ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Long Covid: ಏನಿದು ಸೋಂಕಿನ ಮತ್ತೊಂದು ವರಸೆ? ಕಳವಳ ವ್ಯಕ್ತಪಡಿಸಿದ WHO

|
Google Oneindia Kannada News

ನವದೆಹಲಿ, ಆಗಸ್ಟ್ 06: ಅಂದಾಜಿಗೇ ಸಿಗದ ಹಲವು ಆರೋಗ್ಯ ಸಮಸ್ಯೆಗಳಿಗೆ ಕೊರೊನಾ ಸೋಂಕು ಕಾರಣವಾಗುತ್ತಿದೆ. ಕೊರೊನಾ ಸೋಂಕಿನ ಜೊತೆಗೆ ರೂಪಾಂತರಗಳ ಸೃಷ್ಟಿ ಈಗಿರುವ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಇದೀಗ "ದೀರ್ಘಾವಧಿ ಕೊರೊನಾ" (Long Covid) ಮತ್ತೊಂದು ಭೀತಿಯನ್ನು ಹುಟ್ಟುಹಾಕಿದೆ.

ಈ ದೀರ್ಘಾವಧಿ ಕೊರೊನಾ ಕುರಿತು ವಿಶ್ವ ಆರೋಗ್ಯ ಸಂಸ್ಥೆಯೂ ಕಳವಳ ವ್ಯಕ್ತಪಡಿಸಿದೆ. ಕೊರೊನಾ ಸೋಂಕಿನಿಂದ ಗುಣಮುಖವಾದ ನಂತರವೂ ಇನ್ನಿತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಜನರು ನಿರ್ಲಕ್ಷ್ಯ ವಹಿಸಬೇಡಿ. ಶೀಘ್ರವೇ ವೈದ್ಯಕೀಯ ನೆರವು ಪಡೆದುಕೊಳ್ಳಿ ಎಂದು ಜನರಿಗೆ ಕೇಳಿಕೊಂಡಿದೆ.

 ಕೊರೊನಾ ರೂಪಾಂತರ ಸೃಷ್ಟಿ; ವೈರಸ್ ಟ್ರ್ಯಾಕಿಂಗ್ ನಿರ್ಣಾಯಕ ಎಂದ ಅಧ್ಯಯನ ಕೊರೊನಾ ರೂಪಾಂತರ ಸೃಷ್ಟಿ; ವೈರಸ್ ಟ್ರ್ಯಾಕಿಂಗ್ ನಿರ್ಣಾಯಕ ಎಂದ ಅಧ್ಯಯನ

ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಆರೋಗ್ಯ ಸಮಸ್ಯೆಗಳು ನಾಲ್ಕು ಹಾಗೂ ಅದಕ್ಕೂ ಹೆಚ್ಚು ವಾರಗಳ ಕಾಲ ಮುಂದುವರೆದರೆ ಸಮಸ್ಯೆ ನಿರ್ಲಕ್ಷ್ಯ ಮಾಡುವಂಥದ್ದಲ್ಲ ಎಂಬುದು ನೆನಪಿರಲಿ ಎಂದು ಎಚ್ಚರಿಕೆ ನೀಡಿದೆ. ಮುಂದೆ ಓದಿ...

 ದೀರ್ಘಾವಧಿ ಕೋವಿಡ್ ಎಂದರೇನು?

ದೀರ್ಘಾವಧಿ ಕೋವಿಡ್ ಎಂದರೇನು?

ಸೋಂಕಿನಿಂದ ಗುಣಮುಖರಾದ ನಂತರವೂ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ನಾಲ್ಕು ವಾರಗಳಿಗೂ ಅಧಿಕ ಕಾಲ ಉಳಿದುಕೊಂಡಿದ್ದರೆ ಅದನ್ನು "ದೀರ್ಘಾವಧಿ ಕೋವಿಡ್" ಎಂದು ಪರಿಗಣಿಸಬಹುದಾಗಿ ಅಮೆರಿಕ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರ ಮಾಹಿತಿ ನೀಡಿದೆ. ಇದೀಗ ಕೊರೊನಾ ಹರಡುವಿಕೆ ಹೆಚ್ಚಾಗುವುದರ ಜೊತೆಜೊತೆಗೆ ದೀರ್ಘಾವಧಿ ಕೊರೊನಾ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ.

ಕೊರೊನಾ ಲಸಿಕೆ ಹೆಚ್ಚು ಕಾಲ ರಕ್ಷಣೆ ನೀಡುತ್ತದೆಯೇ? ಅಧ್ಯಯನ ಹೇಳುವುದಿದು...ಕೊರೊನಾ ಲಸಿಕೆ ಹೆಚ್ಚು ಕಾಲ ರಕ್ಷಣೆ ನೀಡುತ್ತದೆಯೇ? ಅಧ್ಯಯನ ಹೇಳುವುದಿದು...

 ಕಳವಳ ವ್ಯಕ್ತಪಡಿಸಿದ WHO

ಕಳವಳ ವ್ಯಕ್ತಪಡಿಸಿದ WHO

"ಕೊರೊನಾ ಸೋಂಕಿನ ಹುಟ್ಟು, ಗಂಭೀರತೆ, ಹರಡುವಿಕೆ ಈ ಯಾವ ಅಂಶಗಳೂ ಅಂದಾಜಿಗೆ ಸಿಗುತ್ತಿಲ್ಲ. ಸೋಂಕು ಯಾವಾಗ ಯಾವ ರೂಪ ಪಡೆಯುತ್ತದೆ ಎಂಬುದನ್ನು ಊಹಿಸುವುದು ಕಷ್ಟವಾಗಿದೆ. ಇದರೊಂದಿಗೆ ಜನರಲ್ಲಿ ಹೆಚ್ಚು ಕಾಲ ಕೊರೊನಾ ಸೋಂಕಿನ ಪ್ರಭಾವ ಉಳಿದುಕೊಳ್ಳುತ್ತಿರುವುದು ವಿಶ್ವ ಆರೋಗ್ಯ ಸಂಸ್ಥೆಯನ್ನು ಆತಂಕಕ್ಕೀಡುಮಾಡಿದೆ ಎಂದು WHO ತಾಂತ್ರಿಕ ಮುಖ್ಯಸ್ಥರಾದ ಮಾರಿಯಾ ವಾನ್ ಕೆರ್ಖೋವ್ ಹೇಳಿದ್ದಾರೆ. ಈ ಸಮಸ್ಯೆಯನ್ನು ನಾವು ಗುರುತಿಸುತ್ತಿದ್ದೇವೆ " ಎಂದು ಹೇಳಿದ್ದಾರೆ.
ಕೊರೊನಾದಿಂದ ಗುಣಮುಖರಾದ ನಂತರ ಎಷ್ಟು ಕಾಲ ಅದರ ಪ್ರಭಾವ ಉಳಿಯುತ್ತದೆ, ಯಾವ ಆರೋಗ್ಯ ಸಮಸ್ಯೆ ಸೃಷ್ಟಿಯಾಗುತ್ತದೆ ಎಂಬುದರ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದು, ಇದನ್ನು ಉತ್ತಮ ರೀತಿ ಅರ್ಥೈಸಿಕೊಳ್ಳಲು ಪ್ರಯತ್ನ ಮುಂದುವರೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

 Long Covid ಸಾಮಾನ್ಯ ಲಕ್ಷಣಗಳೇನು?

Long Covid ಸಾಮಾನ್ಯ ಲಕ್ಷಣಗಳೇನು?

ದೀರ್ಘಾವಧಿ ಕೊರೊನಾ ಸಮಸ್ಯೆಯಿರುವ ರೋಗಿಗಳು ಗುಣಮುಖರಾಗಲು 35 ವಾರಗಳಿಗೂ ಹೆಚ್ಚು ಕಾಲ ತೆಗೆದುಕೊಳ್ಳುತ್ತಿದ್ದಾರೆ ಎಂದು ಈ ಹಿಂದೆ ಲ್ಯಾನ್ಸೆಟ್ ಜರ್ನಲ್ EClinicalMedicine ತಿಳಿಸಲಾಗಿತ್ತು. ಸುಸ್ತು, ಅರಿವಿನ ಕೊರತೆ, ದೈಹಿಕ ಅಸ್ವಸ್ಥತೆ, ವ್ಯಾಯಾಮದ ನಂತರ ರೋಗಲಕ್ಷಣಗಳು ಉಲ್ಬಣಗೊಳ್ಳುವುದು ದೀರ್ಘಾವಧಿ ಕೋವಿಡ್‌ನಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣ. ಋತುಚಕ್ರದಲ್ಲಿ ಬದಲಾವಣೆ, ಲೈಂಗಿಕ ನಿಷ್ಕ್ರಿಯತೆ, ಹೃದಯಬಡಿತ ಹೆಚ್ಚಳ, ನೆನಪಿನ ಶಕ್ತಿ ಕುಂದುವುದು ಹಾಗೂ ದೃಷ್ಟಿ ಮಂದವಾಗುವುದು ಇತರೆ ಲಕ್ಷಣಗಳಾಗಿವೆ.

 ಆರು ತಿಂಗಳವರೆಗೂ ಉಳಿಯುತ್ತಿದೆ ಸೋಂಕಿನ ಪ್ರಭಾವ

ಆರು ತಿಂಗಳವರೆಗೂ ಉಳಿಯುತ್ತಿದೆ ಸೋಂಕಿನ ಪ್ರಭಾವ

ಮೊದಲ ಬಾರಿ ಸೋಂಕು ಕಾಣಿಸಿಕೊಂಡ ನಂತರ ದೀರ್ಘಾವಧಿಯಲ್ಲಿ ಪ್ರಭಾವ ಉಳಿಯಬಹುದು. ಒಂದು ತಿಂಗಳು, ಮೂರು ತಿಂಗಳು ಅಥವಾ ಆರು ತಿಂಗಳವರೆಗೂ ಲಕ್ಷಣಗಳು ಉಳಿಯಬಹುದು ಎಂದು WHO ಹೆಲ್ತ್‌ ಕೇರ್ ರೆಡಿನೆಸ್ ತಂಡದ ಮುಖ್ಯಸ್ಥರಾದ ಜಾನೆಟ್ ಡಯಾಜ್ ಹೇಳಿದ್ದರು.

ಇದೀಗ ದೀರ್ಘ ಕೋವಿಡ್‌ನಿಂದ ಬಳಲುತ್ತಿರುವವ ಸಂಖ್ಯೆ ಲೆಕ್ಕಕ್ಕೆ ಸಿಗದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಕೊರೊನಾದಿಂದ ಗುಣಮುಖರಾದ ನಂತರವೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಬಗ್ಗೆ ಗಮನ ಹರಿಸಿದೆ. ಮುಂದೆ ಇದೇ ದೊಡ್ಡ ಸಮಸ್ಯೆಯಾಗುವ ಭೀತಿಯನ್ನು ವ್ಯಕ್ತಪಡಿಸಿದೆ. ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಲು ಸೂಚಿಸಿದೆ.

English summary
What is long covid? Why WHO is worrying on it? Here is detail...,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X