜೋ ಬಿಡೆನ್ ಆಯ್ಕೆಯಿಂದ ಲಾಭ

ನವೆಂಬರ್‌ನಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಮರು ಆಯ್ಕೆಯಾದರೂ ಇದೇ ಟ್ರೆಂಡ್ ಮುಂದುವರಿಯಲಿದೆ. ಆದರೆ ಅಮೆರಿಕವನ್ನು ಹಿಂದಿಕ್ಕಿ ಈ ಪ್ರದೇಶದಲ್ಲಿ ಅತ್ಯಂತ ಪ್ರಬಲ ದೇಶವಾಗಿ ಹೊರಹೊಮ್ಮುವುದು ಚೀನಾಕ್ಕೆ ಅಷ್ಟು ಸುಲಭವಲ್ಲ.

ಡೊನಾಲ್ಡ್ ಟ್ರಂಪ್ ಮರು ಆಯ್ಕೆಯಾದರೆ ಏಷ್ಯಾದ ದೇಶಗಳು ಅಮೆರಿಕವಿಲ್ಲದೆ ಚಟುವಟಿಕೆಗಳನ್ನು ನಡೆಸಲು ಕಲಿಯಲಿದೆ. ಜೋ ಬಿಡೆನ್ ಆಯ್ಕೆಯಾದರೆ ಅಮೆರಿಕದೊಂದಿಗೆ ವ್ಯವಹಾರ ನಡೆಸಲು ಏಷ್ಯಾ ಮತ್ತಷ್ಟು ಉತ್ಸುಕವಾಗಲಿದೆ. ಮುಂದಿನ ಒಂದು ದಶಕದಲ್ಲಿ ಅಮೆರಿಕದ ಸ್ಥಾನವನ್ನು ಚೀನಾ ಆಕ್ರಮಿಸಿದರೂ ಅದು ತೀವ್ರ ಮುಂಚೂಣಿಯಲ್ಲಿ ಸಾಗಲು ಸಾಧ್ಯವಾಗುವುದಿಲ್ಲ.

ಭಾರತಕ್ಕೆ ನಾಲ್ಕನೇ ಸ್ಥಾನ

ಭಾರತಕ್ಕೆ ನಾಲ್ಕನೇ ಸ್ಥಾನ

ಜಪಾನ್ ಬಳಿಕ ಭಾರತವು ನಾಲ್ಕನೆಯ ಸ್ಥಾನವನ್ನು ಪಡೆದುಕೊಂಡಿದೆ. ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾರತದ ಆರ್ಥಿಕತೆ ಪ್ರಗತಿ ಭಾರಿ ಹೊಡೆತ ತಿಂದಿದೆ. ಅಲ್ಲದೆ ಸೇನಾ ಕಾರ್ಯತಂತ್ರಗಳಲ್ಲಿ ಚೀನಾ ಎದುರು ಹಿನ್ನಡೆ ಅನುಭವಿಸಿದೆ ಎಂದು ಸಂಸ್ಥೆ ತಿಳಿಸಿದೆ. 2030ರ ವೇಳೆಗೆ ಚೀನಾದ ಆರ್ಥಿಕ ಪ್ರಗತಿಯ ಶೇ 40ರಷ್ಟು ಮಾತ್ರವೇ ಪ್ರಗತಿಯನ್ನು ಭಾರತ ತಲುಪಲಿದೆ. ಕಳೆದ ವರ್ಷ ಇದನ್ನು ಶೇ 50ರಷ್ಟು ಅಂದಾಜಿಸಲಾಗಿತ್ತು.

Recommended Video

Political Popcorn with Lavanya : Dr BL Shankar, ಈಗ ಆಗಿರೋದೆ ಸಾಕು ಇನ್ಮೇಲೆ ಚುನಾವಣೆಗೆ ನಿಲ್ಲಲ್ಲಾ!?! Part2
ಭಾರತದ ಪ್ರಗತಿ ವಿಳಂಬ

ಭಾರತದ ಪ್ರಗತಿ ವಿಳಂಬ

ರಷ್ಯಾ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಸಿಂಗಪುರ, ಥಾಯ್ಲೆಂಡ್, ಮಲೇಷ್ಯಾ, ಇಂಡೋನೇಷ್ಯಾ, ವಿಯೆಟ್ನಾಂ, ನ್ಯೂಜಿಲೆಂಡ್, ತೈವಾನ್, ಪಾಕಿಸ್ತಾನ, ಫಿಲಿಪ್ಪೀನ್ಸ್ ನಂತರದ ಸ್ಥಾನಗಳಲ್ಲಿವೆ. 'ಭಾರತವು ಈ ಪ್ರದೇಶದಲ್ಲಿ ಮಹಾನ್ ಶಕ್ತಿಶಾಲಿ ದೇಶವಾಗಿ ಹೊರಹೊಮ್ಮುವುದು ತುಂಬಾ ತಡವಾಗುವುದು ಖಚಿತ. ಭಾರತವು ಅಭಿವೃದ್ಧಿ ಸವಾಲುಗಳನ್ನು ಹಾಗೂ ಹೊಸ ಬಡತನ ಪ್ರಮಾಣವನ್ನು ಎದುರಿಸುವಲ್ಲಿ ಬಹಳ ಹಿನ್ನಡೆ ಅನುಭವಿಸಿದೆ' ಎಂದು ಸಂಸ್ಥೆ ಹೇಳಿದೆ.

English summary
India is in the 4th place of Lowy Institute's Asia Power Index 2020 after America, China and Japan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X