ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರು ಕಣ್ಣಿನ ಪರೀಕ್ಷೆ ಮಾಡಿಸಲೇಬೇಕು!

|
Google Oneindia Kannada News

ಹೊಸ ಅಧ್ಯಯನವೊಂದರಲ್ಲಿ ಸಂಶೋಧಕರು ವ್ಯಕ್ತಿಯ ಕಾರ್ನಿಯಾದಲ್ಲಿನ ಬದಲಾವಣೆಗಳು ಮತ್ತು ದೀರ್ಘ ಕೋವಿಡ್ ಇರುವ ಸಾಧ್ಯತೆಯ ನಡುವಿನ ಸಂಬಂಧವನ್ನು ಗುರುತಿಸಿದ್ದಾರೆ.

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿರುವ 10ರಲ್ಲಿ ಒಬ್ಬರ ಮೇಲೆ ಕೋವಿಡ್ ದೀರ್ಘ ಪರಿಣಾಮವನ್ನು ಬೀರುತ್ತದೆ.

ಹೀಗಾಗಿ ಕೊರೊನಾದಿಂದ ಚೇತರಿಸಿಕೊಂಡವರು ಕಣ್ಣಿನ ಪರೀಕ್ಷೆಯನ್ನು ಮಾಡಿಸಿಕೊಳ್ಳಲೇಬೇಕು ಆಗ ಕೊರೊನಾ ಸೋಂಕಿನ ಲಕ್ಷಣಗಳು ಇನ್ನೂ ಇವೆಯಾ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಇತ್ತೀಚಿನ ಸಣ್ಣ ಸಂಶೋಧನೆಯೊಂದರಲ್ಲಿ ಕಾರ್ನಿಯಾದ ಬದಲಾವಣೆಗಳು, ಕಣ್ಣಿನ ಪಾರದರ್ಶಕ ಹೊರ ಪದರ ದೀರ್ಘ ಕೋವಿಡ್‌ನೊಂದಿಗೆ ಸಂಪರ್ಕವನ್ನು ಹೊಂದರಿಬಹುದೇ ಎಂದು ಸಂಶೋಧಕರು ಅಧ್ಯಯನ ನಡೆಸಿದ್ದಾರೆ.

ಅಧ್ಯಯನದಲ್ಲಿ ಕಣ್ಣುಗಳ ಕಾರ್ನಿಯಾ ಬದಲಾವಣೆ ಮೂಲಕ ದೀರ್ಘಕಾಲದ ಕೋವಿಡ್ ಲಕ್ಷಣಗಳಿರುವವರನ್ನು ಪತ್ತೆ ಹೆಚ್ಚಿದ್ದಾರೆ. ಆದರೆ ಫಲಿತಾಂಶವನ್ನು ದೃಢೀಕರಿಸಲು ದೊಡ್ಡ ಪ್ರಮಾಣದ ಅಧ್ಯಯನದ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.

 ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆ

ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆ

ಕೊರೊನಾ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ, ಸೆಂರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ವಿಶ್ವಾಸಾರ್ಹ ಮೂಲದ ಪ್ರಕಾರ ಲಕ್ಷಣಗಳಿಲ್ಲದಿದ್ದರೆ ವೈರಸ್‌ ತಗುಲಿದೆಯೇ ಇಲ್ಲವೇ ಎಂದು ತಿಳಿಯಲು ಸಾಧ್ಯವಿಲ್ಲ. ಸೋಂಕು ಹೆಚ್ಚಾದರೆ ಆಸ್ಪತ್ರೆಗೆ ಸೇರಿಸುವ ಅಗತ್ಯವಿರುತ್ತದೆ. ಕೊರೊನಾ ಸೋಂಕಿನಿಂದ ಜಗತ್ತಿನಾದ್ಯಂತ 4.1 ಮಿಲಿಯನ್ ಮಂದಿ ಮೃತಪಟ್ಟಿದ್ದಾರೆ.

 ಇತರೆ ಭಾಗಗಳ ಮೇಲೂ ಪರಿಣಾಮ ಬೀರಬಹುದು

ಇತರೆ ಭಾಗಗಳ ಮೇಲೂ ಪರಿಣಾಮ ಬೀರಬಹುದು

ಕೊರೊನಾ ಪ್ರಾಥಮಿಕವಾಗಿ ಉಸಿರಾಟ ಕಾಯಿಲೆಯಾಗಿದ್ದರೂ ಕೂಡ, ಕೋವಿಡ್ 19 ದೇಹದ ಇತರೆ ಭಾಗಗಳ ಮೇಲೂ ಪರಿಣಾಮ ಬೀರಬಹುದು. ಬಿಎಂಜೆ ಓಪನ್ ಜರ್ನಲ್‌ನಲ್ಲಿ ಕೋವಿಡ್ 19 ದೇಹದ ವಿವಿಧ ಅಂಗಗಳನ್ನೂ ಹಾನಿಗೊಳಿಸಬಹುದು ಎಂದು ಹೇಳಲಾಗಿದೆ.

 ದೀರ್ಘ ಕೋವಿಡ್ ಸಮಸ್ಯೆ

ದೀರ್ಘ ಕೋವಿಡ್ ಸಮಸ್ಯೆ

ಹತ್ತರಲ್ಲಿ ಒಬ್ಬರಿಗೆ ದೀರ್ಘ ಕೋವಿಡ್ ಸಮಸ್ಯೆ ಇರಲಿದೆ, ತೀವ್ರ ಸೋಂಕಿಗೆ ತುತ್ತಾದ ರೋಗಿಗಳಲ್ಲಿ ಹಲವು ತಿಂಗಳುಗಳ ವರೆಗೆ ರೋಗಲಕ್ಷಣಗಳು ಮುಂದುವರೆಯುತ್ತದೆ. ನರಕ್ಕೆ ಸಂಬಂಧಿಸಿದಂತಹ ತಲೆ ನೋವು, ರುಚಿ ಅಥವಾ ವಾಸನೆ ನಷ್ಟ, ಮರಗಟ್ಟುವಿಕೆ ಮತ್ತು ನರಮಂಡಲದ ಇತರೆ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ತಜ್ಞರು ಹೇಳಿದ್ದಾರೆ.

 ಕಣ್ಣಿನ ಮೂಲಕ ಕೊರೊನಾ ಪತ್ತೆ ಹೆಚ್ಚುವ ಪರೀಕ್ಷೆ

ಕಣ್ಣಿನ ಮೂಲಕ ಕೊರೊನಾ ಪತ್ತೆ ಹೆಚ್ಚುವ ಪರೀಕ್ಷೆ

ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಪರೀಕ್ಷಾ ಕೇಂದ್ರಗಳಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದೆ. ಇನ್ನು RT-PCR, ರಾಪಿಡ್ ಟೆಸ್ಟ್ ಕಿಟ್ ಸೇರಿದಂತೆ ಕೆಲ ಪರೀಕ್ಷಾ ವಿಧಾನಗಳ ಕೊರೋನಾ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.

ಇದರ ಜೊತೆಗೆ ಎಕ್ಸ್‌ ರೇ, ಸಿಟಿ ಸ್ಕ್ಯಾನ್ ಕೂಡ ಬಳಸಲಾಗುತ್ತೆ. ಕೊರೊನಾ ಪತ್ತೆ ನಿಖರವಾಗಿ ತಿಳಿಯಲು RT-PCR ಪರೀಕ್ಷೆ ಮುಖ್ಯವಾಗಿದೆ. ಆದರೆ ಈ ಎಲ್ಲಾ ಪರೀಕ್ಷೆಗಳು ನಿಗದಿತ ಸಮಯ ತೆಗೆದುಕೊಳ್ಳುತ್ತದೆ.

ಒಂದು ದಿನದಿಂದ ಗರಿಷ್ಠ 3 ದಿನದವರೆಗೂ ಫಲಿತಾಂಶ ಬರಲು ಕಾಯಬೇಕು. ಆದರೆ ಈ ಸಮಸ್ಯೆಗಳಿಗೆ ಮುಕ್ತಿ ನೀಡಲು ಇದೀಗ ಕಣ್ಣಿನ ಸ್ಕ್ಯಾನ್ ಮೂಲಕ ಕೊರೋನಾ ಪತ್ತೆ ಹಚ್ಚುವ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ.

ಜರ್ಮನಿಯ ಮ್ಯೂನಿಚ್ ಮೂಲದ ಸೆಮಿಕ್ ಆರ್‌ಎಫ್ ಕಂಪನಿ ಈ ಆ್ಯಪ್ ಅಭಿವೃದ್ಧಿ ಪಡಿಸಿದೆ. ಈ ಆ್ಯಪ್ ವಿಶೇಷತೆ ಅಂದರೆ ಮೊಬೈಲ್‌ನಲ್ಲಿ ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ ಸಾಕು, ನಿಮ್ಮ ಕಣ್ಣನ್ನು ಈ ಆ್ಯಪ್ ಮೂಲಕ ಸ್ಕಾನ್ ಮಾಡಿದರೆ ಪರೀಕ್ಷೆ ಮುಗಿಯಿತು. 3 ನಿಮಿಷದಲ್ಲಿ ನಿಮ್ಮ ಮೊಬೈಲ್ ಮೆಸೇಜ್ ಒಂದು ಬರಲಿದೆ. ಈ ಫಲಿತಾಂಶದಲ್ಲಿ ಕೊರೋನಾ ಪಾಸಿಟೀವ್ ಅಥವಾ ನೆಗಟೀವ್ ತಿಳಿಸಲಿದೆ. ಜೊತೆಗೆ ಬಿಪಿ, ಪಲ್ಸ್ ರೇಟ್, ಟೆಂಪರೇಚರ್ ಸೇರಿದಂತೆ ಪ್ರಮುಖ ಮಾಹಿತಿಗಳು ಲಭ್ಯವಾಗಲಿದೆ.

 ಕಣ್ಣಿನ ಬಣ್ಣ ಬದಲಾವಣೆ

ಕಣ್ಣಿನ ಬಣ್ಣ ಬದಲಾವಣೆ

ಕೊರೊನಾ ವೈರಸ್​ ವಿಶ್ವಾದ್ಯಂತ ಭಾರೀ ವೇಗದಲ್ಲಿ ಹರಡುತ್ತಿದೆ. ಅಚ್ಚರಿ ಎಂದರೆ ಭಾರತದಲ್ಲಿ ಕೊರೋನಾ ಸೋಂಕು ತಗುಲಿದ ಶೇ.68 ಜನರಲ್ಲಿ ಯಾವುದೇ ಲಕ್ಷಣಗಳಲ್ಲೇ ಕಾಣಿಸಿಕೊಂಡಿಲ್ಲ ಎಂದು ವರದಿಯೊಂದು ಹೇಳಿದೆ. ಯಾವುದೇ ಲಕ್ಷಣ ಇಲ್ಲದಿದ್ದರೂ ಕೇವಲ ಕಣ್ಣಿನ ಆಧಾರದ ಮೇಲೆ ನಿಮಗೆ ಕೊರೋನಾ ಬಂದಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ಹೇಳಬಹುದು ಎಂದು ಹೊಸ ಅಧ್ಯಯನವೊಂದು ಹೇಳಿದೆ. ಕೆನಡಾದಲ್ಲಿರುವ ರಾಯಲ್​ ಅಲೆಕ್ಸಾಂಡರ್​ ಆಸ್ಪತ್ರೆಯ ಕಣ್ಣಿನ ವಿಭಾಗಕ್ಕೆ ಮಹಿಳೆಯೋರ್ವಳು ಆಗಮಿಸಿದ್ದಳು. ಆಕೆಗೆ ಪದೇ ಪದೇ ಕಣ್ಣು ಕೆಂಪು ಬಣ್ಣಕ್ಕೆ ತಿರುಗುತ್ತಿತ್ತು. ಆಸ್ಪತ್ರೆಗೆ ಬರಲು ಇದು ಮುಖ್ಯ ಕಾರಣ.

ಆಸ್ಪತ್ರೆಯಲ್ಲಿ ಕೆಲ ಕಾಲ ಆಕೆಗೆ ಚಿಕಿತ್ಸೆ ನೀಡಲಾಗಿತ್ತಾದರೂ ವೈದ್ಯರಿಗೆ ಈ ಸಮಸ್ಯೆಗೆ ಮೂಲ ಏನು ಎಂಬುದನ್ನು ಹುಡುಕಲು ಸಾಧ್ಯವೇ ಆಗಿರಲಿಲ್ಲ. ನಂತರ ಗೊತ್ತಾಗಿದ್ದೇನೆಂದರೆ , ಆಕೆ ಏಷ್ಯಾ ಭಾಗದಿಂದ ಕೆನಡಾಗೆ ಬಂದಿದ್ದಳು ಎಂಬುದು. ತಕ್ಷಣ ಆಕೆಗೆ ಕೊರೊನಾ ಟೆಸ್ಟ್​ ಮಾಡಲಾಗಿತ್ತು. ಈ ವೇಳೆ ಆಕೆಗೆ ಕೊರೊನಾ ಪಾಸಿಟಿವ್​ ಬಂದಿತ್ತು. ಹೀಗಾಗಿ ಕೊರೊನಾಗೂ ಕಣ್ಣಿಗೂ ಸಂಬಂಧವಿದೆ.

English summary
In a new study, researchers have identified a link between changes to a person’s cornea and the likelihood of having long COVID.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X