ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4ನೇ ಹಂತದ ಲೋಕಸಮರ: ಎಲ್ಲೆಲ್ಲಿ ಘಟಾನುಘಟಿಗಳ ಕದನ

|
Google Oneindia Kannada News

ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ಸೋಮವಾರ(ಏಪ್ರಿಲ್ 29) ನಡೆಯಲಿದೆ. ಒಟ್ಟು 9 ರಾಜ್ಯಗಳ 71 ಕ್ಷೇತ್ರಗಳಲ್ಲಿ 302 ಲೋಕಸಭಾ ಸ್ಥಾನಗಳ ಭವಿಷ್ಯಕ್ಕಾಗಿ ಮತದಾನ ನಡೆಯಲಿದೆ.

ಒಟ್ಟು ಏಳು ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಏಪ್ರಿಲ್ 11 ಮೇ 19ರ ತನಕ ಮತದಾನ ನಿಗದಿಯಾಗಿದೆ. ಮೇ 6ರಂದು 5ನೇ ಹಂತ, ಮೇ 12ರಂದು 6ನೇ ಹಂತ ಮತ್ತು ಮೇ 19ರಂದು 7ನೇ ಹಂತದ ಚುನಾವಣೆ ನಡೆಯಲಿದೆ. ಮೇ 23ರಂದು ಫಲಿತಾಂಶ ಘೋಷಣೆಯಾಗಲಿದೆ.

ಲೋಕಸಭಾ ಚುನಾವಣೆ : ಏ.29ರಂದು 9 ರಾಜ್ಯದ, 71 ಕ್ಷೇತ್ರದಲ್ಲಿ ಮತದಾನಲೋಕಸಭಾ ಚುನಾವಣೆ : ಏ.29ರಂದು 9 ರಾಜ್ಯದ, 71 ಕ್ಷೇತ್ರದಲ್ಲಿ ಮತದಾನ

ಮೊದಲ ಮೂರು ಹಂತದ ಶೇಕಡಾವಾರು ಮತದಾನ ಉತ್ತಮವಾಗಿತ್ತು. ನಾಲ್ಕನೇ ಹಂತದಲ್ಲಿ ಬಿಹಾರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಲದ ಕೆಲವು ಕ್ಷೇತ್ರಗಳಲ್ಲಿ ಮತದಾನ ನಡೆಯಲಿವೆ.

ನಾಲ್ಕನೇ ಹಂತದ ಕಣದಲ್ಲಿ ಕನ್ಹಯ್ಯ ಕುಮಾರ್, ಗಿರಿರಾಜ್ ಸಿಂಗ್, ಉರ್ಮಿಳಾ ಮಾತೋಂಡ್ಕರ್, ಪೂನಂ ಮಹಾಜನ್, ಪ್ರಿಯಾ ದತ್, ಮಿಲಿಂದ್ ದಿಯೋರಾ, ಡಿಂಪಲ್ ಯಾದವ್, ನಕುಲ್ ನಾಥ್, ವೈಭವ್ ಗೆಲ್ಹೋಟ್ ಮುಂತಾದವರಿದ್ದಾರೆ

4ನೇ ಹಂತದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಆಸ್ತಿ ಮೌಲ್ಯ ಕೇವಲ 500 ರು4ನೇ ಹಂತದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಆಸ್ತಿ ಮೌಲ್ಯ ಕೇವಲ 500 ರು

ಪ್ರಮುಖ ಕ್ಷೇತ್ರಗಳು ಹೀಗಿವೆ:
ಮುಂಬೈ ಉತ್ತರ, ಮುಂಬೈ ದಕ್ಷಿಣ,ಕೇಂದ್ರಪರ,ಉನ್ನಾವೋ,ಅಸಾನ್ಸೋಲ್,ಕಾನ್ಪುರ್,ಅನಂತ್ ನಾಗ್,ಪಾಲ್ಘರ್,ಬೆಗುಸರಾಯಿ. ಈ ಕ್ಷೇತ್ರಗಳಲ್ಲಿ ಯಾರು ಯಾರು ಸ್ಪರ್ಧಿಸುತ್ತಿದ್ದಾರೆ ಎಂಬ ವಿವರ ಮುಂದಿದೆ...

ಮುಂಬೈ ಉತ್ತರ, ಮಹಾರಾಷ್ಟ್ರ

ಮುಂಬೈ ಉತ್ತರ, ಮಹಾರಾಷ್ಟ್ರ

-ಊರ್ಮಿಳಾ ಮಾತೋಂಡ್ಕರ್ (ಕಾಂಗ್ರೆಸ್) ವಿರುದ್ಧ ಗೋಪಾಲ್ ಚಿನ್ನಯ್ಯಶೆಟ್ಟಿ(ಬಿಜೆಪಿ) ಹಾಲಿ ಸಂಸದ.
17 ಸ್ಥಾನಗಳ ಪೈಕಿ ಮುಂಬೈ ಉತ್ತರ ಪ್ರಮುಖ ಕ್ಷೇತ್ರವಾಗಿದೆ. ಏಪ್ರಿಲ್ 29ರಂದು ಮತದಾನ ನಡೆಯಲಿದೆ. ನಟಿ ಕಮ್ ರಾಜಕಾರಣಿ ಊರ್ಮಿಳ ಅವರಿಗೆ ಟಿಕೆಟ್ ನೀಡುವ ಮೂಲಕ ಜನಪ್ರಿಯತೆ ಆಧಾರದ ಮೇಲೆ ಕಾಂಗ್ರೆಸ್ ಗೆಲ್ಲುವ ಕನಸು ಕಾಣುತ್ತಿದೆ.ಮೋದಿ ನಾಮ ಬಲ, ಅಭಿವೃದ್ಧಿ ಮಲಾಡ್ ಪಶ್ಚಿಮ, ಬೊರಿವಿಲಿ, ದಹಿಸಾರ್, ಚಾರ್ಕಾಪ್, ಕಂದಿವಿಲಿ ಪೂರ್ವ ಹಾಗೂ ಮಗಾಥಾನೆ 6 ವಿಧಾನಸಭಾ ಕ್ಷೇತ್ರಗಳನ್ನು ಮುಂಬೈ ಉತ್ತರ ಲೋಕಸಭಾ ಕ್ಷೇತ್ರ ಹೊಂದಿದೆ.

2014ರಲ್ಲಿ ಬಿಜೆಪಿಯ ಗೋಪಾ ಶೆಟ್ಟಿ ಅವರು ಕಾಂಗ್ರೆಸ್ಸಿನ ಸಂಜಯ್ ನಿರುಪಮ್ ಅವರು ಶೇ 47.18ಕ್ಕೂ ಅಧಿಕ ಮತಗಳಿಂದ ಸೋಲಿಸಿ ದಾಖಲೆ ಬರೆದಿದ್ದರು.

ಮುಂಬೈ ದಕ್ಷಿಣ, ಮಹಾರಾಷ್ಟ್ರ

ಮುಂಬೈ ದಕ್ಷಿಣ, ಮಹಾರಾಷ್ಟ್ರ

ಮಿಲಿಂದ್ ದಿಯೋರಾ (ಕಾಂಗ್ರೆಸ್) ವಿರುದ್ಧ ಅರವಿಂದ್ ಸಾವಂತ್ (ಶಿವಸೇನಾ)
ಮಾಜಿ ಕೇಂದ್ರ ಸಚಿವ ಮುಂಬೈ ಕಾಂಗ್ರೆಸ್ ಮುಖ್ಯಸ್ಥ ಮಿಲಿಂದ್ ದಿಯೋರಾ ವಿರುದ್ಧ ಶಿವಸೇನಾದ ಅರವಿಂದ್ ಸಾವಂತ್ ಅವರು ಎದುರಾಳಿಯಾಗಿದ್ದಾರೆ. 2004ರಿಂದ 2014ರ ತನಕ ಇಲ್ಲಿ ಮಿಲಿಂದ್ ಅವರು ಆಯ್ಕೆಯಾಗಿದ್ದಾರೆ. ಅದಕ್ಕೂ ಮುನ್ನ ಅವರ ತಂದೆ ಮುರಳಿ ದಿಯೋರಾ ಅವರು ಈ ಕ್ಷೇತ್ರದ ಸಂಸದರಾಗಿದ್ದರು.

ಆದರೆ. 2014ರಲ್ಲಿ ಶಿವಸೇನಾದ ಅರವಿಂದ್ ಸಾವಂತ್ ಅವರು 120,000 ಪ್ಲಸ್ ಮತಗಳ ಅಂತರದಿಂದ ಜಯಭೇರಿ ಬಾರಿಸಿದರು. ಎಂಎನ್ಎಸ್ ನ ಬಾಲ ನಂದಗಾಂವ್ಕರ್ ಅವರು ಶೇ 19.78ರಷ್ಟು ಮತ ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಹೀಗಾಗಿ, ಈ ಬಾರಿ ಕದನ ಕುತೂಹಲಕಾರಿಯಾಗಲಿದೆ.

ಕೇಂದ್ರಪರ, ಒಡಿಶಾ

ಕೇಂದ್ರಪರ, ಒಡಿಶಾ

ನವೀನ್ ಪಾಟ್ನಾಯಿಕ್ (ಬಿಜೆಡಿ) ವಿರುದ್ಧ ಬೈಜಯಂತ್ ಪಾಂಡಾ(ಬಿಜೆಪಿ)

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಅವರ ಒಂದು ಕಾಲ ಮಿತ್ರ ಬೈಜಯಂತ್ ಪಾಂಡಾ ನಡುವೆ ಕದನ ಇದಾಗಿದೆ. 1998ರಿಂದ ಈ ಕ್ಷೇತ್ರ ಬಿಜೆಡಿ ಹಿಡಿತದಲ್ಲಿದೆ. 2009ರಿಂದ ಪಾಂಡಾ ಈ ಕ್ಷೇತ್ರದ ಪ್ರತಿನಿಧಿಯಾಗಿದ್ದರು. ಈಗ ಬಿಜೆಪಿ ಸೇರಿದ್ದಾರೆ.

2014ರಲ್ಲಿ ಬಿಜೆಡಿಯಿಂದ ಸ್ಪರ್ಧಿಸಿದ್ದ ಪಾಂಡಾ ಅವರು, ಕಾಂಗ್ರೆಸ್ಸಿನ ಧರಣಿಧರ್ ನಾಯಕ್ ಅವರನ್ನು 2,09,108 ಮತಗಳು ಅಥವಾ ಶೇ 18.3ರಿಂದ ಸೋಲಿಸಿದ್ದರು.

ಅನಂತ್ ನಾಗ್, ಜಮ್ಮು ಮತ್ತು ಕಾಶ್ಮೀರ

ಅನಂತ್ ನಾಗ್, ಜಮ್ಮು ಮತ್ತು ಕಾಶ್ಮೀರ

ಮೆಹಬೂಬಾ ಮಫ್ತಿ (ಪಿಡಿಪಿ), ಹಸ್ನಾಯಿನ್ ಮಸೂದಿ (ಎನ್ ಸಿ) ಹಾಗೂ ಗುಲಾಂ ಅಹ್ಮದ್ ಮಿರ್ (ಕಾಂಗ್ರೆಸ್)

ಈ ಒಂದು ಕ್ಷೇತ್ರಕ್ಕೆ ಮೂರು ಬಾರಿ ಮತದಾನವಾಗಲಿದೆ. ಕಳೆದ ಹಂತದಲ್ಲಿ ಶೇ 15ರಷ್ಟು ಮಾತ್ರ ಮತದಾನವಾಗಿತ್ತು. ಮಾಜಿ ಸಿಎಂ, ಹಾಲಿ ಸಂಸದ ಮೆಹಬೂಬಾ ಅವರನ್ನು ಸೋಲಿಸಲು ಎನ್ ಸಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭಾರಿ ಪ್ರಯತ್ನ ಪಡಬೇಕು. 1999ರಲ್ಲಿ ಪಿಡಿಪಿ ಸ್ಥಾಪನೆಯಾದ ಬಳಿಕ ನಾಲ್ಕು ಜಿಲ್ಲೆಗಳ ಮೇಲೆ ಪಿಡಿಪಿ ಹಿಡಿತ ಹೊಂದಿದೆ. 2004,2009ರಲ್ಲಿ ಜಯ ಗಳಿಸಿದ್ದರೂ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಬೇಕಿದೆ.

ಉನ್ನಾವೋ ಕ್ಷೇತ್ರ, ಉತ್ತರಪ್ರದೇಶ

ಉನ್ನಾವೋ ಕ್ಷೇತ್ರ, ಉತ್ತರಪ್ರದೇಶ

ಸಾಕ್ಷಿ ಮಹಾರಾಜ್ (ಬಿಜೆಪಿ) ವಿರುದ್ಧ ಅನ್ನು ಟಂಡನ್ (ಕಾಂಗ್ರೆಸ್) ಹಾಗೂ ಪೂಜಾ ಪಾಲ್ (ಎಸ್ಪಿ)


ಬಿಜೆಪಿ, ಕಾಂಗ್ರೆಸ್ ಹಾಗೂ ಎಸ್ಪಿ ಅಭ್ಯರ್ಥಿ ನಡುವೆ ತ್ರಿಕೋನ ಸ್ಪರ್ಧೆ ಇಲ್ಲಿದೆ. 2014ರಲ್ಲಿ ಬಿಜೆಪಿಯ ಸಾಕ್ಷಿ ಮಹಾರಾಜ್ ಅವರು ಎಸ್ಪಿಯ ಅರುಣ್ ಶಂಕರ್ ವಿರುದ್ಧ 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಸಾಕ್ಷಿ ಮಹಾರಾಜ್ 5.18 ಲಕ್ಷ ಮತ(43.18%) ಗಳಿಸಿದ್ದರು, ಅರುಣ್ 2.08 ಲಕ್ಷ ಮತ (17.37%) ಗಳಿಸಿ ಸೋಲು ಕಂಡಿದ್ದರು.

ಅಸಾನ್ಸೋಲ್, ಪಶ್ಚಿಮ ಬಂಗಾಲ

ಅಸಾನ್ಸೋಲ್, ಪಶ್ಚಿಮ ಬಂಗಾಲ

ಬಾಬುಲ್ ಸುಪ್ರಿಯೋ (ಬಿಜೆಪಿ) ವಿರುದ್ಧ ಮೂನ್ ಮೂನ್ ಸೇನ್ (ತೃಣಮೂಲ ಕಾಂಗ್ರೆಸ್)

ಗಾಯಕ ಕಮ್ ಸಂಸದ ಬಾಬುಲ್ ಸುಪ್ರಿಯೋ ಅವರು ಹಾಲಿ ಸಂಸದರಾಗಿದ್ದು, ಮರು ಆಯ್ಕೆಯನ್ನು ತಡೆಯಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಟಿ ಕಮ್ ರಾಜಕಾರಣಿ ಮೂನ್ ಮೂನ್ ಸೇನ್ ಅವರನ್ನು ಕಣಕ್ಕಿಳಿಸಿದ್ದಾರೆ. 2014ರಲ್ಲಿ ಬಂಕುರಾದಲ್ಲಿ 9 ಬಾರಿ ಸಂಸದ ಬಸುದೇಬ್ ಅಚಾರಿಯಾ ಅವರನ್ನು ಸೇನ್ ಸೋಲಿಸಿದ್ದರು.

ಇನ್ನು ಸುಪ್ರಿಯೋ ಅವರು 2 ಬಾರಿ ಸಂಸದ ಸಿಪಿಐಎಂನ ಬನ್ಸಾ ಗೋಪಾಲ್ ಚೌಧರಿ ಅವರನ್ನು ಸೋಲಿಸಿ ಸಂಸದರಾಗಿದ್ದರು.

ಕಾನ್ಪುರ್, ಉತ್ತರಪ್ರದೇಶ

ಕಾನ್ಪುರ್, ಉತ್ತರಪ್ರದೇಶ

ಶ್ರೀಪ್ರಕಾಶ್ ಜೈಸ್ವಾಲ್ (ಕಾಂಗ್ರೆಸ್) ವಿರುದ್ಧ ಸತ್ಯದೇವ ಪಚೌರಿ(ಬಿಜೆಪಿ) ಹಾಗೂ ರಾಮ್ ಕುಮಾರ್ (ಎಸ್ ಪಿ)

ಬಿಜೆಪಿ ಹಿರಿಯ ನಾಯಕ, ಹಾಲಿ ಸಂಸದ ಮುರಳಿ ಮನೋಹರ್ ಜೋಶಿ ಅವರ ಬದಲಿಗೆ ಸತ್ಯದೇವ್ ಪಚೌರಿ ಅವರಿಗೆ ಟಿಕೆಟ್ ಸಿಕ್ಕಿದೆ. ಕಳೆದ ಬಾರಿ ಜೋಶಿ ವಿರುದ್ಧ ಸೋಲು ಕಂಡಿದ್ದ ಹಿರಿಯ ಕಾಂಗ್ರೆಸ್ಸಿಗ, ಮೂರು ಬಾರಿ ವಿಜೇತ ಶ್ರೀಪ್ರಕಾಶ್ ಜೈಸ್ವಾಲ್ ಅವರು ಈ ಬಾರಿ ಮೇಲುಗೈ ಸಾಧಿಸುವ ನಿರೀಕ್ಷೆ ಹೊಂದಿದ್ದಾರೆ. ಆದರೆ, ಎಸ್ ಪಿ -ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿ ರಾಮ್ ಕುಮಾರ್ ಕಣದಲ್ಲಿರುವುದರಿಂದ ತ್ರಿಕೋನ ಸ್ಪರ್ಧೆ ಸಾಧ್ಯತೆ ಉಂಟಾಗಿದೆ.

ಬೆಗುಸರಾಯ್, ಬಿಹಾರ

ಬೆಗುಸರಾಯ್, ಬಿಹಾರ

ಗಿರಿರಾಜ್ ಸಿಂಗ್ (ಬಿಜೆಪಿ) ವಿರುದ್ಧ ತನ್ವೀರ್ ಹಸನ್ (ಅರ್ ಜೆಡಿ) ವಿರುದ್ಧ ಕನ್ಹಯ್ಯ ಕುಮಾರ್ (ಸಿಪಿಐ)

English summary
The fourth phase of the Lok Sabha Elections 2019 will take place on April 29 to choose 71 members across eight states. With the votes being already cast for 302 seats, it will be interesting how the electorate casts their vote in the second half of General Elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X