ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್ ಗಢ ಸಮೀಕ್ಷೆ: ಮೋದಿಗೆ ಆಘಾತ ನೀಡಲು ಕಾಂಗ್ರೆಸ್ಸಿಗೆ ಸಾಧ್ಯ

|
Google Oneindia Kannada News

ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಆಡಳಿತ ಕಳೆದುಕೊಂಡರೂ ಲೋಕಸಭೆಯಲ್ಲಿ ಬಿಜೆಪಿಗೆ ಗೆಲುವು ಎಂದು ನ್ಯೂಸ್ ನೇಷನ್ ಸಮೀಕ್ಷೆಯಿಂದ ತಿಳಿದು ಬಂದಿದೆ. ಆದರೆ, ಹಿಂದಿ ಭಾಷಿಕ ರಾಜ್ಯಗಳ ಪೈಕಿ ಛತ್ತೀಸ್ ಗಢದಲ್ಲಿ ಮಾತ್ರ ಬಿಜೆಪಿ ತನ್ನ ಪ್ರಾಬಲ್ಯ ಮರೆಯಲು ಕಷ್ಟವಾಗಲಿದೆ ಕಾಂಗ್ರೆಸ್ಸಿಗೆ ಗೆಲುವು ಸಾಧ್ಯವಾಗಲಿದೆ ಎಂಬ ವರದಿ ಬಂದಿದೆ.

ನ್ಯೂಸ್ ನೇಷನ್ ಸಮೀಕ್ಷೆ ಪ್ರಕಾರ, ಮಧ್ಯಪ್ರದೇಶದಲ್ಲಿ 29 ಸ್ಥಾನಗಳ ಪೈಕಿ 21 ಸ್ಥಾನಗಳು ಬಿಜೆಪಿ ಪಾಲಾಗಲಿವೆ. ಶೇಕಡಾವಾರು ಮತಗಳ ಎಣಿಕೆಯಲ್ಲಿ ಬಿಜೆಪಿಗೆ ಶೇ 41 ಹಾಗೂ ಕಾಂಗ್ರೆಸ್ಸಿಗೆ ಶೇ35ರಷ್ಟು ಮತಗಳು ಬರಲಿವೆ. 2014ರಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ 26 ಸ್ಥಾನಗಳಿಸಿತ್ತು, ಕಾಂಗ್ರೆಸ್ ಕೇವಲ 3 ಸ್ಥಾನ ಪಡೆದಿತ್ತು.

ನ್ಯೂಸ್ ನೇಷನ್ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮೋದಿ ಬಲನ್ಯೂಸ್ ನೇಷನ್ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮೋದಿ ಬಲ

ಛತ್ತೀಸ್ ಗಢದಲ್ಲಿ 2014ರಲ್ಲಿ 11 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 1 ಸ್ಥಾನ ಪಡೆದಿತ್ತು. ಆದರೆ, ಈ ಬಾರಿ ಬಿಜೆಪಿ 5 ಸ್ಥಾನ ಮಾತ್ರ ಗಳಿಸಬಹುದು, ಕಾಂಗ್ರೆಸ್ 6 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.

ನ್ಯೂಸ್ ನೇಷನ್ ಸಮೀಕ್ಷೆ: ಬಿಜೆಪಿ-ಶಿವಸೇನಾ vs ಕಾಂಗ್ರೆಸ್-ಎನ್ಸಿಪಿನ್ಯೂಸ್ ನೇಷನ್ ಸಮೀಕ್ಷೆ: ಬಿಜೆಪಿ-ಶಿವಸೇನಾ vs ಕಾಂಗ್ರೆಸ್-ಎನ್ಸಿಪಿ

ಶೇಕಡಾವಾರು ಮತ ಗಳಿಕೆ ಪ್ರಕಾರ ಬಿಜೆಪಿಗೆ ಶೇ 41 ರಷ್ಟು ಮತಗಳು ಹಾಗೂ ಕಾಂಗ್ರೆಸ್ಸಿಗೆ ಶೇ 42ರಷ್ಟು ಮತಗಳು ಲಭಿಸಲಿವೆ. ಏಪ್ರಿಲ್ 11, 18 ಹಾಗೂ 23ರಂದು ಛತ್ತೀಸ್ ಗಢದಲ್ಲಿ ಚುನಾವಣೆ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಹೊರಬರಲಿದೆ.

ನ್ಯೂಸ್ ನೇಷನ್ ಸಮೀಕ್ಷೆಯಂತೆ ಎನ್ಡಿಎಗೆ

ನ್ಯೂಸ್ ನೇಷನ್ ಸಮೀಕ್ಷೆಯಂತೆ ಎನ್ಡಿಎಗೆ

ನ್ಯೂಸ್ ನೇಷನ್ ಸಮೀಕ್ಷೆಯಂತೆ ಎನ್ಡಿಎ ಗೆ 270ಸ್ಥಾನಗಳು ಸಿಗಲಿದ್ದು, 272ರ ಮ್ಯಾಜಿಕ್ ನಂಬರ್ ದಾಟಲು 2 ಸ್ಥಾನ ಕಡಿಮೆ ಬೀಳಲಿದೆ. ಯುಪಿಎಗೆ 134 ಸ್ಥಾನಗಳು ಸಿಗಲಿದ್ದು, ಇತರೆ ಪಕ್ಷಗಳು 139 ಸ್ಥಾನಗಳು ಲಭಿಸಲಿವೆ. ಚುನಾವಣೋತ್ತರ ಮೈತ್ರಿ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿಯಬಹುದು ಎಂದು ಹೇಳಿದೆ.

ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿ

ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿ

ಛತ್ತೀಸ್ ಗಡದಲ್ಲಿ ನ್ಯೂಸ್ ನೇಷನ್ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಸಿಕ್ಕಿದ ಜನಾಭಿಪ್ರಾಯದಂತೆ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಬೇಕು ಎಂದು ಶೇ 46ರಷ್ಟು ಮತಗಳು ಬಂದಿವೆ. ಇದೇ ವೇಳೆ ರಾಹುಲ್ ಗಾಂಧಿ ಅವರ ಪರ ಶೇ 34ರಷ್ಟು ಮತಗಳು ಬಂದಿವೆ.

ಹಿಂದಿ ಭಾಷಿಕ ರಾಜ್ಯಗಳ ಪೈಕಿ ಬಿಜೆಪಿ ಫಲಿತಾಂಶ

ಹಿಂದಿ ಭಾಷಿಕ ರಾಜ್ಯಗಳ ಪೈಕಿ ಬಿಜೆಪಿ ಫಲಿತಾಂಶ

ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಆಡಳಿತ ಕಳೆದುಕೊಂಡರೂ ಲೋಕಸಭೆಯಲ್ಲಿ ಬಿಜೆಪಿಗೆ ಗೆಲುವು ಎಂದು ನ್ಯೂಸ್ ನೇಷನ್ ಸಮೀಕ್ಷೆಯಿಂದ ತಿಳಿದು ಬಂದಿದೆ. ಆದರೆ, ಹಿಂದಿ ಭಾಷಿಕ ರಾಜ್ಯಗಳ ಪೈಕಿ ಛತ್ತೀಸ್ ಗಢದಲ್ಲಿ ಮಾತ್ರ ಬಿಜೆಪಿ ತನ್ನ ಪ್ರಾಬಲ್ಯ ಮರೆಯಲು ಕಷ್ಟವಾಗಲಿದೆ ಕಾಂಗ್ರೆಸ್ಸಿಗೆ ಗೆಲುವು ಸಾಧ್ಯವಾಗಲಿದೆ ಎಂಬ ವರದಿ ಬಂದಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಶೇ 41ರಷ್ಟು ಕಾಂಗ್ರೆಸ್ಸಿಗೆ ಶೇ 35ರಷ್ಟು ಮತ ಗಳಿಕೆಯಾಗಲಿದೆ. 29 ಸ್ಥಾನಗಳ ಪೈಕಿ 21 ಬಿಜೆಪಿಗೆ ಸಿಗಲಿದೆ ಎಂದು ವರದಿ ಬಂದಿದೆ.

ರಾಜಸ್ಥಾನದಲ್ಲೂ ಬಿಜೆಪಿಗೆ ಗೆಲುವು

ರಾಜಸ್ಥಾನದಲ್ಲೂ ಬಿಜೆಪಿಗೆ ಗೆಲುವು

ನ್ಯೂಸ್ ನೇಷನ್ ಸಮೀಕ್ಷೆಯಂತೆ 2019ರ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ 16 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ನಿರೀಕ್ಷೆಯಿದೆ. ಜೊತೆಗೆ ಬಿಜೆಪಿ ಶೇ40 ರಷ್ಟು ಮತಗಳನ್ನು ಪಡೆಯಲಿದೆ. ಕಾಂಗ್ರೆಸ್ 9 ಸ್ಥಾನ ಹಾಗೂ ಶೇ 35ರಷ್ಟು ಮತಗಳನ್ನು ಗಳಿಸಲಿದೆ.

English summary
Talking about Chhattisgarh, the BJP, which bagged 10 of the 11 Lok Sabha seats in 2014, is likely to win five seats while the Congress will claim victory on the remaining six seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X