• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಂಜಾಬಿನ ಪಟಿಯಾಲಾ ಲೋಕಸಭಾ ಕ್ಷೇತ್ರದ ಪರಿಚಯ

|

ಪಂಜಾಬಿನ 13 ಲೋಕಸಭಾ ಕ್ಷೇತ್ರಗಳಲ್ಲಿ ಪಟಿಯಾಲ ಸಹ ಒಂದು. ಒಟ್ಟು ಒಂಬತ್ತು ವಿಧಾನ ಕ್ಷೇತ್ರಗಳನ್ನು ಹೊಂದಿರುವ ಪಟಿಯಾಲದಲ್ಲಿ ಎರಡು ಲೋಕಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾಗಿವೆ.

ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ತನ್ನ ಪಾರುಪತ್ಯ ಆರಂಭಿಸಿದ ಮೇಲೆ ಈ ಕ್ಷೇತ್ರದ ಸಂಸದರಾಗಿ ಆಮ್ ಆದ್ಮಿ ಪಕ್ಷದವರೇ ಆದ ಡಾ. ಧರಂ ವೀರ ಗಾಂಧಿ ಆಯ್ಕೆಯಾಗಿದ್ದಾರೆ.

2014 ರ ಲೋಕಸಭಾ ‌ಚುನಾವಣೆಯ ಸಮಯದಲ್ಲಿ ಚುನಾವಣಾ ಆಯೋಗ ನೀಡಿದ ಅಂಕಿ ಸಂಖ್ಯೆ ವಿವರದ ಪ್ರಕಾರ ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 15,80,273. ಇವರಲ್ಲಿ 7,46,042 ಮಹಿಳಾ ಮತದಾರರಾದರೆ, 8,34,231 ಪುರುಷ ಮತದಾರರಿದ್ದಾರೆ.

ಈ ಬಾರಿ ಪಂಜಾಬಿನ ಎಲ್ಲಾ 13 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಮಿಶನ್ 13 ಹೆಸರಿನಲ್ಲಿಯೇ ಪ್ರಚಾರ ನಡೆಸಲು ಸಿದ್ಧವಾಗಿದೆ. ಆದರೆ ಎಎಪಿ ಈ ರಾಜ್ಯದಲ್ಲಿ ತನ್ನ ಹಿಡಿತ ಹೊಂದಿದ್ದು, ಕಾಂಗ್ರೆಸ್ಸಿಗೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧವಾಗಿದೆ.

ಕ್ಷೇತ್ರ ಪರಿಚಯ: ಕೃಷ್ಣಾ ನದಿ ತಟದ ಕ್ಷೇತ್ರ ವಿಜಯವಾಡ

2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳದ ಮೈತ್ರಿಕೂಟ 6 ಕ್ಷೇತ್ರ ದಲ್ಲಿ ಗೆಲುವು ಕಂಡಿತ್ತು. ಮೊಟ್ಟ ಮೊದಲ ಬಾರಿಗೆ ಲೋಕಸಭಾ ಚುನಾವಣೆ ಸ್ಪರ್ಧಿಸಿದ್ದ ಎಎಪಿ 4 ಕ್ಷೇತ್ರಗಳಲ್ಲಿ ಗೆದ್ದು ಅಚ್ಚರಿಯ ಫಲಿತಾಂಶ ನೀಡಿತ್ತು.

ಪಟಿಯಾಲ ಲೋಕಸಭಾ ಕ್ಷೇತ್ರದಲ್ಲಿರುವ ಒಂಬತ್ತು ವಿಧಾನಸಭಾ ಕ್ಷೇತ್ರಗಳೆಂದರೆ ನಾಭಾ, ಪಟಿಯಾಲ ಗ್ರಾಮೀಣ, ರಾಜ್ಪುರ, ಡೇರಾ ಬಸ್ಸಿ, ಘಾನೌರ್, ಪಟಿಯಾಲ, ಸಾಮನಾ, ಸಾನೌರ್, ಶುತ್ರಾನಾ.

1952 ರಿಂದ 1971 ರವರೆಗೆ ಪಟಿಯಾಲ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಕಾಂಗ್ರೆಸ್ ನ ರಾಮ್ ಪ್ರತಾಪ್ ಗಾರ್ಗ್(1952), ಲಾಲಾ ಅಚಿಂತ್ ರಾಮ್(1957), ಸರ್ದಾರ್ ಹುಕಮ್ ಸಿಂಗ್ (1962), ಮಹಾರಾಣಿ ಮೋಹಿಂದರ್ ಕೌರ್ (1967), ಸತ್ ಪಾಲ್ ಕಪೂರ್(1971) ಗೆಲುವು ಸಾಧಿಸಿದ್ದರು, ನಂತರ 1977 ರಲ್ಲಿ ಅಕಾಲಿ ದಳದ ಸರ್ದಾರ್ ಗುರುಚರಣ್ ಸಿಂಗ್ ತೋರಾ ಗೆಲುವು ಸಾಧಿಸಿದರು. 1980 ರಲ್ಲಿ ಕಾಂಗ್ರೆಸ್ ನ ಕ್ಯಾ.ಅಮರೀಂದರ್ ಸಿಂಗ್ ಗೆದ್ದರೆ, 1984 ರಲ್ಲಿ ಅಕಾಲಿ ದಳದ ಸರ್ದಾರ್ ಚರಣ್ಜಿತ್ ಸಿಂಗ್ ವಾಲಿಯಾ ಗೆಲುವು ಸಾಧಿಸಿದರು. 1989 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸರ್ದಾರ್ ಅತಿಂದರ್ ಪಾಲ್ ಸಿಂಗ್ ಗೆಲುವು ಸಾಧಿಸಿದರು. 1991 ರಲ್ಲಿ ಕಾಂಗ್ರೆಸ್ ನ ಸಂತ್ ರಾಮ ಸಿಂಗ್ ಗೆದ್ದರೆ, 1996 ರಿಂದ 1998 ರವರೆಗೆ ಎರಡು ಬಾರಿ ಶಿರೋಮಣಿ ಅಕಾಲಿ ದಳದ ಪ್ರೇಮ ಸಿಂಗ್ ಚಂದುಮಜ್ರಾ ಗೆಲುವು ಸಾಧಿಸಿದರು.

1999 ರಿಂದ 2009 ರವರೆಗೆ ಕಾಂಗ್ರೆಸ್ ನ ಪ್ರೆನೀತ್ ಕೌರ್ ಗೆಲುವು ಸಾಧಿಸಿದರು. 2014ರಲ್ಲಿ ಆಮ್ ಆದ್ಮಿ ಪಕ್ಷದ ಧರಂ ವೀರ ಗಾಂಧಿ ಗೆಲುವು ಸಾಧಿಸಿದರು.

ಲಾಥೂರ್ ಲೋಕಸಭಾ ಕ್ಷೇತ್ರದ ಪರಿಚಯ

2014 ರ ಲೋಕಸಭಾಚುನಾವಣೆಯಲ್ಲಿ ಧರ್ಮ್ ವೀರ್ ಗಾಂಧಿ ಪಡೆದ ಒಟ್ಟು ಮತಗಳು 3,65,671. ಅವರಿಗೆ ಸಮೀಪದ ಪ್ರತಿ ಸ್ಪರ್ಧಿಗಳಾಗಿ ಕಾಂಗ್ರೆಸ್ ನ ಪ್ರೆನೀತ್ ಕೌರ್ 3,44,729 ಮತ್ತು ಶಿರೋಮಣಿ ಅಕಾಲಿ ದಳದ ದೀಪೇಂದರ್ ಧಿಲೋನ್ 3,40,109 ಮತಗಳನ್ನು ಪಡೆದರು.

ಪಟಿಯಾಲದ ಒಟ್ಟು ಜನಸಂಖ್ಯೆ 18,75,535. ಇವರಲ್ಲಿ ಶೇ. 70.26 ರಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿ ವಾಸವಿದ್ದರೆ, ಶೇ.29.74 ರಷ್ಟು ಮಂದಿ ನಗರ ಪ್ರದೇಶದಲ್ಲಿ ವಾಸವಿದ್ದಾರೆ. ಶೇ.26.03 ರಷ್ಟು ಪರಿಶಿಷ್ಟ ಜಾತಿಯ ಮತದಾರರಿದ್ದರೆ, 0.00 ರಷ್ಟು ಪರಿಶಿಷ್ಟ ಪಂಗಡದ ಜನರಿದ್ದಾರೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸ್ಟ್ರೈಕ್ ರೇಟ್ ಶೇ.69 ಮತ್ತು ಶಿರೋಮಣಿ ಅಕಾಲಿ ದಳದ ಸ್ಟ್ರೈಕ್ ರೇಟ್ ಶೇ.31, ಹಾಲಿ ಸಂಸದ ಡಾ. ದರಂ ವೀರ ಗಾಂಧಿ ಇದುವರೆಗೂ ಲೋಕಸಭೆಯಲ್ಲಿ 15 ಪ್ರಶ್ನೆಗಳನ್ನು ಕೇಳಿದ್ದು, 64 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಶೇ.57 ರಷ್ಟು ಹಾಜರಿ ಹೊಂದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha Elections 2019: Patiala is one of the most important Lok Sabha constituencies of Punjab. Which has 13 Lok Sabha Constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more