ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಗೆ ಭಾರಿ ಜಿಗಿತ

|
Google Oneindia Kannada News

ಚೆನ್ನೈ, ಮೇ 19: ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ರಾಜ್ಯ ತಮಿಳುನಾಡಿನಲ್ಲಿ ಈ ಲೋಕಸಭೆ ಚುನಾವಣೆ ಫಲಿತಾಂಶವು ಆಡಳಿತದಲ್ಲಿರುವ ಸರ್ಕಾರದ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ತಮಿಳುನಾಡಿನಲ್ಲಿ ಒಟ್ಟು 39 ಲೋಕಸಭಾ ಕ್ಷೇತ್ರಗಳಿದ್ದು, 38 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಒಟ್ಟಾರೆ ಎಲ್ಲ ಸಮೀಕ್ಷೆಗಳನ್ನು ಗಮನಿಸಿದರೆ ವಿರೋಧ ಪಕ್ಷವಾದ ಡಿಎಂಕೆಯು ಭಾರಿ ಗೆಲುವನ್ನು ಸಾಧಿಸಲಿದೆ, ಡಿಎಂಕೆ ಪಕ್ಷವು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಎಬಿಪಿ-ನಿಲ್‌ಸನ್ ಸಮೀಕ್ಷೆ: ಗೆಲುವಿಗೆ ಹತ್ತಿರ ಬಂದು ಎಡವಲಿದೆ ಬಿಜೆಪಿಎಬಿಪಿ-ನಿಲ್‌ಸನ್ ಸಮೀಕ್ಷೆ: ಗೆಲುವಿಗೆ ಹತ್ತಿರ ಬಂದು ಎಡವಲಿದೆ ಬಿಜೆಪಿ

ಆಡಳಿತ ಪಕ್ಷವಾಗಿರುವ ಹಾಗೂ ಬಿಜೆಪಿ ಜೊತೆ ಕೈಸೇರಿಸಿರುವ ಎಐಡಿಎಂಕೆ ಪಕ್ಷವೂ ತೀವ್ರವಾಗಿ ಸೋಲನ್ನು ಅನುಭವಿಸಲಿದೆ ಎಂದು ಸಮೀಕ್ಷೆಗಳು ಅಂಕಿ-ಅಂಶವನ್ನು ನೀಡುತ್ತಿದೆ.

Lok Sabha exit poll results 2019: Tamil Nadu survey

ಇಂಡಿಯಾ ಟುಡೆ-ಆಕ್ಸಿಸ್ ಸಮೀಕ್ಷೆ ಪ್ರಕಾರ ತಮಿಳುನಾಡಿನಲ್ಲಿ ಚಲಾವಣೆಯಾಗಿರುವ ಒಟ್ಟು ಮತಗಳ ಪೈಕಿ 52% ಮತಗಳನ್ನು ಕಾಂಗ್ರೆಸ್‌ ಮೈತ್ರಿಯಲ್ಲಿರುವ ಡಿಎಂಕೆ ಪಡೆಯಲಿದೆಯಂತೆ. ಎಐಡಿಎಂಕೆಯು 35% ಮತ ಪಡೆದುಕೊಂಡರೆ, ಇತರೆ ಪಕ್ಷಗಳು ಮತ್ತು ಪಕ್ಷೇತರರರು 13% ಮತಗಳಿಕೆ ಮಾಡುತ್ತಾರಂತೆ.

ಪೋಲ್‌ಸ್ಟಾರ್ಟ್‌ ಸಮೀಕ್ಷೆ: ಮೋದಿಯೇ ಮತ್ತೆ ಪ್ರಧಾನಿ ಪೋಲ್‌ಸ್ಟಾರ್ಟ್‌ ಸಮೀಕ್ಷೆ: ಮೋದಿಯೇ ಮತ್ತೆ ಪ್ರಧಾನಿ

ಸೀಟು ಗೆಲುವಿನ ವಿಚಾರದಲ್ಲಿ ಇಂಡಿಯಾ ಟುಡೆ-ಆಕ್ಸಿಸ್ ಪ್ರಕಾರ ಡಿಎಂಕೆ ಮತ್ತು ಕಾಂಗ್ರೆಸ್‌ ಮಿತ್ರಪಕ್ಷಗಳು 34-38 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆಯಂತೆ, ಎಐಡಿಎಂಕೆ,ಬಿಜೆಪಿ ಮಿತ್ರಪಕ್ಷಗಳು 0-4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆಯೆನ್ನಲಾಗಿದೆ.

ನ್ಯೂಸ್ 18 -ಐಪಿಎಸ್‌ಒಎಸ್‌ ಸಮೀಕ್ಷೆ ಪ್ರಕಾರ, ಡಿಎಂಕೆ ಪಕ್ಷವು 22-24 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಎಐಡಿಎಂಕೆ,ಬಿಜೆಪಿ ಮೈತ್ರಿ ಪಕ್ಷಗಳು 14-16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ.

ಸಿ-ವೋಟರ್ ಸಮೀಕ್ಷೆ: ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಸಿ-ವೋಟರ್ ಸಮೀಕ್ಷೆ: ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಎಐಡಿಎಂಕೆ ಪಕ್ಷವು ಕಳೆದ ಲೋಕಸಭೆ ಚುನಾವಣೆಯಲ್ಲಿ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು, ಆಗ ಪಕ್ಷದ ನಾಯಕಿ ಜಯಲಲಿತಾ ಅವರು ಬದುಕಿದ್ದರು, ಆದರೆ ಈಗ ಪಕ್ಷಕ್ಕೆ ನಾಯಕತ್ವದ್ದೇ ಬಹುದೊಡ್ಡ ಸಮಸ್ಯೆ ಆಗಿದೆ. ಎಐಡಿಎಂಕೆಗೆ ಆಗಿರುವ ಹಿನ್ನಡೆ ಬಿಜೆಪಿಗೆ ಪರೋಕ್ಷವಾಗಿ ಹೊಡೆತ ಬೀಳಲಿದೆ.

English summary
Lok Sabha exit poll results 2019 : ABP News exit poll LIVE in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X