ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆನಪಿದ್ಯಾ: ರಣಭೀಕರ ಅನಾಹುತಕ್ಕೂ ಮುನ್ನ ಕೊಡಗಿನಲ್ಲೂ ಕೇಳಿಸಿತ್ತು ನಿಗೂಢ ಶಬ್ದ.!

|
Google Oneindia Kannada News

ಬೆಂಗಳೂರು, ಮೇ 21: ಆಗಿನ್ನೂ ಸಮಯ ಸುಮಾರು 1.20 ರಿಂದ 1.30.. ಪ್ರಶಾಂತವಾಗಿದ್ದ ಬೆಂಗಳೂರಿನಲ್ಲಿ ದಿಢೀರನೆ ಜೋರಾದ ಶಬ್ದ ಕೇಳಿಬಂತು. ಭೂಕಂಪದಂತೆ ಭಾಸವಾದ ಭಾರಿ ಶಬ್ದದಿಂದ ಬೆಂಗಳೂರಿಗರು ಅಕ್ಷರಶಃ ಬೆಚ್ಚಿಬಿದ್ದರು. ವೈಟ್ ಫೀಲ್ಡ್, ಟಿನ್ ಫ್ಯಾಕ್ಟರಿ, ಕೋರಮಂಗಲ, ಎಚ್.ಎಸ್.ಆರ್.ಲೇಔಟ್, ಕೆ.ಆರ್.ಪುರಂ, ಬನ್ನೇರುಘಟ್ಟದ ನಿವಾಸಿಗಳು ಭಾರಿ ಶಬ್ದದಿಂದ ನಡುಗಿದರು.

Recommended Video

ಶಿವಮೊಗ್ಗದ ಸಾಗರದಲ್ಲಿ ಸೋನಿಯಾ ಗಾಂಧಿ ವಿರುದ್ಧ ದಾಖಲಾಯ್ತು FIR | Sonia Gandhi | Oneindia Kannada

''ಬೆಂಗಳೂರಿಗರ ಆತಂಕ ಹೆಚ್ಚಿಸಿದ ಶಬ್ದವು ಭೂಕಂಪದಿಂದ ಉಂಟಾಗಿದ್ದಲ್ಲ, ಬೇರೆ ಯಾವುದೇ ಸ್ಫೋಟ ಕೂಡ ಸಂಭವಿಸಿಲ್ಲ. ಶಬ್ದಕ್ಕೆ ಕಾರಣವಾಗಿದ್ದು ಯುದ್ಧ ವಿಮಾನ'' ಎಂದು ರಕ್ಷಣಾ ಇಲಾಖೆಯ ಬೆಂಗಳೂರಿನ ವಕ್ತಾರರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿಗರನ್ನು ಬೆಚ್ಚಿಬೀಳುವಂತೆ ಮಾಡಿದ ನಿಗೂಢ ಶಬ್ದಬೆಂಗಳೂರಿಗರನ್ನು ಬೆಚ್ಚಿಬೀಳುವಂತೆ ಮಾಡಿದ ನಿಗೂಢ ಶಬ್ದ

ಆದರೆ, ರಕ್ಷಣಾ ಇಲಾಖೆ ನೀಡಿರುವ ಸ್ಪಷ್ಟನೆಯಿಂದ ಬೆಂಗಳೂರಿಗರ ಆತಂಕ ಕಡಿಮೆಯಾಗಿಲ್ಲ. ಯಾಕಂದ್ರೆ, ಬೆಂಗಳೂರಿನ ಕೆಲ ಪ್ರದೇಶದ ನಿವಾಸಿಗಳಿಗೆ ಶಬ್ದದ ಜೊತೆಗೆ ಕಂಪನದ ಅನುಭವೂ ಉಂಟಾಗಿದೆ. ಹಲವೆಡೆ ಕಟ್ಟಡಗಳು, ಕಿಟಕಿಗಳು ಅಲುಗಾಡಿವೆ.

ವಿಚಿತ್ರ ಅಂದ್ರೆ, ಬೆಂಗಳೂರಿನಲ್ಲಿ ಭೀಕರ ಶಬ್ದದ ಅನುಭವವಾದ ಬಳಿಕ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕಸಂದ್ರ ಗ್ರಾಮಸ್ಥರಿಗೂ ನಿಗೂಢ ಶಬ್ದ ಕೇಳಿಸಿದೆ. ಶಬ್ದದ ಜೊತೆಗೆ ಕಂಪನವೂ ಆಗಿದ್ದು, ಅಂಗಡಿಯ ಶೀಟುಗಳು ಅಲುಗಾಡಿವೆ.

ಬೆಂಗಳೂರಿಗರ ಎದೆ ನಡುಗಿಸಿದ ನಿಗೂಢ ಸದ್ದು: ನೆಟ್ಟಿಗರು ಹೇಳಿದ್ದೇನು.?ಬೆಂಗಳೂರಿಗರ ಎದೆ ನಡುಗಿಸಿದ ನಿಗೂಢ ಸದ್ದು: ನೆಟ್ಟಿಗರು ಹೇಳಿದ್ದೇನು.?

ಅಸಲಿಗೆ, 2018 ರಲ್ಲಿ ಕರ್ನಾಟಕದ ಕಾಶ್ಮೀರ, ಕಾಫಿ ನಾಡು ಅಂತೆಲ್ಲಾ ಕರೆಯಿಸಿಕೊಳ್ಳುವ ಕೊಡಗಿನಲ್ಲೂ 'ನಿಗೂಢ ಶಬ್ದ' ಕೇಳಿಬಂದಿತ್ತು. ಅದು ಮುಂದೆ ಕೊಡಗಿನ ಹಲವೆಡೆ ಜರುಗಿದ ಭೂಕುಸಿತಕ್ಕೆ ಮುನ್ನುಡಿಯಾಗಿತ್ತು.

ಕೊಡಗಿನಲ್ಲಿ ನಿಗೂಢ ಶಬ್ದ

ಕೊಡಗಿನಲ್ಲಿ ನಿಗೂಢ ಶಬ್ದ

2018 ರಲ್ಲಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸುವುದಕ್ಕೂ ಮೊದಲು ಜಿಲ್ಲೆಯ ಹಲವು ಭಾಗಗಳಲ್ಲಿ ಭೂಮಿಯೊಳಗಿನಿಂದ ಭೀಕರ ಸದ್ದು ಕೇಳಿಬಂದಿತ್ತು. ಸದ್ದಿನಿಂದ ಆತಂಕಗೊಂಡಿದ್ದ ಜನರಿಗೆ ಕೆಲವೇ ದಿನಗಳಲ್ಲಿ ದೊಡ್ಡ ಆಘಾತ ಎದುರಾಗಿತ್ತು. ಧಾರಾಕಾರ ಮಳೆ, ಉಕ್ಕಿಹರಿದ ನದಿಗಳು, ಪ್ರವಾಹ ಪರಿಸ್ಥಿತಿ ನಿರ್ಮಾಣ... ಇವೆಲ್ಲದರ ಜೊತೆಗೆ ಭೀಕರ ಶಬ್ದದ ಬಳಿಕ ಊಹೆಗೂ ನಿಲುಕದ ಭೂಕುಸಿತ ಉಂಟಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು.

ಕರಿಕೆ ಗ್ರಾಮದಲ್ಲಿ ಹೀಗೇ ಆಗಿತ್ತು.!

ಕರಿಕೆ ಗ್ರಾಮದಲ್ಲಿ ಹೀಗೇ ಆಗಿತ್ತು.!

2018 ರ ಆಗಸ್ಟ್ ತಿಂಗಳಲ್ಲಿ ಮಡಿಕೇರಿ ತಾಲೂಕಿನ ಭಾಗಮಂಡಲ ಕರಿಕೆ ಗ್ರಾಮದಲ್ಲೂ ವಿಚಿತ್ರ ಸದ್ದು ಕೇಳಿ ಬಂದ ಬಳಿಕ ಭೂಕುಸಿತ ಸಂಭವಿಸಿತ್ತು. ಅದೃಷ್ಟವಶಾತ್ ಅಲ್ಲಿದ್ದ ಭೂವಿಜ್ಞಾನಿಯೊಬ್ಬರ ಮುನ್ಸೂಚನೆ ಮೇರೆಗೆ ಗ್ರಾಮಸ್ಥರೆಲ್ಲರೂ ಬೇರೆಡೆ ಸ್ಥಳಾಂತರಗೊಂಡ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ.

ಬೆಂಗಳೂರಿನ ಬುಧವಾರದ ನಿಗೂಢ ಶಬ್ದದ ರಹಸ್ಯ ಬಯಲುಬೆಂಗಳೂರಿನ ಬುಧವಾರದ ನಿಗೂಢ ಶಬ್ದದ ರಹಸ್ಯ ಬಯಲು

ವಿರಾಜಪೇಟೆಯಲ್ಲೂ ಇದೇ ಆಗಿತ್ತು

ವಿರಾಜಪೇಟೆಯಲ್ಲೂ ಇದೇ ಆಗಿತ್ತು

2019 ರಲ್ಲೂ ವಿರಾಜಪೇಟೆಯ ತೋರ ಗ್ರಾಮದಲ್ಲಿ ಭಯಾನಕ ಸದ್ದು ಕೇಳಿಬಂದಿತ್ತು. ಬಳಿಕ ಅಲ್ಲಿ ಭೂಕುಸಿತ ಸಂಭವಿಸಿ 10 ಮಂದಿ ಮೃತಪಟ್ಟಿದ್ದರು.

ಅಂತರ್ಜಲ ಮಟ್ಟ ಹೆಚ್ಚಾದಾಗ ಶಬ್ದ

ಅಂತರ್ಜಲ ಮಟ್ಟ ಹೆಚ್ಚಾದಾಗ ಶಬ್ದ

2019 ರಲ್ಲಿ ಮಡಿಕೇರಿಯ ಕೆಲವು ಕಡೆ ಭೂಮಿಯ ಒಳಭಾಗದಲ್ಲಿ ನದಿ ಭೂರ್ಗರೆದು ಹರಿಯುವಂಥ ಶಬ್ದ ನಿರಂತರವಾಗಿ ಕೇಳಿಬಂದಿತ್ತು. ಈ ಬಗ್ಗೆ ಭೂ ವಿಜ್ಞಾನಿ ಡಾ.ಲತಾ, ''ಭೂಮಿಯೊಳಗೆ ನೀರು ಹರಿಯುವಾಗ ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತದೆ. ಹರಿವಿಗೆ ಅಡ್ಡಿ ಉಂಟಾದಾಗ, ಪಥ ಬದಲಿಸುತ್ತದೆ. ಆ ಸಂದರ್ಭದಲ್ಲಿ ಉಂಟಾಗುವ ಶಬ್ದ ವಿವಿದೆಡೆ ಕೇಳಿಬರುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಾದಾಗ ಭೂಮಿಯ ಪದರದಲ್ಲಿ ನೀರಿನ ಹರಿವು ಹೆಚ್ಚಾಗಲಿದ್ದು, ಶಬ್ದ ಬರುತ್ತದೆ'' ಎಂದಿದ್ದರು.

ಬೆಂಗಳೂರಿನ ನಂತರ ಕೋಲಾರದಲ್ಲೂ ಕೇಳಿಬಂತು ಆ ನಿಗೂಢ ಶಬ್ದಬೆಂಗಳೂರಿನ ನಂತರ ಕೋಲಾರದಲ್ಲೂ ಕೇಳಿಬಂತು ಆ ನಿಗೂಢ ಶಬ್ದ

ಬೆಂಗಳೂರಿನಲ್ಲೂ ಹೀಗೆ ಆಗಿರಬಹುದಾ.?

ಬೆಂಗಳೂರಿನಲ್ಲೂ ಹೀಗೆ ಆಗಿರಬಹುದಾ.?

''ಲಾಕ್ ಡೌನ್ ಘೋಷಣೆಯಾದ ಬಳಿಕ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಇದರಿಂದ ಲ್ಯಾಂಡ್ ಸಬ್ಸಿಡೆನ್ಸ್ ಆಗಿರುವ ಸಾಧ್ಯತೆಯೂ ಇದೆ'' ಎಂದಿದ್ದಾರೆ ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರದ ಮಾಜಿ ಸಂಸ್ಥಾಪಕ ನಿರ್ದೇಶಕ ವಿ.ಎಸ್.ಪ್ರಕಾಶ್

ಕೊಡಗು: ನಿಗೂಢ ಶಬ್ದಕ್ಕೆ ಕಾರಣ ಹುಡುಕಿದ್ದಾರೆ ವಿಜ್ಞಾನಿಗಳುಕೊಡಗು: ನಿಗೂಢ ಶಬ್ದಕ್ಕೆ ಕಾರಣ ಹುಡುಕಿದ್ದಾರೆ ವಿಜ್ಞಾನಿಗಳು

ನಿಲ್ಲದ ಆತಂಕ, ಚರ್ಚೆ

ನಿಲ್ಲದ ಆತಂಕ, ಚರ್ಚೆ

ಹಾಗಾದ್ರೆ, ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದ್ರಿಂದ 'ನಿಗೂಢ ಶಬ್ದ' ಕೇಳಿಬಂತಾ.? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದ್ರೆ, ಯುದ್ಧ ವಿಮಾನ ತೀರಾ ಕೆಳಮಟ್ಟದಲ್ಲಿ ಹಾರಾಟ ನಡೆಸಿದ್ದರಿಂದ ದೊಡ್ಡ ಮಟ್ಟದಲ್ಲಿ ಶಬ್ದ ಕೇಳಿಸಿದೆ ಎಂದು ರಕ್ಷಣಾ ಇಲಾಖೆಯ ಬೆಂಗಳೂರಿನ ವಕ್ತಾರರು ಟ್ವೀಟ್ ಮಾಡಿದ್ದಾರೆ. ಆದರೂ, ಬೆಂಗಳೂರಿನಲ್ಲಿ ಕೇಳಿಬಂದ ನಿಗೂಢ ಶಬ್ದದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಲೇ ಇದೆ. ಕೊಡಗಿನಲ್ಲಿ ಕೇಳಿಬಂದ ನಿಗೂಢ ಶಬ್ದಕ್ಕೂ ಬೆಂಗಳೂರಿನ ನಿಗೂಢ ಶಬ್ದಕ್ಕೂ ಈಗ ಹೋಲಿಕೆ ಮಾಡಲಾಗುತ್ತಿದೆ. ಇದು ಸಹಜವಾಗಿ ಬೆಂಗಳೂರಿಗರನ್ನ ಆತಂಕಕ್ಕೀಡು ಮಾಡಿದೆ. ಮೊದಲೇ ಕೋವಿಡ್-19 ನಿಂದ ಕಂಗೆಟ್ಟಿರುವ ಜನತೆಯ ಮೇಲೆ ಪ್ರಕೃತಿ ಮತ್ತೆ ಕೋಪಿಸಿಕೊಳ್ಳದಿದ್ದರೆ ಸಾಕು ಎಂಬುದೇ ಬೆಂಗಳೂರಿಗರ ಪ್ರಾರ್ಥನೆ.

ಕೊಡಗು ಗಡಿಭಾಗದಲ್ಲಿ ಭೂಮಿಯಡಿಯಿಂದ ಮತ್ತೆ ಕೇಳಿಬರುತ್ತಿದೆ ನದಿ ಹರಿಯುವ ಶಬ್ದ!ಕೊಡಗು ಗಡಿಭಾಗದಲ್ಲಿ ಭೂಮಿಯಡಿಯಿಂದ ಮತ್ತೆ ಕೇಳಿಬರುತ್ತಿದೆ ನದಿ ಹರಿಯುವ ಶಬ್ದ!

English summary
Mysterious Loud Sounds with vibration was also experienced at Kodagu before landslides and natural calamity in 2018 and 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X