ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನೌಜ್ ಲೋಕಸಭಾ ಕ್ಷೇತ್ರ: ಈ ಬಾರಿ ಗೆಲುವು ಯಾರಿಗೆ?

|
Google Oneindia Kannada News

ಉತ್ತರ ಪ್ರದೇಶದ ಅತ್ಯಂತ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಕನೌಜ್ ಸಹ ಒಂದು. ಪುರಾಣಗಳಲ್ಲಿ ಕನ್ಯಕುಬ್ಜ್ ಎಂದು ಈ ನಗರವನ್ನು ಕರೆಯಲಾಗುತ್ತಿತ್ತು. ಒಂಬತ್ತನೇ ಶತಮಾನದಲ್ಲಿ ಮಿಹಿರಾ ಭೋಜಾ ಅವರ ಕಾಲದಲ್ಲಿ ಈ ನಗರನ್ನು ಮಹೋದಯ ಎಂದೂ ಕರೆಯಲಾಗುತ್ತಿತ್ತು.

ಪ್ರಸ್ತುತ ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ಅವರು ಸಂಸದರಾಗಿದ್ದು, 2019 ರ ಲೋಕಸಭಾ ಚುನಾವಣೆಯಲ್ಲಿ ಅವರ ಪತಿ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕ್ಷೇತ್ರ ಪರಿಚಯ: ಕೃಷ್ಣಾ ನದಿ ತಟದ ಕ್ಷೇತ್ರ ವಿಜಯವಾಡಕ್ಷೇತ್ರ ಪರಿಚಯ: ಕೃಷ್ಣಾ ನದಿ ತಟದ ಕ್ಷೇತ್ರ ವಿಜಯವಾಡ

ಡಿಂಪಲ್ ಯಾದವ್ ಅವರು ಲೋಕಸಭಾ ಚುನಾವನೆಗೆ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿರುವ ಕಾರಣ, ಈ ಕ್ಷೇತ್ರದಿಂದ ಅಖಿಲೇಶ್ ಯಾದವ್ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ 2014 ರಲ್ಲಿ ಡಿಂಪಲ್ ಯಾದವ್ ಕೇವಲ 19,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

Lok Sabha Elections 2019: Kannuaj LS constituency

1998 ರಲ್ಲಿ ಎಸ್ಪಿಯ ಪ್ರದೀಪ್ ಕುಮಾರ್ ಅವರು ಈ ಕ್ಷೇತ್ರದಿಂದ ಗೆಲುವು ಸಾಧಿಸಿದಾಗಿನಿಂದಲೂ ಇದು ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿದೆ.

ಅಕಸ್ಮಾತ್ ಈ ಕ್ಷೇತ್ರದಲ್ಲಿ ಅಖಿಲೇಶ್ ಯಾದವ್ ಕಣಕ್ಕಿಳಿದರೂ ಗೆಲ್ಲುವುದು ಸುಲಭವಿಲ್ಲ. ಏಕೆಂದರೆ 2014ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ತೀರಾ ಪ್ರಯಾಸದ ಗೆಲುವು ಸಾಧಿಸಿತ್ತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಸರ್ಕಾರವಿದ್ದರೂ ಗೆಲುವು ಸುಲಭವಾಗಿರಲಿಲ್ಲ. ಈ ಬಾರಿ ಎಸ್ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡಿರುವುದರಿಂದ ಸಮಾಜವಾದಿ ಪಕ್ಷಕ್ಕೆ ಸಹಾಯವಾಗಬಹುದಾದರೂ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಈ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸಲಿದ್ದಾರೆ ಎಂಬುದು ಕುತೂಹಲದ ಪ್ರಶ್ನೆಯಾಗಿ ಉಳಿದಿದೆ.

ಲಾಥೂರ್ ಲೋಕಸಭಾ ಕ್ಷೇತ್ರದ ಪರಿಚಯ ಲಾಥೂರ್ ಲೋಕಸಭಾ ಕ್ಷೇತ್ರದ ಪರಿಚಯ

ಕನೌಜ್ ಅನ್ನು ಪ್ರಾಚೀನ ಬೌದ್ಧ ಸಾಹಿತ್ಯದಲ್ಲಿ ಕನ್ನಕುಜ ಎಂದು ಕರೆಯಲಾಗಿದೆ. ಮಹಾಭಾರತ, ರಾಮಾಯಣಗಳ ಸಮಯದಲ್ಲೂ ಈ ನಗರ ಪ್ರಸಿದ್ಧಿ ಪಡೆದಿತ್ತು ಎಂಬ ಉಲ್ಲೇಖಗಳು ಸಿಗುತ್ತವೆ.

Lok Sabha Elections 2019: Kannuaj LS constituency

1018 ರಲ್ಲಿ ಸುಲ್ತಾನ್ ಮಹಮ್ಮದ್ ಗಜ್ನಿ ಇದನ್ನು ವಶಪಡಿಸಿಕೊಂಡಿದ್ದ. ನಂತರ ಬ್ರಿಟಿಶ್ ಆಳ್ವಿಕೆಯ ಸಮಯದಲ್ಲಿ ಈ ನಗರವನ್ನು ಕ್ಯಾನೋಡ್ಜ್ ಎಂದು ಕರೆಯಲಾಗುತ್ತಿತ್ತು.

ಕನೌಜ್ ಲೋಕಸಭಾ ಕ್ಷೇತ್ರ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಛಿಬ್ರಮೌ, ತಿರ್ವಾ, ಕನೌಜ್, ಬಿಧುನಾ, ರಸುಲಾಬಾದ್ ಈ ಐದು ವಿಧಾನಸಭಾ ಕ್ಷೇತ್ರಗಳು.

ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಪರಿಚಯಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಪರಿಚಯ

1967-71 ರಲ್ಲಿ ಈ ಕ್ಷೇತ್ರದಿಂದ ಸಂಯುಕ್ತ ಸೋಶಿಯಲಿಸ್ಟ್ ಪಕ್ಷದ ರಾಮ ಮನೋಹರ್ ಲೋಹಿಯಾ ಗೆದ್ದರು. 1971-77 ರಲ್ಲಿ ಕಾಂಗ್ರೆಸ್ ನ ಸತ್ಯ ನಾರಾಯನ ಮಿಶ್ರಾ,1977-80 ರಲ್ಲಿ ಜನತಾ ಪಕ್ಷದ ರಾಮ್ ಪ್ರಕಾಶ್ ತ್ರಿಪಾಠಿ, 1980-84 ರಲ್ಲಿ ಜನತಾದಳದ ಛೋಟೆ ಸಿಂಗ್ ಯಾದವ್, 1984-89 ರಲ್ಲಿ ಕಾಂಗ್ರೆಸ್ ನ ಶೀಲಾ ದೀಕ್ಷಿತ್, 1989-96 ರವರೆಗೆ ಜನತಾ ದಳದ ಛೋಟೆ ಸಿಂಗ್ ಯಾದವ್ ಗೆಲುವು ಸಾಧಿಸಿದ್ದರು.

Lok Sabha Elections 2019: Kannuaj LS constituency

ನಂತರ 1996-98 ರಲ್ಲಿ ಮೊಟ್ಟ ಮೊದಲ ಬಾರಿಗೆ ಚಂದ್ರ ಭೂಷಣ ಸಿಂಗ್ ಗೆಲುವು ಸಾಧಿಸುವ ಮೂಲಕ ಬಿಜೆಪಿ ಖಾತೆ ತೆರೆದರು. ನಂತರ ಈ ಕ್ಷೇತ್ರ ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿ ಬದಲಾಗಿ 1998-99 ರಲ್ಲಿ ಸಮಾಜವಾದಿ ಪಕ್ಷದ ಪ್ರದೀಪ್ ಕುಮಾರ್ ಯಾದವ್ ಗೆಲುವು ಸಾಧಿಸಿದರೆ, 1999-00 ಮುಲಾಯಂ ಸಿಂಗ್ ಯಾದವ್ ಗೆದ್ದರು.

ಶಿರಡಿ ಲೋಕಸಭಾ ಕ್ಷೇತ್ರದ ಪರಿಚಯಶಿರಡಿ ಲೋಕಸಭಾ ಕ್ಷೇತ್ರದ ಪರಿಚಯ

ಆ ನಂತರ 2000 ರಿಂದ 2012 ರವರೆಗೆ ಸತತ ಮೂರು ಬಾರಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗೆಲುವು ಸಾಧಿಸಿದರು. 2012 ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ನಂತರ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆ ಸಂದರ್ಭದಲ್ಲಿ ತಮ್ಮ ಕ್ಷೇತ್ರವನ್ನು ಪತ್ನಿ ಡಿಂಪಲ್ ಯಾದವ್ ಗೆ ಬಿಟ್ಟುಕೊಟ್ಟರು. 2012 ರಲ್ಲಿ ನಡೆದ ಉಪಚುನಾವಣೆಯಲ್ಲಿ ಮತ್ತು 2014 ರ ಲೋಕಸಭಾ ಚುನಾವಣೆಯಲ್ಲಿ ಡಿಂಪಲ್ ಯಾದವ್ ಈ ಕ್ಷೇತ್ರದಿಂದ ಗೆಲುವು ಸಾಧಿಸಿದರು.

Lok Sabha Elections 2019: Kannuaj LS constituency

ಈ ಕ್ಷೇತ್ರದ ಒಟ್ಟು ಜಸಂಖ್ಯೆ 26,02,855. ಗ್ರಾಮೀಣ ಪ್ರದೇಶದಲ್ಲಿ 86.20%, ನಗರ ಪ್ರದೇಶದಲ್ಲಿ 13.80% ಜನರಿದ್ದರೆ, ಪರಿಶಿಷ್ಠ ಜಾತಿಯವರು 21.39% ಮತ್ತು ಪರಿಶಿಷ್ಠ ಪಂಗಡದ ಜನರು 0.01% ರಷ್ಟಿದ್ದಾರೆ.

2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುಚನಾವಣಾ ಆಯೋಗ ನೀಡಿದ ಮಾಹಿತಿ ಪ್ರಕಾರ ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 18,08,889. ಅವರಲ್ಲಿ 10,00,007 ಪುರುಷರು. ಮತ್ತು 8,08,882 ಮಹಿಳೆಯರಿದ್ದಾರೆ.

ಕ್ಷೇತ್ರದ ಸಂಸದೆ ಡಿಂಪಲ್ ಯಾದವ್, ಇದುವರೆಗೂ ಲೋಕಸಭೆಯಲ್ಲಿ ಯಾವುದೇ ಪ್ರಶ್ನೆಗಳನ್ನೂ ಕೇಳಿಲ್ಲ. ಎರಡು ಚರ್ಚ ಗಳಲ್ಲಿ ಭಾಗವಹಿಸಿದ ಇವರ ಒಟ್ಟು ಸಂಸತ್ ಹಾಜರಾತಿ ಕೇವಲ 31%.

English summary
Lok Sabha Elections 2019: Kannauj is one of the most important Lok Sabha constituencies of Uttar Pradesh. Which has 80 Lok Sabha Constituencies. Samajwadi chief and Uttar Pradesh Former CM Akhilesh Yadav may contest from here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X