ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿ ಕಣ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ

By ಕಿರಣ್ ಸಿರ್ಸಿಕರ್
|
Google Oneindia Kannada News

Recommended Video

Lok Sabha Election 2019 : ಇದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

ಒಂದೆಡೆ ಅರಬ್ಬಿ ಸಮುದ್ರ. ಇನ್ನೊಂದೆಡೆ ಪೂರ್ವದಲ್ಲಿ ಪಶ್ಚಿಮ ಘಟ್ಟ ಹೀಗೆ ಕಡುಲು ಹಾಗು ಮಲೆನಾಡಿನ ಸಂಗಮ ಜಿಲ್ಲೆ ದಕ್ಷಿಣ ಕನ್ನಡ. ಕರ್ನಾಟಕ ಕರಾವಳಿ ಪ್ರದೇಶದ ದಕ್ಷಿಣದಂಚಿನಲ್ಲಿದೆ ಈ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ.

ಕ್ಷೇತ್ರ ಮರು ವಿಂಗಡಣೆಗೆ ಮೊದಲು ಮಂಗಳೂರು ಲೋಕಸಭೆ ಕ್ಷೇತ್ರ ಎಂದರೆ, ಮಂಗಳೂರು, ಉಳ್ಳಾಲ, ವಿಟ್ಲ, ಪುತ್ತೂರು, ಸುಳ್ಯ ಮತ್ತು ಕೊಡಗು ಜಿಲ್ಲೆಯ ಮೂರು ವಿಧಾನ ಸಭೆ ಕ್ಷೇತ್ರಗಳ ವ್ಯಾಪ್ತಿ. ಸುರತ್ಕಲ್ (ಈಗಿನ ಮಂಗಳೂರು ಉತ್ತರ), ಮೂಲ್ಕಿ-ಮೂಡುಬಿದರೆ ಮತ್ತು ಬಂಟ್ವಾಳ ಕ್ಷೇತ್ರಗಳು ಉಡುಪಿ ಲೋಕಸಭೆ ಕ್ಷೇತ್ರದಲ್ಲಿದ್ದರೆ, ಬೆಳ್ತಂಗಡಿ ಚಿಕ್ಕಮಗಳೂರು ಕ್ಷೇತ್ರದಲ್ಲಿತ್ತು. ಈಗ ಇಡೀ ದಕ್ಷಿಣ ಕನ್ನಡ ಜಿಲ್ಲೆಯೇ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರವಾಗಿದೆ. ಕ್ಷೇತ್ರದಲ್ಲಿ ಪ್ರಸ್ತುತ 1,565,281 ಮತದಾರರಿದ್ದಾರೆ. ಈ ಪೈಕಿ 774,500 ಪುರುಷರು ಹಾಗು 790,781 ಮಹಿಳಾ ಮತದಾರರು.

ಧಾರವಾಡ ಲೋಕಸಭಾ ಕ್ಷೇತ್ರದ ಪರಿಚಯ ಧಾರವಾಡ ಲೋಕಸಭಾ ಕ್ಷೇತ್ರದ ಪರಿಚಯ

ಮೂರು ರಾಷ್ಟ್ರೀಯ ಹೆದ್ದಾರಿಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೇ ಸಂಪರ್ಕ, ಸರ್ವ ಋತು ಬಂದರು, ಆರ್ಥಿಕ, ಶೈಕ್ಷಣಿಕ ಸಂಸ್ಥೆಗಳ ನಾಡು. ಕನ್ನಡ, ತುಳು, ಕೊಂಕಣಿ, ಬ್ಯಾರಿ, ಉರ್ದು ಹೀಗೆ ಹಲವು ಭಾಷೆ, ಸಂಸ್ಕೃತಿಗಳ ಸಮ್ಮಿಲನದ ಬೀಡು. ಶಿಕ್ಷಣ, ಕಲೆ, ಸಾಹಿತ್ಯ, ಬ್ಯಾಂಕಿಂಗ್, ಉದ್ಯಮ, ಕ್ಷೇತ್ರಗಳಿಗೆ ದಕ್ಷಿಣ ಕನ್ನಡ ಜಿಲ್ಲೆ ಮಹತ್ತರ ಕೊಡುಗೆ ನೀಡಿದೆ. ರಾಜಕೀಯ ಕ್ಷೇತ್ರಕ್ಕೂ ಅನೇಕ ನಾಯಕರನ್ನು ನೀಡಿದ ಹೆಗ್ಗಳಿಕೆ ಹೊಂದಿದೆ ಈ ಜಿಲ್ಲೆ ಹೊಂದಿದೆ. ರಾಜ್ಯ, ರಾಷ್ಟ್ರ ರಾಜಕೀಯದಲ್ಲಿ ಕರಾವಳಿಯವರು ಉನ್ನತ ಹುದ್ದೆಗಳನ್ನು ಪಡೆದು ಮಿಂಚಿದ್ದಾರೆ. ಸ್ವಾತಂತ್ರ ಹೋರಾಟ, ಸಂವಿಧಾನ ರಚನೆಯಿಂದ ತೊಡಗಿ ರಾಜಕೀಯದ ವಿವಿದ ಮಜಲುಗಳಲ್ಲಿ ಇಲ್ಲಿನವರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

Lok Sabha Elections 2019 : Dakshina Kannada Lok Sabha Constituency profile

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಉತ್ತರದಲ್ಲಿ ಉಡುಪಿ ಜಿಲ್ಲೆ, ದಕ್ಷಿಣದಲ್ಲಿ ಕೇರಳದ ಕಾಸರಗೋಡು ನಡುವಿನ ಕ್ಷೇತ್ರದ ವಿಸ್ತೀರ್ಣ 4,866 ಚದರ ಕಿ.ಮೀ. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರ ಕೋಟೆ. ದಶಕದಿಂದೀಚೆಗೆ ಬಿಜೆಪಿಯ ಶಕ್ತಿ ಕೇಂದ್ರವಾಗಿ ಪ್ರಯೋಗಕ್ಕೆ ಬಳಕೆಯಾದ ಕ್ಷೇತ್ರ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂಟು ಕೇತ್ರಗಳ ಪೈಕಿ ಬಿಜೆಪಿ 7ರಲ್ಲಿ ಬಿಜೆಪಿ ಜಯಗಳಿಸಿದ್ದರೆ, ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಜಯಗಳಿಸಿತು. ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ, ಪುತ್ತೂರು, ಸುಳ್ಯ, ಮೂಡುಬಿದರೆ, ಬಂಟ್ವಾಳ, ಬೆಳ್ತಂಗಡಿಯಲ್ಲಿ ಬಿಜೆಪಿ ಪಾರಮ್ಯ ಮೆರೆಯಿತು. ಮಂಗಳೂರು(ಉಳ್ಳಾಲ)ದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

ಹಾವೇರಿ-ಗದಗ ಲೋಕಸಭಾ ಕ್ಷೇತ್ರ ಪರಿಚಯ ಹಾವೇರಿ-ಗದಗ ಲೋಕಸಭಾ ಕ್ಷೇತ್ರ ಪರಿಚಯ

1950ರಿಂದ ಸತತವಾಗಿ 9 ಬಾರಿ ಕಾಂಗ್ರೆಸ್ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಆದರೆ 1991ರ ಚುನಾವಣೆಯಲ್ಲಿ ಕರಾವಳಿ ರಾಜಕೀಯದ ಚಿತ್ರಣವೇ ಬದಲಾಯಿತು. 1991ರಿಂದ ಸತತವಾಗಿ ಬಿಜೆಪಿ 7 ಬಾರಿ ಈ ಕ್ಷೇತ್ರವನ್ನು ಗೆಲ್ಲುತ್ತಾ ಬಂದಿದೆ. ಇದು ಪ್ರಸ್ತುತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಸಾಧನೆ. ಕಳೆದ 16 ಚುನಾವಣೆಗಳಲ್ಲಿ ಕಾಂಗ್ರೆಸ್, ಬಿಜೆಪಿ ಹೊರತಾಗಿ ಅನ್ಯ ಪಕ್ಷಗಳಿಗೆ ಈ ಕ್ಷೇತ್ರದಿಂದ ಆಯ್ಕೆ ಸಾಧ್ಯವಾಗಿಲ್ಲ.

ಕಾಂಗ್ರೆಸ್ ನಾಯಕ ಬಿ ಜನಾರ್ಧನ ಪೂಜಾರಿ ಮತ್ತು ಬಿಜೆಪಿಯಿಂದ ಧನಂಜಯ್ ಕುಮಾರ್ ಸತತ 4 ಬಾರಿ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಇವರಿಬ್ಬರು ಕೇಂದ್ರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

Lok Sabha Elections 2019 : Dakshina Kannada Lok Sabha Constituency profile

1951ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಬಿ ಶಿವರಾವ್, 1957ರಲ್ಲಿ ಕಾಂಗ್ರೆಸ್ ನ ಕೆಆರ್ ಆಚಾರ್, 1962ರಲ್ಲಿ ಕಾಂಗ್ರೆಸ್ ನ ಎ. ಶಂಕರ್ ಆಳ್ವಾ, 1967ರಲ್ಲಿ ಕಾಂಗ್ರೆಸ್ ನ ಸಿಎಂ ಪೂಣಚ್ಚ, 1971ರಲ್ಲಿ ಕಾಂಗ್ರೆಸ್ ನ ಕೆಕೆ ಶೆಟ್ಟಿ, 1977, 80, 84, 89ರಲ್ಲಿ ಕಾಂಗ್ರೆಸ್ ನಾಯಕ ಬಿ ಜನಾರ್ಧನ ಪೂಜಾರಿ ಸತತವಾಗಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. 1991ರಿಂದ ಈ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿತು. ಕಾಂಗ್ರೆಸ್ ನ ಭದ್ರ ಕೋಟೆ ಛಿದ್ರ ಮಾಡಿದ ಬಿಜೆಪಿ ಈವರೆಗೂ ಕ್ಷೇತ್ರವನ್ನು ವಶದಲ್ಲಿರಿಸಿದೆ.

ತುಮಕೂರು ಲೋಕಸಭೆ: ಕಾಂಗ್ರೆಸ್ ಕೋಟೆಯಲ್ಲಿ ಬಿಜೆಪಿಗೊಂದು ಭರವಸೆಯ ಚುಕ್ಕಿ ತುಮಕೂರು ಲೋಕಸಭೆ: ಕಾಂಗ್ರೆಸ್ ಕೋಟೆಯಲ್ಲಿ ಬಿಜೆಪಿಗೊಂದು ಭರವಸೆಯ ಚುಕ್ಕಿ

1991ರಲ್ಲಿ ಜಿಜೆಪಿಯಿಂದ ಸ್ಪರ್ಧಿಸಿದ್ದ ಬಿ ಧನಂಜಯ್ ಕುಮಾರ್ ಗೆಲುವು ಸಾಧಿಸಿದರು. ಆ ಬಳಿಕ 1996, 1998 , 1999ರಲ್ಲಿ ಧನಂಜಯ್ ಕುಮಾರ್ ಜಯ ಸಾಧಿಸಿದ್ದಾರೆ. 2004ರಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ ವಿ ಸದಾನಂದ ಗೌಡ ಗೆಲುವು ಸಾಧಿಸಿದರೆ, 2004ರಿಂದ ನಳಿನ್ ಕುಮಾರ್ ಕಟೀಲ್ ಈ ಕ್ಷೇತ್ರದಿಂದ ಗೆಲುವು ಸಾಧಿಸುತ್ತಲೆ ಬರುತ್ತಿದ್ದಾರೆ.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಜನಾರ್ಧನ ಪೂಜಾರಿ (ಗಳಿಸಿದ ಮತ 499,030) ಅವರನ್ನು ನಳಿನ್ ಕುಮಾರ್ ಕಟೀಲ್ (ಗಳಿಸಿದ ಮತ 642,739) ಅವರು 143,709 ಮತಗಳ ಅಂತರದಲ್ಲಿ ಸೋಲಿಸಿದರು. ಪ್ರಸ್ತುತ ಈ ಕ್ಷೇತ್ರ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಕೇಂದ್ರ ಸರಕಾರದ ಕೃಷಿ ಸ್ಥಾಯಿ ಸಮಿತಿ, ತೆಂಗು ಅಭಿವೃದ್ಧಿ ಮಂಡಳಿ, ನೆಹರು ಯುವ ಕೇಂದ್ರ, ಯೋಜನಾ ಸಮಿತಿ, ರಬ್ಬರ್ ಮಂಡಳಿ, ಬಂದರು ಮಂಡಳಿ ಸಹಿತಿ ವಿವಿಧ ಸಮಿತಿಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನಳಿನ್ ಕುಮಾರ್ ಕಟೀಲ್ ಕೇರಳ ರಾಜ್ಯದಲ್ಲಿ ಬಿಜೆಪಿಯ ಪ್ರಭಾರಿಯಾಗಿದ್ದಾರೆ.

Lok Sabha Elections 2019 : Dakshina Kannada Lok Sabha Constituency profile

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕಾರ ಮಾಡಿದ ತಕ್ಷಣ ಜಾರಿಗೆ ತಂದಿದ್ದ ಹಲವಾರು ಯೋಜನೆಗಳಲ್ಲಿ ಆದರ್ಶ ಗ್ರಾಮ ಯೋಜನೆ ಒಂದು. ಕರ್ನಾಟಕದ ಮಟ್ಟಿಗೆ ಮಾತ್ರ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದಿರುವವರಲ್ಲಿ ಅಗ್ರಸ್ಥಾನದಲ್ಲಿ ನಿಂತಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರು ಸುಳ್ಯದ ಸಮೀಪ ಬಳ್ಪ ಕುಗ್ರಾಮವನ್ನು ದತ್ತು ತೆಗೆದುಕೊಂಡು ತಮ್ಮ ಕೈಮೀರಿ ಪ್ರಯತ್ನ ಮಾಡಿ ಆದರ್ಶ ಗ್ರಾಮವನ್ನಾಗಿ ಮಾಡಿದ್ದಾರೆ.

ಈವರೆಗೆ ಒಟ್ಟು 47 ಬಗೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದ್ದು 2017-18 ರ ಅವಧಿಗಾಗಿ ಇನ್ನೂ 6 ಪ್ರಮುಖ ಕಾಮಗಾರಿಗಳನ್ನು ಗುರುತಿಸಲಾಗಿದೆ. ಇದಕ್ಕಾಗಿ 377.24 ಕೋಟಿ ರೂಪಾಯಿಗಳ ವೆಚ್ಚ ಅಂದಾಜಿಸಲಾಗಿದೆ. ಮಿನಿಹಳ್ಳ - ನಡುಗಲ್ಲು - ಚಾರ್ಮಾಡಿಗಳಲ್ಲಿ 3 ಸೇತುವೆ ನಿರ್ಮಾಣಕ್ಕೆ 19.80 ಕೋಟಿ ರೂಪಾಯಿ, ರಾಷ್ಟ್ರೀಯ ಹೆದ್ದಾರಿ 75ರ ಬಿ ಸಿ ರೋಡ್ - ಅಡ್ಡಹೊಳೆ ಭಾಗವನ್ನು 2373 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.

English summary
Lok Sabha Elections 2019 : Dakshina Kannada Lok Sabha Constituency profile. Once Congress bastion Dakshina Kannada LS constituency has converted into BJP bastion due to saffron surge in the district. Nalin Kumar Kateel is the present MP and defeated Janardhana Poojari in 2014 lok sabha election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X