ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರೋಧಿಗಳನ್ನು ಪತರಗುಟ್ಟಿಸಿದ ದೇವೇಗೌಡರ ಚಾಣಾಕ್ಷ ನಡೆಗೆ ಉಘೇ ಉಘೇ

|
Google Oneindia Kannada News

Recommended Video

ಎಚ್ ಡಿ ದೇವೇಗೌಡ್ರ ಚಾಣಾಕ್ಷ ನಡೆಗೆ ದಂಗಾದ ವಿರೋಧಿಗಳು | Oneindia Kannada

ದೇವೇಗೌಡರು ತಲೆಯೊಳಗೆ ಅದೆಂಥ ಆಲೋಚನೆಗಳು, ಅದ್ಯಾವ ಕ್ಷಣದಲ್ಲಿ ಬರುತ್ತವೋ ಆ ಭಗವಂತನೇ ಬಲ್ಲ. ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ನವರು ಜೆಡಿಎಸ್ ಗೆ ಬಿಟ್ಟುಕೊಟ್ಟಾಗ, ರಾಜಕೀಯ ವಿಶ್ಲೇಷಕರು, ಬಿಜೆಪಿಯವರು ಹಬ್ಬ ಮಾಡುವ ಸಮಯ ಇದು. ಸುಲಭವಾಗಿ ಗೆದ್ದು ಬಿಡುತ್ತದೆ ಕೇಸರಿ ಪಕ್ಷ ಎನ್ನುತ್ತಿದ್ದರು.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಹೀಗೆ ಸಂಭ್ರಮದಲ್ಲಿರುವ ಬಿಜೆಪಿಯವರಿಗೆ ಶಾಕ್ ನೀಡುವಂಥ ಸುದ್ದಿಯೊಂದು ಜೆಡಿಎಸ್ ಪಾಳಯದಿಂದ ಬಂದಿದೆ. ಈಗಾಗಲೇ ದೇವೇಗೌಡರು ತುಮಕೂರಿನಿಂದ ಕಣಕ್ಕೆ ಇಳಿಯುವುದು ಪಕ್ಕಾ ಆಗಿದೆ. ಬೆಂಗಳೂರು ಉತ್ತರ, ಉಡುಪಿ-ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡದಿಂದ ಕಾಂಗ್ರೆಸ್ ಮುಖಂಡರಿಗೆ ಜೆಡಿಎಸ್ ಟಿಕೆಟ್ ನೀಡಿದರೆ ಹೇಗೆ ಎಂಬ ಆಲೋಚನೆ ದೊಡ್ಡ ಗೌಡರಿಗೆ ಬಂದಿದೆ.

ಬೆಂಗಳೂರಿನ 2 ಕ್ಷೇತ್ರಗಳಿಗೆ ಅಭ್ಯರ್ಥಿ ಹುಡುಕಲು ಜೆಡಿಎಸ್, ಕಾಂಗ್ರೆಸ್ ಪರದಾಟ ಬೆಂಗಳೂರಿನ 2 ಕ್ಷೇತ್ರಗಳಿಗೆ ಅಭ್ಯರ್ಥಿ ಹುಡುಕಲು ಜೆಡಿಎಸ್, ಕಾಂಗ್ರೆಸ್ ಪರದಾಟ

ಅದನ್ನೇ ಈಗಾಗಲೇ ಚಾಲ್ತಿಗೂ ತಂದಿರುವ ಅವರು, ಬೆಂಗಳೂರು ಉತ್ತರದಿಂದ ಬಿ.ಎಲ್.ಶಂಕರ್ ಅಥವಾ ಕೃಷ್ಣ ಬೈರೇಗೌಡರು ಹಾಗೂ ಉತ್ತರ ಕನ್ನಡದಿಂದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರ ಮಗ ಪ್ರಶಾಂತ್ ದೇಶಪಾಂಡೆ ಅಥವಾ ನಿವೇದಿತಾ ಆಳ್ವಾರಿಗೆ ಜೆಡಿಎಸ್ ಟಿಕೆಟ್ ನೀಡಿ, ಸ್ಪರ್ಧೆಗೆ ನಿಲ್ಲಿಸುವ ಲೆಕ್ಕಾಚಾರದಲ್ಲಿ ಇದ್ದಾರೆ. ಉಡುಪಿ-ಚಿಕ್ಕಮಗಳೂರಿನಿಂದ ಪ್ರಮೋದ್ ಮಧ್ವರಾಜ್ ಹೆಸರು ಫೈನಲ್ ಮಾಡಿ ಅಗಿದೆ.

ಪ್ರಮೋದ್ ಮಧ್ವರಾಜ್ ಉಡುಪಿ-ಚಿಕ್ಕಮಗಳೂರಿನಿಂದ

ಪ್ರಮೋದ್ ಮಧ್ವರಾಜ್ ಉಡುಪಿ-ಚಿಕ್ಕಮಗಳೂರಿನಿಂದ

ಮೂಲಗಳ ಪ್ರಕಾರ, ಈ ಆಲೋಚನೆಗೆ ಕಾಂಗ್ರೆಸ್ ಕೂಡ ಅಸ್ತು ಎಂದಿದೆ. ಇನ್ನೂ ಕೆಲ 'ಕೈ' ಮುಖಂಡರ ಪ್ರಕಾರ, ದೇವೇಗೌಡರು ಜೆಡಿಎಸ್ ಗೆ ಎಂಟು ಲೋಕಸಭಾ ಸ್ಥಾನಗಳನ್ನು ಕೇಳಿದ್ದರಲ್ಲೇ ಲೆಕ್ಕ ತಪ್ಪಿದರು. ಅಷ್ಟು ಸ್ಥಾನಗಳಲ್ಲಿ ಸ್ಪರ್ಧಿಸುವ ಶಕ್ತಿ ಜೆಡಿಎಸ್ ಗೆ ಇಲ್ಲವೇ ಇಲ್ಲ ಎಂಬುದನ್ನು ಗುರುತಿಸಬೇಕಿತ್ತು. ಇನ್ನು ಈಗಾಗಲೇ ಜೆಡಿಎಸ್ ನಿಂದ ಪ್ರಮೋದ್ ಮಧ್ವರಾಜ್ ಅವರಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಬಿ ಫಾರಂ ಸಿಕ್ಕಿದೆ. ಮಾಧ್ಯಮಗಳ ಜತೆ ಮಾತನಾಡಿದ ಪ್ರಮೋದ್, ನಾನು ಕಾಂಗ್ರೆಸ್-ಜೆಡಿಎಸ್ ನ ಅಭ್ಯರ್ಥಿ. ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದೇನೆ ಎಂದಿದ್ದಾರೆ. ಇದೇ ವೇಳೆ ಬಿ.ಎಲ್.ಶಂಕರ್ ಅವರು ಕೂಡ ತಮ್ಮ ಹೆಸರು ಪ್ರಸ್ತಾವ ಆಗಿರುವ ಬಗ್ಗೆ ಖಾತ್ರಿ ಪಡಿಸಿದ್ದಾರೆ. ದೇವೇಗೌಡರು ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬುದರ ಮೇಲೆ ನಿರ್ಧಾರ ಆಗಬೇಕಿದೆ. ಅವರು ಒಂದು ವೇಳೆ ತುಮಕೂರು ಲೋಕಸಭಾ ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಬೆಂಗಳೂರು ಉತ್ತರದಿಂದ ನಾನು ಜೆಡಿಎಸ್ ಅಭ್ಯರ್ಥಿ ಆಗಬಹುದು. ಆದರೆ ನನ್ನ ಸ್ಪರ್ಧೆ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳಬೇಕು ಎಂದಿದ್ದಾರೆ.

ಉಡುಪಿ-ಚಿಕ್ಕಮಗಳೂರು : ಪ್ರಮೋದ್ ಮಧ್ವರಾಜ್‌ಗೆ ಜೆಡಿಎಸ್ ಬಿಫಾರಂಉಡುಪಿ-ಚಿಕ್ಕಮಗಳೂರು : ಪ್ರಮೋದ್ ಮಧ್ವರಾಜ್‌ಗೆ ಜೆಡಿಎಸ್ ಬಿಫಾರಂ

ಬೆಂಗಳೂರು ಉತ್ತರಕ್ಕೆ ಮತ್ತಿಬ್ಬರ ಹೆಸರು

ಬೆಂಗಳೂರು ಉತ್ತರಕ್ಕೆ ಮತ್ತಿಬ್ಬರ ಹೆಸರು

ಬೆಂಗಳೂರು ಉತ್ತರಕ್ಕೆ ಜೆಡಿಎಸ್ ನಿಂದ ಮತ್ತಿಬ್ಬರು ಅಭ್ಯರ್ಥಿಗಳ ಹೆಸರೂ ಕೇಳಿಬಂದಿದೆ. ಅದರಲ್ಲಿ ನಿವೃತ್ತ ನ್ಯಾ.ವಿ.ಗೋಪಾಲಗೌಡ ಅವರು ತಮಗೆ ಆಸಕ್ತಿ ಇಲ್ಲ ಎಂಬುದನ್ನು ತಿಳಿಸಿದ್ದಾರೆ. ಈ ಮಧ್ಯೆ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೃಷ್ಣ ಬೈರೇಗೌಡ ಅವರ ಹೆಸರು ಬಹಳ ಚರ್ಚೆ ಆಗುತ್ತಿದೆ. ಗುರುವಾರವಷ್ಟೇ ದೇವೇಗೌಡರು ಕೃಷ್ಣ ಬೈರೇಗೌಡರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಬೆಂಗಳೂರು ಉತ್ತರದಿಂದ ಸ್ಪರ್ಧೆಗೆ ಇಳಿಯುವಂತೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಕೃಷ್ಣ ಬೈರೇಗೌಡ, ಅಂಥ ಸನ್ನಿವೇಶ ಸೃಷ್ಟಿಯಾದರೆ ಬೆಂಗಳೂರು ಉತ್ತರದಿಂದ ಸ್ಪರ್ಧಿಸಬಹುದು ಎಂದು ಅವರು ಹೇಳಿದ್ದಾರೆ. ಈಗ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ಐವರು ಕಾಂಗ್ರೆಸ್ ಶಾಸಕರು ಕೃಷ್ಣ ಬೈರೇಗೌಡರನ್ನೇ ಸ್ಪರ್ಧೆ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಜೆಡಿಎಸ್ ಟಿಕೆಟ್ ನಿಂದ ಸ್ಪರ್ಧೆಗೆ ದೇಶಪಾಂಡೆ ಒಪ್ಪಿಗೆಯಿಲ್ಲ

ಜೆಡಿಎಸ್ ಟಿಕೆಟ್ ನಿಂದ ಸ್ಪರ್ಧೆಗೆ ದೇಶಪಾಂಡೆ ಒಪ್ಪಿಗೆಯಿಲ್ಲ

ಉತ್ತರಕನ್ನಡ ಲೋಕಸಭಾ ಕ್ಷೇತ್ರವು ಸಮಸ್ಯೆಯಾಗಿ ಪರಿಣಮಿಸಿದೆ. ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ತಮ್ಮ ಮಗ ಪ್ರಶಾಂತ್ ರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವುದು ಇಷ್ಟವಿಲ್ಲ. ದೇಶಪಾಂಡೆ ಅವರು ಮಾತನಾಡಿ, ಸ್ಪರ್ಧೆ ವಿಚಾರವಾಗಿ ಜೆಡಿಎಸ್ ನವರು ನನ್ನನಾಗಲೀ, ನನ್ನ ಮಗನನ್ನಾಗಲೀ ಸಂಪರ್ಕ ಮಾಡಿಲ್ಲ ಎಂದು ತಿಳಿಸಿದ್ದಾರೆ. ಇನ್ನೂ ಮುಂದುವರಿದು, ಅಂಥದ್ದೊಂದು ಪ್ರಸ್ತಾವವನ್ನು ಮುಂದಿಟ್ಟರೂ ಜೆಡಿಎಸ್ ಟಿಕೆಟ್ ಪಡೆದು ನಾವು ಸ್ಪರ್ಧೆ ಮಾಡುವುದಿಲ್ಲ ಎಂದು ಅವರು ಈಗಾಗಲೇ ತಿಳಿಸಿದ್ದಾರೆ. ದೇವೇಗೌಡರು ಉತ್ತರಕನ್ನಡ ಕ್ಷೇತ್ರವನ್ನು ಕಾಂಗ್ರೆಸ್ ಗೆ ವಾಪಸ್ ಮಾಡಬೇಕು. ಏಕೆಂದರೆ, ಹಾಲಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಸ್ಥಳೀಯವಾಗಿ ಆಕ್ರೋಶ ಇರುವುದರಿಂದ ಕಾಂಗ್ರೆಸ್ ಗೆ ಗೆಲ್ಲುವ ಅವಕಾಶ ಹೆಚ್ಚಿದೆ. ಕಾಂಗ್ರೆಸ್ ಸ್ಪರ್ಧೆಗೆ ಇಳಿದರೆ ನಾವಿಲ್ಲಿ ಜಯ ಪಡೆಯುತ್ತೇವೆ ಎಂದು ಹೇಳಿದ್ದಾರೆ.

ಚುನಾವಣೆಗೆ ದೇವೇಗೌಡರ ಸ್ಪರ್ಧೆ : ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?ಚುನಾವಣೆಗೆ ದೇವೇಗೌಡರ ಸ್ಪರ್ಧೆ : ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?

ಕಾಂಗ್ರೆಸ್ ಗೆ ಇಪ್ಪತ್ತು, ಜೆಡಿಎಸ್ ಗೆ ಎಂಟು ಸ್ಥಾನ

ಕಾಂಗ್ರೆಸ್ ಗೆ ಇಪ್ಪತ್ತು, ಜೆಡಿಎಸ್ ಗೆ ಎಂಟು ಸ್ಥಾನ

ಜೆಡಿಎಸ್ ನಾಯಕರು ಮಾತನಾಡಿ, ಈ ರೀತಿ ಮತ್ತೊಂದು ಪಕ್ಷದ ನಾಯಕರಿಗೆ ಟಿಕೆಟ್ ಕೊಡುವಂಥ ವ್ಯವಸ್ಥೆ ಹೊಸದಲ್ಲ ಎಂದಿದ್ದಾರೆ. ಇದೇ ವೇಳೆ ಡಾನಿಷ್ ಆಲಿ ಅವರ ಉದಾಹರಣೆಯನ್ನು ನೀಡಿ, ಅವರು ಜೆಡಿಎಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಕಳೆದ ವಾರ ಅವರು ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆ ಆಗಿದ್ದರು. "ಇದು ಒಂದು ರೀತಿಯಲ್ಲಿ ದತ್ತು ತೆಗೆದುಕೊಂಡಂತೆ. ಡಾನಿಷ್ ಆಲಿ ಅವರು ಬಿಎಸ್ ಪಿಯಲ್ಲೇ ಇದ್ದರೂ ಅವರ ಹೃದಯ ಜೆಡಿಎಸ್ ನಲ್ಲೇ ಇರುತ್ತದೆ" ಎಂದು ನಾಯಕರು ಹೇಳಿದ್ದಾರೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ಗೆ ಇಪ್ಪತ್ತು ಹಾಗೂ ಜೆಡಿಎಸ್ ಗೆ ಎಂಟು ಸ್ಥಾನಗಳು ಎಂಬ ಹಂಚಿಕೆ ಮಾಡಿಕೊಂಡಿವೆ. ಆದರೆ ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

English summary
In a first-of-its-kind arrangement, former Prime Minister HD Deve Gowda's party is seeking to 'adopt' Congress leaders in three Lok Sabha seats in Karnataka and field them as JDS candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X