ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಹೊಸ್ತಿಲಿನಲ್ಲಿ ಮೋದಿ ಜನಪ್ರಿಯತೆ ಹೆಚ್ಚಿಸಿದ ಮೂರು ಅಂಶಗಳು: ಸಮೀಕ್ಷೆ

|
Google Oneindia Kannada News

Recommended Video

ಈ ಮೂರು ಅಂಶಗಳು ನರೇಂದ್ರ ಮೋದಿಯವರ ಜನಪ್ರಿಯತೆಯನ್ನ ಹೆಚ್ಚಿಸಿತಾ? Lok Sabha Elections 2019

ನವದೆಹಲಿ, ಏಪ್ರಿಲ್ 5: ಪ್ರಮುಖ ವಿರೋಧಪಕ್ಷಗಳು ಒಂದಾಗಿ ಎನ್‌ಡಿಎ ಸರ್ಕಾರದ ವಿರುದ್ಧ ಚುನಾವಣಾ ಅಖಾಡಕ್ಕೆ ಇಳಿದಿದ್ದರೂ, ಮೂರು ಸಂಗತಿಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಈಗ ಬೆನ್ನೆಲುಬಾಗಿ ಪರಿಣಮಿಸಿವೆ ಎಂದು ಸಿಎಸ್‌ಡಿಎಸ್-ಲೋಕನೀತಿ ಕಳೆದ ವಾರ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.

ಜನವರಿ 7ರಿಂದ ಫೆಬ್ರವರಿ 26ರ ಅವಧಿಯಲ್ಲಿ ಮೋದಿ ಅವರ ಸರ್ಕಾರ ತೆಗೆದುಕೊಂಡ ನಿರ್ಧಾರಗಳು, ಚುನಾವಣೆಯಲ್ಲಿ ಅತ್ಯಂತ ನಿಕಟ ಪೈಪೋಟಿಯಾಗುವ ಸಾಧ್ಯತೆಯ ಸನ್ನಿವೇಶವನ್ನು ಸಾಕಷ್ಟು ಪ್ರಮಾಣದಲ್ಲಿ ಬದಲಿಸುವ ಸಾಮರ್ಥ್ಯ ಹೊಂದಿವೆ ಎಂದು ಸಮೀಕ್ಷೆ ತಿಳಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ನಿರ್ಧಾರಗಳಲ್ಲಿ ಜನವರಿ 7ರಂದು ಪ್ರಕಟಿಸಿದ ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದ ಜನರಿಗೆ ಶೇ 10ರ ಮಿಸಲಾತಿ, ಫೆಬ್ರವರಿ 1ರಂದು ಘೋಷಿಸಿದ ರೈತರಿಗೆ ಹಣ ತಲುಪಿಸುವ ಪ್ರಧಾನಮಂತ್ರಿ ಕಿಸಾನ್ ಯೋಜನೆ ಮತ್ತು ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ತಾನದ ಮೇಲೆ ಫೆಬ್ರವರಿ 26ರಂದು ನಡೆಸಿದ ವೈಮಾನಿಕ ದಾಳಿ ಒಳಗೊಂಡಿವೆ.

ಸಿಎಸ್‌ಡಿಎಸ್-ಲೋಕನೀತಿ-ದಿ ಹಿಂದೂ-ತಿರಂಗಾ ಟಿವಿ-ದೈನಿಕ್ ಭಾಸ್ಕರ್ ಜತೆಯಾಗಿ ಚುನಾವಣಾ ಪೂರ್ವ ಸಮೀಕ್ಷೆ 2019ಅನ್ನು ನಡೆಸಿವೆ. 2014ರಲ್ಲಿ ಲೋಕನೀತಿ ನಡೆಸಿದ ಸಮೀಕ್ಷೆಗಿಂತಲೂ ಏಳು ಅಂಕಗಳಷ್ಟು ಮೋದಿ ಜನಪ್ರಿಯತೆ ಈಗ ಹೆಚ್ಚಳವಾಗಿದೆ. 2018ರ ಮೇ ತಿಂಗಳಿನಲ್ಲಿಯೂ ನಡೆಸಿದ ಸಮೀಕ್ಷೆಗಿಂತಲೂ ಮೋದಿ ಜನಪ್ರಿಯತೆ ಮಟ್ಟ ಏರಿಕೆಯಾಗಿದೆ.

ಮೋದಿ ಹವಾ: ಉತ್ತರದಲ್ಲಿ ಜೋರು, ದಕ್ಷಿಣ ಭಾರತದಲ್ಲಿ ಚೂರೇ ಚೂರು! ಮೋದಿ ಹವಾ: ಉತ್ತರದಲ್ಲಿ ಜೋರು, ದಕ್ಷಿಣ ಭಾರತದಲ್ಲಿ ಚೂರೇ ಚೂರು!

2018ರ ಅಂತ್ಯದ ವೇಳೆಗೆ ಮೂರು ಪ್ರಮುಖ ಹಿಂದಿ ಭಾಷಿಕ ರಾಜ್ಯಗಳನ್ನು ಕಾಂಗ್ರೆಸ್, ಬಿಜೆಪಿ ತೆಕ್ಕೆಯಿಂದ ಕಸಿದುಕೊಂಡಿದ್ದರೂ ಅವರ ಜನಪ್ರಿಯತೆಯಲ್ಲಿ ಏರಿಕೆಯಾಗಿದೆ ಎನ್ನುವುದು ಮುಖ್ಯ.

ಪ್ರಮುಖ ನಾಯಕರ ಜನಪ್ರಿಯತೆ ಮಟ್ಟ

ಪ್ರಮುಖ ನಾಯಕರ ಜನಪ್ರಿಯತೆ ಮಟ್ಟ

ನರೇಂದ್ರ ಮೋದಿ ಅವರ ಜನಪ್ರಿಯತೆ 2014 ಮೇ ಸಂದರ್ಭದಲ್ಲಿ ಶೇ 36ರಷ್ಟಿದ್ದರೆ, 2017ರ ಮೇ ವೇಳೆಗೆ ಶೇ 44ಕ್ಕೆ ಹೆಚ್ಚಿತ್ತು. 2018ರ ಜನವರಿಯಲ್ಲಿ ಶೇ 37ಕ್ಕೆ ಕುಸಿದಿತ್ತು. 2018ರ ಮೇ ವೇಳೆಗೆ ಶೇ 34ಕ್ಕೆ ಇಳಿದಿತ್ತು. ಚುನಾವಣಾ ಪೂರ್ವ ಸಮೀಕ್ಷೆ ವೇಳೆಗೆ ಅದು ಶೇ 43ಕ್ಕೆ ಮುಟ್ಟಿದೆ.

ರಾಹುಲ್ ಗಾಂಧಿ ಅವರ ಜನಪ್ರಿಯತೆ ಕೂಡ 2014ಕ್ಕೆ ಹೋಲಿಸಿದರೆ ಸಾಕಷ್ಟು ಏರಿಕೆಯಾಗಿದೆ. ಶೇ 16ರಷ್ಟಿದ್ದ ಜನಪ್ರಿಯತೆ ಮೇ 2017ರ ಸಂದರ್ಭದಲ್ಲಿ ಶೇ 9ಕ್ಕೆ ಇಳಿದಿತ್ತು. ಈಗ ಶೇ 24ಕ್ಕೆ ಹೆಚ್ಚಿದೆ.

ಮಾಯಾವತಿ ಅವರ ಜನಪ್ರಿಯತೆ ಶೇ 3, ಮಮತಾ ಬ್ಯಾನರ್ಜಿ ಜನಪ್ರಿಯತೆ ಶೇ 2ರಷ್ಟಿದೆ. ಇತರೆ ನಾಯಕರ ಒಟ್ಟು ಜನಪ್ರಿಯತೆ ಶೇ 13ರಷ್ಟಿದ್ದರೆ, ಇದಕ್ಕೆ ಶೇ 15ರಷ್ಟು ಮಂದಿ ಪ್ರತಿಕ್ರಿಯೆ ನೀಡಿಲ್ಲ.

ಸಿವೋಟರ್-ಐಎಎನ್‌ಎಸ್ ಸಮೀಕ್ಷೆ: ಎನ್‌ಡಿಎ ಮೈತ್ರಿಕೂಟಕ್ಕೇ ಜಯಭೇರಿ ಸಿವೋಟರ್-ಐಎಎನ್‌ಎಸ್ ಸಮೀಕ್ಷೆ: ಎನ್‌ಡಿಎ ಮೈತ್ರಿಕೂಟಕ್ಕೇ ಜಯಭೇರಿ

ಸಮಸ್ಯೆಗಳ ಬಗ್ಗೆ ಚರ್ಚೆಗೆ ನಿರುತ್ಸಾಹ

ಸಮಸ್ಯೆಗಳ ಬಗ್ಗೆ ಚರ್ಚೆಗೆ ನಿರುತ್ಸಾಹ

ಮತದಾನದ ಮೂರು ಪ್ರಮುಖ ಅಂಶಗಳ ಬಗ್ಗೆ ಸಮೀಕ್ಷೆಯಲ್ಲಿ ಪಾಲ್ಗೊಂಡವರು ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿಲ್ಲ. ಐದನೇ ಒಂದರಷ್ಟು ಮಂದಿ ಮಾತ್ರ ನಿರುದ್ಯೋಗ ಪ್ರಮುಖ ಸಮಸ್ಯೆ ಎಂದಿದ್ದಾರೆ. ಆರನೇ ಒಂದರಷ್ಟು ಮಂದಿಗೆ ಅಭಿವೃದ್ಧಿ ಸಮಸ್ಯೆಯಾಗಿ ಕಂಡಿದೆ. ಶೇ 2ರಷ್ಟು ಮಂದಿ ರಾಷ್ಟ್ರೀಯ ಭದ್ರತೆ ಮತ್ತು ಪಾಕಿಸ್ತಾನದ ವಿರುದ್ಧ ವೈಮಾನಿಕ ದಾಳಿ ಮತದಾನಕ್ಕೆ ಪ್ರಮುಖ ವಿಚಾರವಾಗಿ ಪರಿಗಣಿಸಿದ್ದಾರೆ. ಶೇ 3ರಷ್ಟು ಮಂದಿಗೆ ಮಾತ್ರ ಮೀಸಲಾತಿ ಮುಖ್ಯ ಎನಿಸಿದೆ.

Times Now-VMR Opinion Poll: ದಕ್ಷಿಣದಲ್ಲಿ ಎನ್ ಡಿಎ 23, ಯುಪಿಎ 48Times Now-VMR Opinion Poll: ದಕ್ಷಿಣದಲ್ಲಿ ಎನ್ ಡಿಎ 23, ಯುಪಿಎ 48

ಮೋದಿ ಮತ್ತೆ ಪ್ರಧಾನಿಯಾಗಬೇಕೇ?

ಮೋದಿ ಮತ್ತೆ ಪ್ರಧಾನಿಯಾಗಬೇಕೇ?

ಬಾಲಕೋಟ್ ವೈಮಾನಿಕ ದಾಳಿಯು ಮೋದಿ ಅವರನ್ನು ಮುಂದಿನ ಪ್ರಧಾನಿಯನ್ನಾಗಿ ಮತ್ತೆ ನೋಡಬೇಕೆಂಬ ಜನರ ಅಭಿಪ್ರಾಯವನ್ನು ಹೆಚ್ಚಿಸಿದೆ. ದೇಶದಾದ್ಯಂತ ಈ ವಿಚಾರವಾಗಿ ಮೋದಿ ಅವರ ಪರ ಒಲವು ವ್ಯಕ್ತವಾಗಿದೆ. ಆದರೆ, ದಕ್ಷಿಣ ಭಾರತದಲ್ಲಿ ಇದರ ಪ್ರಮಾಣ ಕಡಿಮೆ.

ಬಾಲಕೋಟ್ ದಾಳಿಗೆ ಮೊದಲು- 32%
ಬಾಲಕೋಟ್ ದಾಳಿ ಬಳಿಕ- 46%
ಆರ್ಥಿಕ ಹಿಂದುಳಿದವರಿಗೆ ಮೀಸಲಾತಿ ನೀಡುವ ಮೊದಲು- 37%
ಆರ್ಥಿಕ ಹಿಂದುಳಿದವರಿಗೆ ಮೀಸಲಾತಿ ಘೋಷಿಸಿದ ಬಳಿಕ- 48%
ಕಳೆದ ಒಂದು ತಿಂಗಳಲ್ಲಿ ಸರ್ಕಾರದಿಂದ ರೈತರಿಗೆ ಹಣ ಸಿಗದಿದ್ದಾಗ- 42
ಒಂದು ತಿಂಗಳಲ್ಲಿ ಸರ್ಕಾರದಿಂದ ಹಣ ಪಡೆದ ರೈತರು - 54%

ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆ?

ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆ?

ಆರ್ಥಿಕ ಹಿಂದುಳಿದವರಿಗೆ ಮೀಸಲಾತಿ ನೀಡುವ ಮೊದಲು- 37%
ಆರ್ಥಿಕ ಹಿಂದುಳಿದವರಿಗೆ ಮೀಸಲಾತಿ ಘೋಷಿಸಿದ ಬಳಿಕ- 48%
ಕಳೆದ ಒಂದು ತಿಂಗಳಲ್ಲಿ ಸರ್ಕಾರದಿಂದ ರೈತರಿಗೆ ಹಣ ಸಿಗದಿದ್ದಾಗ- 42
ಒಂದು ತಿಂಗಳಲ್ಲಿ ಸರ್ಕಾರದಿಂದ ಹಣ ಪಡೆದ ರೈತರು - 54%

ಚುನಾವಣಾ ಲಾಭಕ್ಕಾಗಿ ಬಿಜೆಪಿ ಶ್ರೇಯಸ್ಸು

ಚುನಾವಣಾ ಲಾಭಕ್ಕಾಗಿ ಬಿಜೆಪಿ ಶ್ರೇಯಸ್ಸು

ಚುನಾವಣಾ ಲಾಭಕ್ಕಾಗಿ ಬಿಜೆಪಿ ಈ ಎಲ್ಲ ತೀರ್ಮಾನಗಳ ಶ್ರೇಯಸ್ಸು ಪಡೆದುಕೊಳ್ಳುತ್ತಿದೆ ಎಂದು ಒಪ್ಪಿಕೊಳ್ಳುತ್ತೇವೆ. ಆದರೆ ಮೋದಿ ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡಬೇಕು ಎಂದು ಶೇ 46ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಶೇ 43ರಷ್ಟು ಮಂದಿ ಈ ಕಾರಣಕ್ಕಾಗಿ ಮೋದಿ ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡಬಾರದು ಎಂದಿದ್ದಾರೆ.

ಚುನಾವಣಾ ಲಾಭಕ್ಕಾಗಿ ಬಿಜೆಪಿ ಶ್ರೇಯಸ್ಸು ಪಡೆದುಕೊಳ್ಳುತ್ತಿದೆ ಎಂಬುದನ್ನು ಒಪ್ಪುವುದಿಲ್ಲ ಎಂದಿರುವ ಜನರಲ್ಲಿ ಶೇ 66ರಷ್ಟು ಜನರಿಗೆ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಅನಿಸಿದೆ. ಶೇ 27ರಷ್ಟು ಮಂದಿಗೆ ಮೋದಿ ಸರ್ಕಾರ ಮತ್ತೆ ಬೇಡ ಎನಿಸಿದೆ.

ವೈಮಾನಿಕ ದಾಳಿಯ ಶ್ರೇಯಸ್ಸು ಯಾರಿಗೆ?

ವೈಮಾನಿಕ ದಾಳಿಯ ಶ್ರೇಯಸ್ಸು ಯಾರಿಗೆ?

ಪಾಕಿಸ್ತಾನದ ಬಾಲಕೋಟ್ ಮೇಲೆ ನಡೆಸಿದ ವೈಮಾನಿಕ ದಾಳಿಯ ಶ್ರೇಯಸ್ಸು ಯಾರಿಗೆ ಸೇರಬೇಕು? ಎಂಬ ಪ್ರಶ್ನೆಗೆ ಸಮ್ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ವಾಯುಪಡೆಗೆ ಇದರ ಕೀರ್ತಿ ಸಿಗಬೇಕು ಎಂದು ಹೆಚ್ಚಿನ ಅಭಿಪ್ರಾಯ ವ್ಯಕ್ತವಾಗಿದೆ. ಹಾಗೆಯೇ ಉತ್ತರ ಭಾರತದ ಭಾಗಗಳಲ್ಲಿ ಮೋದಿ ಅವರಿಗೂ ಶ್ರೇಯಸ್ಸು ಸಿಗುತ್ತದೆ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ. ವಾಯುಪಡೆ ಮತ್ತು ಮೋದಿ ಇಬ್ಬರಿಗೂ ಶ್ರೇಯಸ್ಸು ಕೊಟ್ಟವರ ಸಂಖ್ಯೆ ಉತ್ತರ ಭಾರತದಲ್ಲಿ ಹೆಚ್ಚಿದ್ದಾರೆ. ಆದರೆ, ದಕ್ಷಿಣ ಭಾರತದಲ್ಲಿ ಮೋದಿ ಅವರಿಗೆ ದೊರೆತ ಬೆಂಬಲ ಕಡಿಮೆ. ಇದು ವಾಯುಪಡೆಯದ್ದೇ ಸಾಧನೆ ಎಂದವರೇ ಹೆಚ್ಚು. ಹಿಂದಿಯೇತರ ಭಾಷಿಕರಿರುವ ರಾಜ್ಯಗಳಲ್ಲಿಯೂ ಈ ಅಭಿಪ್ರಾಯ ಹೆಚ್ಚಿದೆ.

ರಫೇಲ್ ಒಪ್ಪಂದದ ತಪ್ಪು-ಒಪ್ಪು

ರಫೇಲ್ ಒಪ್ಪಂದದ ತಪ್ಪು-ಒಪ್ಪು

ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಜನರನ್ನು ಪ್ರಶ್ನಿಸಿದಾಗ ರಫೇಲ್ ಒಪ್ಪಂದದ ಕುರಿತು ತಿಳಿವಳಿಕೆ ಇರುವವರಲ್ಲಿ 44% ಮಂದಿ ಮೋದಿ ಪ್ರಾಮಾಣಿಕರು ಎಂದಿದ್ದಾರೆ. 24% ಮಂದಿ ಮೋದಿ ಭ್ರಷ್ಟಾಚಾರ ಎಸಗಿದ್ದಾರೆ ಎಂದಿದ್ದಾರೆ. ಭ್ರಷ್ಟಾಚಾರ ತಡೆಯಲು ಮೋದಿ ಪ್ರಯತ್ನ ಮಾಡಿಲ್ಲ ಎಂದು 24% ಮಂದಿ ಹೇಳಿದ್ದಾರೆ.

ಹಾಗೆಯೇ ರಫೇಲ್ ಡೀಲ್ ಬಗ್ಗೆ ತಿಳಿವಳಿಕೆ ಇಲ್ಲ ಎಂದಿರುವವರಲ್ಲಿ 36% ಮಂದಿ ಮೋದಿ ಶುದ್ಧಹಸ್ತ ಎಂದಿದ್ದಾರೆ. 17% ಮಂದಿಗೆ ಮೋದಿ ಭ್ರಷ್ಟಾಚಾರ ಎಸಗಿರಬಹುದು ಎನಿಸಿದೆ. ಒಪ್ಪಂದದಲ್ಲಿ ತಪ್ಪು ಆಗಿದೆ ಎಂದಿರುವವರಲ್ಲಿ 24%ರಷ್ಟು ಮಂದಿ ಮೋದಿಯ ಪ್ರಾಮಾಣಿಕತೆಯನ್ನು ಅನುಮಾನಿಸಿಲ್ಲ. ಆದರೆ, 39% ಮಂದಿಗೆ ಮೋದಿ ಅಪ್ರಾಮಾಣಿಕರು ಎನಿಸಿದೆ. ಇನ್ನು ತಪ್ಪು ನಡೆದಿಲ್ಲ ಎಂದಿರುವವರಲ್ಲಿ 68% ಮಂದಿಗೆ ಮೋದಿ ಭ್ರಷ್ಟಾಚಾರಿಯಲ್ಲ ಎಂದಿದ್ದಾರೆ. ಅವರಲ್ಲಿ ಶೇ 11ರಷ್ಟು ಜನರಿಗೆ ಮೋದಿ ಪ್ರಾಮಾಣಿಕತೆ ಬಗ್ಗೆ ಅನುಮಾನವಿದೆ.

ಕಾಂಗ್ರೆಸ್ 'ನ್ಯಾಯ್' ಯೋಜನೆ

ಕಾಂಗ್ರೆಸ್ 'ನ್ಯಾಯ್' ಯೋಜನೆ

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ 'ನ್ಯಾಯ್' ಭರವಸೆಯ ಬಗ್ಗೆ ಶೇ 48ರಷ್ಟು ಮಂದಿಗೆ ಮಾತ್ರ ಗೊತ್ತಿದೆ. ಅದರಿಂದ ಲಾಭ ಪಡೆಯುವ ಅರ್ಹತೆ ಇದ್ದರೂ ಅದರ ಬಗ್ಗೆ ಅರಿವು ಹೊಂದಿರುವುದು ತೀರಾ ಕಡಿಮೆ. ನ್ಯಾಯ್ ಯೋಜನೆ ಕುರಿತು ಮಾಹಿತಿ ಉಳ್ಳವರ ನಡುವೆ ರಾಹುಲ್ ಗಾಂಧಿ ಹೆಚ್ಚು ಜನಪ್ರಿಯರಾಗಿದ್ದಾರೆ.

English summary
Lok Sabha elections 2019: Balkot airstrike, 10% reservations to economically weaker sections and PM-KISAN scheme helped Prime Minister Narendra Modi to boost his popularity, as per CSDS-Lokniti pre poll survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X