• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರಳ, ವಿರಳ ರಾಜಕಾರಣಿ ಮಮತಾ ಬ್ಯಾನರ್ಜಿ ವ್ಯಕ್ತಿಚಿತ್ರ

|

ಭಾರತದಲ್ಲಿ ಉನ್ನತ ಹುದ್ದೆಗೇರಿದರೂ ಸರಳ ಜೀವನ ನಡೆಸಿದ ಹಲವು ವ್ಯಕ್ತಿಗಳನ್ನು ಜನತೆ ಕಂಡಿದ್ದಾರೆ. ಈ ಸಾಲಿಗೆ ಜನ ಸಾಮಾನ್ಯರ ಪಾಲಿನ ಪ್ರೀತಿಯ 'ದೀದಿ' ಮಮತ ಬ್ಯಾನರ್ಜಿ ಕೂಡಾ ಸೇರುತ್ತಾರೆ. ಹೋರಾಟದ ಬದುಕನ್ನು ತಮ್ಮದಾಗಿಸಿಕೊಂಡಿರುವ ಮಮತಾ ಅವರು ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂಬುದು ಅವರ ಅಭಿಮಾನಿಗಳ ನಂಬಿಕೆ. ಮೋದಿ ವಿರುದ್ಧ ರಚಿಸಲಾಗಿರುವ ಮಹಾಘಟಬಂಧನ್ ನ ಪ್ರಮುಖ ನಾಯಕಿಯಾಗಿದ್ದಾರೆ.

ಮಮತಾ ಬ್ಯಾನರ್ಜಿಯವರು 5 ಜನವರಿ 1955ರಂದು ಪ್ರೊಮಿಲೇಶ್ವರ ಬ್ಯಾನರ್ಜಿ ಹಾಗೂ ಗಾಯತ್ರಿ ಬ್ಯಾನರ್ಜಿಯವರ ಪುತ್ರಿಯಾಗಿ ಭಾರತದ ಈಗಿನ ಪಶ್ಚಿಮ ಬಂಗಾಳದ ಕಲ್ಕತ್ತಾ (ಈಗಿನ ಕೊಲ್ಕತ್ತಾ) ದಲ್ಲಿ ಜನಿಸಿದರು. ಒಂದು ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವರು.

ಅಮೇಥಿ, ವಯನಾಡು ಕ್ಷೇತ್ರದ ಅಭ್ಯರ್ಥಿ ರಾಹುಲ್ ಗಾಂಧಿ ಪರಿಚಯ

ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಮಹಿಳಾ ಕಾಲೇಜಿನಿಂದ ಮಾನ್ಯತೆ ಪಡೆದ ಜೋಗಾಮಯ ದೇವಿ ಕಾಲೇಜಿನಿಂದ ಕಲಾ ವಿಭಾಗದಲ್ಲಿ ಪದವಿಯನ್ನು ಪಡೆದರುನಂತರ ಅವರು ಸ್ನಾತಕೋತ್ತರ ಪದವಿಯನ್ನು ಅದೇ ವಿಶ್ವವಿದ್ಯಾನಿಲಯದಿಂದ ಪಡೆದರು.

ಅದೇ ವಿಶ್ವ ವಿದ್ಯಾನಿಲಯದಿಂದ ಮಾನ್ಯತೆಯಿಂದ ಪಡೆದ ಶ್ರೀ ಶಿಕ್ಷಯತಾನ್ ಕಾಲೇಜಿನಿಂದ ಅವರು ಬಿ.ಎಡ್. ಪದವಿಯನ್ನು ಪಡೆದರು. ನಂತರ ಅವರು ಕೊಲ್ಕತ್ತಾದ ಜೋಗೀಶ್ ಚಂದ್ರ ಚೌದರಿ ಕಾನೂನು ಮಹಾವಿದ್ಯಾಲಯದಿಂದ ಎಲ್.ಎಲ್.ಬಿ. ಪದವಿಯನ್ನು ಪಡೆದರು.

ಕಾಂಗ್ರೆಸ್-ಟಿಎಂಸಿ ಮಧ್ಯೆ ಹೊತ್ತಿಕೊಂಡ ಬೆಂಕಿ! ಮಹಾಘಟಬಂಧನ್ ಢಮಾರ್?

ತಮ್ಮ ರಾಜಕೀಯ ವೃತ್ತಿ ಜೀವನವನ್ನು ಕಾಂಗ್ರೆಸ್(ಐ) ಸೇರುವುದರ ಮೂಲಕ ಪ್ರಾರಂಭಿಸಿದರು. ಮತ್ತು ಒಬ್ಬ ಯುವ ಮಹಿಳೆಯಾಗಿ 1970ರಲ್ಲಿ ಅತಿ ಶೀಘ್ರದಲ್ಲೇ ರಾಜ್ಯದ ಮಹಿಳಾ ಕಾಂಗ್ರೆಸ್ (1976-80) ನ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಏರಿದರು.

ದೈತ್ಯ ಸಂಹಾರಿಯಾಗಿ, ಕಿರಿಯ ಸಂಸದೆಯಾಗಿ ಮಮತಾ

ದೈತ್ಯ ಸಂಹಾರಿಯಾಗಿ, ಕಿರಿಯ ಸಂಸದೆಯಾಗಿ ಮಮತಾ

1984ರ ಸಾರ್ವತ್ರಿಕ ಚುನಾವಣೆಯಲ್ಲಿ, ಪಶ್ಚಿಮ ಬಂಗಾಳದ ಜಾದವ್ ಪುರ್ ಲೋಕಸಭಾ ಕ್ಷೇತ್ರ ದಿಂದ ಸ್ಪರ್ಧಿಸಿದ್ದ ಹಳೆಯ ಕಮ್ಯುನಿಸ್ಟ್ ರಾಜಕೀಯ ಮುತ್ಸದಿಯಾದ ಸೋಮನಾಥ್ ಚಟರ್ಜಿಯವರನ್ನು ಸೋಲಿಸುವುದರ ಮೂಲಕ ಭಾರತದ ಅತ್ಯಂತ ಕಿರಿಯ ಸಂಸದರಾದರು. ನಂತರ ಅವರು ಅಖಿಲ ಭಾರತ ಯುವ ಕಾಂಗ್ರೆಸ್‌ನ ಕಾರ್ಯದರ್ಶಿಯೂ ಆದರು.

1989ರಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡ ನಂತರ 1991ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು, ಕೊಲ್ಕತ್ತ ದಕ್ಷಿಣ ಕ್ಷೇತ್ರದಲ್ಲಿ ಶಾಶ್ವತವಾದ ಸ್ಥಾನ ಕಂಡುಕೊಂಡರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿಬಿದ್ದ ಮಮತಾ

ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿಬಿದ್ದ ಮಮತಾ

1996, 1998, 1999, 2004 ಹಾಗೂ 2009 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಅವರು ದಕ್ಷಿಣ ಕೊಲ್ಕತ್ತದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡರು.

ನರಸಿಂಹರಾವ್ ಸರ್ಕಾರದ ಅವಧಿಯಲ್ಲಿ ಮಮತಾ ಬ್ಯಾನರ್ಜಿಯವರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ, ಯುವ ಹಾಗೂ ಕ್ರೀಡಾ, ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣದ ರಾಜ್ಯದ ಕೇಂದ್ರ ಸಚಿವರನ್ನಾಗಿ ಮಾಡಲಾಯಿತು. ಆದರೆ, ತಮ್ಮ ಪ್ರಸ್ತಾವನೆಗೆ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿ, ಸರ್ಕಾರದ ವಿರುದ್ಧವೆ ಪ್ರತಿಭಟನೆ ಮುಂದಾದರು.

ಜನಪರ ಪ್ರತಿಭಟನೆ ಹೋರಾಟದ ಜೀವನ

ಜನಪರ ಪ್ರತಿಭಟನೆ ಹೋರಾಟದ ಜೀವನ

ವಿಶೇಷ ಆರ್ಥಿಕ ವಲಯಗಳನ್ನು ವಿರೋಧಿಸುವುದರ ಮೂಲಕ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೈಗಾರಿಕೆಗಳ ಸ್ಥಾಪನೆಗೋಸ್ಕರ ಕೃಷಿಕರು ಹಾಗೂ ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳುವುದರ ವಿರುದ್ಧ ಹೋರಾಡುವುದರ ಮೂಲಕ ತಮ್ಮನ್ನು ಗುರುತಿಸಿಕೊಂಡರು.

ಕೊಲ್ಕತಾದ ಅಲಿಪೋರ್ ಸಮಾವೇಶದಲ್ಲಿ ಕಪ್ಪು ಶಾಲು ಸುತ್ತಿಕೊಂಡು ನೇಣು ಬಿಗಿದುಕೊಳ್ಳುವ ಬೆದರಿಕೆ ಒಡ್ಡಿದರು. ಯುಪಿಎ ಸರ್ಕಾರದ ಭಾಗವಾಗಿದ್ದರೂ, ಇಂಧನ ಬೆಲೆ ಏರಿಕೆಯಾದಾಗ ಪ್ರತಿಭಟಿಸಿದರು. ಸಂಸದ ಅಮರ್ ಸಿಂಗ್ ಕೊರಳ ಪಟ್ಟಿ ಹಿಡಿದು ಸಂಸತ್ತಿನ ಮುಂದೆ ಎಳೆದಾಡಿದ್ದನ್ನು ಮರೆಯುವಂತಿಲ್ಲ.

ನಂದಿಗ್ರಾಮ ಯೋಜನೆ ಪ್ರತಿಭಟನೆ

ನಂದಿಗ್ರಾಮ ಯೋಜನೆ ಪ್ರತಿಭಟನೆ

ನವೆಂಬರ್ 2006ರಲ್ಲಿ, ಮಮತಾ ಬ್ಯಾನರ್ಜಿಯವರು ಟಾಟಾ ಮೋಟಾರ್ ಕಾರ್ ಯೋಜನೆಯ ವಿರುದ್ಧ ನಡೆಯುವ Rallyಯಲ್ಲಿ ಪಾಲ್ಗೊಳ್ಳಲು ಸಿಂಗೂರ್‌ಗೆ ಹೋಗುವಾಗ ಅವರನ್ನು ಬಲವಂತವಾಗಿ ತಡೆಯಲಾಯಿತು. ಮಮತಾರವರು ಪಶ್ಚಿಮ ಬಂಗಾಳದ ವಿಧಾನ ಸಭೆಯನ್ನು ತಲುಪಿ ಅಲ್ಲಿ ಪ್ರತಿಭಟನೆಯನ್ನು ನಡೆಸಿದರು.

ಪಶ್ಚಿಮ ಬಂಗಾಳ ಸರ್ಕಾರವು ಉದ್ಯೋಗಾವಕಾಶಗಳನ್ನು ನಿರ್ಮಿಸುವುದಕ್ಕೋಸ್ಕರ ನಂದಿಗ್ರಾಮ್ ನಲ್ಲಿ ಒಂದು ರಾಸಾಯನಿಕ ಘಟಕವನ್ನು ಆರಂಭಿಸಲು ಮುಂದಾಗಿದೆ ಎಂಬ ಸುದ್ದಿ ಹಬ್ಬಿತು. ನಂದಿಗ್ರಾಮದ 10 ಸಾವಿರ ಎಕರೆ ಭೂಮಿ ವಶಕ್ಕೆ ಪಡೆಯಲು ಸಿಪಿಐಎಂ ಸರ್ಕಾರ ಮುಂದಾದಾಗ ಜನತೆ ಹಾಗೂ ಪೊಲೀಸರ ನಡುವೆ ಹಿಂಸಾಚಾರ ಸಂಭವಿಸಿ ಅನೇಕ ಸಾವು ನೋವು ಉಂಟಾಯಿತು. ಇದನ್ನು ಖಂಡಿಸಿದ ಮಮತಾ ಅವರು ಪ್ರತಿಭಟಿಸಿದ ಫಲವೇ 2011ರಲ್ಲಿ ಜಯಭೇರಿ ಬಾರಿಸಲು ಸಾಧ್ಯವಾಯಿತು.

ತೃಣಮೂಲ ಕಾಂಗ್ರೆಸ್ ಸ್ಥಾಪನೆ

ತೃಣಮೂಲ ಕಾಂಗ್ರೆಸ್ ಸ್ಥಾಪನೆ

1997ರಲ್ಲಿ ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದ ಕಾಂಗ್ರೆಸ್‌ನಿಂದ ಹೊರ ಬಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ ಅನ್ನು ಸ್ಥಾಪಿಸಿದರು ಇದು ಶೀಘ್ರದಲ್ಲೇ ರಾಜ್ಯದಲ್ಲಿ ದೀರ್ಘಕಾಲದಿಂದಲೂ ಆಡಳಿತದಲ್ಲಿದ್ದ ಕಮ್ಯುನಿಸ್ಟ್ ಸರ್ಕಾರದ ಪ್ರಪ್ರಥಮ ವಿರೋಧಿ ಪಕ್ಷವಾಗಿ ಹೊರಹೊಮ್ಮಿತು.

ಎನ್ಡಿಎ ಸರ್ಕಾರದಲ್ಲಿ ರೈಲ್ವೆ ಮಂತ್ರಿಯಾಗಿ

ಎನ್ಡಿಎ ಸರ್ಕಾರದಲ್ಲಿ ರೈಲ್ವೆ ಮಂತ್ರಿಯಾಗಿ

ಎನ್ಡಿಎ ಸರ್ಕಾರದಲ್ಲಿ ರೈಲ್ವೆ ಮಂತ್ರಿಯಾಗಿ ಕೂಡಾ ಕಾರ್ಯನಿರ್ವಹಿಸಿ, ಪ್ರವಾಸೋದ್ಯಮಕ್ಕೆ ಇಂಬು ನೀಡುವ ಅನೇಕ ಹೊಸ ರೈಲು ಮಾರ್ಗ, ಯೋಜನೆಗಳನ್ನು ಜಾರಿಗೆ ತಂದರು. 2009ರಲ್ಲಿ ಎರಡನೇ ಅವಧಿಗೆ ರೈಲ್ವೆ ಸಚಿವೆಯಾದಾಗ ರೈಲು ನಿಲ್ದಾಣ ಅಭಿವೃದ್ಧಿ, ಮಹಿಳಾ ಪರ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದರು.

ವಿವಾದಿತ ವ್ಯಕ್ತಿತ್ವದ ಮಮತಾ ಬ್ಯಾನರ್ಜಿ

ವಿವಾದಿತ ವ್ಯಕ್ತಿತ್ವದ ಮಮತಾ ಬ್ಯಾನರ್ಜಿ

ವಿವಾದ : ಬಹುಕೋಟಿ ಶಾರದಾ ಚಿಟ್ ಫಂಡ್ ಹಾಗೂ ರೋಸ್ ವ್ಯಾಲಿ ಆರ್ಥಿಕ ಅವ್ಯವಹಾರಗಳಲ್ಲಿ ಮಮತಾ ಅವರ ಕ್ಯಾಬಿನೆಟ್ ದರ್ಜೆ ಸಚಿವರ ಬಂಧನವಾಯಿತು. ಆರೋಪಿಗಳ ಪರ ಮಮತಾ ನಿಂತರು, ಸಿಬಿಐ ಅಧಿಕಾರಿಗಳನ್ನು ಬಂಧನ ಪ್ರಸಂಗ, ಸತ್ಯಾಗ್ರಹ ಎಲ್ಲವೂ ಮುಂದಿನ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರುವುದೋ ಕಾದು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha Elections 2019 :TMC candidate Mamata Banerjee Profile is here. She founded the party All India Trinamool Congress (AITC or TMC) in 1998 after separating from the Indian National Congress, and became its chairperson
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more