ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಪ್ರಣಾಳಿಕೆ : ಯಾರಿಗೆ ಮೊದಲ ಆದ್ಯತೆ?

|
Google Oneindia Kannada News

ನವದೆಹಲಿ, ಏಪ್ರಿಲ್ 02: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪಿ ಚಿದಂಬರಂ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮುಂತಾದವರ ಸಮ್ಮುಖದಲ್ಲಿ ನವದೆಹಲಿಯಲ್ಲಿಂದು ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.

LS polls: Congress releases its manifesto

ಪಿ.ಚಿದಂಬರಂ ನೇತೃತ್ವದ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯಲ್ಲಿ ಮನಪ್ರೀತ್ ಬಾದಲ್, ಸುಷ್ಮಿತಾ ದೇವ್, ರಾಜೀವ್ ಗೌಡ, ಭುಪೀಂದರ್ ಸಿಂಗ್ ಹೂಡಾ, ಜೈರಾಮ್ ರಮೇಶ್, ಸಲ್ಮಾನ್ ಖುರ್ಷಿದ್, ಬಿಂದು ಕೃಷ್ಣಾ, ಸೆಲ್ಜಾ ಕುಮಾರಿ, ರಘುವೀರ್ ಸಿಂಗ್ ಮೀನಾ, ಬಾಲಚಂದ್ರ ಮುಂಗೇಕರ್, ಮೀನಾಕ್ಷಿ ನಟರಾಜನ್, ರಜನಿ ಪಾಟಿಲ್, ಸ್ಯಾಮ್ ಪಿತ್ರೋಡಾ, ಸಚಿನ್ ರಾವ್, ತಮೃದ್ವಜ್ ಸಾಹು, ಮುಖುಲ್ ಸಗ್ಮಾ, ಶಶಿ ತರೂರ್, ಲಲಿತೇಶ್ ತ್ರಿಪಾಠಿ ಸೇರಿ 19 ಮಂದಿ ಸದಸ್ಯರಿದ್ದರು.

ಕಾಂಗ್ರೆಸ್ ಪ್ರಣಾಳಿಕೆ ಮುಖ್ಯಾಂಶ ತಿಳಿಯಲು ಕೆಪಿಸಿಸಿ ಟ್ವೀಟ್ ನೋಡಿ ಕಾಂಗ್ರೆಸ್ ಪ್ರಣಾಳಿಕೆ ಮುಖ್ಯಾಂಶ ತಿಳಿಯಲು ಕೆಪಿಸಿಸಿ ಟ್ವೀಟ್ ನೋಡಿ

ನಿರುದ್ಯೋಗ ನಿರ್ಮೂಲನೆ, ಮಹಿಳಾ ಸಬಲೀಕರಣ, ರೈತರ ಉದ್ಧಾರ ಇವೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಗ್ರಸಾಲಿನಲ್ಲಿ ರಾರಾಜಿಸುತ್ತಿದ್ದು, ಪ್ರಣಾಳಿಕೆಯ ಹೈಲೈಟ್ಸ್ ಗಳ ಲೈವ್ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

Newest FirstOldest First
1:33 PM, 2 Apr

ನಮ್ಮಲ್ಲಿ ಎಲ್ಲರೂ ಹಿಂದೂಗಳೇ. ಆದರೆ ನರೇಂದ್ರ ಮೋದಿಯವರಿಗೆ ಎಲ್ಲರನ್ನೂ ಉದ್ಯೋಗಿಗಳನ್ನಾಗಿ ಮಾಡಲು ಸಾಧ್ಯವಿಲ್ಲ. ನಿಜವಾದ ಹಿಂದುತ್ವದ ಕರ್ತವ್ಯವು ಎಲ್ಲರ ಬದುಕನ್ನು ಹಸನುಗೊಳಿಸುವುದಾಗಿದೆ. ಮಾಧ್ಯಮದವರು ನನ್ನನ್ನು ಪ್ರಶ್ನೆ ಕೇಳುವ ಹಾಗೆ ಮೋದಿಯವರನ್ನೂ ಭಯಪಡದೇ ಕೇಳಬೇಕು: ರಾಹುಲ್ ಗಾಂಧಿ
1:29 PM, 2 Apr

10 ವರ್ಷದ ಯುಪಿಎ ಸರ್ಕಾರದಲ್ಲಿ ನಾವು ಬಡತನ ಮುಕ್ತವಾಗಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದು 2019 ರ ಪ್ರಣಾಳಿಕೆಯಲ್ಲೂ ಸಹ ಬಡವರ, ದಲಿತರ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಯ ಗುರಿಯನ್ನು ಹೊಂದಲಾಗಿದೆ: ಮನಮೋಹನ್ ಸಿಂಗ್, ಮಾಜಿ ಪ್ರಧಾನಿ
1:28 PM, 2 Apr

ಈಗಾಗಲೇ ನಾವು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಸಾಲಮನ್ನಾ ಮಾಡುತ್ತೇವೆ ಎಂಬ ಭರವಸೆ ನೀಡಿದ್ದು ಅದನ್ನು ಮಾಡಿ ತೋರಿಸಿ ನುಡಿದಂತೆ ನಡೆದಿದ್ದೇವೆ: ರಾಹುಲ್ ಗಾಂಧಿ
1:27 PM, 2 Apr

ನಿರವ್ ಮೋದಿ, ಮೆಹೂಲ್ ಚೋಕ್ಸಿ ಅಂತಹ ಶ್ರೀಮಂತ ಉದ್ಯಮಿಗಳು ಸಾವಿರಾರು ಕೋಟಿ ಹಣ ಪಡೆದು ಸುಲಭವಾಗಿ ದೇಶ ಬಿಟ್ಟು ಓಡಿಹೋಗುತ್ತಿದ್ದರೂ ಅವರನ್ನು ಏನೂ ಮಾಡಲಾಗದ ಕೇಂದ್ರ ಸರ್ಕಾರವು ಪ್ರಾಮಾಣಿಕವಾಗಿ ದುಡಿಯುವ ರೈತರು ಬ್ಯಾಂಕ್ ಸಾಲ ಪಾವತಿಸಲು ವಿಫಲರಾದರೆ ಅವರನ್ನು ಜೈಲಿಗೆ ಕಳಿಸುತ್ತಾರೆ: ರಾಹುಲ್ ಗಾಂಧಿ
1:26 PM, 2 Apr

ನಾವು ಈ ಬಾರಿ ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಜಿಡಿಪಿಯಲ್ಲಿ 2 ರಿಂದ 6% ವರೆಗೆ ಮೀಸಲಿಡುವ ನಿರ್ಧಾರಕ್ಕೆ ಬಂದಿದ್ದು ಆರೋಗ್ಯ ಕ್ಷೇತ್ರದ ಸುಧಾರಣೆಗೂ ಸಹ ಈ ಬಾರಿ ಬದ್ಧರಾಗಿದ್ದೇವೆ: ರಾಹುಲ್ ಗಾಂಧಿ
1:26 PM, 2 Apr

ನಾನು ದೇಶದ ಪರವಾಗಿ ಕೆಲಸ ಮಾಡುತ್ತಿದ್ದು ನಮ್ಮ ಆಯ್ಕೆ ಮಾಡುವುದು ಬಿಡುವುದು ಜನರಿಗೆ ಬಿಟ್ಟ ವಿಚಾರವಾಗಿದೆ: ರಾಹುಲ್ ಗಾಂಧಿ
1:25 PM, 2 Apr

ದೇಶದಲ್ಲಿ ಗಬ್ಬರ್ ಸಿಂಗ್ ತೆರಿಗೆಯಿಂದಾಗಿ ಜನರಿಗೆ ತೀವ್ರವಾಗಿ ತೊಂದರೆಯಾಗಿದ್ದು ಈ ಅವ್ಯವಸ್ಥೆಯನ್ನು ಸರಿಪಡಿಸಲು ನಮ್ಮ ಆರ್ಥಿಕ ತಜ್ಞರ ತಂಡವು ಶಕ್ತವಾಗಿದೆ- ರಾಹುಲ್ ಗಾಂಧಿ
Advertisement
1:24 PM, 2 Apr

ನಾವು ದಕ್ಷಿಣ ಭಾರತವನ್ನು ಕಡೆಗಣಿಸುತ್ತಿದ್ದೇವೆ ಎಂಬ ಬಲವಾದ ಭಾವನೆ ಅಲ್ಲಿನ ಜನರಲ್ಲಿದೆ. ಆದ್ದರಿಂದಲೇ ನಾನು ವಯನಾಡಿನಿಂದ ಸ್ಪರ್ಧಿಸುತ್ತಿದ್ದೇನೆ. ನಾವು ನಿಮ್ಮೊಂದಿಗಿದ್ದೇವೆ ಎಂಬ ಭಾವನೆ ಭದ್ರತೆಯನ್ನು ಅವರಿಗೆ ನೀಡಬೇಕಿದೆ- ರಾಹುಲ್ ಗಾಂಧಿ
1:20 PM, 2 Apr

ಎನ್ ಡಿಎ ಸರ್ಕಾರದ ಆಡಳಿತಾವಧಿಯಲ್ಲಿ ಭದ್ರತಾ ಕ್ಷೇತ್ರಕ್ಕೆ ವಿನಿಯೋಗಿಸಲಾಗಿದ್ದು ಕಡಿಮೆ ಬಜೆಟ್. ಅದನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂಮದರೆ ಹೆಚ್ಚಿಸಲಿದೆ- ರಾಹುಲ್ ಗಾಂಧಿ
1:18 PM, 2 Apr

"ಈ ಪ್ರಣಾಳಿಕೆಯಲ್ಲಿ ಇರುವುದೆಲ್ಲವೂ ಸತ್ಯ. ಇವೆಲ್ಲವೂ ಕಾರ್ಯರೂಪಕ್ಕೆ ಬರುತ್ತವೆ" -ರಾಹುಲ್ ಗಾಂಧಿ
1:17 PM, 2 Apr

ಪ್ರಣಾಳಿಕೆಯಲ್ಲಿ ದೇಶದ ಆರ್ಥಿಕತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇದು ದೇಶದ ಎಲ್ಲಾ ರಂಗಗಳ ಅಭಿವೃದ್ಧಿಗೆ ಪೂರಕವಾಗಿದೆ- ಮನಮೋಹನ್ ಸಿಂಗ್, ಮಾಜಿ ಪ್ರಧಾನಿ
1:16 PM, 2 Apr

ಪ್ರಣಾಳಿಕೆ ಸಿದ್ಧಪಡಿಸುವ ಮುನ್ನ ಕಾಂಗ್ರೆಸ್ 121 ಸಾರ್ವಜನಿಕ ಸಮಾಲೋಚನೆಗಳನ್ನು ನಡೆಸಿತ್ತು, ಕೈಗಾರಿಕಾ ತಜ್ಞರ ಜೊತೆ 53 ಸಭೆಗಳನ್ನು ನಡೆಸಿತ್ತು
Advertisement
1:08 PM, 2 Apr

ನರೇಗಾ ಯೋಜನೆಯನ್ನು ಮೊದಲು ಜಾರಿಗೆ ತಂದಾಗ ಹಲವು ಲೇವಡಿ ಮಾಡಿದ್ದರು. ಆದರೆ ಜನರಿಗೆ ಅದರ ಬೆಲೆ ಈಗ ಅರ್ಥವಾಗುತ್ತಿದೆ. ಈ ಬಾರಿ ನರೇಗಾ ಯೋಜನೆಯಡಿ 100 ದಿನದ ಬದಲಾಗಿ 150 ದಿನಗಳ ಕಾಲ ಉದ್ಯೋಗ ಖಾತ್ರಿಯ ಭರವಸೆ ನೀಡುತ್ತೇವೆ- ರಾಹುಲ್ ಗಾಂಧಿ
1:05 PM, 2 Apr

ಹೊಸದಾಗಿ ಉದ್ಯಮ ಆರಂಭಿಸುವ ಯುವಕರಿಗೂ ಉತ್ತೇಜನ ನೀಡುತ್ತೇವೆ. ಹೊಸದಾಗಿ ಸ್ವಂತ ಉದ್ಯೋಗ ಶುರುಮಾಡುವವರು ಯಾವುದೇ ಅನುಮತಿ, ಅಥವಾ ಅಡ್ಡಿ ಇಲ್ಲದೆ ಉದ್ಯಮ ಆರಂಭಿಸಬಹುದು. ಅವರಿಗೆ ಮೂರು ವರ್ಷಗಳ ಕಾಲ ಯಾವುದೇ ತೆರಿಗೆ ಇಲ್ಲದಂಥ ಯೋಜನೆ ಜಾರಿಗೆ ತರುತ್ತೇವೆ- ರಾಹುಲ್ ಗಾಂಧಿ
1:03 PM, 2 Apr

ಯುವಕರಿಗೆ ಭಾರತದಲ್ಲಿ ಉದ್ಯೋಗ ಸಿಗುತ್ತಿಲ್ಲ. ಮೋದಿಯವರು 2 ಕೋಟಿ ಉದ್ಯೋಗಾವಕಾಶ ಸೃಷ್ಟಿಸುವುದಾಗಿ ಹೇಳಿದರು. ಆದರೆ ನಾವು ಅದನ್ನು ಕಾರ್ಯರೂಪಕ್ಕೆ ತರುತ್ತೇವೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ 10 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಮಾಡುತ್ತೇವೆ. ನರೇಗಾ ಯೋಜನೆಯಡಿ ಮತ್ತಷ್ಟು ಉದ್ಯೋಗಾವಕಾಶ ಹೆಚ್ಚಿಸುತ್ತೇವೆ- ರಾಹುಲ್ ಗಾಂಧಿ
1:00 PM, 2 Apr

ಪ್ರಣಾಳಿಕೆ ಅತ್ಯುತ್ತಮವಾಗಿ ಮೂಡಿಬಂದಿದ್ದು, ಅದಕ್ಕಾಗಿ ಶ್ರಮಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು-ರಾಹುಲ್ ಗಾಂಧಿ
12:59 PM, 2 Apr

ಪ್ತರತಿ ಭಾರತೀಯ ಖಾತೆಗೆ 15 ಲಕ್ಷ ರೂ.ಜಮಾ ಮಾಡದುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಆದರೆ ಅದು ಸುಳ್ಳು ಎಂಬುದು ಎಲ್ಲರಿಗೂ ಗೊತ್ತಾಗಿದೆ. ನಾವು ಭಾರತದ ಅತ್ಯಂತ ಬಡವರಿಗೆ ವರ್ಷಕ್ಕೆ 72 ಸಾವಿರ ರೂ. ನೀಡುತ್ತೇವೆ. 5 ವರ್ಷಕ್ಕೆ ಅದು 3.6 ಲಕ್ಷ ರೂ.ಆಗಲಿದೆ. ಇದು ಮೋದಿಯವರ ಅಪನಗದೀಕರಣವನ್ನು ನಗದೀಕರಣ ಮಾಡಲು ಸಹಾಯಕವಾಗಲಿದೆ- ರಾಹುಲ್ ಗಾಂಧಿ
12:54 PM, 2 Apr

ಈ ಪ್ರಣಾಳಿಕೆ ಮುಚ್ಚಿದ ಕೋಟೆಯಲ್ಲಿ ಸಿದ್ಧವಾಗಬಾರದು, ಬದಲಾಗಿ ಎಲ್ಲ ಭಾರತೀಯರ ಹಾರೈಕೆಯ ಪ್ರತಿಬಿಂಬವಾಗಬೇಕು ಎಂದು ನಾನು ಮೊದಲೇ ಮನವಿ ಮಾಡಿದ್ದೆ: ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
12:52 PM, 2 Apr

ನಮ್ಮ ರೈತರು, ಯುವಕರು, ದಲಿತರು, ಶಿಕ್ಷಣ, ಆರೋಗ್ಯ, ವಿದೇಶಿ ನೀತಿ, ರಾಷ್ಟ್ರೀಯ ಭದ್ರತೆ ನಮ್ಮ ಮೊದಲ ಆದ್ಯತೆ: ಪಿ.ಚಿದಂಬರಂ
12:51 PM, 2 Apr

ಈ ಪ್ರಣಾಳಿಕೆ ಕೋಟ್ಯಂತರ ಭಾರತದ ದ್ವನಿ: ಪಿ ಚಿದಂಬರಂ, ಪ್ರಣಾಳಿಕೆ ಸಮಿತಿ ಅಧ್ಯಕ್ಷ
12:47 PM, 2 Apr

*

"ಇದು ಐತಿಹಾಸಿಕ ದಿನ. ಬಲಾಡ್ಯ ಮತ್ತು ಅಭಿವೃದ್ಧಿಯ ಭಾರತ ನಿರ್ಮಾಣಕ್ಕೆ ಇದು ಪೂರಕವಾಗಲಿದೆ"-ರಂದೀಪ್ ಸುರಜೇವಾಲ, ಕಾಂಗ್ರೆಸ್ ವಕ್ತಾರ

English summary
Congress releases its manifesto for Lok Sabha elections 2019
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X