ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯ್ ಬರೇಲಿ ಲೋಕಸಭೆ ಕ್ಷೇತ್ರದಲ್ಲಿ ಯಾರ ಬಾಯಿಗೆ 'ಬರ್ಫಿ'?

By ಪ್ರಸಾದ ನಾಯಿಕ
|
Google Oneindia Kannada News

ಲಖನೌನಿಂದ 70 ಕಿ.ಮೀ. ದೂರದಲ್ಲಿರುವ, ಪುರಾತನ ಕೌಸಲ ರಾಜ್ಯದ ಅವಧ್ ಪ್ರಾಂತ್ಯದಲ್ಲಿರುವ, ಸೀತಾ ನದಿಯ ದಡದಲ್ಲಿ ನಿರ್ಮಿತವಾಗಿರುವ 'ರಾಯ್ ಬರೇಲಿ' ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಇತರ ಪಕ್ಷಗಳು ಸ್ಪರ್ಧಿಸುವುದೇ ವೇಸ್ಟ್ ಅನ್ನುವಷ್ಟರ ಮಟ್ಟಿಗೆ ಕಾಂಗ್ರೆಸ್ ಇಲ್ಲಿ ತನ್ನ ಪ್ರಭುತ್ವ ಸ್ಥಾಪಿಸಿದೆ.

ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ, ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜಯಭೇರಿ ಬಾರಿಸಿದ್ದರೆ, ರಾಯ್ ಬರೇಲಿಯಲ್ಲಿ ಯುಪಿಎ ಚೇರ್ ಪರ್ಸನ್ ಸೋನಿಯಾ ಗಾಂಧಿ ಅವರು ಭಾರೀ ಅಂತರದಿಂದ ಜಯಶಾಲಿಯಾಗಿದ್ದರು.

ಲೋಕ ಸಮರ : ರಾಯ್ ಬರೇಲಿಯಿಂದಲೇ ಸೋನಿಯಾ ಗಾಂಧಿ ಸ್ಪರ್ಧೆ? ಲೋಕ ಸಮರ : ರಾಯ್ ಬರೇಲಿಯಿಂದಲೇ ಸೋನಿಯಾ ಗಾಂಧಿ ಸ್ಪರ್ಧೆ?

ಅಚ್ಚರಿಯ ಸಂಗತಿಯೆಂದರೆ, ಉತ್ತರ ಪ್ರದೇಶದಲ್ಲಿ ಇರುವ 80 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ 71 ಕ್ಷೇತ್ರಗಳಲ್ಲಿ ಧೂಳೆಬ್ಬಿಸಿದ್ದರೆ, ಕಾಂಗ್ರೆಸ್ ಉಳಿದೆಲ್ಲ ಕ್ಷೇತ್ರಗಳಲ್ಲಿ ಧೂಳಿಪಟವಾಗಿ ಕೇವಲ ಈ ಎರಡು ಕ್ಷೇತ್ರಗಳಲ್ಲಿ ಮಾತ್ರ ಜಯಶಾಲಿಯಾಗಿತ್ತು. ಅಂದರೆ, ಈ ಎರಡು ಕ್ಷೇತ್ರಗಳನ್ನು ಹೊರತುಪಡಿಸಿದರೆ, ಉತ್ತರ ಪ್ರದೇಶದ ಜನರು ಕಾಂಗ್ರೆಸ್ಸನ್ನು ಸಾರಾಸಗಟಾಗಿ ತಿರಸ್ಕರರಿಸಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ, ಈಗ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಮೈತ್ರಿಕೂಟ ರಚಿಸಿರುವುದರಿಂದ ಮತ್ತು ಕಾಂಗ್ರೆಸ್ಸಿಗೆ ಪ್ರಿಯಾಂಕಾ ಗಾಂಧಿ ಅವರು ಪಾದಾರ್ಪಣೆ ಮಾಡಿರುವುದರಿಂದ ಉತ್ತರ ಪ್ರದೇಶದಲ್ಲಿ ಸನ್ನಿವೇಶಗಳು ಬದಲಾವಣೆಗಳು ಕಾಣಸಿಗುತ್ತಿವೆ. ಪ್ರಿಯಾಂಕಾ ಅವರು ಇದೇ ರಾಯ್ ಬರೇಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅಲ್ಲಿ ಸೋನಿಯಾ ಗಾಂಧಿ ಅವರೇ ಮತ್ತೆ ಕಣಕ್ಕಿಳಿದಿದ್ದಾರೆ.

ಸೋನಿಯಾ ಮತಅಭಿಮಾನಿಗಳ 'ದೇವತೆ'

ಸೋನಿಯಾ ಮತಅಭಿಮಾನಿಗಳ 'ದೇವತೆ'

ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ ಬಿಎಸ್ಪಿ-ಎಸ್ಪಿ ಮೈತ್ರಿಕೂಟ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸದಿರಲು ನಿರ್ಧರಿಸಿರುವುದರಿಂದ ಕಾಂಗ್ರೆಸ್ಸಿಗೆ, ಕನಿಷ್ಠಪಕ್ಷ ರಾಯ್ ಬರೇಲಿಯಲ್ಲಿ ಜಯ ಕಷ್ಟವಾಗಲಾರದು. ಈ ಬಾರಿ ಅಮೇಥಿಯಲ್ಲಿ ಬಿಜೆಪಿಯ ನಾಯಕಿ ಸ್ಮೃತಿ ಇರಾನಿ ಮತ್ತೆ ಸ್ಪರ್ಧಿಸುತ್ತಿರುವುದರಿಂದ ರಾಹುಲ್ ಗಾಂಧಿಗೆ ಗೆಲುವು ಕಷ್ಟವಿದೆ. ಕಷ್ಟ ಮಾತ್ರವಲ್ಲ, ಅವರು ಸೋತರೂ ಅಚ್ಚರಿಯಿಲ್ಲ. ಆದರೆ, ಸೋನಿಯಾ ಗಾಂಧಿ ಅವರನ್ನು ರಾಯ್ ಬರೇಲಿಯಲ್ಲಿ ಅಲ್ಲಾಡಿಸುವ ತಾಕತ್ತು ಯಾರಿಗೂ ಅಲ್ಲ. ಅಷ್ಟರ ಮಟ್ಟಿಗೆ ಆ ಕ್ಷೇತ್ರಕ್ಕೆ ಸೋನಿಯಾ ಗಾಂಧಿ ಅವರೇ ಮತಅಭಿಮಾನಿಗಳ 'ದೇವತೆ'.

ರಾಹುಲ್ ಗೆ ಪ್ರತಿಷ್ಠೆಯ ಕಣವಾಗಿರುವ 'ಅಮೇಥಿ' ಲೋಕಸಭಾ ಕ್ಷೇತ್ರ ರಾಹುಲ್ ಗೆ ಪ್ರತಿಷ್ಠೆಯ ಕಣವಾಗಿರುವ 'ಅಮೇಥಿ' ಲೋಕಸಭಾ ಕ್ಷೇತ್ರ

ರಾಯ್ ಬರೇಲಿಯ ಚುನಾವಣಾ ಇತಿಹಾಸ

ರಾಯ್ ಬರೇಲಿಯ ಚುನಾವಣಾ ಇತಿಹಾಸ

ಬಛ್ರವಾನ್, ಹರಚಂದಪುರ, ರಾಯ್ ಬರೇಲಿ, ಸರೇನಿ ಮತ್ತು ಉನ್ಛಾರ್ 5 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ರಾಯ್ ಬರೇಲಿ ಲೋಕಸಭೆ ಚುನಾವಣೆ ಇತಿಹಾಸ ಗಮನಿಸಿದರೆ, ಇಲ್ಲಿ ಕಾಂಗ್ರೆಸ್ಸನ್ನು ಬಗ್ಗುಬಡಿಯಲು ಇತರ ಪಕ್ಷಗಳಿಗೆ ಸಾಧ್ಯವಾಗಿದ್ದು ಕಮ್ಮಿಯೇ. 1977ರಲ್ಲಿ ಜನತಾ ಪಕ್ಷದ ರಾಜ್ ನರೇನ್, 1966 ಮತ್ತು 1999ರಲ್ಲಿ ಬಿಜೆಪಿಯಿಂದ ರಾಜ್ ನರೇನ್ ಗೆದ್ದಿದ್ದು ಬಿಟ್ಟರೆ, ಇಲ್ಲಿ ಕಾಂಗ್ರೆಸ್ ಹುರಿಯಾಳುಗಳದ್ದೇ ಪಾರುಪತ್ಯ. ಆರ್ ಪಿ ಸಿಂಗ್, ಇಂದಿರಾ ಗಾಂಧಿ, ಶೀಲಾ ಕೌಲ್, ಸತೀಶ್ ಶರ್ಮಾ ಮತ್ತು ಕಳೆದ ನಾಲ್ಕು ಚುನಾವಣೆಗಳಿಂದ ಸೋನಿಯಾ ಗಾಂಧಿ ಅವರು ಇಲ್ಲಿಂದಲೇ ಸಂಸತ್ ಪ್ರವೇಶಿಸಿದ್ದಾರೆ. ಐದನೇ ಬಾರಿ ಸೋನಿಯಾ ಗಾಂಧಿ ರಾಯ್ ಬರೇಲಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಉತ್ತರ ಪ್ರದೇಶ ರಾಜಧಾನಿ ಲಕ್ನೊ ಲೋಕಸಭಾ ಕ್ಷೇತ್ರ ಪರಿಚಯ ಉತ್ತರ ಪ್ರದೇಶ ರಾಜಧಾನಿ ಲಕ್ನೊ ಲೋಕಸಭಾ ಕ್ಷೇತ್ರ ಪರಿಚಯ

ಬಿಜೆಪಿ ಅಭ್ಯರ್ಥಿಯನ್ನು ಬಗ್ಗುಬಡಿದಿದ್ದ ಸೋನಿಯಾ

ಬಿಜೆಪಿ ಅಭ್ಯರ್ಥಿಯನ್ನು ಬಗ್ಗುಬಡಿದಿದ್ದ ಸೋನಿಯಾ

2014ರ ಚುನಾವಣೆಯಲ್ಲಿ 1,594,954 ಮತದಾರರಲ್ಲಿ ಮತ ಚಲಾಯಿಸಿದ್ದು ಶೇ. 52ರಷ್ಟು ಅಂದರೆ 825,136 ಮತದಾರರು ಮಾತ್ರ. ಇವರಲ್ಲಿ ಪುರುಷರು 857,875 ಮತ್ತು ಮಹಿಳೆಯರು 737,079 ತಮ್ಮ ಹಕ್ಕು ಚಲಾಯಿಸಿದ್ದರು. ಇವರಲ್ಲಿ 526,434 ಮತಗಳು ಸೋನಿಯಾ ಗಾಂಧಿ ಅವರಿಗೆ ಬಂದಿದ್ದರೆ, ಬಿಜೆಪಿಯ ಅಜಯ್ ಅಗರವಾಲ್ ಅವರು ಪಡೆದಿದ್ದು 173,721 ಮತಗಳು ಮಾತ್ರ. ಶ್ರೀಮತಿ ಸೋನಿಯಾ ಗಾಂಧಿ ಅವರು 352,713 ಬೃಹತ್ ಮತಗಳ ಅಂತರದಿಂದ ಬಿಜೆಪಿಯನ್ನು ಸದೆಬಡಿದಿದ್ದರು. ಅಸಲಿಗೆ ಇಲ್ಲಿ ಸೋನಿಯಾ ಗಾಂಧಿ ಅವರಿಗೆ ಸ್ಪರ್ಧೆಯೇ ಇಲ್ಲ.

ಉತ್ತರ ಪ್ರದೇಶ: ಗೋರಖ್ಪುರ ಲೋಕಸಭಾ ಕ್ಷೇತ್ರ ಪರಿಚಯ ಉತ್ತರ ಪ್ರದೇಶ: ಗೋರಖ್ಪುರ ಲೋಕಸಭಾ ಕ್ಷೇತ್ರ ಪರಿಚಯ

ಗಾಂಧಿ ಕುಟುಂಬದ ಮೇಲೆ ವಿಶೇಷ ಪ್ರೀತಿ

ಗಾಂಧಿ ಕುಟುಂಬದ ಮೇಲೆ ವಿಶೇಷ ಪ್ರೀತಿ

ಅಮೇಥಿಯಂತೆ ರಾಯ್ ಬರೇಲಿಯಲ್ಲಿ ಕೂಡ ಗ್ರಾಮೀಣ ಜನತೆಯದ್ದೇ ಕಾರುಬಾರು. 2,403,705 ಇರುವ ಜನಸಂಖ್ಯೆಯಲ್ಲಿ ಶೇ.89.41ರಷ್ಟು ಗ್ರಾಮಸ್ಥರೇ ಇದ್ದಾರೆ. ನಗರ ವಾಸಿಗಳು ಶೇ.10.59ರಷ್ಟು ಇದ್ದರೆ, ಶೇ.30.38ರಷ್ಟು ಪರಿಶಿಷ್ಟ ಜಾತಿಯವರು ಮತ್ತು ಶೇ. 0.06ರಷ್ಟು ಪರಿಶಿಷ್ಟ ಪಂಗಡದವರು ಇದ್ದಾರೆ. ಇವರೆಲ್ಲ 1952ರಿಂದ ಕಾಂಗ್ರೆಸ್ ಪಕ್ಷದ ಮೇಲೆ, ಮತ್ತು ಸೋನಿಯಾ ಗಾಂಧಿ ಅವರ ಮೇಲೆ ವಿಶೇಷ ಪ್ರೀತಿ ಮತ್ತು ಮಮತೆಯನ್ನು ತೋರುತ್ತ ಬಂದಿದ್ದಾರೆ.

ಕನೌಜ್ ಲೋಕಸಭಾ ಕ್ಷೇತ್ರ: ಈ ಬಾರಿ ಗೆಲುವು ಯಾರಿಗೆ? ಕನೌಜ್ ಲೋಕಸಭಾ ಕ್ಷೇತ್ರ: ಈ ಬಾರಿ ಗೆಲುವು ಯಾರಿಗೆ?

ಅಂತಹ ಪ್ರಗತಿ ಕಾಣದ ರಾಯ್ ಬರೇಲಿ

ಅಂತಹ ಪ್ರಗತಿ ಕಾಣದ ರಾಯ್ ಬರೇಲಿ

ಉತ್ತರ ಪ್ರದೇಶ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇರದೇ ಇರುವುದರಿಂದ ಈ ರಾಯ್ ಬರೇಲಿ ಲೋಕಸಭಾ ಕ್ಷೇತ್ರ ಅಂತಹ ಪ್ರಗತಿಯನ್ನು ಕಂಡಿಲ್ಲ. ಇಲ್ಲಿ ವಿದ್ಯುತ್ ಸರಬರಾಜಿನ ಕೊರತೆ, ಕುಡಿಯುವ ನೀರಿಗೆ ತತ್ವಾರ, ಕೆಟ್ಟ ರಸ್ತೆಗಳು ಬೇಕಾದಷ್ಟಿದ್ದರೂ, ಸರಿಪಡಿಸಿ ಎಂದು ಕೇಳಿದಾಗ ಸೋನಿಯಾ ಗಾಂಧಿ ಅವರು ಕೇಂದ್ರ ಮತ್ತು ರಾಜ್ಯ ಸರಕಾರದತ್ತ ಬೆರಳು ತೋರಿದ್ದಾರೆ. ಒಟ್ಟಿನಲ್ಲಿ ವಿವಿಐಪಿ ಕ್ಷೇತ್ರವೆನಿಸಿರುವ ರಾಯ್ ಬರೇಲಿ ಲೋಕಸಭಾ ಕ್ಷೇತ್ರ ಪ್ರಿಯಾಂಕಾ ಗಾಂಧಿ ಆಗಮನದಿಂದ ಭಾರೀ ಕುತೂಹಲವನ್ನು ಮೂಡಿಸಿದೆ. ಸೋನಿಯಾ ಗಾಂಧಿ ಪರವಾಗಿ ಪ್ರಿಯಾಂಕಾ ಅವರೇ ಕ್ಷೇತ್ರದ ಇನ್ ಚಾರ್ಜ್ ಆಗಿರುವುದರಿಂದ ಈ ಚುನಾವಣೆ ಮತ್ತಷ್ಟು ರೋಚಕವಾಗಲಿದೆ.

English summary
Lok Sabha Elections 2019 : Rae Bareli constituency in Uttar Pradesh. It will be Rahul Gandhi vs Smriti Irani in one of strong hold of Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X