ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಗ್ಗೆ ಯಾರು, ಏನಂದರು?

|
Google Oneindia Kannada News

Recommended Video

Lok Sabha Elections 2019: ಬಿಜೆಪಿಯಿಂದ ಬಿಡುಗಡೆಯಾದ ಪ್ರಣಾಳಿಕೆ ಬಗ್ಗೆ ರಾಜಕೀಯ ನಾಯಕರ ಪ್ರತಿಕ್ರಿಯೆ

ನವದೆಹಲಿ, ಏಪ್ರಿಲ್ 08: ಬಿಜೆಪಿ ತನ್ನ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದ್ದು, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಡುಗಡೆಯಾದ ಪ್ರಣಾಳಿಕೆಯನ್ನು ಸಂಕಲ್ಪ ಪತ್ರ ಎಂದು ಕರೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಾಂಗ್ರೆಸ್ ಇದನ್ನು ಜುಮ್ಲಾ ಪ್ರಣಾಳಿಕೆ ಎಂದು ಕರೆದಿದೆ. ದೇಶವನ್ನು ಅಭಿವೃದ್ಧಿಶಿಲ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಬದಲಿಸುವುದೇ ನಮ್ಮ ಮೂಲ ಉದ್ದೇಶ ಎಂದು ಪ್ರಣಾಳಿಕೆ ಬಿಡುಗಡೆಯ ನಂತರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬಿಜೆಪಿ ಪ್ರಣಾಳಿಕೆ LIVE: ಏನಿದೆ 'ಸಂಕಲ್ಪ ಪತ್ರ'ದಲ್ಲಿ? ಬಿಜೆಪಿ ಪ್ರಣಾಳಿಕೆ LIVE: ಏನಿದೆ 'ಸಂಕಲ್ಪ ಪತ್ರ'ದಲ್ಲಿ?

48 ಪುಟಗಳ ಪ್ರಣಾಳಿಕೆಯಲ್ಲಿ ಯಾವುದೇ ಹೊಸ ಘೋಷಣೆ ಇಲ್ಲವಾದರೂ, ಹಳೆಯ ಯೋಜನೆಗಳಲ್ಲೇ ಕೆಲವು ಸುಧಾರಣೆಗಳನ್ನು ಬಿಜೆಪಿ ಮಾಡಿದಂತಿದೆ. ಗೃಹಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಿದ್ಧವಾದ ಈ ಪ್ರಣಾಳಿಕೆಯನ್ನು ಪ್ರಧಾನಿ ಮೋದಿ, ಶಾಸನ ಪತ್ರ, ಸಮೃದ್ಧಿಯ ಪತ್ರ, ರಾಷ್ಟ್ರದ ಭದ್ರತೆಯ ಪತ್ರ ಎಂದಿದ್ದಾರೆ. ಈ ಕುರಿತು ನಾಯಕರ ಪ್ರತಿಕ್ರಿಯೆ ಹೇಗಿತ್ತು, ನೋಡಿ...

Array

ರಾಜನಾಥ್ ಸಿಂಗ್

ಭಯೋತ್ಪಾದನೆಯ ಬಗ್ಗೆ ನಾವು ಶೂನ್ಯ ಸಂವೇದನೆಯನ್ನು ಹೊಂದಿದ್ದೇವೆ. ಭಾರತ ಭದ್ರವಾಗಿದ್ದರೆ ಮತ್ತಷ್ಟು ಸಾಧನೆ ಸಾಧ್ಯ. ನಮಗೆ ಎಂದಿಗೂ ದೇಶ ಮೊದಲು- ರಾಜನಾಥ್ ಸಿಂಗ್, ಗೃಹಸಚಿವ, ಬಿಜೆಪಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ

ಬಿಜೆಪಿ ಪ್ರಣಾಳಿಕೆ: ರಸ್ತೆ, ರೈಲು ಅಭಿವೃದ್ಧಿಗೆ ಭರಪೂರ ಘೋಷಣೆಬಿಜೆಪಿ ಪ್ರಣಾಳಿಕೆ: ರಸ್ತೆ, ರೈಲು ಅಭಿವೃದ್ಧಿಗೆ ಭರಪೂರ ಘೋಷಣೆ

Array

ಸಂಜಯ್ ಝಾ

ಎಂಥ ವಿಪರ್ಯಾಸ! ಮೂಲಸೌಕರ್ಯಕ್ಕೆ 100 ಕೋಟಿ ರೂ!ಇದು ವೈಬ್ರಂಟ್ ಗುಜರಾತ್ 2.0. ನಾವು ಜೋಕರ್ ಗಳ ಕೈಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದೇವೆ.

ಬಿಜೆಪಿ ಚುನಾವಣಾ ಪ್ರಣಾಳಿಕೆ: ಕೃಷಿ ಕ್ಷೇತ್ರಕ್ಕೆ ಭರವಸೆಗಳೇನು?ಬಿಜೆಪಿ ಚುನಾವಣಾ ಪ್ರಣಾಳಿಕೆ: ಕೃಷಿ ಕ್ಷೇತ್ರಕ್ಕೆ ಭರವಸೆಗಳೇನು?

ಶೋಭಾ ಕರಂದ್ಲಾಜೆ

ಕರಾವಳಿ ಕರ್ನಾಟಕದ ಮೀನುಗಾರರಿಗೆ ಈ ಪ್ರಣಾಳಿಕೆ ಭರವಸೆ ನೀಡಿದೆ. ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಕರಾವಳಿಯ ಮೀನುಗಾರರಿಗೆ 10,000 ಕೋಟಿ ರೂ.ವರೆಗೆ ಅನುದಾನ ನೀಡಲಿದೆ- ಶೋಭಾ ಕರಂದ್ಲಾಜೆ, ಉಡುಪಿ-ಚಿಕ್ಕಮಗಳೂರು ಸಂಸದೆ.

ಕರ್ನಾಟಕ ಕಾಂಗ್ರೆಸ್

ಬಿಜೆಪಿಯ ಇಂದಿನ ಪ್ರಣಾಳಿಕೆಯನ್ನು ಕೇಳಿಸಿಕೊಳ್ಳುತ್ತಿರುವುದು ಬಿಜೆಪಿ ಜನರಿಗೆ ಯಾವ ಹೊಸ ಯೋಜನೆ ಘೋಷಿಸುತ್ತಾರೆ ಎಂಬ ನಿರೀಕ್ಷಿಯಿಂದ ಅಲ್ಲ.

ಬದಲಿಗೆ ಅವರು ಎಷ್ಟು ಸುಳ್ಳು ಹೇಳುತ್ತಾರೆ ಎಂದು ತಿಳಿದುಕೊಳ್ಳಲು ಇವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾರೆ ಅಷ್ಟೇ- ಕರ್ನಾಟಕ ಕಾಂಗ್ರೆಸ್

ತೇಜಸ್ವಿ ಸೂರ್ಯ

ನಾವು ಮುಂದಿನ ಐದು ವರ್ಷಗಳಲ್ಲಿ ಮೆಟ್ರೋ ಸಂಪರ್ಕವನ್ನು ಹೊಂದಿದ ಐವತ್ತು ಸಿಟಿಗಳನ್ನು ಹೊಂದಿರುತ್ತೇವೆ.ಗ್ಯಾಸ್ ಗ್ರಿಡ್, ವಾಟರ್ ಗ್ರಿಡ್, ಐ ವೇಸ್ ಮತ್ತು ಪ್ರಾದೇಶಿಕ ಏರ್ ಪೋರ್ಟ್ ಗಳನ್ನು ನಿರ್ಮಿಸುತ್ತೇವೆ. 2024 ರ ಹೊತ್ತಿಗೆ ಪ್ರತಿ ಮನೆಗೂ ನೀರು ನೀಡುವ ನಳ್ ಸೇ ಜಲ್ ಯೋಜನೆ ಜಾರಿಗೆ ತರುತ್ತೇವೆ. ಬಿಜೆಪಿ ತನ್ನ ಸಂಕಲ್ಪ ಪತ್ರದ ಮೂಲಕ ಹೊಸ ಭಾರತವನ್ನು ಕಟ್ಟಲು ಐತಿಹಾಸಿಕ ಪ್ರಯತ್ನ ಮಾಡಿದೆ- ತೇಜಸ್ವಿ ಸೂರ್ಯ

ಸಿದ್ದರಾಮಯ್ಯ

ನರೇಂದ್ರ ಮೋದಿಯವರು ತಮ್ಮ 5 ವರ್ಷಗಳ ವೈಫಲ್ಯವನ್ನು ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಹೂತಿಟ್ಟು, ಅಲ್ಲಿ ನೆಮ್ಮದಿಯಾಗಿದ್ದ ರಾಮನನ್ನು ಕರೆದುಕೊಂಡು ಚುನಾವಣಾ ಪ್ರಚಾರಕ್ಕೆ ಹೊರಟಿದ್ದಾರೆ.

ನರೇಂದ್ರ ಮೋದಿ ಅವರೇ, ಇನ್ನೆಷ್ಟು ಕಾಲ ಜನರ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡುತ್ತೀರ? 5 ವರ್ಷದಲ್ಲಿ ಒಮ್ಮೆಯಾದರೂ ಮಂದಿರ ನೆನಪಾಗಿರಲಿಲ್ಲವೇ?- ಸಿದ್ದರಾಮಯ್ಯ, ಕರ್ನಾಟಕದ ಮಾಜಿ ಮುಖ್ಯಮಂತ್ರಿ

ಸುರೇಶ್ ಪ್ರಭು

ಆಧುನಿಕ ತಂತ್ರಜ್ಞಾನದ ಮೂಲಕ ಸೇನೆಯ ಬಲವನ್ನು ಹೆಚ್ಚಿಸುವುದರಿಂದ ರಾಷ್ಟ್ರದ ಭದ್ರತೆಯೂ ಹೆಚ್ಚಾಗಲಿದೆಯಲ್ಲದೆ, ಭಯೋತ್ಪಾದನೆಯ ನಿಯಂತ್ರಣಕ್ಕೆ ಬರಲಿದೆ. ಈಶಾನ್ಯ ರಾಜ್ಯದಿಂದ ಅಕ್ರಮವಾಗಿ ನುಸುಳುವವರನ್ನೂ ತಡೆಯಲು ಪರಿಣಾಮಕಾರಿ ಹಾದಿ ಹುಡಿದ್ದೇವೆ- ಸುರೇಶ್ ಪ್ರಭು, ಬಿಜೆಪಿ ಮುಖಂಡ

English summary
Lok Sabha elections 2019: Leaders' reaction on BJP manifesto, which is released today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X