• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾರಣಾಸಿ ಕ್ಷೇತ್ರದಲ್ಲಿ ಮೋದಿ ವಿರುದ್ಧ ತೊಡೆತಟ್ಟುವವರು ಯಾರು?

By ಪ್ರಸಾದ ನಾಯಿಕ
|
   Lok Sabha Elections 2019: ವಾರಾಣಸಿಯಲ್ಲಿ ನರೇಂದ್ರ ಮೋದಿ ಪ್ರಿಯಾಂಕಾ ಗಾಂಧಿ ಮುಖಾಮುಖಿ | Oneindia Kannada

   ಪ್ರಧಾನಿ ನರೇಂದ್ರ ಮೋದಿಯವರನ್ನು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ವಿರುದ್ಧ ಭರ್ಜರಿಯಾಗಿ ಗೆಲ್ಲಿಸಿಕೊಟ್ಟ, ಗಂಗಾ ನದಿ ತಟದ ಮೇಲಿರುವ ಪವಿತ್ರ ಧಾರ್ಮಿಕ ಕ್ಷೇತ್ರ, ಪುರಾತನ ನಗರಿ ವಾರಣಾಸಿ ಮತ್ತೊಂದು ಲೋಕಸಭೆ ಚುನಾವಣೆಗೆ ಸಿದ್ಧವಾಗಿದೆ.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಬನಾಸರ್, ಕಾಶಿ ಅಂತಲೂ ಜನಜನಿತವಾಗಿರುವ ವಾರಣಾಸಿಯಲ್ಲಿ ಗೌತಮ ಬುದ್ಧ ಸಾರಾನಾಥ್ ಬಳಿ ಬುದ್ಧಿಸಂ ಅನ್ನು ಹುಟ್ಟುಹಾಕಿದ. 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಶಿವನ ಆರಾಧನೆಯನ್ನು ಪ್ರಾರಂಭಿಸಿದ ಮೇಲೆ ವಾರಣಾಸಿ ಪ್ರಾಮುಖ್ಯತೆ ಪಡೆದುಕೊಳ್ಳಲು ಪ್ರಾರಂಭಿಸಿತು. ಅಲ್ಲದೆ, ಮಸ್ಲಿನ್ ಮತ್ತು ರೇಷ್ಮೆ ಬಟ್ಟೆಗಳಿಗೆ, ಸುಗಂಧ ದ್ರವ್ಯಗಳಿಗೆ, ಕೆತ್ತನೆಗಳಿಗೆ ಹೆಸರುವಾಸಿಯಾಗಿರುವ ವಾರಣಾಸಿ ಉತ್ತರ ಪ್ರದೇಶದ ಪ್ರಮುಖ ವಾಣಿಜ್ಯ ನಗರಿ.

   ವ್ಯಕ್ತಿ ಚಿತ್ರ : ವಾರಣಾಸಿ ಸಂಸದ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ

   ಇಂಥ ಭಾರತದ ಅತ್ಯಂತ ಪುರಾತನ ನಗರಿಯಲ್ಲಿ ಒಂದಾಗಿರುವ ವಾರಣಾಸಿಯಿಂದ 68 ವರ್ಷದ ನರೇಂದ್ರ ಮೋದಿಯವರು ತಮ್ಮ ಲೋಕಸಭೆ ಅಭಿಯಾನವನ್ನು ಪ್ರಾರಂಭಿಸಿದ್ದರಲ್ಲಿ ಅಚ್ಚರಿಯಿಲ್ಲ. ಈ ಬಾರಿಯೂ ಇಲ್ಲಿಂದಲೇ ಸ್ಪರ್ಧಿಸಲಿದ್ದಾರೆ. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಪ್ರಥಮ ಬಾರಿ ಅಧಿಕೃತವಾಗಿ ರಾಜಕೀಯಕ್ಕೆ ಧುಮುಕಿರುವ ಪ್ರಿಯಾಂಕಾ ಗಾಂಧಿ ವದ್ರಾ ಅವರು ಕೂಡ ಇಲ್ಲಿಂದಲೇ ಸ್ಪರ್ಧಿಸುತ್ತಾರೆಂಬ ಮಾತುಗಳು ಕೂಡ ಕೇಳಿಬರುತ್ತಿವೆ.

   ಐದು ವಿಧಾನಸಭಾ ಕ್ಷೇತ್ರಗಳಿರುವ ವಾರಣಾಸಿ

   ಐದು ವಿಧಾನಸಭಾ ಕ್ಷೇತ್ರಗಳಿರುವ ವಾರಣಾಸಿ

   ವಾರಣಾಸಿ ಲೋಕಸಭಾ ಕ್ಷೇತ್ರ, ರೋಹನಿಯಾ, ವಾರಣಾಸಿ ಉತ್ತರ, ವಾರಣಾಸಿ ದಕ್ಷಿಣ, ವಾರಣಾಸಿ ಕ್ಯಾಂಟೋನ್ಮೆಂಟ್ ಮತ್ತು ಸೇವಾಪುರಿ ಎಂಬ ಐದು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಇಲ್ಲಿ 2,251,773 ಜನಸಂಖ್ಯೆಯಿದ್ದು, ಶೇ.34.54ರಷ್ಟು ಗ್ರಾಮೀಣ ಜನರು ಮತ್ತು ಶೇ.65.46ರಷ್ಟು ನಗರ ವಾಸಿಗಳಿದ್ದಾರೆ. ಶೇ.10.13ರಷ್ಟು ಪರಿಶಿಷ್ಟ ಜಾತಿಯವರು ಮತ್ತು ಶೇ.0.74ರಷ್ಟು ಪರಿಶಿಷ್ಟ ಪಂಗಡದವರಿದ್ದಾರೆ.

   ಇಡೀ ದೇಶವೇ ವಾರಣಾಸಿಯತ್ತ ತಿರುಗಿ ನೋಡಿತ್ತು

   ಇಡೀ ದೇಶವೇ ವಾರಣಾಸಿಯತ್ತ ತಿರುಗಿ ನೋಡಿತ್ತು

   2014ರಲ್ಲಿ ನರೇಂದ್ರ ಮೋದಿಯವರ ವಿರುದ್ಧ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ತೊಡೆತಟ್ಟಿ ನಿಂತಾಗ, ಇಡೀ ದೇಶವೇ ತನ್ನತ್ತ ತಿರುಗಿನೋಡುವಂತೆ ಈ ಕ್ಷೇತ್ರ ಮಾಡಿತ್ತು. ಹೈಪ್ ಗೆ ತಕ್ಕಂತೆ ಇಬ್ಬರು ನಾಯಕರೂ ಭರ್ಜರಿ ಪ್ರಚಾರ ಸಭೆಗಳನ್ನು ನಡೆಸಿದ್ದರು. ಆದರೆ, ಮೋದಿ ಅಲೆಯ ಮುಂದೆ ಅರವಿಂದ್ ಕೇಜ್ರಿವಾಲ್ ಅವರ ಆಟ ನಡೆಯಲಿಲ್ಲ. ಭಾರೀ ಅಂತರದಿಂದ ಸೋಲುಂಡು ದೆಹಲಿಗಷ್ಟೇ ಸೀಮಿತವಾಗಬೇಕಾಯಿತು.

   ಹತ್ತು ವರ್ಷದ ಫಾಸಲೆಯಲ್ಲಿ ನಾಲ್ಕು ಸಲ ಮನ ಬದಲಿಸಿದ ಉ.ಪ್ರ. ಮತದಾರರು!

   ಮೋದಿ ವಿರುದ್ಧ ಕೇಜ್ರಿಗೆ ಹೀನಾಯ ಸೋಲು

   ಮೋದಿ ವಿರುದ್ಧ ಕೇಜ್ರಿಗೆ ಹೀನಾಯ ಸೋಲು

   ಈ ಕ್ಷೇತ್ರದಲ್ಲಿ 1,767,486 ಇರುವ ಮತದಾರರಲ್ಲಿ ಮತ ಚಲಾಯಿಸಿದ ಪುರುಷ ಮತದಾರರು 594,293, ಮಹಿಳೆಯರು 436,392. ಒಟ್ಟಾರೆ ಮತ ಚಲಾವಣೆ ಮಾಡಿದ್ದು 1,030,685, ಅಂದರೆ ಶೇ.58ರಷ್ಟು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದರು. ಜಿದ್ದಾಜಿದ್ದಿಯ ಸ್ಪರ್ಧೆಯಲ್ಲಿ ನರೇಂದ್ರ ಮೋದಿಯವರು 581,022 ಮತ ಗಳಿಸಿದ್ದರೆ, ಅರವಿಂದ್ ಕೇಜ್ರಿವಾಲ್ ಅವರು ಗಳಿಸಿದ್ದು 209,238 ಮತಗಳು. ನರೇಂದ್ರ ಮೋದಿ ಅವರು ಗಳಿಸಿದ ಗೆಲುವಿನ ಅಂತರ 371,784 ಅಂದರೆ ಲೆಕ್ಕಹಾಕಿ ಮೋದಿ ಅಲೆ ಹೇಗೆ ಇದ್ದೀತೆಂದು.

   ಬಿಜೆಪಿಯ ಅಭೂತಪೂರ್ವ ಯಶಸ್ಸು

   ಬಿಜೆಪಿಯ ಅಭೂತಪೂರ್ವ ಯಶಸ್ಸು

   ಕಳೆದ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ಜಯ ಸಾಧಿಸಿತ್ತು. ಉತ್ತರ ಪ್ರದೇಶದಲ್ಲಿ ಇರುವ 80 ಕ್ಷೇತ್ರಗಳಲ್ಲಿ ಬಿಜೆಪಿ 71ರಲ್ಲಿ ಜಯಭೇರಿ ಬಾರಿಸಿದ್ದರೆ, ಅದರ ಅಂಗಪಕ್ಷವಾದ ಅಪ್ನಾ ದಳ್ ಎರಡು, ಸಮಾಜವಾದಿ ಪಕ್ಷ ಐದು ಮತ್ತು ಕಾಂಗ್ರೆಸ್ ಪಕ್ಷ ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಎರಡರಲ್ಲಿ ಮಾತ್ರ ಜಯ ಗಳಿಸಿತ್ತು. ಆದರೆ ಈ ಬಾರಿ ಬಿಜೆಪಿಗೆ ಅದೇ ರೀತಿಯ ಮಾಂತ್ರಿಕತೆ ನಡೆಯುವ ಸಾಧ್ಯತೆ ತುಂಬಾ ಕಡಿಮೆಯಿದೆ.

   ರಾಯ್ ಬರೇಲಿ ಲೋಕಸಭೆ ಕ್ಷೇತ್ರದಲ್ಲಿ ಯಾರ ಬಾಯಿಗೆ 'ಬರ್ಫಿ'?

   ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ

   ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ

   1952ರಿಂದ ಆರಂಭವಾದ ಲೋಕಸಭೆ ಚುನಾವಣೆ ಪರ್ವದಲ್ಲಿ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಗಳೆರಡು ಹೆಚ್ಚೂಕಡಿಮೆ ಸಮಾನ ಗೌರವವನ್ನು ಪಡೆದಿವೆ. ಆರಂಭದ ವರ್ಷಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ದರ್ಬಾರ್ ಇಲ್ಲಿ ನಡೆಸಿದರೆ, 1991ರಿಂದೀಚೆಗೆ ಭಾರತೀಯ ಜನತಾ ಪಕ್ಷ ತನ್ನ ಪ್ರಭುತ್ವವನ್ನು ಇಲ್ಲಿ ಸಾಧಿಸಿದೆ. 2004ರಲ್ಲಿ ಕಾಂಗ್ರೆಸ್ ಗೆದ್ದಿದ್ದು ಬಿಟ್ಟರೆ ಕಳೆದ ಏಳು ಚುನಾವಣೆಗಳಲ್ಲಿ ಬಿಜೆಯದ್ದೇ ಇಲ್ಲಿ ಪಾರುಪತ್ಯ. ನರೇಂದ್ರ ಮೋದಿ ಅವರಿಗೂ ಮುನ್ನ ಇಲ್ಲಿ ಬಿಜೆಪಿಯ ಹಿರಿಯ ನಾಯಕ ಡಾ. ಮುರಳಿ ಮನೋಹರ ಜೋಶಿ ಅವರು ಗೆದ್ದಿದ್ದರು.

   ರಾಹುಲ್ ಗೆ ಪ್ರತಿಷ್ಠೆಯ ಕಣವಾಗಿರುವ 'ಅಮೇಥಿ' ಲೋಕಸಭಾ ಕ್ಷೇತ್ರ

   ವಾರಣಾಸಿಯಲ್ಲಿ ಜಾತಿ ಮತಗಳೇ ಪ್ರಧಾನ

   ವಾರಣಾಸಿಯಲ್ಲಿ ಜಾತಿ ಮತಗಳೇ ಪ್ರಧಾನ

   ವಾರಣಾಸಿಯಲ್ಲಿ ಜಾತಿ ಮತಗಳು ಪ್ರಧಾನ ಪಾತ್ರ ವಹಿಸುತ್ತವೆ. ಇಲ್ಲಿ 3 ಲಕ್ಷ ಮುಸ್ಲಿಂ ಮತಗಳಿದ್ದರೆ, 2.5 ಲಕ್ಷದಷ್ಟು ಬ್ರಾಹ್ಮಣ ಮತದಾರರಿದ್ದಾರೆ. ಮೋದಿಯವರನ್ನು ಬೆಂಬಲಿಸಿದ್ದ ಕುರ್ಮಿಗಳು 1.5 ಲಕ್ಷದಷ್ಟಿದ್ದರೆ, ಭೂಮಿಹಾರರು 1.5 ಲಕ್ಷ, ಯಾದವರು ಕೂಡ 1.5 ಲಕ್ಷದಷ್ಟಿದ್ದಾರೆ. ಕಾಯಸ್ಥರು 65 ಸಾವಿರ, ಚೌರಾಸಿಯಾ 80 ಸಾವಿರ, ದಲಿತರು ಕೂಡ 80 ಸಾವಿರದಷ್ಟಿದ್ದಾರೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಮೇಲು ಜಾತಿಗಳಾದ ಬ್ರಾಹ್ಮಣರು, ಕಾಯಸ್ಥರ ಮತಗಳನ್ನೇ ನೆಚ್ಚಿಕೊಂಡಿದ್ದಾರೆ. ಈ ಬಾರಿ ಈ ಕ್ಷೇತ್ರ ಯಾರ ಪಾಲಾಗಲಿದೆ? ನಿರೀಕ್ಷಿಸಿ!

   ಉತ್ತರ ಪ್ರದೇಶ ರಾಜಧಾನಿ ಲಕ್ನೊ ಲೋಕಸಭಾ ಕ್ಷೇತ್ರ ಪರಿಚಯ

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Lok Sabha Elections 2019: Varanasi constituency in Uttar Pradesh. Narendra Modi wave is still very strong in this constituency also known as Kashi or Banaras on the banks of Ganges (Ganga).

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more