ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಟ್ಟು ಆಸ್ತಿ 1107 ಕೋಟಿ ರೂ, ಪಡೆದ ವೋಟು 1556!

|
Google Oneindia Kannada News

ಪಾಟ್ನಾ, ಮೇ 25: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ರಮೇಶ್ ಕುಮಾರ್ ಶರ್ಮಾ ಅವರು ಬಿಹಾರದ ಪಾಟಲಿಪುತ್ರ ಕ್ಷೇತ್ರದಿಂದ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದಾರೆ!

ಪಕ್ಷೇತರ ಅಭ್ಯರ್ಥಿಯಾಗಿದ್ದ ರಮೇಶ್ ಕುಮಾರ್ ಶರ್ಮಾ ಅವರು ಪಡೆ ಒಟ್ಟು ಮತಗಳು ಕೇವಲ 1556! ಆದರೆ ಅವರ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ಬರೋಬ್ಬರಿ 1107 ಕೋಟಿ ರೂ!

ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಅವರು ನೀಡಿದ್ದ ಅಫಿಡವಿಟ್ ನಲ್ಲಿ ತಮ್ಮ ಆಸ್ತಿ ಮೌಲ್ಯವನ್ನು ಅವರು 1107 ಕೋಟಿ ರೂ. ಎಂದು ತೋರಿಸುವ ಮೂಲಕ ಈ ಬಾರಿಯ ಲೋಕಸಭೆ ಚುನಾವಣೆಯ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರು.

4ನೇ ಹಂತದಲ್ಲಿ 3 ಅಭ್ಯರ್ಥಿಗಳ ಆಸ್ತಿ ಗಳಿಕೆ 'ಶೂನ್ಯ ಸಂಪಾದನೆ'4ನೇ ಹಂತದಲ್ಲಿ 3 ಅಭ್ಯರ್ಥಿಗಳ ಆಸ್ತಿ ಗಳಿಕೆ 'ಶೂನ್ಯ ಸಂಪಾದನೆ'

ಹತ್ತು ಶ್ರೀಮಂತ ಅಭ್ಯರ್ಥಿಗಳ ಈ ಪಟ್ಟಿಯಲ್ಲಿ ಆಂಧ್ರಪ್ರದೇಶದ ಮೂವರು, ಮಧ್ಯಪ್ರದೇಶದ ಇಬ್ಬರು, ಬಿಹಾರ, ತಮಿಳುನಾಡು, ಕರ್ನಾಟಕ, ತೆಲಂಗಾಣ ರಾಜ್ಯಗಳಿಂದ ತಲಾ ಒಬ್ಬರು ಇದ್ದರು.

ಠೇವಣಿಯನ್ನೂ ಕಳೆದುಕೊಂಡರು!

ಠೇವಣಿಯನ್ನೂ ಕಳೆದುಕೊಂಡರು!

ಕೇವಲ 1556 ಮತಗಳನ್ನು ಪಡೆಯುವ ಮೂಲಕ ಠೇವಣಿಯನ್ನೂ ಉಳಿಸಿಕೊಳ್ಳಲಾಗದ ಸ್ಥಿತಿಗೆ ಶರ್ಮಾ ತಲುಪಿದರು. ಹಣವೊಂದೇ ಚುನಾವಣೆ ಎದುರಿಸುವ ಮಾನದಂಡವಲ್ಲ ಎಂಬುದನ್ನು ಜನರು ಈ ಮೂಲಕ ತೋರಿಸಿಕೊಟ್ಟರು.

ಕುಟುಂಬದಲ್ಲಿದ್ದಿದ್ದು 9 ಜನ, ಸಿಕ್ಕ ಮತ 5! ಆದ್ರೆ ಆ ಸುದ್ದಿ ಸುಳ್ಳು!ಕುಟುಂಬದಲ್ಲಿದ್ದಿದ್ದು 9 ಜನ, ಸಿಕ್ಕ ಮತ 5! ಆದ್ರೆ ಆ ಸುದ್ದಿ ಸುಳ್ಳು!

ಎರಡನೇ ಸ್ಥಾನದಲ್ಲಿ ಕೊಂಡ ವಿಶ್ವೇಶ್ವರ ರೆಡ್ಡಿ

ಎರಡನೇ ಸ್ಥಾನದಲ್ಲಿ ಕೊಂಡ ವಿಶ್ವೇಶ್ವರ ರೆಡ್ಡಿ

ತೆಲಂಗಾಣದ ಚೆವೆಲ್ಲಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಕೊಂಡ ವಿಶ್ವೇಶ್ವರ ರೆಡ್ಡಿ 895 ಕೋಟಿ ರೂ. ಒಡೆಯ. ಆದರೆ ಅವರನ್ನು ಟಿಆರ್ ಎಸ್ ನ ಜಿ ರಂಜಿತ್ ರೆಡ್ಡಿ ಅವರು 14,317 ಮತಗಳ ಅಂತರದಿಂದ ಸೋಲಿಸಿದರು.

ನಕುಲ್ ನಾಥ್

ನಕುಲ್ ನಾಥ್

ಕಾಂಗ್ರೆಸ್ ಮುಖಂಡ, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರು ಮೂರನೇ ಶ್ರೀಮಂತ ಅಭ್ಯರ್ಥಿ. ಅವರ ಒಟ್ಟು ಆಸ್ತಿ 660 ಕೋಟಿ ರೂ. ಅವರು ಮಧ್ಯಪ್ರದೇಶದ ಛಿಂದ್ವಾರಾ ಕ್ಷೇತ್ರದಿಂದ 37,536 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪಟ್ಟಿಯಲ್ಲಿರುವ ಇತರರು

ಪಟ್ಟಿಯಲ್ಲಿರುವ ಇತರರು

ತಮಿಳುನಾಡಿನಕನ್ಯಾಕುಮಾರಿಯ ಕಾಂಗ್ರೆಸ್ ಅಭ್ಯರ್ಥಿ ವಸಂತ ಕುಮಾರ್ ಅವರ ಒಟ್ತು ಆಸ್ತಿ ಮೌಲ್ಯ 417 ಕೋಟಿ ರೂ. ಅವರು 2,59,933 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದರು. ಮಧ್ಯಪ್ರದೇಶದ ಗುನಾ ಕ್ಷೇತ್ರದಿಂದ ಸೋಲನುಭವಿಸಿದ ಕಾಂಗ್ರೆಸ್ ನ ಜ್ಯೋತಿರಾದಿತ್ಯ ಸಿಂದಿಯಾ ಒಟ್ಟು ಆಸ್ತಿ ಮೌಲ್ಯ 475 ಕೋಟಿ ರೂ. ಅವರು ದೇಶದ ಐದನೇ ಶ್ರೀಮಂತ ಅಭ್ಯರ್ಥಿ.

ಆಂಧ್ರಪ್ರದೇಶದ ವಿಜಯವಾಡದಿಂದ ಸ್ಪರ್ಧಿಸಿದ್ದ ವೈಎಸ್ ಆರ್ ಕಾಂಗ್ರೆಸ್ ನ ಪ್ರಸಾದ್ ವೀರ ಪೊಟ್ಲುರಿ 347 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಆದರೆ ಅವರು ಟಿಡಿಪಿ ಅಭ್ಯರ್ಥಿ ವಿರುದ್ಧ 8,726 ಮತಗಳ ಅಂತರದಿಂದ ಸೋಲನುಭವಿಸಿದರು. ಬಿಹಾರದ ಪುರ್ನಿಯಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉದಯ್ ಸಿಂಗ್ 2,63,461 ಮತಗಳಿಂದ ಸೋಲನುಭವಿಸದರು. ಅವರ ಒಟ್ಟು ಆಸ್ತಿ ಮೌಲ್ಯ, 341 ಕೋಟಿ ರೂ.

ಎಂಟನೇ ಸ್ಥಾನದಲ್ಲಿ ಡಿಕೆ ಸುರೇಶ್

ಎಂಟನೇ ಸ್ಥಾನದಲ್ಲಿ ಡಿಕೆ ಸುರೇಶ್

ಬೆಮಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ದೇಶದ ಎಂಟನೇ ಶ್ರೀಮಂತ ಅಭ್ಯರ್ಥಿ. 2,06,870 ಮತಗಳ ಅಂತರದಿಂದ ಬಿಜೆಪಿಯ ಅಶ್ವತ್ಥನಾರಾಯಣ ಅವರನ್ನು ಸೋಲಿಸಿದ ಅವರ ಒಟ್ತು ಆಸ್ತಿ ಮೌಲ್ಯ 338 ಕೋಟಿ ರೂ. ಆಂಧ್ರಪ್ರದೇಶದ ನಸಾಪುರಂ ಕ್ಷೇತ್ರದಿಂದ 31,909 ಮತಗಳಿಂದ ಗೆದ್ದ ಕಾನುಮುರು ರಘುರಾಮ್ ಕೃಷ್ಣ ರಾಜ ಅವರು ಒಂಭತ್ತನೇ ಶ್ರೀಮಂತ ಅಭ್ಯರ್ಥಿ. ಅವರ ಒಟ್ಟು ಆಸ್ತಿ ಮೌಲ್ಯ 325.ಗುಂಟೂರು ಕ್ಷೇತ್ರದ ಟಿಡಿಪಿ ಅಭ್ಯರ್ಥಿ ಗಲ್ಲಾ ಜಯದೇವ್ 4,205 ಮತಗಳಿಂದ ಗೆಲುವು ಕಂಡರು. ಅವರ ಒಟ್ಟು ಆಸ್ತಿ ಮೌಲ್ಯ 305 ಕೋಟಿ ರೂ. ಅವರು ಶ್ರೀಮಂತ ಅಭ್ಯರ್ಥಿಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ.

English summary
Lok Sabha election results 2019: Richest candidate of the country Ramesh Kumar Sharma, contested as an Independent from Pataliputra Lok Sabha seat in Bihar, lost deposit, gets only 1556 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X