ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಪ್ರಣಾಳಿಕೆ ಮುಖ್ಯಾಂಶ ತಿಳಿಯಲು ಕೆಪಿಸಿಸಿ ಟ್ವೀಟ್ ನೋಡಿ

|
Google Oneindia Kannada News

ಮಾಜಿ ವಿತ್ತ ಸಚಿವ ಪಿ ಚಿದಂಬರಂ, ದೇಶ ಕಂಡಿರುವ ಸಮರ್ಥ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮುಂತಾದ ಹಿರಿಯ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷವು ಲೋಕಸಭೆ ಚುನಾವಣೆ 2019ಕ್ಕಾಗಿ ತನ್ನ ಪ್ರಣಾಳಿಕೆ, ಆಶ್ವಾಸನೆಗಳನ್ನು ಇಂದು ಪ್ರಕಟಿಸಿದೆ.

ನಿರುದ್ಯೋಗ, ಮಹಿಳಾ ಸುರಕ್ಷತೆ, ರೈತರ ಸಮಸ್ಯೆ ಚುನಾವಣೆ ವಿಷಯಗಳಾಗಿದ್ದು, ಸಮಸ್ಯೆ ನಿವಾರಣೆಗೆ ಸೂಕ್ತ ಪರಿಹಾರ ಒದಗಿಸಲು ಕಾಂಗ್ರೆಸ್ ಸಿದ್ಧ, 'ಹಮ್ ನಿಭಾಯೆಂಗೆ' ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದೇಶದ ಹೆಣ್ಣುಮಕ್ಕಳ ಶೈಕ್ಷಣಿಕ ಸಾಮರ್ಥ್ಯ ಹೆಚ್ಚಿಸಲು ರಾಷ್ಟ್ರದ ಒಟ್ಟು ಜಿಡಿಪಿಯ 6% ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡಲಿದೆ.

ಕಾಂಗ್ರೆಸ್ ಪ್ರಣಾಳಿಕೆ LIVE: ಯಾರಿಗೆ ಮೊದಲ ಆದ್ಯತೆ?ಕಾಂಗ್ರೆಸ್ ಪ್ರಣಾಳಿಕೆ LIVE: ಯಾರಿಗೆ ಮೊದಲ ಆದ್ಯತೆ?

2014 ರಲ್ಲಿ ಮೋದಿಯವರು ನೀಡಿದ ಭರವಸೆಗಳೆಲ್ಲವೂ ಮೂಲೆ ಸೇರಿವೆ. ವಾಸ್ತವದಲ್ಲಿ ಪ್ರಚಾರ ಮಂತ್ರಿ ಆಗಿರುವ ಇವರು ಒಂದೇ ಸುಳ್ಳನ್ನು ನೂರಕ್ಕಿಂತ ಹೆಚ್ಚು ಬಾರಿ ಹೇಳುತ್ತಿದ್ದು ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ದಿನೇ ದಿನೇ ಅಪಾಯಕ್ಕೆ ದೂಡುತ್ತಿದ್ದಾರೆ ಎಂದು ಕೆಪಿಸಿಸಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಸರಣಿ ಟ್ವೀಟ್ ಮಾಡಿದೆ.

ಐದು ಅಂಶಗಳಿಗೆ ಆದ್ಯತೆ ನೀಡಿರುವ ಪ್ರಣಾಳಿಕೆ

ಐದು ಅಂಶಗಳಿಗೆ ಆದ್ಯತೆ ನೀಡಿರುವ ಪ್ರಣಾಳಿಕೆ

'ಹಮ್ ನಿಭಾಯೇಂಗೆ' ಹೆಸರಿನಲ್ಲಿ ಪ್ರಕಟವಾಗಿರುವ ಕಾಂಗ್ರೆಸ್ ಪ್ರಣಾಳಿಕೆಯು ಐದು ಪ್ರಮುಖ ಅಂಶಗಳ ಮೇಲೆ ಹೆಚ್ಚಿನ ಗಮನ ಹರಿಸಿದೆ. ಬಡತನ ನಿರ್ಮೂಲನೆ, ನಿರುದ್ಯೋಗ, ಮಹಿಳಾ ಸುರಕ್ಷತೆ, ರೈತರ ಸಮಸ್ಯೆ, ಶಿಕ್ಷಣ ಪ್ರಮುಖ ವಿಷಯವಾಗಿವೆ. ಇದರ ಜೊತೆಗೆ ವಾರ್ಷಿಕ 72 ಸಾವಿರ ರು ನೀಡುವ ನ್ಯಾಯ್ ಯೋಜನೆ ಬಗ್ಗೆ ಕೂಡಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಸ್ತಾಪಿಸಿದರು.

ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೃಷಿ ಬಿಕ್ಕಟ್ಟು ನಿವಾರಣೆಗಾಗಿ, ಆಯಾ ಭಾಗದಲ್ಲಿ ರೈತರು ಬೆಳೆವ ಬೆಳೆಗೆ ಪೂರಕವಾಗಿ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು. ಕನಿಷ್ಠ ಬೆಂಬಲ ಬೆಲೆ ನಿಗದಿ, ಕೃಷಿ ಪೂರಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು

ಒಂದು ವರ್ಷದಿಂದ ಅಳೆದು ತೂಗಿ ಸಿದ್ಧಪಡಿಸಿದ ಪ್ರಣಾಳಿಕೆ

ಒಂದು ವರ್ಷದಿಂದ ಅಳೆದು ತೂಗಿ ಸಿದ್ಧಪಡಿಸಿದ ಪ್ರಣಾಳಿಕೆ ಇದಾಗಿದೆ. 121 ಸಾರ್ವಜನಿಕ ಸಭೆ, ಕೈಗಾರಿಕಾ ವಲಯದ ತಜ್ಞರ ಜತೆ 53 ಚರ್ಚೆ, 24 ರಾಜ್ಯ, 3 ಕೇಂದ್ರಾಡಳಿತ ಪ್ರದೇಶ, 12 ದೇಶಗಳ ವರದಿ ಅಧ್ಯಯನ ಮಾಡಿ ಈ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ

ಲೋಕಸಭೆ ಚುನಾವಣೆಗಾಗಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಲೈವ್ ವಿಡಿಯೋ ಪ್ರಸಾರ

ಬಡವರಿಗೆ 72,000 ರು ನೀಡಲು ಸಾಧ್ಯವಿಲ್ಲವೆ

ಮೋದಿ ಅವರು ತಮ್ಮ ಗೆಳೆಯರಿಗೆ 30,000 ಕೋಟಿ ರು ನೀಡಬಹುದು, ನಾವು ಶೇ 20ರಷ್ಟಿರುವ ಬಡವರಿಗೆ ವಾರ್ಷಿಕ 72,000 ರು ನೀಡಲು ಸಾಧ್ಯವಿಲ್ಲವೇ

ಮೋದಿ ಸರ್ಕಾರದ ಜಿಎಸ್ಟಿ ತೆಗೆದು ಹಾಕಲಾಗುವುದು

ಮೋದಿ ಸರ್ಕಾರದಿಂದ ಜಾರಿಗೆ ಬಂದಿರುವ ಜಿಎಸ್ಟಿ ಎಂಬ ಗಬ್ಬರ್ ಸಿಂಗ್ ಟ್ಯಾಕ್ಸ್ ತೆಗೆದು ಹಾಕಲಾಗುವುದು. ಜನರಿಗೆ ತೀವ್ರವಾಗಿ ತೊಂದರೆಯಾಗಿದ್ದು, ಈ ಅವ್ಯವಸ್ಥೆಯನ್ನು ಸರಿಪಡಿಸಲಾಗುವುದು.

ಆರ್ಥಿಕ ಅಪರಾಧಿಗಳ ಬಗ್ಗೆ ರಾಹುಲ್ ಗಾಂಧಿ

ನೀರವ್ ಮೋದಿ, ಮೆಹುಲ್ ಚೋಕ್ಸಿ ಮುಂತಾದ ಆರ್ಥಿಕ ಅಪರಾಧಿಗಳು ದೇಶ ಬಿಟ್ಟು ಓಡಿ ಹೋಗುತ್ತಿದ್ದರೂ ಕೇಂದ್ರ ಸರ್ಕಾರ ಸುಮ್ಮನೆ ನೋಡುತ್ತಿತ್ತು. ರೈತರು ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಸಾಲ ಮನ್ನಾ ಮಾಡಲಾಗಿದೆ. ಸಾಲ ಪಾವತಿಸದ ರೈತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇಲ್ಲ.

ಪ್ರಣಾಳಿಕೆ ಬಗ್ಗೆ ರಾಜೀವ್ ಗೌಡರಿಂದ ಮಾತು

ಸುಮಾರು ಒಂದು ವರ್ಷದ ಕಾಲ ಸುದೀರ್ಘವಾಗಿ ನಾವು ತಜ್ಞರೊಂದಿಗೆ ಸೇರಿ, ಸಾವಿರಾರು ಜನರ ಅಭಿಪ್ರಾಯವನ್ನು ಪಡೆದುಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಈ ಪ್ರಣಾಳಿಕೆಯನ್ನು ರೂಪಿಸಿದ್ದೇವೆ

English summary
Lok sabha elections 2019: Follow KPCC tweets to get more information and highlights on Congress Manifesto
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X