ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯಾ ಟುಡೇ ಸಮೀಕ್ಷೆ: HMT ಕ್ಷೇತ್ರದಲ್ಲಿ ಜೆಡಿಎಸ್ ಗೆ ಕೈಕೊಟ್ಟ ಮಂಡ್ಯ

|
Google Oneindia Kannada News

ಬೆಂಗಳೂರು, ಮೇ 20: ಲೋಕಸಭೆ ಚುನಾವಣೆ 2019ರ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ, ಸರಾಸರಿ ಲೆಕ್ಕಾಚಾರ ನಂತರ ಈಗ ಕ್ಷೇತ್ರವಾರು ವರದಿಗಳು ಬರುತ್ತಲಿವೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ಎಂಬುದರ ಚಿತ್ರಣವನ್ನು ಇಂಡಿಯಾ ಟುಡೇ ನೀಡಿದೆ.

ಇದರಲ್ಲಿ ಮುಖ್ಯವಾಗಿ ಎಲ್ಲರ ಗಮನ ಸೆಳೆದಿದ್ದ ಹಾಸನ, ಮಂಡ್ಯ, ತುಮಕೂರು(HMT) ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರವು ಜೆಡಿಎಸ್ ಕೈ ತಪ್ಪಲಿದೆ ಎಂದು ವರದಿ ಬಂದಿದೆ.

ಇಂಡಿಯಾ ಟುಡೇ ಎಕ್ಸಿಟ್ ಪೋಲ್: 'ಚೌಕೀದಾರ್ ಚೋರ್ ನಹೀ ಹೇ'ಇಂಡಿಯಾ ಟುಡೇ ಎಕ್ಸಿಟ್ ಪೋಲ್: 'ಚೌಕೀದಾರ್ ಚೋರ್ ನಹೀ ಹೇ'

ಈ ಮೂಲಕ ಸಿ ವೋಟರ್ ನಂತರ ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ ಪ್ರಕಾರ ಮಂಡ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲು ಖಚಿತವಾಗಿದ್ದು, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆ ಗೆಲುವು ಸಿಗಲಿದೆ.

ಸಿ-ವೋಟರ್ ಸಮೀಕ್ಷೆ : ಕರ್ನಾಟಕದಲ್ಲಿ ಅಚ್ಚರಿ ಫಲಿತಾಂಶ, ನಿಖಿಲ್ ಸೋಲು!ಸಿ-ವೋಟರ್ ಸಮೀಕ್ಷೆ : ಕರ್ನಾಟಕದಲ್ಲಿ ಅಚ್ಚರಿ ಫಲಿತಾಂಶ, ನಿಖಿಲ್ ಸೋಲು!

ದಕ್ಷಿಣ ಭಾರತದಲ್ಲಿ ಮಾತ್ರ ಎನ್ಡಿಎ ವಿರುದ್ಧ ಯುಪಿಎ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಗಲಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿಯ ಪ್ರಾಬಲ್ಯವನ್ನು ಮುರಿಯಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಸಾಧ್ಯವಾಗಿಲ್ಲ. 2009ರಂತೆ 2019ರಲ್ಲೂ ಉತ್ತಮ ಫಲಿತಾಂಶ ನೀಡಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ.

ಚಿಂತಾಮಣಿ ಸಮೀಕ್ಷೆ : ಸುಮಲತಾಗೆ ಸೋಲು, ಬಿಜೆಪಿಗೆ 22 ಸ್ಥಾನಚಿಂತಾಮಣಿ ಸಮೀಕ್ಷೆ : ಸುಮಲತಾಗೆ ಸೋಲು, ಬಿಜೆಪಿಗೆ 22 ಸ್ಥಾನ

ಕರ್ನಾಟಕ
ಒಟ್ಟು ಸ್ಥಾನಗಳು : 28
ಬಿಜೆಪಿ: 21-25
ಕಾಂಗ್ರೆಸ್ : 3-6
ಇತರರು : 0-1

ಕೋಲಾರದಲ್ಲಿ ಅಚ್ಚರಿಯ ಫಲಿತಾಂಶ

ಕೋಲಾರದಲ್ಲಿ ಅಚ್ಚರಿಯ ಫಲಿತಾಂಶ

ಚಾಮರಾಜನಗರ: ಮಾಜಿ ಕೇಂದ್ರ ಸಚಿವ ಬಿಜೆಪಿ ಅಭ್ಯರ್ಥಿ ವಿ ಶ್ರೀನಿವಾಸಪ್ರಸಾದ್ ಗೆ ಜಯ, ಕೈ ತೆನೆ ಮೈತ್ರಿಕೂಟದ ಅಭ್ಯರ್ಥಿ ಧ್ರುವನಾರಾಯಣ ಅವರಿಗೆ ಸೋಲು.

ಕೋಲಾರ: ಕೋಲಾರದಲ್ಲಿ ಕಾಂಗ್ರೆಸ್ಸಿನ ಕೆಎಚ್ ಮುನಿಯಪ್ಪಗೆ ಸೋಲು, ಬಿಜೆಪಿ ಅಭ್ಯರ್ಥಿ ಎಸ್ ಮುನಿಸ್ವಾಮಿಗೆ ಗೆಲುವು.ಚಿಕ್ಕಬಳ್ಳಾಪುರ: ಬಿಜೆಪಿಗೆ ಹೆಚ್ಚಿನ ಪ್ರತಿರೋಧವಿಲ್ಲದೆ ಜಯ, ಬಿಎನ್ ಬಚ್ಚೇಗೌಡ ಜಯಭೇರಿ, ಕಾಂಗ್ರೆಸ್ಸಿನ ವೀರಪ್ಪ ಮೋಯ್ಲಿಗೆ ಸೋಲು.
ತುಮಕೂರಲ್ಲಿ ದೇವೇಗೌಡರಿಗೆ ಜಯ

ತುಮಕೂರಲ್ಲಿ ದೇವೇಗೌಡರಿಗೆ ಜಯ

ತುಮಕೂರು: ಕೈ ತೆನೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಜಯ, ಬಿಜೆಪಿಯ ಜಿ.ಎಸ್ ಬಸವರಾಜುಗೆ ಸೋಲು.


ಹಾಸನ:
ಕೈ ತೆನೆ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಜಯ, ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಎ ಮಂಜುಗೆ ಸೋಲು.

ಮಂಡ್ಯ:
ನಿರೀಕ್ಷೆಗೂ ಮೀರಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆ ಗೆಲುವು, ಕೈ ತೆನೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಸೋಲು.

ಉಡುಪಿ- ಚಿಕ್ಕಮಗಳೂರು ಯಾರ ಪಾಲು?

ಉಡುಪಿ- ಚಿಕ್ಕಮಗಳೂರು ಯಾರ ಪಾಲು?

ಉಡುಪಿ -ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ ಗೆಲುವು, ಪ್ರಮೋದ್ ಮಧ್ವರಾಜ್ ಸೋಲು (ಜೆಡಿಎಸ್)
ದಕ್ಷಿಣ ಕನ್ನಡ : ನಳೀನ್ ಕುಮಾರ್ ಕಟೀಲ್ ಗೆಲುವು, ಮಿಥುನ್ ರೈ ಸೋಲು (ಕಾಂಗ್ರೆಸ್‌-ಜೆಡಿಎಸ್‌)

ಕೊಡಗು ಮೈಸೂರು: ಬಿಜೆಪಿಯ ಪ್ರತಾಪ್ ಸಿಂಹಗೆ ಜಯ, ಕಾಂಗ್ರೆಸ್ಸಿನ ಸಿ.ಎಚ್ ವಿಜಯಶಂಕರ್ ಗೆ ಸೋಲು

ಗುಲ್ಬರ್ಗಾದಲ್ಲಿ ಖರ್ಗೆಗೆ ಆಘಾತ

ಗುಲ್ಬರ್ಗಾದಲ್ಲಿ ಖರ್ಗೆಗೆ ಆಘಾತ

ಕೊಪ್ಪಳ: ಕಾಂಗ್ರೆಸ್ಸಿನ ರಾಘವೇಂದ್ರ ಹಿಟ್ನಾಳ್ ಹಾಗೂ ಬಿಜೆಪಿಯ ಕರಡಿ ಸಂಗಣ್ಣ ನಡುವೆ ತೀವ್ರ ಪೈಪೋಟಿ, ಅಂತಿಮವಾಗಿ ಹಿಟ್ನಾಳ್ ಗೆ ಜಯ

ಹಾವೇರಿ: ಬಿಜೆಪಿಯ ಶಿವಕುಮಾರ್ ಉದಾಸಿಗೆ ಜಯ, ಕಾಂಗ್ರೆಸ್ಸಿನ ಡಿ. ಆರ್ ಪಾಟೀಲಗೆ ಸೋಲು.ಧಾರವಾಡ: ಬಿಜೆಪಿಯ ಅಭ್ಯರ್ಥಿ ಪ್ರಹ್ಲಾದ್ ಜೋಶಿಗೆ ಗೆಲುವು, ಕಾಂಗ್ರೆಸ್ಸಿನ ವಿನಯ್ ಕುಲಕರ್ಣಿಗೆ ಸೋಲುಗುಲ್ಬರ್ಗಾ: ಕಾಂಗ್ರೆಸ್ಸಿನ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿಯ ಡಾ ಉಮೇಶ್ ಜಾಧವ್ ನಡುವೆ ತೀವ್ರ ಪೈಪೋಟಿ. ಕಡಿಮೆ ಅಂತರದಲ್ಲಿ ಬಿಜೆಪಿಗೆ ಗೆಲುವು ಸಾಧ್ಯತೆ.
ಶಿವಮೊಗ್ಗದಲ್ಲಿ ಯಾರಿಗೆ ಜಯ?

ಶಿವಮೊಗ್ಗದಲ್ಲಿ ಯಾರಿಗೆ ಜಯ?

ಶಿವಮೊಗ್ಗ: ಬಿಜೆಪಿಯ ಬಿ.ವೈ ರಾಘವೇಂದ್ರಗೆ ಜಯ, ಕೈ ತೆನೆ ಅಭ್ಯರ್ಥಿ ಮಧು ಬಂಗಾರಪ್ಪಗೆ ಸೋಲು
ದಾವಣಗೆರೆ: ಬಿಜೆಪಿಯ ಜಿ.ಎಂ ಸಿದ್ದೇಶ್ವರಗೆ ಜಯ, ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಎಚ್. ಬಿ ಮಂಜಪ್ಪಗೆ ಸೋಲು.
ಉತ್ತರ ಕನ್ನಡ: ಬಿಜೆಪಿಯ ಅನಂತಕುಮಾರ್ ಹೆಗಡೆಗೆ ಜಯ, ಮೈತ್ರಿಕೂಟದ ಆನಂದ್ ಆಸ್ನೋಟಿಕರ್ ಗೆ ಸೋಲು

ಚಿಕ್ಕೋಡಿ, ಬೆಳಗಾವಿಯಲ್ಲಿ ಯಾರಿಗೆ ಜಯ?

ಚಿಕ್ಕೋಡಿ, ಬೆಳಗಾವಿಯಲ್ಲಿ ಯಾರಿಗೆ ಜಯ?

ಬೆಳಗಾವಿ: ಬಿಜೆಪಿಯ ಸುರೇಶ್ ಅಂಗಡಿ ಗೆಲುವು, ಡಾ.ವಿ.ಎಸ್.ಸಾಧುನವರ ಸೋಲು (ಕಾಂಗ್ರೆಸ್ - ಜೆಡಿಎಸ್)

ಬಾಗಲಕೋಟೆ: ಬಿಜೆಪಿಯ ಪಿ.ಸಿ.ಗದ್ದಿಗೌಡರ್, ವೀಣಾ ಕಾಶಪ್ಪನವರ್ ಸೋಲು (ಕಾಂಗ್ರೆಸ್ - ಜೆಡಿಎಸ್)
ವಿಜಯಪುರ: ಬಿಜೆಪಿಯ ರಮೇಶ್ ಜಿಗಜಿಣಗಿ ಗೆಲುವು, ಸುನೀತಾ ಚೌವ್ಹಾಣ್ (ಮೈತ್ರಿಕೂಟ)

ಚಿಕ್ಕೋಡಿ: ಕಾಂಗ್ರೆಸ್ ನ ಪ್ರಕಾಶ್ ಹುಕ್ಕೇರಿ ಗೆಲುವು, ಅಣ್ಣಾ ಸಾಹೇಬ್ ಜೊಲ್ಲೆ ಸೋಲು

ಬೆಂಗಳೂರಿನ ಕ್ಷೇತ್ರಗಳಲ್ಲಿ ಯಾರಿಗೆ ಗೆಲುವು?

ಬೆಂಗಳೂರಿನ ಕ್ಷೇತ್ರಗಳಲ್ಲಿ ಯಾರಿಗೆ ಗೆಲುವು?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಕ್ಷೇತ್ರಗಳಿವೆ. ಬೆಂಗಳೂರು ಗ್ರಾಮಾಂತರ ಮತ್ತೊಂದು ಕ್ಷೇತ್ರವಾಗಿದೆ.
ಬೆಂಗಳೂರು ಗ್ರಾಮಾಂತರ: ಕಾಂಗ್ರೆಸ್ಸಿನ ಡಿಕೆ ಸುರೇಶ್ ಗೆ ಜಯ, ಬಿಜೆಪಿಯ ಅಶ್ವಥನಾರಯಣಗೆ ಸೋಲು.
ಬೆಂಗಳೂರು ಕೇಂದ್ರ : ಬಿಜೆಪಿಯ ಪಿ.ಸಿ ಮೋಹನ್ ಗೆ ಜಯ, ಕೈ ತೆ ಅಭ್ಯರ್ಥಿ ರಿಜ್ವಾನ್ ಅರ್ಷದ್ ಗೆ ಸೋಲು.
ಬೆಂಗಳೂರು ಉತ್ತರ : ಬಿಜೆಪಿಯ ಸದಾನಂದ ಗೌಡ ಹಾಗೂ ಕಾಂಗ್ರೆಸ್ಸಿನ ಕೃಷ್ಣಬೈರೇಗೌಡ ನಡುವೆ ಪೈಪೋಟಿ. ಅಂತಿಮವಾಗಿ ಡಿವಿಎಸ್ ಗೆ ಜಯ.
ಬೆಂಗಳೂರು ದಕ್ಷಿಣ: ಬಿಜೆಪಿಯ ತೇಜಸ್ವಿ ಸೂರ್ಯಗೆ ಜಯ, ಕಾಂಗ್ರೆಸ್ಸಿನ ಬಿ.ಕೆ ಹರಿಪ್ರಸಾದ್ ಗೆ ಸೋಲು

ಬಳ್ಳಾರಿಯಲ್ಲಿ ಯಾರಿಗೆ ವಿಜಯಮಾಲೆ?

ಬಳ್ಳಾರಿಯಲ್ಲಿ ಯಾರಿಗೆ ವಿಜಯಮಾಲೆ?

ಬಳ್ಳಾರಿ: ಬಿಜೆಪಿಯ ಅಭ್ಯರ್ಥಿ ವೈ ದೇವೇಂದ್ರಪ್ಪಗೆ ಜಯ, ಕಾಂಗ್ರೆಸ್ಸಿನ ವಿಎಸ್ ಉಗ್ರಪ್ಪಗೆ ಸೋಲು.
ಬೀದರ್: ಬಿಜೆಪಿಯ ಭಗವಂತ್ ಖೂಬಾಗೆ ಗೆಲುವು, ಕಾಂಗ್ರೆಸ್ಸಿನ ಈಶ್ವರ್ ಖಂಡ್ರೆಗೆ ಸೋಲು.
ರಾಯಚೂರು: ರಾಜಾ ಅಮರೇಶ್ವರ ನಾಯಕಗೆ ಗೆಲುವು, ಕೈ ತೆನೆ ಅಭ್ಯರ್ಥಿ ಬಿ.ವಿ ನಾಯಕಗೆ ಸೋಲು.
ಚಿತ್ರದುರ್ಗ: ಕಾಂಗ್ರೆಸ್ಸಿನ ಬಿ.ಎನ್ ಚಂದ್ರಪ್ಪಗೆ ಸೋಲು, ಬಿಜೆಪಿಯ ಎ ನಾರಾಯಣ ಸ್ವಾಮಿಗೆ ಜಯ.

English summary
Lok Sabha elections Exit poll results for Karnataka by India Today-Axis My India is out. In 2014 Lok Sabha election, the party won 17 of the 28 seats. In 2019, it may win as many 21-25 seats with the Congress slumping to 3-6 seats from 2014's nine seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X