• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತರ ಪ್ರದೇಶ ರಾಜಧಾನಿ ಲಕ್ನೊ ಲೋಕಸಭಾ ಕ್ಷೇತ್ರ ಪರಿಚಯ

|

ಐದು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಲಕ್ನೋ ಲೋಕಸಭಾ ಕ್ಷೇತ್ರ ಉತ್ತರ ಪ್ರದೇಶದ ಬಹುಮುಖ್ಯ ಕ್ಷೇತ್ರಗಳಲ್ಲೊಂದು. ಲಕ್ನೋ ಉತ್ತರ ಪ್ರದೇಶದ ರಾಜಧಾನಿಯೂ ಆಗಿರುವುದರಿಂದ ಈ ಕ್ಷೇತ್ರಕ್ಕೆ ಮತ್ತಷ್ಟು ಮಹತ್ವ.

1991 ರ ಆಚೆಯಿಂದಲೂ ಈ ಕ್ಷೇತ್ರ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿದೆ. ಪ್ರಸ್ತುತ ಕೇಂದ್ರ ಗೃಹ ಸಚಿವರಾಗಿರುವ ರಾಜನಾಥ್ ಸಿಂಗ್ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದರಿಂದ ಈ ಕ್ಷೇತ್ರಕ್ಕೆ ತನ್ನದೇ ಆದ ಮಹತ್ವವಿದೆ.

ಕ್ಷೇತ್ರ ಪರಿಚಯ: ಕೃಷ್ಣಾ ನದಿ ತಟದ ಕ್ಷೇತ್ರ ವಿಜಯವಾಡ

1999 ರಿಂದ 2004 ರವರೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೂ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

2014 ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿಂಗ್, 561106 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ರಿತಾ ಬಹುಗುಣ ಅವರು 272749 ಮತಗಳನ್ನು ಪಡೆದಿದ್ದರು. ಮೂರನೇ ಸ್ಥಾನ ಗೆದ್ದಿದ್ದ ನಕುಲ್ ದುಬೆ 64,449 ಮತಗಳನ್ನು ಪಡೆದಿದ್ದರು.

ಲಾಥೂರ್ ಲೋಕಸಭಾ ಕ್ಷೇತ್ರದ ಪರಿಚಯ

2009 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಲಾಲಜಿ ಟಂಡನ್ 2,04,028 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಎರಡನೇ ಸ್ಥಾನ ಗಳಿಸಿದ್ದ ರಿತಾ ಬಹುಗುಣ ಜೋಶಿ 1,63,127 ಮತಗಳನ್ನು ಪಡೆದಿದ್ದರು. ಮೂರನೇ ಸ್ಥಾನ ಗಳಿಸಿದ್ದ ಬಿಎಸ್ಪಿ ನಾಯಕ ಅಖಿಲೇಶ್ ಗುಪ್ತ 1,33,610 ಮತ ಗಳಿಸಿದ್ದರು.

2014 ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,949,956. ಇವರಲ್ಲಿ 1,052,171 ಪುರುಷರು, 897,785 ಮಹಿಳೆಯರು.

ಉತ್ತರ ಪ್ರದೇಶದ ಪಾರಂಪರಿಕ ತಾಣಗಳಲ್ಲಿ ವಾರಣಾಸಿ, ಆಗ್ರಾ ಜೊತೆ ಲಕ್ನೋ ಸಹ ಸೇರಿಕೊಳ್ಳುತ್ತದೆ. ಈ ಕ್ಷೇತ್ರದಲ್ಲಿ ರಾಮಾಯಣ ಮಹಾಕಾವ್ಯದ ಲಕ್ಷ್ಮಣ ವಾಸವಿದ್ದ ಎಂಬ ಕಾರಣಕ್ಕೆ ಈ ಕ್ಷೇತ್ರಕ್ಕೆ ಲಕನೌ, ಲಕ್ನೋ ಎಂಬ ಹೆಸರು ಬಂತು.

ಪಂಜಾಬಿನ ಪಟಿಯಾಲಾ ಲೋಕಸಭಾ ಕ್ಷೇತ್ರದ ಪರಿಚಯ

2011 ರ ಜನಗಣತಿಯ ಪ್ರಕಾರ ಲಕ್ನೋ ದ ಒಟ್ಟು ಜನಸಂಖ್ಯೆ 2,815,601. ಇವರಲ್ಲಿ 1,470,133 ಪುರುಷರಿದ್ದರೆ, 1,345,468 ಮಹಿಳೆಯರಿದ್ದಾರೆ. ಸಾಂಸ್ಕೃತಿಕ, ಐತಿಹಾಸಿಕ, ಪೌರಾಣಿಕ ಹಿರಿಮೆಯನ್ನು ಹೊಂದಿರುವ ಲಕ್ನೋದಲ್ಲಿ ಈ ಬಾರಿ ಯಾರು ಗೆಲುವು ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಲಕ್ನೋ ಲೋಕಸಭಾ ಕ್ಷೇತ್ರವು ಲಕ್ನೋ ಪೂರ್ವ, ಲಕ್ನೋ ಉತ್ತರ, ಲಕ್ನೋ ಪಶ್ಚಿಮ, ಲಕ್ನೋ ಕೇಂದ್ರ ಮತ್ತು ಲಕ್ನೋ ಕಂಟೋನ್ಮೆಂಟ್ ಎಂಬ ಐದು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.

1951ರಲ್ಲಿ ಕಾಂಗ್ರೆಸ್ ನಿಂದ ವಿಜಯ ಲಕ್ಷ್ಮಿ ಪಂಡಿತ್ ಗೆಲುವು ಸಾಧಿಸಿದ್ದರು. 1952-57ರವರೆಗೆ ಕಾಂಗ್ರೆಸ್ ಪಕ್ಷದ ಶಿಯೊರಜ್ವತಿ ನೆಹರೂ, ಕಾಂಗ್ರೆಸ್ ಪಕ್ಷದ ಪುಲಿನ್ ಬೆಹರಿ ಬ್ಯಾಜರ್ಜಿ 1957-62 ರವರೆಗೆ, ಕಾಂಗ್ರೆಸ್ ನವರೇ ಆದ ಬಿ ಕೆ ಧಾವನ್ 1962-67 ರವರೆಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿ ಗೆದ್ದಿದ್ದರು.

ನಂತರ 1967-71 ಸ್ವತಂತ್ರ ಅಭ್ಯರ್ಥಿ ಆನಂಯದ್ ನಾರಾಯಣ್ ಮುಲ್ಲಾ ಗೆಲುವು ಸಾಧಿಸಿದ್ದರು. 1971-77ರವರೆಗೆ ಕಾಂಗ್ರೆಸ್ ನ ಶೀಲಾ ಕೌಲ್ ಗೆದ್ದರು. 1977-80 ರಲ್ಲಿ ಭಾರತೀಯ ಲೋಕದಳದ ಎಚ್ ಎನ್ ಬಹುಗುಣ, 1980-89 ರವರೆಗೆ ಶೀಲಾ ಕೌಲ್(ಕಾಂಗ್ರೆಸ್), 1989-91ರವರೆಗೆ ಜನತಾದಳದ ಮಂಧಾತಾ ಸಿಂಗ್, ನಂತರ 1991ರಿಂದ 2009 ರವರೆಗೆ ಸತತ ಐದು ಬಾರಿ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. 2009-14 ರಲ್ಲಿ ಬಿಜೆಪಿಯ ಲಾಲ್ ಜೀ ಟಂಡನ್, 2014 ರಲ್ಲಿ ಹಾಲಿ ಸಂಸದ ರಾಜನಾಥ್ ಸಿಂಗ್ ಜಯಗಳಿಸಿದರು. 1957 ರಲ್ಲಿ ತಮ್ಮ 24 ನೇ ವಯಸ್ಸಿನಲ್ಲೇ ಆಗಿನ ಜನಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದರು ರಾಜನಾಥ್ ಸಿಂಗ್. ನಂತರ 1984 ರಲ್ಲಿ ಉತ್ತರ ಪ್ರದೇಶ ಬಿಜೆಪಿ ಯುವ ಘಟಕದ ಅಧ್ಯಕ್ಷರೂ ಆಗಿದ್ದರು. ಎರಡು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಿಂಗ್, 2005 ರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದರು. ಹಾಲಿ ಗೃಹಸಚಿವರೂ ಆಗಿರುವ ವರಾಜನಾಥ್ ಸಿಂಗ್ ಅವರೇ ಈ ಬಾರಿಯೂ ಲಕ್ನೋ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಈ ಕ್ಷೇತ್ರದಲ್ಲಿ 2014 ರಲ್ಲಿ ದಾಖಲಾದ ಒಟ್ಟು ಮತದಾನ 10,33,783. ಇವರಲ್ಲಿ ಪುರುಷ ಮತದಾರರು 582227 ಆದರೆ ಮಹಿಳಾ ಮತದಾರರು 451556.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
vaLok Sabha Elections 2019: Lucknow is one of the most important Lok Sabha constituencies of Uttar Pradesh. It is also the capital of Uttar Pradesh. UP has 80 Lok Sabha Constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more