ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದ ಮೆಹಬೂಬಾನಗರ ಲೋಕಸಭಾ ಕ್ಷೇತ್ರ ಪರಿಚಯ

|
Google Oneindia Kannada News

ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಲ್ಲಿ ಮೆಹಬೂಬಾನಗರವೂ ಒಂದು. ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳನ್ನು ಇದು ಹೊಂದಿದೆ. ಈ ಕ್ಷೇತ್ರವನ್ನು ಪ್ರಸ್ತುತ ಟಿಆರ್ ಎಸ್ ನ ಎಪಿ ಜಿತೇಂದ್ರ ರೆಡ್ಡಿ ಆಳುತ್ತಿದ್ದು, ಇವರು ಶಾಸಕಾಂಗ ಪಕ್ಷದ ನಾಯಕರೂ ಹೌದು. 2014 ರಲ್ಲಿ ಚುನಾವಣಾ ಆಯೋಗ ನೀಡಿದ ದಾಖಲೆಗಳ ಪ್ರಕಾರ ಮೆಹಬೂಬಾನಗರದಲ್ಲಿರುವ ಒಟ್ಟು ಮತದಾರರ ಸಂಖ್ಯೆ 14,18,672 ಇವರಲ್ಲಿ 7,09,711 ಮಹಿಳೆಯರು ಮತ್ತು 7,08,961 ಮಹಿಳೆಯರು.

2014 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಜೈಪಾಲ್ ರೆಡ್ಡಿ ಅವರನ್ನು ಜಿತೇಂದ್ರ ರೆಡ್ಡಿ ಸೋಲಿಸಿದ್ದರು. ತೆಲಂಗಾಣವು ಆಂಧ್ರಪ್ರದೇಶದಿಂದ ಬೇರ್ಪಡುವ ಮುಂಚೆ ಈ ಕ್ಷೇತ್ರದಲ್ಲಿ 1957 ರಿಂದ ಹತ್ತು ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಇದೀಗ ತೆಲಂಗಾಣ ರಾಷ್ಟ್ರ ಸಮಿತಿ ತನ್ನ ಹಿಡಿತ ಸಾಧಿಸಿದೆ.

ಕ್ಷೇತ್ರ ಪರಿಚಯ: ಕೃಷ್ಣಾ ನದಿ ತಟದ ಕ್ಷೇತ್ರ ವಿಜಯವಾಡಕ್ಷೇತ್ರ ಪರಿಚಯ: ಕೃಷ್ಣಾ ನದಿ ತಟದ ಕ್ಷೇತ್ರ ವಿಜಯವಾಡ

ಈ ರಾಜ್ಯದ 23 ಆಡಳಿತಾತ್ಮಕ ಜಿಲ್ಲೆಗಳಲ್ಲಿ ಮೆಹಬೂಬಾನಗರವೂ ಒಂದು. ಇದು ತೆಲಂಗಾಣದ ಅತೀ ದೊಡ್ಡ ನಗರಗಳಲ್ಲೊಂದು. 2011 ರ ಜನಗಣತಿಯ ಪ್ರಕಾರ ಇಲ್ಲಿನ ಒಟ್ಟು ಜನಸಂಖ್ಯೆ 4,042,191. ಲೋಕಸಭೆಯಲ್ಲಿ ರೆಡ್ಡಿ ಇದುವರೆಗೂ 187 ಪ್ರಶ್ನೆಗಳನ್ನು ಕೇಳಿದ್ದು, 88 ಚರ್ಚೆಗಳಲ್ಲಿ ಭಾಗಿಯಾಗಿದ್ದಾರೆ.

Lok Sabha Elections 2019: Mahbubnagar LS constituency

ಮೆಹಬೂಬಾನಗರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿವೆ. ಕೊಡಂಗಳ್, ನಾರಾಯಣಪೇಟೆ, ಮೆಹಬೂಬಾನಗರ, ಜಡ್ಚೆರ್ಲಾ, ದೇವರಕದ್ರಾ, ಮಕ್ತಾಲ್, ಶದ್ನಗರ ಇವು ಮೆಹಬೂಬಾನಗರದಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳು.

ಲಾಥೂರ್ ಲೋಕಸಭಾ ಕ್ಷೇತ್ರದ ಪರಿಚಯಲಾಥೂರ್ ಲೋಕಸಭಾ ಕ್ಷೇತ್ರದ ಪರಿಚಯ

1952-57 ರವರೆಗೆ ಕಾಂಗ್ರೆಸ್ಸಿನ ಕೆ ಜನಾರ್ದನ ರೆಡ್ಡಿ, 1957-62 ರವರೆಗೆ ಕಾಂಗ್ರೆಸ್ ನ ಜೆ ರಾಮೇಶ್ವರ ರಾವ್, 1962-67 ರವರೆಗೆ ಕಾಂಗ್ರೆಸ್ ನ ಜೆ ಮಿ ಮುತ್ಯಾಲ ರಾವ್, 1967-80 ರವರೆಗೆ ಮೂರು ಬಾರಿ ಕಾಂಗ್ರೆಸ್ನ ಜೆ.ರಾಮೇಶ್ವರ ರಾವ್, 1980-84 ಕಾಂಗ್ರೆಸ್(ಐ)ನ ಡಾ.ಮಲ್ಲಿಕಾರ್ಜುನ ಜಯಗಳಿಸಿದ್ದರು. ಅದುವರೆಗೂ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಮೆಹಬೂಬಾನಗರವನ್ನು 1984-89 ರವರೆಗೆ ಜನತಾ ಪಕ್ಷದ ಎಸ್ ಜೈಪಾಲ್ ರೆಡ್ಡಿ ತಮ್ಮ ತೆಕ್ಕೆಗೆ ಹಾಕಿಕೊಂಡರು.

ನಂತರ ಮತ್ತೆ ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿ ಬದಲಾಯಿತು. 1989-98 ರವರೆಗೆ ಸತತ ಮೂರು ಬಾರಿ ಕಾಂಗ್ರೆಸ್ ನ ಡಾ.ಮಲ್ಲಿಕಾರ್ಜುನ ಈ ಕ್ಷೇತ್ರದಿಂದ ಗೆಲುವು ಸಾಧಿಸಿದರು.

Lok Sabha Elections 2019: Mahbubnagar LS constituency

1998-99 ರವರೆಗೆ ಜನತಾ ಪಕ್ಷದ ಎಸ್ ಜೈಪಾಲ್ ರೆಡ್ಡಿ ಮತ್ತೆ ಗೆಲುವು ಸಾಧಿಸಿದರು. 1999-04 ರವರೆಗೆ ಬಿಜೆಪಿ ಮೊಟ್ಟ ಮೊದಲ ಬಾರಿಗೆ ಖಾತೆ ತೆರೆದು ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಬಿಜೆಪಿಯ ಎ ಪಿ ಜಿತೇಂದ್ರ ರೆಡ್ಡಿ ಈ ಕ್ಷೇತ್ರದಲ್ಲಿ ಗೆಲುವುದು ಸಾಧಿಸಿದ್ದರು. 2004-09 ರವರೆಗೆ ಮತ್ತೆ ಕಾಂಗ್ರೆಸ್ ನ ಡ. ವಿಠ್ಠಲ್ ರಾವ್ ಈ ಕ್ಷೇತ್ರದಲ್ಲಿ ಗೆದ್ದರು. ನಂತರ 2009-2014 ರವರೆಗೆ ತೆಲಂಗಾಣದ ಹಾಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಈ ಕ್ಷೇತ್ರದಲ್ಲಿ ಆಳ್ವಿಕೆ ನಡೆಸಿದರು.

ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಪರಿಚಯಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಪರಿಚಯ

ಅಚ್ಚರಿಯ ರೀತಿಯಲ್ಲಿ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಜಿತೇಂದ್ರ ರೆಡ್ಡಿ ತಮ್ಮ ಪ್ರತಿಸ್ಪರ್ಧಿ ಕೆ ಚಂದ್ರಶೇಖರ್ ರಾವ್ ಅವರ ಟಿಆರ್ ಎಸ್ ಪಕ್ಷವನ್ನು ಸೇರಿದರು. ವಿಧಾನಸಭೆ ಚುನಾವಣೆಯಲ್ಲಿ ಕೆ ಚಂದ್ರಶೇಖರ್ ರಾವ್ ಸ್ಪರ್ಧಿಸಿದ ಗೆದ್ದಿದ್ದರಿಂದ ಮೆಹಬೂಬಾ ನಗರ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು. ಟಿಆರ್ ಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಜಿತೇಂದ್ರ ರೆಡ್ಡಿ ಜಯ ಸಾಧಿಸಿದ್ದರು.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಜೈಪಾಲ್ ರೆಡ್ಡಿ ಅವರನ್ನು ಸೋಲಿಸಿ, ಟಿಆರ್ ಎಸ್ ನ ಎ ಪಿ ಜಿತೇಂದ್ರ ರೆಡ್ಡಿ ಗೆಲುವು ಸಾಧಿಸಿದರು. ಜಿತೇದ್ರ ರೆಡ್ಡಿ ಒಟ್ಟು 334228 ಮತಗಳನ್ನು ಪಡೆದರೆ, ಸಮೀಪದ ಪ್ರತಿಸ್ಪರ್ಧಿ ಜೈಪಾಲ್ ರೆಡ್ಡಿ 331638 ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿದ್ದರು. ಬಿಜೆಪಿ ಅಭ್ಯರ್ಥಿ ನಾಗಮ್ ಜನಾರ್ದನ ರೆಡ್ಡಿ 272791 ಮತ ಪಡೆದಿದ್ದರು.

Lok Sabha Elections 2019: Mahbubnagar LS constituency

2014 ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ 9,037 ನೋಟಾ ಮತಗಳು ಚಲಾವಣೆಯಗಿದ್ದವು. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ ಕೆಲ ಪಕ್ಷೇತರ ಅಭ್ಯರ್ಥಿಗಳು ಪಡೆದ ಮತಕ್ಕಿಂತ ನೋಟಾ ಮತವೇ ಹೆಚ್ಚಿದ್ದಿದ್ದು ಗಮನಿಸಬೇಕಾದ ಸಂಗತಿ. 2009 ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ ಚಂದ್ರಶೇಖರ್ ರಾವ್ 366569 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಅವರ ಸಮೀಪ ಪ್ರತಿಸ್ಪರ್ಧಿ ಡಿ ವಿಠ್ಠಲ್ ರಾವ್ 346385 ಮತಗಳನ್ನು ಪಡೆದಿದ್ದರು.

ಮುತ್ತಿನ ನಗರಿ ಹೈದರಾಬಾದ್: ಲೋಕಸಭಾ ಕ್ಷೇತ್ರ ಪರಿಚಯಮುತ್ತಿನ ನಗರಿ ಹೈದರಾಬಾದ್: ಲೋಕಸಭಾ ಕ್ಷೇತ್ರ ಪರಿಚಯ

ಹಾಲಿ ಸಂಸದ ಜಿತೇಂದ್ರ ರೆಡ್ಡಿ ಲೋಕಸಭೆಯಲ್ಲಿ ಇದುವರೆಗೂ 173 ಪ್ರಶ್ನೆಗಳನ್ನು ಕೇಳಿದ್ದು, 83 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಶೇ.86 ರಷ್ಟು ಹಾಜರಿ ಹೊಂದಿದ್ದಾರೆ.

English summary
Lok Sabha Elections 2019: Mahbubnagar is one of the most important Lok Sabha constituencies of Telangana state. Which has 17 Lok Sabha Constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X