ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಸ್ ನೇಷನ್ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮೋದಿ ಬಲ

|
Google Oneindia Kannada News

ಭೋಪಾಲ್, ಮಾರ್ಚ್ 18: ಮಧ್ಯಪ್ರದೇಶದಲ್ಲಿ ಆಡಳಿತ ಕಳೆದುಕೊಂಡರೂ ಬಿಜೆಪಿ ಪರ ಅಲೆ ಇನ್ನು ಇದೆ, ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವದಿಂದ ಬಿಜೆಪಿ ಉತ್ತಮ ಫಲಿತಾಂಶ ಹೊರತರಲಿದೆ ಎಂದು ನ್ಯೂಸ್ ನೇಷನ್ ಸಮೀಕ್ಷೆ ಹೇಳಿದೆ.

ಮಹಾರಾಷ್ಟ್ರದಲ್ಲಿ ಸದ್ಯ ಬಿಜೆಪಿ ಆಡಳಿತವಿದ್ದರೂ ಬಿಜೆಪಿ ಮೈತ್ರಿಕೂಟಕ್ಕೆ ಈ ಬಾರಿ ಕಡಿಮೆ ಸ್ಥಾನಗಳು ಲಭಿಸಲಿವೆ. ಕಾಂಗ್ರೆಸ್ -ಎನ್ ಸಿಪಿ ಮೈತ್ರಿಗೆ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಸಿಕ್ಕರೂ ಬಿಜೆಪಿ -ಶಿವಸೇನಾ ಎದುರು ತಲೆ ಬಾಗಿಸಬೇಕಾಗಿದೆ ಎಂದು ನ್ಯೂಸ್ ನೇಷನ್ ರಾಷ್ಟ್ರೀಯ ಸಮೀಕ್ಷೆ ಹೇಳಿದೆ.

ನ್ಯೂಸ್ ನೇಷನ್ ಸಮೀಕ್ಷೆ: ಎನ್ಡಿಎ ಜನಪ್ರಿಯತೆ ಕುಸಿತ, ಮೋದಿ ಜನಪ್ರಿಯತೆ ಏರಿಕೆ! ನ್ಯೂಸ್ ನೇಷನ್ ಸಮೀಕ್ಷೆ: ಎನ್ಡಿಎ ಜನಪ್ರಿಯತೆ ಕುಸಿತ, ಮೋದಿ ಜನಪ್ರಿಯತೆ ಏರಿಕೆ!

ಆದರೆ, ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಪತನಗೊಂಡ ಬಳಿಕವೂ ಬಿಜೆಪಿ ತನ್ನ ಪ್ರಾಬಲ್ಯ ಮೆರೆಯಲಿದೆ. 2014ಕ್ಕಿಂತ ಹೆಚ್ಚಿನ ಸ್ಥಾನಗಳು ಹಾಗೂ ಹೆಚ್ಚಿನ ಶೇಕಡಾವಾರು ಮತಗಳನ್ನು ಗಳಿಸಲಿದೆ ಎಂದು ನ್ಯೂಸ್ ನೇಷನ್ ಸಮೀಕ್ಷೆ ತಿಳಿಸಿದೆ.

Lok Sabha elections 2019 | News Nation Opinion poll: BJP likely to better Congress in Madhya Pradesh,

ನ್ಯೂಸ್ ನೇಷನ್ ಸಮೀಕ್ಷೆಯಂತೆ 2019ರ ಲೋಕಸಭೆ ಚುನಾವಣೆಯಲ್ಲಿ 29 ಸ್ಥಾನಗಳ ಪೈಕಿ 21 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ನಿರೀಕ್ಷೆಯಿದೆ. ಜೊತೆಗೆ ಬಿಜೆಪಿ ಶೇ41ರಷ್ಟು ಮತಗಳನ್ನು ಪಡೆಯಲಿದೆ. ಕಾಂಗ್ರೆಸ್ 8 ಸ್ಥಾನ ಹಾಗೂ ಶೇ 35ರಷ್ಟು ಮತಗಳನ್ನು ಗಳಿಸಲಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 26 ಸ್ಥಾನ ಹಾಗೂ ಕಾಂಗ್ರೆಸ್ 3 ಸ್ಥಾನ ಗಳಿಸಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸೋಲು ಕಂಡಿತ್ತು. ಕಾಂಗ್ರೆಸ್ 114 ಸ್ಥಾನ ಗಳಿಸಿ ಬಹುಮತ ಗಳಿಸಿತು. ಆದರೆ, ಸರ್ಕಾರ ಸ್ಥಾಪನೆಗೆ ಬಿಎಸ್ಪಿಯಿಂದದ್ 2 ಸ್ಥಾನಗಳ ಬೆಂಬಲ ಪಡೆಯಬೇಕಾಯಿತು.

English summary
Lok Sabha elections 2019 : News Nation Opinion poll: BJP is expected to win 21 of the 29 seats in Madhya Pradesh in the upcoming general elections, an opinion poll by News Nation has predicted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X