ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು ಕ್ಷೇತ್ರದ ಅಭ್ಯರ್ಥಿ, ಪ್ರಭಾವಿ ಸಂಸತ್ ಪಟು ಎಚ್ಡಿ ದೇವೇಗೌಡ

By -ಮಹೇಶ್ ಮಲ್ನಾಡ್
|
Google Oneindia Kannada News

Recommended Video

Lok Sabha Elections 2019 : ಎಚ್ ಡಿ ದೇವೇಗೌಡ ವ್ಯಕ್ತಿಚಿತ್ರ | Oneindia Kannada

ಕರ್ನಾಟಕದ 24‍‍x7 ರಾಜಕಾರಣಿ, ತಂತ್ರಗಾರಿಕೆಯ ನಿಪುಣ, ಮಣ್ಣಿನ ಮಗ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ ಅವರು ಎಲ್ಲಾ ಕಾಲಕ್ಕೂ ಸಲ್ಲುವ ಪ್ರಭಾವಿ ರಾಜಕಾರಣಿ. ಪ್ರಖರ, ಭೀಕರ ಭಾಷಣಕ್ಕೆ ಹೆಸರುವಾಸಿಯಲ್ಲದಿದ್ದರೂ ನಿಖರ ಮಾತು, ಸಮಯೋಚಿತ ಪದ ಬಳಕೆ ಮೂಲಕ ಜನರನ್ನು ಮುಟ್ಟಬಲ್ಲ ಸಂವೇದನಾಶೀಲ ಮುತ್ಸದ್ದಿ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಭಾವ ಬೀರಬಲ್ಲ ರಾಜಕಾರಣಿಗಳ ಪೈಕಿ ದೇವೇಗೌಡರು ಮುಂಚೂಣಿಯಲ್ಲಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆಯಿತ್ತಾದರೂ ಕೊನೆಗೆ ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಒಂದುಗೂಡಿರುವ ವಿರೋಧ ಪಕ್ಷಗಳ ಮಹಾಘಟಬಂದನ್ ಗೆ ಬೆಂಬಲ ನೀಡುವ ಮೂಲಕ ರಣಕಹಳೆ ಮೊಳಗಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಿಳಿ ಪಂಚೆ, ಜುಬ್ಬ, ಹಣೆಯ ಮೇಲೆ ಕುಂಕುಮ, ಸರಳ ಜೀವನ, ಸರಳ ಆಹಾರ ಪದ್ಧತಿ, ನಿರಂತರ ಹೋರಾಟ ಕಂಡಿರುವ ದೇವೇಗೌಡರಿಗೆ ಮುಂಬರುವ ಲೋಕಸಭೆ ಚುನಾವಣೆ ನಂತರ ಮತ್ತೊಮ್ಮೆ 'ಪ್ರಧಾನ ಮಂತ್ರಿ' ಯಾಗುವ ಯೋಗ ಕೂಡಿ ಬಂದರೂ ಅಚ್ಚರಿಯೇನಲ್ಲ. ತಮ್ಮ ಪುತ್ರ ಕುಮಾರಸ್ವಾಮಿಯನ್ನು ಮತ್ತೊಮ್ಮೆ ಸಿಎಂ ಆಗಿ ನೋಡುವ ಅವರ ಕನಸು ಸದ್ಯ ಈಡೇರಿದೆ. ಜತೆಗೆ ತಮ್ಮ ಉತ್ತರಾಧಿಕಾರಿಯಾಗಿ ರೇವಣ್ಣ ಅವರ ಮಗ ಪ್ರಜ್ವಲ್ ಅವರನ್ನು ಹಾಸನದಿಂದ ಕಣಕ್ಕಿಳಿಸಿದ್ದಾರೆ. ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರ್ ರನ್ನು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸಿದ್ದಾರೆ.

ದೇವೇಗೌಡರಿಗಿಂತಲೂ ಪತ್ನಿ ಚೆನ್ನಮ್ಮ ಅವರೇ ಹೆಚ್ಚು ಶ್ರೀಮಂತರು!ದೇವೇಗೌಡರಿಗಿಂತಲೂ ಪತ್ನಿ ಚೆನ್ನಮ್ಮ ಅವರೇ ಹೆಚ್ಚು ಶ್ರೀಮಂತರು!

ಜಾತ್ಯಾತೀತ ಜನತಾ ದಳದಲ್ಲಿನ ಬಂಡಾಯ, ಕಾಂಗ್ರೆಸ್ಸಿನ ಜತೆಗಿನ ಮೈತ್ರಿ, ಕುಟುಂಬ ರಾಜಕೀಯ, ರಾಜಕೀಯ ಮುಸುಕಿನ ಗುದ್ದಾಟದ ನಡುವೆಯೂ ಜೆಡಿಎಸ್ ಪಕ್ಷವು ಸಮತೋಲನ ಕಾಯ್ದುಕೊಂಡು ಉತ್ತಮ ಪ್ರದರ್ಶನ ನೀಡಲು ಸಜ್ಜು ಮಾಡುತ್ತಿದ್ದಾರೆ.

ವೈಯಕ್ತಿಕ ಜೀವನ

ವೈಯಕ್ತಿಕ ಜೀವನ

18 ಮೇ 1933ರಂದು ಹೊಳೆನರಸೀಪುರದ ದೇವೇಗೌಡರು ಮೇ 18, 1933ರಂದು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪಡೆದ ಬಳಿಕ, ದೇವೇಗೌಡ ಅವರು ಹಾಸನ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿಯ ದೇವೇಗೌಡ ಅವರ ಮಗಳು ಚೆನ್ನಮ್ಮ ಅವರನ್ನು 1954ರಲ್ಲಿ ವಿವಾಹವಾದರು. ಅವರಿಗೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ, ಎಚ್ ಡಿ ರಮೇಶ್, ಎಚ್ ಡಿ ಬಾಲಕೃಷ್ಣಗೌಡ ನಾಲ್ಕು ಜನ ಗಂಡು ಮಕ್ಕಳು, ಶೈಲಜಾ, ಅನಸೂಯಾ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ತುಮಕೂರಿನಿಂದ ಸ್ಪರ್ಧೆ, ಸೋಮವಾರ ನಾಮಪತ್ರ ಸಲ್ಲಿಕೆ: ದೇವೇಗೌಡ ಘೋಷಣೆ ತುಮಕೂರಿನಿಂದ ಸ್ಪರ್ಧೆ, ಸೋಮವಾರ ನಾಮಪತ್ರ ಸಲ್ಲಿಕೆ: ದೇವೇಗೌಡ ಘೋಷಣೆ

ರಾಜಕೀಯ ಜೀವನ :

ರಾಜಕೀಯ ಜೀವನ :

1953ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾದ ದೇವೇಗೌಡ, 1962ರ ತನಕ ಪಕ್ಷದಲ್ಲಿದ್ದರು. 1962ರಲ್ಲಿ ಹೊಳೆನರಸೀಪುರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಸಭೆಗೆ ಮೊದಲಿಗೆ ಆಯ್ಕೆಯಾದ ದೇವೇಗೌಡ, ಸತತ ಆರು ಬಾರಿ ಗೆಲುವು ಸಾಧಿಸಿದರು. 1972ರಿಂದ 1977ರ ತನಕ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಬೆಂಗಳೂರು ಸೆಂಟ್ರಲ್ ಜೈಲುವಾಸಿಯಾಗಿದ್ದರು.

ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?

ಜನತಾ ಪಾರ್ಟಿಯಲ್ಲಿ ಸಚಿವರಾಗಿದ್ದರು

ಜನತಾ ಪಾರ್ಟಿಯಲ್ಲಿ ಸಚಿವರಾಗಿದ್ದರು

1983 ರಿಂದ 1988ರ ತನಕ ರಾಮಕೃಷ್ಣ ಹೆಗಡೆ ಅವರ ಜನತಾ ಪಾರ್ಟಿ ಸರ್ಕಾರದಲ್ಲಿ ಸಚಿವರಾಗಿದ್ದರು. 1994ರಲ್ಲಿ ಜನತಾ ದಳದ ಅಧ್ಯಕ್ಷ ನಂತರ ಕರ್ನಾಟಕದ ಮುಖ್ಯಮಂತ್ರಿಯಾದರು. 1996ರಲ್ಲಿ ತೃತೀಯರಂಗದ ನಾಯಕರಾಗಿ ದೇಶದ ಪ್ರಧಾನಿಯಾದರು. 1999ರಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದರು, ಆದರೆ, ಕನಕಪುರದಲ್ಲಿ ಸೋಲು ಕಂಡರು. 2002ರಲ್ಲಿ ನಡೆದ ಬೈ ಎಲೆಕ್ಷನ್ ನಲ್ಲಿ ಮತ್ತೆ ಗೆಲುವು ದಾಖಲಿಸಿದರು. ನಂತರ 2004, 2009 ಹಾಗೂ 2014ರಲ್ಲಿ ಸಂಸದರಾದರು. ರಕ್ಷಣಾ ಇಲಾಖೆ ಸ್ಥಾನಿಕ ಸಮಿತಿ ಸದಸ್ಯರಾದರು.

ನಿಖಿಲ್ ಅಭಿಮನ್ಯು, ನಾನು ಅರ್ಜುನ, ಮಂಡ್ಯ ಚಕ್ರವ್ಯೂಹ ಭೇದಿಸುತ್ತೇವೆ: ಕುಮಾರಸ್ವಾಮಿನಿಖಿಲ್ ಅಭಿಮನ್ಯು, ನಾನು ಅರ್ಜುನ, ಮಂಡ್ಯ ಚಕ್ರವ್ಯೂಹ ಭೇದಿಸುತ್ತೇವೆ: ಕುಮಾರಸ್ವಾಮಿ

ಹೋರಾಟಗಾರರಾಗಿ ದೇವೇಗೌಡ

ಹೋರಾಟಗಾರರಾಗಿ ದೇವೇಗೌಡ

ಅಡಿಕೆ, ತೆಂಗು, ಕಾಫಿ ಸೇರಿದಂತೆ ಹಲವು ಬೆಳೆಗಳಿಗೆ ಬೆಂಬಲ ಬೆಲೆ ಸಿಗದೆ ಕಂಗಾಲಾಗಿರುವ ರೈತರ ಪರ ದನಿಯೆತ್ತಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಲ್ಲದೆ, ಸಮಯ ಸಿಕ್ಕಾಗ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು-ಹಾಸನ ರೈಲಿಗೆ ಹೇಮಾವತಿ, ಬೆಂಗಳೂರು-ಮಂಗಳೂರು ರೈಲಿಗೆ ಗೊಮಟೇಶ್ವರ, ಬೆಂಗಳೂರು-ಅರಸೀಕೆರೆ-ಮಂಗಳೂರು ರೈಲಿಗೆ ಕಾಲಭೈರವೇಶ್ವರ ಎಂದು ಹೆಸರಿಡುವಂತೆ ಅವರು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ

ಅಪನಗದೀಕರಣದ ಬಗ್ಗೆ ದೇವೇಗೌಡರು

ಅಪನಗದೀಕರಣದ ಬಗ್ಗೆ ದೇವೇಗೌಡರು

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ 500 ಹಾಗೂ 1000 ರುಪಾಯಿ ನೋಟುಗಳನ್ನು ನಿಷೇಧಿಸಿರುವುದನ್ನು ವಿರೋಧಿಸಿ ವಿಪಕ್ಷಗಳು ನಡೆಸಲು ಉದ್ದೇಶಿಸಿದ ಆಕ್ರೋಶ ದಿವಸಕ್ಕೆ ಜೆಡಿಎಸ್ ಬೆಂಬಲ ನೀಡಿರಲಿಲ್ಲ. ಕೇಂದ್ರದ ನೋಟು ನಿಷೇಧ ಕ್ರಮದಿಂದ ಬಡವರಿಗೆ, ಕಾರ್ಮಿಕರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ದೇವೇಗೌಡರು ಹೇಳಿದ್ದರು. ಉಡುಪಿಯಲ್ಲಿ ಪಂಕ್ತಿಭೇದ ಇದೆ ಎನ್ನುವುದಾದರೆ ಅಲ್ಲಿಗೆ ಹೋಗಬಾರದು ಎಂದು ಮಾಜಿ ಪ್ರಧಾನಿ ದೇವೇಗೌಡ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ದೇಶದಲ್ಲಿ ಹಲವು ಧರ್ಮಗಳಿವೆ. ಎಲ್ಲ ಧರ್ಮಗಳಿಗೂ ಅದರದೇ ನೀತಿ-ನಿಯಮಗಳಿವೆ. ಆದ್ದರಿಂದ ಏಕರೂಪ ನಾಗರಿಕ ಸಂಹಿತೆಯನ್ನು ತೀವ್ರವಾಗಿ ವಿರೋಧಿಸಿದ್ದರು.

ಜಲ, ನೆಲ, ಭಾಷೆ ಬಗ್ಗೆ ಕಾಳಜಿ

ಜಲ, ನೆಲ, ಭಾಷೆ ಬಗ್ಗೆ ಕಾಳಜಿ

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಚರ್ಚಿಸಲು ಮಾಜಿ ಪ್ರಧಾನಿ ದೇವೇಗೌಡರನ್ನು ಹುಡುಕಿಕೊಂಡು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದಿದ್ದು, ದೇವೇಗೌಡರು ಆ ಸಮಯದಲ್ಲಿ ನಡೆದುಕೊಂಡ ರೀತಿ ಕಾವೇರಿ ಕೊಳ್ಳದ ಜನತೆಯ ನೆನಪಿನಲ್ಲಿದೆ.

ಜನರಿಗೆ ಕುಡಿಯುವ ನೀರು ಮುಖ್ಯವೋ ಅಲ್ಲಿನ(ತಮಿಳುನಾಡಿಗೆ) ಬೆಳೆಗೆ ನೀರು ಮುಖ್ಯವೋ ಎಂದು ದೇವೇಗೌಡರು ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಉಪವಾಸ ಸತ್ಯಾಗ್ರಹ ಮಾಡಿದ್ದರು. ಈಗ ಮಹದಾಯಿ, ಕಳಸಾ ಬಂಡೂರಿ ವಿಷಯದಲ್ಲೂ ದೇವೇಗೌಡರು ದನಿಯೆತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯಾವೆಲ್ಲ ಅಂಶಗಳು ಮತದಾರರನ್ನು ತಟ್ಟಬಲ್ಲದು ಎಂಬುದರ ಲೆಕ್ಕಾಚಾರವನ್ನು ಹಾಕಿ ಅದಕ್ಕೆ ತಕ್ಕಂತೆ ದೇವೇಗೌಡರು ತಮ್ಮ ಹೆಜ್ಜೆ ಇಡುತ್ತಿದ್ದಾರೆ.

ಮೈತ್ರಿ ಅನಿವಾರ್ಯ ಎಂದ ಎಚ್ಡಿಡಿ

ಮೈತ್ರಿ ಅನಿವಾರ್ಯ ಎಂದ ಎಚ್ಡಿಡಿ

ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 'ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ' ಎಂದು ದೇವೇಗೌಡರು ಘೋಷಿಸಿದರೂ, ಚುನಾವಣೆ ನಂತರ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಅಧಿಕಾರ ಸ್ಥಾಪಿಸಿದರು.ಕುಟುಂಬ ರಾಜಕೀಯದ ವಿಷಯ ಬಂದರೆ, ದೇವೇಗೌಡರ ಕುಟುಂಬ ಸದಾಕಾಲ ಕೆಂಗಣ್ಣಿಗೆ ಗುರಿಯಾಗುತ್ತದೆ. ಕಾಂಗ್ರೆಸ್ ಜತೆಗಿನ ಮೈತ್ರಿ ಒಡುಕಿನ ನಡುವೆ ಈ ಬಾರಿ ಚುನಾವಣೆ ಎದುರಿಸುವಾಗ ಮೈತ್ರಿ ಸರ್ಕಾರದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಕಷ್ಟದ ಕೆಲಸ.

ಅಂತಿಮ ನಿರ್ಧಾರ ದೇವೇಗೌಡರದ್ದೇ ಆಗಿರುತ್ತದೆ

ಅಂತಿಮ ನಿರ್ಧಾರ ದೇವೇಗೌಡರದ್ದೇ ಆಗಿರುತ್ತದೆ

ಏನಾದರೂ, ಟಿಕೆಟ್ ಹಂಚಿಕೆಯ ಅಂತಿಮ ನಿರ್ಧಾರ ದೇವೇಗೌಡರದ್ದೇ ಆಗಿರುತ್ತದೆ. ತೃತೀಯರಂಗದ ರಚನೆಯ ಮತ್ತೊಂದು ರೂಪವಾಗಿರುವ ಮಹಾಘಟಬಂದನ್ ಗೆ ಬೆಂಬಲ ನೀಡುವ ಮೂಲಕ ರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಮುಂಚೂಣಿಗೆ ಬಂದಿದ್ದಾರೆ.2019ರ ಸಾರ್ವತ್ರಿಕ ಚುನಾವಣೆಯಲ್ಲಿ ದೇವೇಗೌಡರು ಯಾವ ಪಾತ್ರ ವಹಿಸಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.

English summary
In the perspective of Lok Sabha Elections 2019, we present the short biography and political journey of Vokkaliga leader HD Deve Gowda. Former Prime Minister, former CM of Karnataka, son of the soil, JDs supremo H D Deve Gowda is candidate from Tumakuru Constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X