• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಡೋದರಾದಲ್ಲಿ ಕಮಲದ ಪ್ರಬಲ ಕೋಟೆಯನ್ನು ಭೇದಿಸಲು ಸಾಧ್ಯವೇ?

|

ವಡೋದರಾದಲ್ಲಿ ಬಿಜೆಪಿ ಯಾವಾಗಲೂ ಪ್ರಾಬಲ್ಯ ಮೆರೆದಿದೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಗುಜರಾತ್‌ನ ಈ ಪೂರ್ವ ನಗರ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಮತ್ತು ಇತರ ಅನೇಕರ ನಡುವೆ ಸ್ಪರ್ಧೆ ನಡೆದಿತ್ತು.

ಕಾಂಗ್ರೆಸ್‌ನ ಮಧುಸೂದನ್ ಮಿಸ್ತ್ರಿ, ಎಎಪಿಯ ಸುನಿಲ್ ದಿಗಂಬರ್ ಮತ್ತು ಜೆಡಿಯುದ ಜಾಧವ್ ಅಂಬಲಾಲ್ ಕಣಭಾಯ್ ಪ್ರಮುಖ ಎದುರಾಳಿಗಳಾಗಿದ್ದರು. 8,45,464 ಮತಗಳನ್ನು ಪಡೆದ ನರೇಂದ್ರ ಮೋದಿ, 5,70,128 ಮತಗಳಿಂದ ಮಧುಸೂದನ್ ಮಿಸ್ತ್ರಿ ಅವರನ್ನು ಮಣಿಸಿದರು. ಮೂರನೇ ಸ್ಥಾನ ಪಡೆದ ಸುನಿಲ್ ದಿಗಂಬರ್ ಗಳಿಸಿದ್ದು ಕೇವಲ 10,101 ಮತಗಳನ್ನು.

ಕಣ್ಣೂರಿನಲ್ಲಿ ಕಾಂಗ್ರೆಸ್-ಸಿಪಿಎಂ ಗುದ್ದಾಟದಲ್ಲಿ ಯಾರಿಗೆ ಮೇಲುಗೈ?

ಅತ್ತ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿಯೂ ಸ್ಪರ್ಧಿಸಿ ಜಯಗಳಿಸಿದ್ದ ಮೋದಿ, ವಡೋದರಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು.

ಇಲ್ಲಿ ಒಟ್ಟು 16,38,321 ಮತದಾರರಿದ್ದು, ಅವರಲ್ಲಿ 7,89,244 ಮಹಿಳೆಯರು ಮತ್ತು 8,49,077 ಪುರುಷರಿದ್ದಾರೆ ಎಂದು ಚುನಾವಣಾ ಆಯೋಗದ 2014ರ ಮಾಹಿತಿ ತಿಳಿಸುತ್ತದೆ.

2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಾಲಕೃಷ್ಣ ಖಂಡೇರಾವ್ ಶುಕ್ಲಾ ಚಲಾವಣೆಯಾದ 7,47,129 ಮತಗಳಲ್ಲಿ 4,28,833 ಮತಗಳನ್ನು ಪಡೆದು ಭರ್ಜರಿ ಜಯಭೇರಿ ಭಾರಿಸಿದ್ದರು.

1957ರಲ್ಲಿ ಇದು ಬರೋಡಾ ಲೋಕಸಭೆ ಕ್ಷೇತ್ರವಾಗಿತ್ತು. ಅಲ್ಲದೆ, ಆಗ ಬಾಂಬೆ ರಾಜ್ಯಕ್ಕೆ ಸೇರಿಕೊಂಡಿತ್ತು. 2009ರ ಚುನಾವಣೆಯಿಂದ ಇದು ವಡೋದರಾ ಎಂಬ ಹೆಸರು ಪಡೆದುಕೊಂಡಿತು.

ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರ ಪರಿಚಯ

ಗಾಯಕವಾಡ್ ರಾಜಮನೆತನದ ಬರೋಡಾ ಮಹಾರಾಜರಾಗಿದ್ದ ಫತೆಹ್ ಸಿಂಗ್ ರಾವ್ ಗಾಯಕ್‌ವಾಡ್ ಈ ಕ್ಷೇತ್ರದಿಂದ ಮೊದಲ ಸಂಸದರಾಗಿ ಕಾಂಗ್ರೆಸ್‌ನಿಂದ ಚುನಾಯಿತರಾದರು. 1962 ಚುನಾವಣೆಯಲ್ಲಿಯೂ ಅವರು ಮರು ಆಯ್ಕೆಯಾಗಿದ್ದರು.

1967ರಲ್ಲಿ ಸ್ವತಂತ್ರ ಪಕ್ಷದಿಂದ ಪಿ.ಸಿ. ಪಟೇಲ್ ಜಯಗಳಿಸಿದರು. 1971-80ರ ಅವಧಿಯಲ್ಲಿ ಫತೆಹ್ ಸಿಂಗ್ ಕ್ಷೇತ್ರವನ್ನು ಮರಳಿ ತಮ್ಮ ಹಿಡಿತಕ್ಕೆ ಪಡೆದುಕೊಂಡಿದ್ದರು. ಕಾಂಗ್ರೆಸ್‌ನಲ್ಲಿಯೇ ಇದ್ದ ಫತೆಹ್ ಸಿಂಗ್ ಅವರ ಸಹೋದರ ರಂಜಿತ್ ಸಿಂಗ್ ಗಾಯಕ್‌ವಾಡ್ 1980-89ರ ಅವಧಿಯಲ್ಲಿ ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

1991ರಲ್ಲಿ ಇಲ್ಲಿ ಮೊದಲ ಬಾರಿಗೆ ಕಮಲ ಪಾಳೆಯ ಗೆಲುವಿನ ನಗೆ ಬೀರಿತು. ರಾಮಾಯಣ ಧಾರಾವಾಹಿಯಲ್ಲಿ ಸೀತಾ ಪಾತ್ರಧಾರಿಯಾಗಿ ಖ್ಯಾತಿ ಗಳಿಸಿದ್ದ ಕಿರುತೆರೆ ನಟಿ ದೀಪಿಕಾ ಚಿಖಾಲಿಯಾ ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದರು. ಸತ್ಯಸಿಂಗ್ ದಿಲೀಪ್‌ಸಿಂಗ್ ಗಾಯಕ್‌ವಾಡ್ 1996ರಲ್ಲಿ ಕಾಂಗ್ರೆಸ್‌ಗೆ ಮತ್ತೆ ಗೆಲುವು ತಂದುಕೊಟ್ಟರು.

ತೆಲಂಗಾಣದ ಮೆಹಬೂಬಾನಗರ ಲೋಕಸಭಾ ಕ್ಷೇತ್ರ ಪರಿಚಯ

1998ರ ಚುನಾವಣೆಯಿಂದ ಇಲ್ಲಿಯವರೆಗೂ ಇಲ್ಲಿ ಬಿಜೆಪಿಯದ್ದೇ ಪಾರುಪತ್ಯ ಮುಂದುವರಿದಿದೆ. 1998-2009ರವರೆಗೆ ಮೂರು ಬಾರಿ ಜಯಾಬೆನ್ ಠಕ್ಕರ್ ಜಯಶಾಲಿಯಾಗಿದ್ದರು.

2014ರ ಚುನಾವಣೆಯಲ್ಲಿ ಗೆದ್ದಿದ್ದ ಮೋದಿ ರಾಜೀನಾಮೆ ನೀಡಿದ ಬಳಿಕ ಉಪ ಚುನಾವಣೆ ನಡೆದಿತ್ತು. ಅದರಲ್ಲಿ ಬಿಜೆಪಿಯ ರಂಜನ್‌ಬೆನ್ ಧನಂಜಯ್ ಭಟ್ ಜಯಗಳಿಸಿದ್ದರು.

ರಂಜನ್‌ಬೆನ್ 5,26,763 ಮತಗಳನ್ನು ಪಡೆದುಕೊಂಡಿದ್ದರೆ, ಅವರ ಎದುರಾಳಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ನರೇಂದ್ರ ಅಂಬಲಾಲ್ ರಾವತ್ 1,97,256 ಮತಗಳನ್ನು ಗಳಿಸಿದ್ದರು.

ವಿಧಾನಸಭೆ ಕ್ಷೇತ್ರಗಳು: ವಡೋದರಾ ಲೋಕಸಭೆ ಕ್ಷೇತ್ರದಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಿವೆ. ಸಾಲ್ವಿ, ವಾಘೋಡಿಯಾ, ವಡೋದರಾ ಶಹೆರ್, ಸಯಾಜಿಗಂಜ್, ಅಕೋಟಾ, ರಾವ್‌ಪುರ ಮತ್ತು ಮಂಜಲ್‌ಪುರ.

ವಿಶ್ವಮಿತ್ರಿ ನದಿ ತಟದಲ್ಲಿರುವ ಬರೋಡಾಕ್ಕೆ ಚಂದ್ರಾವತಿ ಎಂಬ ಹೆಸರಿತ್ತು. ಬಳಿಕ ವೀರಾವತಿ ಎಂದು ಹೆಸರು ಬದಲಾಯಿತು. ನಂತರ ವಡಪಾತ್ರಾ ಎಂಬ ನಾಮಕರಣ ಮಾಡಲಾಗಿತ್ತು. ಕ್ರಮೇಣ ಅದು ವಡ್ (ಆಲದಮರ) ದರಾ (ಧರಿಸುವಿಕೆ) ಎಂದು ವಡೋದರಾ ಎಂದು ಹೆಸರು ಪಡೆದುಕೊಂಡಿತು.

ಜನಸಂಖ್ಯೆ ವಿವರ

22,98,052 ಸಂಖ್ಯೆಯ ಜನರು ಈ ಕ್ಷೇತ್ರದಲ್ಲಿದ್ದಾರೆ. 19.85% ಮಂದಿ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ್ದರೆ, ನಗರ ಭಾಗಗಳಲ್ಲಿ 80.15% ಮಂದಿ ವಾಸವಿದ್ದಾರೆ. ಇವರಲ್ಲಿ ಒಟ್ಟು 6.37%ರಷ್ಟು ಪರಿಶಿಷ್ಟ ಜಾತಿ ಮತ್ತು 6.17%ಪರಿಶಿಷ್ಟ ಪಂಗಡದ ಜನರಿದ್ದಾರೆ.

2014ರ ಚುನಾವಣೆಯಲ್ಲಿ 11,61,577 (ಶೇ 71) ಮಂದಿ ಮತ ಚಲಾಯಿಸಿದ್ದರು. ಅವರಲ್ಲಿ 6,25,045 ಮಂದಿ ಪುರುಷರು ಮತ್ತು 5,36,532 ಮಂದಿ ಮಹಿಳೆಯರು ಇದ್ದರು.

English summary
Lok Sabha Elections 2019: Vadodara Lok Sabha constituency is one of the major constitunecies in Gujarat. BJP has strong hold on this. here is the profile of Vadodara constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more