ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟುಡೇಸ್ ಚಾಣಕ್ಯ ಸಮೀಕ್ಷೆ: ಎನ್‌ಡಿಎಗೆ ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನ

|
Google Oneindia Kannada News

ನವದೆಹಲಿ, ಮೇ 19: ನಿಖರತೆ ಹತ್ತಿರವಾಗಿ ಚುನಾವಣಾ ಸಮೀಕ್ಷೆಗಳನ್ನು ಮಾಡುವ ಖ್ಯಾತಿ ಹೊಂದಿರುವ ಟುಡೇಸ್‌ ಚಾಣಕ್ಯ ಸಂಸ್ಥೆಯು ಎನ್‌ಡಿಎಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತ ಸಿಗಲಿದೆ ಎಂದು ಅಂಕಿ-ಅಂಶ ನೀಡಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕಳೆದ ಬಾರಿಯೂ ನಿಖರಕ್ಕೆ ಹತ್ತಿರವಾದ ಸಮೀಕ್ಷೆ ನೀಡಿದ್ದ ಚಾಣಕ್ಯ ಈ ಬಾರಿ ಎನ್‌ಡಿಎ ಮೈತ್ರಿ ಕೂಟವು 350 (14 ಹೆಚ್ಚು ಅಥವಾ ಕಡಿಮೆ) ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ವರದಿ ನೀಡಿದೆ.

ಎಬಿಪಿ-ನಿಲ್‌ಸನ್ ಸಮೀಕ್ಷೆ: ಗೆಲುವಿಗೆ ಹತ್ತಿರ ಬಂದು ಎಡವಲಿದೆ ಬಿಜೆಪಿ ಎಬಿಪಿ-ನಿಲ್‌ಸನ್ ಸಮೀಕ್ಷೆ: ಗೆಲುವಿಗೆ ಹತ್ತಿರ ಬಂದು ಎಡವಲಿದೆ ಬಿಜೆಪಿ

ಯುಪಿಎ ಮೈತ್ರಿಕೂಟವು 95 (11 ಹೆಚ್ಚು ಅಥವಾ ಕಡಿಮೆ) ಸ್ಥಾನವನ್ನಷ್ಟೆ ಗಳಿಸುವ ಮೂಲಕ ಈ ಬಾರಿಯೂ ಅಧಿಕಾರದಿಂದ ಬಹು ದೂರವೇ ಉಳಿಯಲಿದೆ ಎಂದು ಟುಡೇಸ್ ಚಾಣಕ್ಯ ಹೇಳಿದೆ.

ಭಾರಿ ಕುತೂಹಲ ಮೂಡಿಸಿದ್ದ ಮಹಾಘಟಬಂಧನ್‌ ನಿರೀಕ್ಷಿತ ಮಟ್ಟವನ್ನೂ ತಲುಪದೆ, ಮಹಾಘಟಬಂಧನ್ ಸಹಿತ ಇತರೆ ಪಕ್ಷಗಳು ಕೇವಲ 97 (11 ಸ್ಥಾನ ಹೆಚ್ಚು ಅಥವಾ ಕಡಿಮೆ) ಅಷ್ಟನ್ನೇ ಗಳಿಸಲಿವೆ ಎಂದು ಚಾಣಕ್ಯ ಸಮೀಕ್ಷೆ ವರದಿ ಹೇಳಿದೆ.

ಕರ್ನಾಟಕದಲ್ಲಿ ಬಿಜೆಪಿಯೇ ಬಾಸ್‌

ಕರ್ನಾಟಕದಲ್ಲಿ ಬಿಜೆಪಿಯೇ ಬಾಸ್‌

ಕರ್ನಾಟಕದ ಫಲಿತಾಂಶದ ಬಗ್ಗೆಯೂ ವರದಿ ನೀಡಿರುವ ಚಾಣಕ್ಯ ಬಿಜೆಪಿಯು 23 (4 ಸ್ಥಾನ ಹೆಚ್ಚು ಅಥವಾ ಕಡಿಮೆ) ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಕಾಂಗ್ರೆಸ್ ಜೆಡಿಎಸ್ ಒಟ್ಟಾರೆಯಾಗಿ 9 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ, ಇದರಲ್ಲಿಯೂ 4 ಹೆಚ್ಚು ಅಥವಾ ಕಡಿಮೆ ಆಗಬಹುದು, ವಿಶೇಷವೆಂದರೆ ಯಾವುದೇ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸುವುದಿಲ್ಲ ಎಂದು ಚಾಣಕ್ಯ ವರದಿ ಹೇಳಿಕೆ.

ಎಬಿಪಿ-ನಿಲ್‌ಸನ್ ಸಮೀಕ್ಷೆ: ಗೆಲುವಿಗೆ ಹತ್ತಿರ ಬಂದು ಎಡವಲಿದೆ ಬಿಜೆಪಿಎಬಿಪಿ-ನಿಲ್‌ಸನ್ ಸಮೀಕ್ಷೆ: ಗೆಲುವಿಗೆ ಹತ್ತಿರ ಬಂದು ಎಡವಲಿದೆ ಬಿಜೆಪಿ

ಉತ್ತರ ಪ್ರದೇಶದಲ್ಲಿ ಪಾರುಪತ್ಯ ಮುಂದುವರಿಕೆ

ಉತ್ತರ ಪ್ರದೇಶದಲ್ಲಿ ಪಾರುಪತ್ಯ ಮುಂದುವರಿಕೆ

ಉತ್ತರ ಪ್ರದೇಶದಲ್ಲಿ ಬಿಜೆಪಿಯು ಪಾರುಪತ್ಯ ಮುಂದುವರೆಸಲಿದೆ ಎಂದು ಟುಡೇಸ್ ಚಾಣಕ್ಯ ವರದಿ ಹೇಳುತ್ತಿದೆ. ಇಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿಯಿಂದ ಬಿಜೆಪಿಗೆ ಹೊಡೆತ ಬೀಳಬಹುದು ಎನ್ನಲಾಗಿತ್ತು, ಆದರೆ ಇಲ್ಲಿ ಬಿಜೆಪಿಯು 80 ರಲ್ಲಿ 63 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ ಎಂದು ವರದಿ ಹೇಳಿದೆ, ಎಸ್‌-ಬಿಎಸ್‌ಪಿಯು 19, ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಲ್ಲಷ್ಟೆ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.

ಎಬಿಪಿ ನ್ಯೂಸ್ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಮುದುಡಲಿದೆ ಕಮಲಎಬಿಪಿ ನ್ಯೂಸ್ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಮುದುಡಲಿದೆ ಕಮಲ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ

ಭಾರಿ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಭಾರಿ ಪ್ರಮಾಣದಲ್ಲಿ ಮತಗಳಿಕೆ ಹೆಚ್ಚಿಸಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಕಳೆದ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 18 ಕ್ಕಿಂತಲೂ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ವರದಿ ಹೇಳುತ್ತಿದೆ. ಕಾಂಗ್ರೆಸ್ ಕೇವಲ ಎರಡು ಸ್ಥಾನ ಗೆದ್ದರೆ, ಟಿಎಂಸಿಯು 23 ಸ್ಥಾನ ಗಳಿಸಲಿದೆ ಎನ್ನಲಾಗಿದೆ. ಇನ್ನು ಸಿಪಿಐಎಂ ಪಕ್ಷಕ್ಕೆ ಒಂದೂ ಸ್ಥಾನ ಸಿಗದು ಎಂದು ವರದಿ ಹೇಳಿದೆ.

ಮಂಡ್ಯ ಎಕ್ಸಿಟ್ ಪೋಲ್ ನಲ್ಲಿ ಸುಮಲತಾಗೆ ಜಯದ ಸಾಧ್ಯತೆ 50-50ಮಂಡ್ಯ ಎಕ್ಸಿಟ್ ಪೋಲ್ ನಲ್ಲಿ ಸುಮಲತಾಗೆ ಜಯದ ಸಾಧ್ಯತೆ 50-50

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನಿರಾಸೆ

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನಿರಾಸೆ

ದಕ್ಷಿಣ ಭಾರತದಲ್ಲಿ ಹಿಂದಿನಂತೆ ಈ ಬಾರಿಯೂ ಸಹ ಬಿಜೆಪಿ ನಿರಾಸೆ ಅನುಭವಿಸುತ್ತದೆ. ಕರ್ನಾಟಕ ಹೊರತುಪಡಿಸಿದರೆ ಇನ್ನಾವುದೇ ರಾಜ್ಯಗಳಲ್ಲಿ ಬಿಜೆಪಿಗೆ ನಿರೀಕ್ಷಿತ ಸಫಲತೆ ಇಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ 10, ಕಾಂಗ್ರೆಸ್‌ ಮತ್ತು ಡಿಎಂಕೆ 27, ಇತರೆ ಒಂದು ಸ್ಥಾನ ಗೆಲ್ಲಲಿದೆ. ಕೇರಳದಲ್ಲಿ ಬಿಜೆಪಿ ಒಂದು, ಕಾಂಗ್ರೆಸ್ 13, ಆಡಳಿತಾರೂಢ ಸಿಪಿಐಎಂ ಮತ್ತು ಇತರೆ 6 ಸ್ಥಾನಗಳಲ್ಲಿ ಗೆಲ್ಲಲಿವೆ. ಆಂಧ್ರಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ಒಂದು ಸ್ಥಾನದಲ್ಲೂ ಗೆಲ್ಲುವುದಿಲ್ಲ, ಬದಲಿಗೆ ಜಗನ್‌ನ ವೈಎಸ್‌ಆರ್ ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಎಲ್ಲಾ ಕ್ಷೇತ್ರಗಳನ್ನೂ ಹಂಚಿಕೊಳ್ಳಲಿವೆ. ತೆಲಂಗಾಣದಲ್ಲಿ ಒಂದು ಬಿಜೆಪಿ, ಎರಡು ಕಾಂಗ್ರೆಸ್, ಉಳಿದ 14 ಕ್ಷೇತ್ರಗಳು ಟಿಆರ್‌ಎಸ್‌ ಮತ್ತು ಇತರೆ ಪಾಲಾಗಲಿವೆ.

ಉತ್ತರದಲ್ಲಿ ಬಿಜೆಪಿಗೆ ಹೆಚ್ಚಿನ ತ್ರಾಸಿಲ್ಲ

ಉತ್ತರದಲ್ಲಿ ಬಿಜೆಪಿಗೆ ಹೆಚ್ಚಿನ ತ್ರಾಸಿಲ್ಲ

ಉತ್ತರ ಭಾರತದಲ್ಲಿ ಬಿಜೆಪಿಗೆ ಆಘಾತವಾಗಲಿದೆ ಎಂದು ಮಾಡಲಾಗಿದ್ದ ಅಂದಾಜು ವ್ಯರ್ಥವಾಗಲಿದೆ ಎಂದು ಚಾಣಕ್ಯ ಸಮೀಕ್ಷೆ ಹೇಳುತ್ತಿದೆ. ಗುಜರಾತ್‌ನಲ್ಲಿ ಬಿಜೆಪಿ 23 ಗೆದ್ದರೆ ಕಾಂಗ್ರೆಸ್‌ ಕೇವಲ 3 ಸ್ಥಾನ ಗೆಲ್ಲಲಿದೆ, ಬಿಹಾರದಲ್ಲಿ ಬಿಜೆಪಿ ಮತ್ತು ಮೈತ್ರಿ ಪಕ್ಷ 32 ಕ್ಷೇತ್ರಗಳಲ್ಲಿ ಗೆಲ್ಲಲಿದೆ, ಕಾಂಗ್ರೆಸ್ ಮತ್ತು ಮಿತ್ರ ಪಕ್ಷ ಎಂಟು ಸ್ಥಾನ ಗೆಲ್ಲಲಿದೆ. ರಾಜಸ್ಥಾನದಲ್ಲಿ ಬಜೆಪಿ 22 ಸ್ಥಾನ ಗೆದ್ದರೆ ಕಾಂಗ್ರೆಸ್ 3 ಸ್ಥಾನ ಗೆಲ್ಲಲಿದೆ. ಮಹಾರಾಷ್ಟ್ರದಲ್ಲಿ 36 ಸ್ಥಾನವನ್ನು ಬಿಜೆಪಿ ಮತ್ತು ಮಿತ್ರ ಪಕ್ಷ ಗೆಲ್ಲಲಿದೆ, ಕಾಂಗ್ರೆಸ್ 11 ಇತರೆ 1 ಸ್ಥಾನ ಗೆಲ್ಲಲಿದೆ ಎಂದು ಚಾಣಕ್ಯ ಸಮೀಕ್ಷೆ ಹೇಳಿದೆ.

ಎಎಪಿಗೆ ಭಾರಿ ನಿರಾಸೆ

ಎಎಪಿಗೆ ಭಾರಿ ನಿರಾಸೆ

ದೆಹಲಿಯಲ್ಲಿ ಆರು ಬಿಜೆಪಿ ಮತ್ತು ಒಂದು ಕಾಂಗ್ರೆಸ್‌ ಗೆಲ್ಲಲಿದೆ, ಎಎಪಿಗೆ ಅಲ್ಲಿ ಭಾರಿ ನಿರಾಸೆ ಕಾದಿದೆಯಂತೆ. ಹರಿಯಾಣದಲ್ಲಿ ಎಂಟು ಬಿಜೆಪಿ, ಎರಡು ಕಾಂಗ್ರೆಸ್, ಪಂಜಾಬ್‌ನಲ್ಲಿ ನಾಲ್ಕು ಬಿಜೆಪಿ, ಎಂಟು ಕಾಂಗ್ರೆಸ್ ಮತ್ತು ಒಂದು ಇತರೆ ಪಾಲಾಗಲಿದೆ. ಒಡಿಸ್ಸಾದಲ್ಲಿ 10 ಬಿಜೆಪಿ, ಒಂದು ಕಾಂಗ್ರೆಸ್, 10 ಬಿಜೆಡಿ ಪಾಲಾಗಲಿದೆ. ಜಾರ್ಖಂಡ್‌ನಲ್ಲಿ ಎಂಟು ಬಿಜೆಪಿ, ಆರು ಕಾಂಗ್ರೆಸ್ ಪಾಲಾಗಲಿದೆ.

ಮಧ್ಯಪ್ರದೇಶ, ಅಸ್ಸಾಂ, ಚತ್ತೀಸ್‌ಘಡ

ಮಧ್ಯಪ್ರದೇಶ, ಅಸ್ಸಾಂ, ಚತ್ತೀಸ್‌ಘಡ

ಮಧ್ಯಪ್ರದೇಶದಲ್ಲಿ 24 ಬಿಜೆಪಿ, ಕೇವಲ 5 ಕಾಂಗ್ರೆಸ್ ಗೆಲ್ಲಲಿದೆ. ಚತ್ತೀಸ್‌ಘಡದಲ್ಲಿ 7 ಬಿಜೆಪಿ, 4 ಕಾಂಗ್ರೆಸ್‌ ಗೆಲ್ಲಲಿದೆ. ಅಸ್ಸಾಂನಲ್ಲಿ 9 ಬಿಜೆಪಿ, 3 ಕಾಂಗ್ರೆಸ್ ಮತ್ತು ಎರಡು ಕ್ಷೇತ್ರವನ್ನು ಇತರೆ ಗೆಲ್ಲಲಿದೆ ಎಂದು ಟುಡೇಸ್ ಚಾಣಕ್ಯ ಸಮೀಕ್ಷೆ ಹೇಳಿದೆ.

English summary
Lok Sabha exit poll results 2019 : Today's Chanakya exit poll LIVE in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X