• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿದ್ದರಾಮಯ್ಯ ಹಠ ಕಾಂಗ್ರೆಸ್- ಜೆಡಿಎಸ್ ನ ಆಟ ಕೆಡಿಸಿದ್ದು ಹೇಗೆ?

By ಅನಿಲ್ ಆಚಾರ್
|
   Lok Sabha Elections 2019 : ಕಾಂಗ್ರೆಸ್ - ಜೆಡಿಎಸ್ ಆಟ ಕೆಡಲು ಸಿದ್ದರಾಮಯ್ಯ ಹಠವೇ ಕಾರಣ

   ಈ ಬಾರಿ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ತನ್ನ ಬಳಿ ಇಪ್ಪತ್ತು ಸ್ಥಾನ ಉಳಿಸಿಕೊಂಡು, ಜೆಡಿಎಸ್ ಗೆ ಎಂಟು ಕ್ಷೇತ್ರ ಬಿಟ್ಟುಕೊಟ್ಟಿದೆ. ಮೂಲಗಳ ಪ್ರಕಾರ, ಮೊದಲಿಗೆ ಆದ ಒಪ್ಪಂದ ಏನಾಗಿತ್ತೆಂದರೆ, ಹಾಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಸಂಸದರು ಎಲ್ಲಿದ್ದಾರೋ ಆ ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದೆಡೆ ಹಂಚಿಕೆ ಆಗಬೇಕಿತ್ತು.

   ಬಿಜೆಪಿಯ ಹದಿನಾರು ಸಂಸದರು ಇರುವ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆ ಎಷ್ಟು, ಜೆಡಿಎಸ್ ಗೆ ಎಷ್ಟು ಸ್ಥಾನ ಎಂಬುದಷ್ಟೇ ಚರ್ಚೆಯ ವಿಷಯ ಆಗಬೇಕಿತ್ತು. ಈ ಹಂತದಲ್ಲಿ ಜೆಡಿಎಸ್ ನಿಂದ ಮೈಸೂರನ್ನು ಬಿಟ್ಟುಕೊಡುವಂತೆ ಕೇಳಲಾಗಿದೆ. ಇದಕ್ಕೆ ಮೈತ್ರಿ ಪಕ್ಷದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಶತಾಯಗತಾಯ ಒಪ್ಪಿಲ್ಲ. ನಿಜವಾದ ಸಮಸ್ಯೆ ಅಲ್ಲಿಂದ ಶುರುವಾಗಿದೆ.

   ಹಾಸನ ಕಾಂಗ್ರೆಸ್ ಮುಖಂಡರ ಬಂಡಾಯ, ಸಿದ್ದರಾಮಯ್ಯ ಸಂಧಾನ

   ಜೆಡಿಎಸ್ ಗೆ ಹಾಲಿ ಸಂಸದರು ಇಲ್ಲದ ಹಾಗೂ ತಮ್ಮ ಪಕ್ಷ ಗೆಲ್ಲಬಹುದು ಎನಿಸಿದ್ದ ಕ್ಷೇತ್ರ ಮೈಸೂರು. ಆದರೆ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಮೈಸೂರು ಹೊರತುಪಡಿಸಿದರೆ ಜೆಡಿಎಸ್ ಗೆಲ್ಲಬಹುದಾದ ಇತರ ಕ್ಷೇತ್ರಗಳು ಅಂದರೆ ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಮಾತ್ರ.

   ಪರಂ ಆಪ್ತರಾದ ಮುದ್ದಹನುಮೇಗೌಡರ ತ್ಯಾಗ

   ಪರಂ ಆಪ್ತರಾದ ಮುದ್ದಹನುಮೇಗೌಡರ ತ್ಯಾಗ

   ಈ ಸನ್ನಿವೇಶದಲ್ಲಿ ಸಚಿವ ಡಿಕೆ ಶಿವಕುಮಾರ್ ಸೋದರ ಸುರೇಶ್ ಕಣಕ್ಕೆ ಇಳಿಯುವ ಬೆಂಗಳೂರು ಗ್ರಾಮಾಂತರವಾಗಲೀ ಅಥವಾ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಪ್ರತಿನಿಧಿಸುವ ಚಿಕ್ಕಬಳ್ಳಾಪುರವಾಗಲೀ ಜೆಡಿಎಸ್ ಗೆ ನೀಡದೆ, ಪರಮೇಶ್ವರ್ ತವರು ಜಿಲ್ಲೆ, ಅವರ ಆಪ್ತರಾದ ಎಸ್.ಪಿ.ಮುದ್ದಹನುಮೇಗೌಡರು ಗೆದ್ದಿದ್ದ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ.

   ಮೈಸೂರು ಉಳಿಸಿಕೊಳ್ಳಲು ಸಿದ್ದು ಮಾಡಿದ ಕೆಲಸ

   ಮೈಸೂರು ಉಳಿಸಿಕೊಳ್ಳಲು ಸಿದ್ದು ಮಾಡಿದ ಕೆಲಸ

   ನಿಜವಾಗಲೂ ಸಮಸ್ಯೆ ಶುರುವಾಗಿರುವುದು ಆಲ್ಲಿಂದಲೇ ಎನ್ನುತ್ತಾರೆ ಕಾಂಗ್ರೆಸ್, ಜೆಡಿಎಸ್ ಮುಖಂಡರು. ಹಾಲಿ ಸಂಸದರು ಇರುವ ಕ್ಷೇತ್ರಗಳನ್ನು ಹಾಗೇ ಬಿಡಬೇಕು ಎಂದು ಆರಂಭದಲ್ಲಿ ಒಪ್ಪಂದವಾಗಿದ್ದರೂ ಸಿದ್ದರಾಮಯ್ಯ ಅವರು ಹೀಗೆ ಸ್ವ ಪ್ರತಿಷ್ಠೆಗಾಗಿ ಮೈಸೂರು ಕ್ಷೇತ್ರ ಉಳಿಸಿಕೊಳ್ಳಲು ತುಮಕೂರು ಬಿಟ್ಟುಕೊಡಲು ಒಪ್ಪುವಂತೆ ಮಾಡಿದ್ದಾರೆ ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ಆರೋಪ.

   ಮೋದಿ ಚೌಕಿದಾರ್ ಅಲ್ಲ, ಭ್ರಷ್ಟಾಚಾರದಲ್ಲಿ ಭಾಗೀದಾರ್: ಸಿದ್ದರಾಮಯ್ಯ ವಾಗ್ದಾಳಿ

   ಬೇಡದ ಕ್ಷೇತ್ರಗಳನ್ನೂ ತಲೆಗೆ ಕಟ್ಟಿದ್ದಾರೆ

   ಬೇಡದ ಕ್ಷೇತ್ರಗಳನ್ನೂ ತಲೆಗೆ ಕಟ್ಟಿದ್ದಾರೆ

   ಆಷ್ಟೇ ಅಲ್ಲ, ಸದ್ಯದ ಸ್ಥಿತಿಯಲ್ಲಿ ತುಮಕೂರನ್ನೂ ಅಷ್ಟು ಸುರಕ್ಷಿತ ಕ್ಷೇತ್ರ ಎಂದು ಭಾವಿಸುವ ಸ್ಥಿತಿಯಲ್ಲಿ ಜೆಡಿಎಸ್ ಇಲ್ಲ. ಆದ್ದರಿಂದ ಹೆಚ್ಚುವರಿ ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ. ತಮಾಷೆ ಅಂದರೆ, ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ, ವಿಜಯಪುರ ಹಾಗೂ ಬೆಂಗಳೂರು ಉತ್ತರ ಇವೆಲ್ಲ ಜೆಡಿಎಸ್ ಗೆ ಸ್ಪರ್ಧೆ ಕೂಡ ನೀಡಲು ಕಷ್ಟವಾಗುವ ಕ್ಷೇತ್ರಗಳು. ಆದರೆ ಈ ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ.

   ಬಿಜೆಪಿಗೇ ಲಾಭ ಆಗುವ ಲಕ್ಷಣಗಳಿವೆ

   ಬಿಜೆಪಿಗೇ ಲಾಭ ಆಗುವ ಲಕ್ಷಣಗಳಿವೆ

   ಉತ್ತರ ಕನ್ನಡದಲ್ಲಿ ತಮ್ಮ ಮಗನನ್ನು ಸ್ಪರ್ಧೆಗೆ ಇಳಿಸಬೇಕು ಎಂದಿದ್ದ ಸಚಿವ- ಕಾಂಗ್ರೆಸ್ ನ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ ಅವರಿಗೂ ಈ ಬೆಳವಣಿಗೆಯಿಂದ ಬೇಸರ ಆಯಿತು. ತಮ್ಮ ಪಕ್ಷಕ್ಕೆ ನೆಲೆಯೇ ಇಲ್ಲದ ಕಡೆ ಸ್ಪರ್ಧಿಸುವ ಅನಿವಾರ್ಯಕ್ಕೆ ಬಿದ್ದಿರುವ ಜೆಡಿಎಸ್ ನಿಂದ ಬಿಜೆಪಿಗೇ ಲಾಭ ಆಗುವ ಲಕ್ಷಣಗಳಿವೆ. ಇನ್ನು ಸ್ಥಳೀಯವಾಗಿ ಕಾಂಗ್ರೆಸ್ ನಾಯಕರಲ್ಲೂ ಅಸಮಾಧಾನ ಕಾಣಿಸಿಕೊಂಡಿದೆ. ಸಿದ್ದರಾಮಯ್ಯ ಅವರ ಹಠದಿಂದಾಗಿ ಎಷ್ಟೆಲ್ಲ ರಗಳೆ ಆಯಿತಲ್ಲಾ ಎಂದು ಕಾಂಗ್ರೆಸ್ ಮುಖಂಡರು ನೊಂದುಕೊಳ್ಳುವಂತಾಗಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Lok Sabha Elections 2019: How Siddaramaiah's pride spoil Congress game? Here is the political analysis about how seat sharing between JDS and Congress impact by one seat Mysuru, which was needed by Siddaramaiah to prove he is powerful.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more