ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಜಿಪುರ: ಗಿನ್ನಿಸ್ ದಾಖಲೆ ಬರೆದ ಪಾಸ್ವಾನ್ ಸ್ವಕ್ಷೇತ್ರ

|
Google Oneindia Kannada News

ಬಿಹಾರದಲ್ಲಿರುವ 40 ಲೋಕಸಭಾ ಕ್ಷೇತ್ರಗಳ ಪೈಕಿ ಹಾಜಿಪುರ ಪ್ರಮುಖ ಕ್ಷೇತ್ರವಾಗಿದೆ. ಬಿಹಾರದ 17ನೇ ಅತ್ಯಂತ ಜನಸಾಂದ್ರತೆಯುಳ್ಳ ನಗರವಾಗಿದೆ. ಪಾಟ್ನಾ ನಂತರ ಅತ್ಯಂತ ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ನಗರವಾಗಿದೆ. ಪಾಟ್ನಾದಿಂದ 10 ಕಿ.ಮೀ ದೂರದಲ್ಲಿರುವ ಹಾಜಿಪುರ ಅವಳಿ ನಗರವಾಗಿ ಜನಪ್ರಿಯತೆ ಗಳಿಸಿದೆ. ಹಾಜಿಪುರ ಲೋಕಸಭಾ ಕ್ಷೇತ್ರದಲ್ಲಿ ಒಟು 6 ವಿಧಾನಸಭಾ ಕ್ಷೇತ್ರಗಳಿದ್ದು, ಮಹ್ನಾರ್, ರಘೋಪುರ್, ರಾಜಾ ಪಾಕರ್, ಮಹುವಾ, ಲಾಲ್ ಗಂಜ್ ಹಾಗೂ ಹಾಜಿಪುರ.

ಹಾಜಿಪುರ ಲೋಕಸಭಾ ಕ್ಷೇತ್ರವು ಲೋಕಜನಶಕ್ತಿ(ಎಲ್ ಜೆಪಿ) ಪಕ್ಷ, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪ್ರಾಬಲ್ಯದ ಕ್ಷೇತ್ರವಾಗಿದೆ. ಪಾಸ್ವಾನ್ ಅವರ ರಾಜಕೀಯ ಜೀವನ ಆರಂಭ ಹಾಗೂ ಏಳಿಗೆಯನ್ನು ಈ ಕ್ಷೇತ್ರ ಕಂಡಿದೆ. ಸಂಯುಕ್ತ ಸೋಷಲಿಸ್ಟ್ ಪಾರ್ಟಿಯ ಮೂಲಕ ರಾಜಕೀಯ ಬದುಕು ಆರಂಭಿಸಿದ ಪಾಸ್ವಾನ್ ಅವರು ಬಿಹಾರ ವಿಧಾನಸಭೆ 1969ರಲ್ಲಿ ಮೊದಲಿಗೆ ಆಯ್ಕೆಯಾದರು. ನಂತರ 1974ರಲ್ಲಿ ಲೋಕ್ ದಳ ಪಕ್ಷ ಸ್ಥಾಪನೆಯಾದ ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.

ಸೊಲ್ಲಾಪುರ ಲೋಕಸಭಾ ಕ್ಷೇತ್ರದ ಪರಿಚಯ ಸೊಲ್ಲಾಪುರ ಲೋಕಸಭಾ ಕ್ಷೇತ್ರದ ಪರಿಚಯ

ಇಂದಿರಾಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಪಾಸ್ವಾನ್ ವಿರೋಧಿಸಿ, ಜೈಲು ವಾಸ ಅನುಭವಿಸಿದ್ದರು. 1977ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಹಾಜಿಪುರದಿಂದ ಜನತಾ ಪಾರ್ಟಿ ಸದಸ್ಯರಾಗಿ ಆಯ್ಕೆಯಾದರು. ನಂತರ 1980, 1989, 1996, 1998, 1999, 2004 ಹಾಗೂ 2014ರಲ್ಲಿ ಆಯ್ಕೆಯಾದರು.

Lok Sabha Elections 2019 : Hajipur LS Constituency

ಹಾಜಿಪುರದಲ್ಲಿ 16,49,547 ಮತದಾರರಿದ್ದು, 8,95,047 ಪುರುಷರು ಹಾಗೂ 7,54,500 ಮಹಿಳೆಯರಿದ್ದಾರೆ. ಒಟ್ಟು ಜನಸಂಖ್ಯೆ 26,14,310 ರಷ್ಟಿದ್ದು, ಈ ಪೈಕಿ ಶೇ 91.08ರಷ್ಟು ಮಂದಿ ಗ್ರಾಮೀಣ ಭಾಗದಲ್ಲಿ, ಶೇ 8.92ರಷ್ಟು ಮಂದಿ ನಗರವಾಸಿಗಳಾಗಿದ್ದಾರೆ. ಶೇ 20.90ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ 0.06ರಷ್ಟು ಪರಿಶಿಷ್ಟ ಪಂಗಡದವರಿದ್ದಾರೆ.

Lok Sabha Elections 2019 : Hajipur LS Constituency

ಅತ್ಯಂತ ಒಣ ಹವೆಯುಳ್ಳ ರಾಜಕೀಯ ಬಿರುಸಿನ ಕ್ಷೇತ್ರ ಅನಂತಪುರ ಅತ್ಯಂತ ಒಣ ಹವೆಯುಳ್ಳ ರಾಜಕೀಯ ಬಿರುಸಿನ ಕ್ಷೇತ್ರ ಅನಂತಪುರ

1957ರಿಂದ ಇಲ್ಲಿ ತನಕದ ಸ್ಟ್ರೈಕ್ ರೇಟ್ ನೋಡಿದರೆ, ಜನತಾ ದಳ 6 ಬಾರಿ ಗೆಲುವು ಸಾಧಿಸಿ ಶೇ 60ರಷ್ಟು ಗೆಲುವಿನ ಫಲಿತಾಂಶ ನೀಡಿದೆ. ಕಾಂಗ್ರೆಸ್ 4 ಬಾರಿ ಗೆಲುವು ಸಾಧಿಸಿ ಶೇ 40ರಷ್ಟು ಫಲಿತಾಂಶ ಹೊಂದಿದೆ. 2000 ಇಸವಿಯಲ್ಲಿ ಲೋಕ ಜನಶಕ್ತಿ ಪಕ್ಷ(ಎಲ್ ಜೆಪಿ) ಸ್ಥಾಪಿಸಿ, ಅಧ್ಯಕ್ಷರಾದರು.

ರಾಯಲಸೀಮೆಯ ಹೆಬ್ಬಾಗಿಲು ಕಡಪ ಲೋಕಸಭಾ ಕ್ಷೇತ್ರದ ಪರಿಚಯ ರಾಯಲಸೀಮೆಯ ಹೆಬ್ಬಾಗಿಲು ಕಡಪ ಲೋಕಸಭಾ ಕ್ಷೇತ್ರದ ಪರಿಚಯ

2014ರಲ್ಲಿ ಯುನೈಟೆಡ್ ಪ್ರೊಗ್ರೆಸಿವ್ ಅಲೈಯನ್ಸ್(ಯುಪಿಎ) ಗೆ ಬೆಂಬಲ ವ್ಯಕ್ತಪಡಿಸಿ, ಕೇಂದ್ರ ರಸಗೊಬ್ಬರ ಖಾತೆ ಹಾಗೂ ಉಕ್ಕು ಖಾತೆ ರಾಜ್ಯ ಸಚಿವರಾಗಿದ್ದರು. 2004ರಲ್ಲಿ ಲೋಕಸಭೆ ಚುನಾವಣೆ ಗೆದ್ದರೂ 2009ರಲ್ಲಿ ಸೋಲು ಕಂಡರು. 2010 ರಿಂದ 2014ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. 2014ರಲ್ಲಿ 16ನೇ ಲೋಕಸಭೆ ಮತ್ತೆ ಇದೇ ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು.

Lok Sabha Elections 2019 : Hajipur LS Constituency

1977ರಲ್ಲಿ ಹಾಜಿಪುರದಲ್ಲಿ 4.24 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ ರಾಮ್ ವಿಲಾಸ್ ಪಾಸ್ವಾನ್ ಅವರು ಗಿನ್ನಿಸ್ ವಿಶ್ವ ದಾಖಲೆ ಬರೆದರು.71 ವರ್ಷ ವಯಸ್ಸಿನ ರಾಮ್ ವಿಲಾಸ್ ಪಾಸ್ವಾನ್ ಅವರು 2014ರಲ್ಲಿ ಎಲ್ ಜೆಪಿ ಪರ ಸ್ಪರ್ಧಿಸಿ 4,55,652 ಮತಗಳನ್ನು(ಶೇ50.31) ಗಳಿಸಿದರು.

Lok Sabha Elections 2019 : Hajipur LS Constituency

ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಪರಿಚಯಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಪರಿಚಯ

ಕಾಂಗ್ರೆಸ್ಸಿನ ಸಂಜೀವ್ ಪ್ರಸಾದ್ ತೋನಿ ಅವರು 2,30,152(ಶೇ25.41) ಮತಗಳಿಸಿ ಸೋಲು ಕಂಡರು. 2014ರಲ್ಲಿ 9,04,753 ಮತಗಳು ದಾಖಲಾಗಿದ್ದು, ಶೇ55ರಷ್ಟು ಮತದಾನವಾಗಿತ್ತು. ಈ ಪೈಕಿ 4,78,252 ಪುರುಷ ಮತಗಳು ಹಾಗೂ 4,26,501 ಮಹಿಳಾ ಮತಗಳು ದಾಖಲಾಗಿವೆ. 2014ರಲ್ಲಿ ಬಿಜೆಪಿ 22 ಸ್ಥಾನಗಳಿಸಿತ್ತು. ಈ ಪೈಕಿ ಎಲ್ ಜೆಪಿ 6, ಸ್ವತಂತ್ರವಾಗಿ ಸ್ಪರ್ಧಿಸಿದ್ದ ಜೆಡಿಯು 4 ಸ್ಥಾನ ಗಳಿಸಿತ್ತು. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಎನ್ಡಿಎ ಜತೆ ಜೆಡಿಯು ಮೈತ್ರಿ ಹೊಂದಿರುವುದರಿಂದ ಈ ಬಾರಿ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯಿದೆ.

English summary
Lok Sabha Elections 2019 : Hajipur Lok Sabha constituency profile is here. Ram Vilas Paswan is the present MP of the constituency representing Janata Dal. This Constituency a strong hold of Janata Dal consists of 6 Legislative Assembly segments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X