ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆಗೆ ಪಕ್ಷಗಳು, ಪಕ್ಷೇತರರು ಎಲ್ಲ ಸೇರಿ ಮಾಡಿದ ಅಂದಾಜು ಖರ್ಚು 60,000 ಕೋಟಿ ರುಪಾಯಿ

|
Google Oneindia Kannada News

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ಇಲ್ಲಿನ ಚುನಾವಣೆ ಕೂಡ ವಿಪರೀತ ದುಬಾರಿ ಎಂಬುದು ಸಾಬೀತಾಗಿದೆ. ಈಚೆಗೆ ಮುಕ್ತಾಯವಾದ ಚುನಾವಣೆಯಲ್ಲಿ ಭಾರತದ ತೊಂಬತ್ತು ಕೋಟಿ ಜನರನ್ನು ತಮ್ಮ ಕಡೆಗೆ ಸೆಳೆಯಲು ವಿವಿಧ ಪಕ್ಷಗಳು, ಪಕ್ಷೇತರರು ಎಲ್ಲ ಸೇರಿ ಮಾಡಿದ ಖರ್ಚು ಹತ್ತಿರ ಹತ್ತಿರ 60,000 ಕೋಟಿ ರುಪಾಯಿ. 2014ರ ಚುನಾವಣೆಗೆ ಹೋಲಿಸಿದರೆ ಇದು ದುಪ್ಪಟ್ಟಿಗೂ ಹೆಚ್ಚಾಯಿತು.

ಈ ಅಂಕಿ-ಅಂಶವನ್ನು ದೆಹಲಿ ಮೂಲದ ಮಾಧ್ಯಮ ಅಧ್ಯಯನವೊಂದು ಬಯಲು ಮಾಡಿದೆ. ಅಧ್ಯಯನ, ವಿಶ್ಲೇಷಣೆ ಹಾಗೂ ಅಂದಾಜು ಎಲ್ಲವನ್ನು ಅಧರಿಸಿ ವರದಿ ಸಿದ್ಧಪಡಿಸಲಾಗಿದೆ. ಆ ಪ್ರಕಾರ ಸರಾಸರಿಯಾಗಿ ಪ್ರತಿ ಮತದಾರರಿಗೆ 700 ರುಪಾಯಿ ಅಥವಾ ಪ್ರತಿ ಲೋಕಸಭಾ ಕ್ಷೇತ್ರಕ್ಕೆ 100 ಕೋಟಿ ರುಪಾಯಿ ಹತ್ತಿರ ಖರ್ಚು ಮಾಡಲಾಗಿದೆ.

ಲೋಕಸಭಾ ಚುನಾವಣೆ: 2014ಕ್ಕಿಂತ ಮೂರು ಪಟ್ಟು ಹೆಚ್ಚು ಹಣ, ಹೆಂಡ ವಶಲೋಕಸಭಾ ಚುನಾವಣೆ: 2014ಕ್ಕಿಂತ ಮೂರು ಪಟ್ಟು ಹೆಚ್ಚು ಹಣ, ಹೆಂಡ ವಶ

ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಮೂವತ್ತು ಲಕ್ಷದಷ್ಟು ಮತದಾರರಿದ್ದು, ಅದು ಜಮೈಕಾದಂಥ ಜನಸಂಖ್ಯೆಗೆ ಸಮ. ಅಂಥ ಕಡೆ ಅಭ್ಯರ್ಥಿಗಳು ಪ್ರಚಾರಕ್ಕೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಕೆಲವು ಕಡೆ ಮತದಾರರಿಗೆ ನಗದು ಹಂಚಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಂದ ಹಾಗೆ ಚುನಾವಣೆ ಆಯೋಗವು ಪ್ರತಿ ಅಭ್ಯರ್ಥಿಗೆ ಎಪ್ಪತ್ತು ಲಕ್ಷ ರುಪಾಯಿ ಮಿತಿ ನಿಗದಿ ಮಾಡಿದೆ.

Lok sabha elections approximate expenses nearly 60 thousand crores

ಕಳೆದ ಬಾರಿಯ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ $ 6.5 ಬಿಲಿಯನ್ ಖರ್ಚು ಮಾಡಲಾಗಿತ್ತು. ಭಾರತದಲ್ಲಿ ಈಗ ಚುನಾವಣೆಗೆ ಮಾಡಿರುವ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಮುಂದಿನ ಚುನಾವಣೆಗೆ ಒಂದು ಲಕ್ಷ ಕೋಟಿ ಖರ್ಚಾಗಬಹುದು ಎನ್ನುತ್ತಾರೆ ತಜ್ಞರು.

ಭ್ರಷ್ಟಾಚಾರದ ತಾಯಿ ಬೇರು ಇರುವುದೇ ಚುನಾವಣೆ ಖರ್ಚಿನಲ್ಲಿ. ಅದನ್ನು ನಿಯಂತ್ರಿಸದೇ ಇದ್ದಲ್ಲಿ ಭಾರತದಲ್ಲಿ ಭ್ರಷ್ಟಾಚಾರ ತಡೆಯುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯ ತಜ್ಞರದು.

English summary
Lok sabha elections 2019 approximate expenses nearly 60 thousand crores, this is the statistics revealed by Delhi based media agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X