ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಹಾದಿಗೆ ವಿಪಕ್ಷಗಳು ಅಡ್ಡ ಹಾಕಲು ಸಾಧ್ಯವಾಗದಿರಲು ಇಲ್ಲಿವೆ ನಾಲ್ಕು ಕಾರಣಗಳು

By ಅನಿಲ್ ಆಚಾರ್
|
Google Oneindia Kannada News

Recommended Video

Lok Sabha Elections 2019: ಮೋದಿ ಹಾದಿಗೆ ವಿಪಕ್ಷಗಳು ಅಡ್ಡಗಾಲು ಹಾಕಲು ಸಾಧ್ಯವಾಗದಿರಲು 4 ಕಾರಣಗಳು

ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ತಂತ್ರಗಳು ತುಂಬ ಚೆನ್ನಾಗಿ ಕೆಲಸ ಮಾಡಿವೆ ಎಂಬುದು ಗಮನಕ್ಕೆ ಬರುತ್ತಿದೆ. ಏಕೆಂದರೆ, ಈ ಬಾರಿ ಉತ್ತರಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸ್ಥಾನಗಳನ್ನು ಜಯಿಸುವುದು ಅಸಾಧ್ಯ ಎಂಬುದು ಗೊತ್ತಿತ್ತು. ಅಖಿಲೇಶ್-ಮಾಯಾವತಿ ಜೋಡಿ ಪೆಟ್ಟು ಕೊಡಬಹುದು ಎಂಬುದನ್ನು ಅರಿತಿದ್ದ ಮೋದಿ-ಶಾ ಜೋಡಿ ಆ ನಷ್ಟವನ್ನು ತುಂಬಿಕೊಳ್ಳಲು ಯೋಚಿಸಿತ್ತು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಆ ಆಲೋಚನೆ ಬಿಜೆಪಿ ಕೈ ಹಿಡಿದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಏಕೆಂದರೆ, ಉತ್ತರಪ್ರದೇಶದಲ್ಲಿ ಕಳೆದುಕೊಳ್ಳಬಹುದಾದ್ದನ್ನು ಒಡಿಶಾ, ಪಶ್ಚಿಮ ಬಂಗಾಲ ಮತ್ತಿತರ ತುಂಬಿಸಿಕೊಳ್ಳುವ ಲೆಕ್ಕಾಚಾರ ಏನಿತ್ತು ಅದೀಗ ವರ್ಕೌಟ್ ಆಗಿದೆ. ಚುನಾವಣೆ ಫಲಿತಾಂಶದ ನಂತರ ಎನ್ ಡಿಎ ಹಾಗೂ ಯುಪಿಎಯಿಂದ ಹೊರಗೆ ಉಳಿದಿರುವ ಪಕ್ಷಗಳು ಸಹ ಬಿಜೆಪಿ ಬೆಂಬಲಕ್ಕೆ ನಿಲ್ಲಬಹುದು.

ಇಲ್ಲಿ ಇನ್ನೊಂದು ವಿಷಯ ಗಮನಿಸಬೇಕಾದದ್ದು ಏನೆಂದರೆ, ಪಂಚ ರಾಜ್ಯ ವಿಧಾನಸಭೆ ಚುನಾವಣೆಯ ವೇಳೆ ಕಾಂಗ್ರೆಸ್ ಮಾಡಿದ ಸಾಧನೆಯನ್ನು ಲೋಕಸಭೆ ಚುನಾವಣೆಗೆ ಪುನರಾವರ್ತಿಸಲು ವಿಫಲ ಅಗಿರುವುದು ಈ ಸಮೀಕ್ಷೆಯ ಫಲಿತಾಂಶದಿಂದ ಗೊತ್ತಾಗುತ್ತಿದೆ. ಏಕೆಂದರೆ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಏಟು ನೀಡಲು ಸಾಧ್ಯವಾಗಿಲ್ಲ.

ಎಕ್ಸಿಟ್ ಪೋಲ್, ಇಂಡಿಯಾ ಟುಡೇ: ಮಮತಾ ಬ್ಯಾನರ್ಜಿಗೆ ಭಾರೀ ಮುಖಭಂಗ ಎಕ್ಸಿಟ್ ಪೋಲ್, ಇಂಡಿಯಾ ಟುಡೇ: ಮಮತಾ ಬ್ಯಾನರ್ಜಿಗೆ ಭಾರೀ ಮುಖಭಂಗ

ಹಾಗಾದರೆ ಮತ್ತೊಮ್ಮೆ ಏಳುವ ಪ್ರಶ್ನೆ ಏನೆಂದರೆ, ನರೇಂದ್ರ ಮೋದಿ ನಾಯಕತ್ವದ ವಿರುದ್ಧ ವಿಪಕ್ಷದಿಂದ ಪ್ರಭಾವಿ ನಾಯಕ ಅಥವಾ ನಾಯಕಿಯನ್ನು ಬಿಂಬಿಸಲು ವಿಫಲ ಆದವೆ ಅಥವಾ ಪುಲ್ವಾಮಾ ಉಗ್ರ ದಾಳಿಯ ನಂತರ ಮೋದಿ ನೇತೃತ್ವದ ಸರಕಾರ ತೆಗೆದುಕೊಂಡ ನಿರ್ಧಾರವು ಜನರ ಮೇಲೆ ಪರಿಣಾಮ ಬೀರಿತಾ ಎಂಬ ಪ್ರಶ್ನೆ ಏಳುತ್ತದೆ.

ಎರಡನೇ ಬಾರಿಗೆ ನರೇಂದ್ರ ಮೋದಿ ಅಧಿಕಾರಕ್ಕೆ ಏರಬಹುದು ಎಂದು ಸಮೀಕ್ಷೆಗಳು ಹೇಳುತ್ತಿರುವುದಕ್ಕೆ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು:

ಜನರ ಮುಂದೆ ಪ್ರಸ್ತುತ ಪಡಿಸಲು ಆಗಿಲ್ಲ

ಜನರ ಮುಂದೆ ಪ್ರಸ್ತುತ ಪಡಿಸಲು ಆಗಿಲ್ಲ

ಬಿಜೆಪಿ ವರ್ಸಸ್ ಇತರರು ಎಂಬ ಭಾವನೆ ಏನಿತ್ತೋ ಆರಂಭದಲ್ಲಿ ಪರಿಣಾಮಕಾರಿ ಆಗುವ ಅವಕಾಶ ಇತ್ತು. ಆದರೆ ಯಾವಾಗ ವಿಪಕ್ಷದಿಂದ ಪ್ರಧಾನಿ ಅಭ್ಯರ್ಥಿ ಯಾರು, ಒಂದು ವೇಳೆ ಅಧಿಕಾರ ಹಿಡಿದರೆ ಯಾರು ಪ್ರಧಾನಿ ಆಗುತ್ತಾರೆ ಎಂಬ ಪ್ರಶ್ನೆಯನ್ನು ಬಿಜೆಪಿಯು ಮುನ್ನೆಲೆಗೆ ತಂದಿತೋ ಅಗ ನರೇಂದ್ರ ಮೋದಿಗೆ ಪರ್ಯಾಯವಾಗಿ ವಿಪಕ್ಷದಲ್ಲಿ ಪ್ರಬಲ ನಾಯಕತ್ವ ಇಲ್ಲದಿರುವುದು ಜನರಿಗೆ ಮನದಟ್ಟು ಮಾಡುವಲ್ಲಿ ಸಫಲ ಆಗಿರುವುದು ಕಂಡುಬರುತ್ತಿದೆ. ಸಣ್ಣ ಪಕ್ಷಗಳನ್ನೂ ಒಟ್ಟಾಗಿ ಮುನ್ನಡೆಸಿಕೊಂಡು ಹೋಗಬಲ್ಲಂಥ ನಾಯಕತ್ವವನ್ನು ಜನರ ಮುಂದೆ ಪ್ರಸ್ತುತ ಪಡಿಸಲು ಸಾಧ್ಯವಿಲ್ಲ ಎನಿಸುವಂಥ ಸನ್ನಿವೇಶ ನಿರ್ಮಾಣ ಆಗಿದ್ದು ಹೊಡೆತ ನೀಡಿದೆ.

ABP News- CSDS exit poll : ಗಾದಿ ಹಾದಿಯಲ್ಲಿ ಎನ್ ಡಿಎಗೆ ಕೊರತೆ? ABP News- CSDS exit poll : ಗಾದಿ ಹಾದಿಯಲ್ಲಿ ಎನ್ ಡಿಎಗೆ ಕೊರತೆ?

ಉಗ್ರರಿಗೆ ನೀಡಿದ ಪ್ರತ್ಯುತ್ತರದಿಂದ ಪರಿಣಾಮ

ಉಗ್ರರಿಗೆ ನೀಡಿದ ಪ್ರತ್ಯುತ್ತರದಿಂದ ಪರಿಣಾಮ

ಪುಲ್ವಾಮಾ ಉಗ್ರ ದಾಳಿಯ ನಂತರ ರಾಷ್ಟ್ರೀಯ ಭದ್ರತೆ ವಿಚಾರವಾಗಿ ಕೇಂದ್ರ ಸರಕಾರದ ನಿರ್ಧಾರದಿಂದ ಮೂಡಿದ ಜನರ ಅಭಿಪ್ರಾಯವು ಮತದಾನದ ಮೇಲೆ ಬಹುವಾಗಿ ಪರಿಣಾಮ ಬೀರಿದೆ. ಮುಖ್ಯವಾಗಿ ಬಾಲಾಕೋಟ್ ವಾಯು ದಾಳಿ, ಅ ನಂತರ ಅಭಿನಂದನ್ ವರ್ತಮಾನ್ ರನ್ನು ಪಾಕಿಸ್ತಾನವು ಬಿಡುಗಡೆ ಮಾಡಿದ ರೀತಿ, ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಘೋಷಣೆ ಮಾಡಲು ಸಾಧ್ಯವಾಗಿದ್ದು ಬಿಜೆಪಿಯ ಮುನ್ನಡೆಗೆ ಕಾರಣವಾಗಿ ಇರಬಹುದು. ಮುಂಬೈನಲ್ಲಿ ನಡೆದ ಉಗ್ರ್ ದಾಳಿಗೆ ಹೋಲಿಸಿ, ಬಿಜೆಪಿಯ ಈಗಿನ ಸರಕಾರ ನೀಡಿದ ಪ್ರತ್ಯುತ್ತರ ಮತಗಳಾಗಿ ಪರಿವರ್ತನೆ ಆಗಲು ನೆರವಾಗಿರುವ ಸಾಧ್ಯತೆ ಹೆಚ್ಚಿದೆ.

ಕೇಂದ್ರ ಸರಕಾರದ ವೈಫಲ್ಯ ಎತ್ತಿ ತೋರುವಲ್ಲಿ ಹಿನ್ನಡೆ

ಕೇಂದ್ರ ಸರಕಾರದ ವೈಫಲ್ಯ ಎತ್ತಿ ತೋರುವಲ್ಲಿ ಹಿನ್ನಡೆ

ಕೇಂದ್ರ ಸರಕಾರದ ವೈಫಲ್ಯಗಳು ಎಂದು ನಿರುದ್ಯೋಗ, ಆರ್ಥಿಕತೆ ಹಿನ್ನಡೆ, ಜಿಎಸ್ ಟಿ ಜಾರಿಯಲ್ಲಿನ ಸಮಸ್ಯೆ, ರೈತರ ಪ್ರತಿಭಟನೆ, ಅಪನಗದೀಕರಣ, ರಫೇಲ್ ಡೀಲ್ ಇತ್ಯಾದಿ ವಿಚಾರವಾಗಿ ವಿಪಕ್ಷಗಳು ನಡೆಸಿದ ಪ್ರಚಾರ ಪರಿಣಾಮಕಾರಿ ಆಗಿಲ್ಲ. ಜಿಎಸ್ ಟಿ ಜಾರಿಯಿಂದ ಜಿಡಿಪಿಯಲ್ಲಿ ಇಳಿಕೆ ಆಗಿದೆ. ಅಪನಗದೀಕರಣದಿಂದ ಅಸಂಘಟಿತ ವಲಯದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಕೆಲಸ ಕಳೆದುಕೊಂಡಿದ್ದಾರೆ. ಭರವಸೆ ನೀಡಿದಷ್ಟು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಅಗುತ್ತಿಲ್ಲ ಇತ್ಯಾದಿ ಆರೋಪಗಳು ಏನೆಲ್ಲ ಮಾಡಲಾಯಿತೋ ಅವು ಯಾವುವೂ ಪರಿಣಾಮಕಾರಿಯಾಗಿಲ್ಲ ಎಂಬುದು ತಿಳಿದುಬರುತ್ತದೆ.

ಬಿಜೆಪಿ ವಿರುದ್ಧ ಒಗ್ಗಟ್ಟಾಗಲು ಸಾಧ್ಯವಾಗಿಲ್ಲ

ಬಿಜೆಪಿ ವಿರುದ್ಧ ಒಗ್ಗಟ್ಟಾಗಲು ಸಾಧ್ಯವಾಗಿಲ್ಲ

ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ವಿರುದ್ಧ ಮಹಾ ಮೈತ್ರಿ ಕೂಟ ರಚಿಸಿಕೊಂಡು, ಒಗ್ಗಟ್ಟಿನಿಂದ ಹೋರಾಡಬೇಕು ಅಂದುಕೊಂಡಿದ್ದು ಸಾಧ್ಯವಾಗಿಲ್ಲ. ಉದಾಹರಣೆಗೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಹೊರತು ಪಡಿಸಿ, ಬಿಎಸ್ ಪಿ ಹಾಗೂ ಎಸ್ ಪಿ ಮೈತ್ರಿ ಮಾಡಿಕೊಂಡವು. ಆದರೆ ದೆಹಲಿಯಲ್ಲಿ ಅದು ಆಗಲಿಲ್ಲ. ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರವೇ ಇದ್ದರೂ ಸಾಧ್ಯವಾಗಲಿಲ್ಲ. ಪಶ್ಚಿಮ ಬಂಗಾಲ, ಬಿಹಾರದಲ್ಲೂ ಅದೇ ಪರಿಸ್ಥಿತಿ ಆಯಿತು. ಈ ಎಲ್ಲ ಕಾರಣದಿಂದ ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳ ವಿರುದ್ಧ ಹೋರಾಡಲು ಸಾಧ್ಯವಾಗಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

English summary
Lok sabha elections 2019: Many exit poll results showing in favor of Narendra Modi as PM once again. Why exit poll favors Narendra Modi once again? Here is the 4 reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X