ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೇಥಿ, ವಯನಾಡು ಕ್ಷೇತ್ರದ ಅಭ್ಯರ್ಥಿ ರಾಹುಲ್ ಗಾಂಧಿ ಪರಿಚಯ

|
Google Oneindia Kannada News

ದೇಶದ ಅತ್ಯಂತ ಪುರಾತನ ಪಕ್ಷ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐಎನ್ ಸಿ) 2019ರಲ್ಲಿ ಅಧಿಕಾರಕ್ಕೆ ತರಲು ಪಕ್ಷದ 88ನೇ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಜ್ಜಾಗಿದ್ದಾರೆ. ಅಮೇಥಿ ಸಂಸದ ರಾಹುಲ್ ಗಾಂಧಿ ಅವರು ಈ ಬಾರಿ ಅಮೇಥಿಯಲ್ಲದೆ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಾಹುಲ್ ಗಾಂಧಿ ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿದ್ದರೂ ಕಾಲೇಜು ವಿದ್ಯಾಭ್ಯಾಸ ಮುಗಿದ ನಂತರ ಲಂಡನ್ನಿನ ಮಾನಿಟರ್ ಗ್ರೂಪ್ ನಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದರು.

ರಾಹುಲ್ ಗೆ ಪ್ರತಿಷ್ಠೆಯ ಕಣವಾಗಿರುವ 'ಅಮೇಥಿ' ಲೋಕಸಭಾ ಕ್ಷೇತ್ರರಾಹುಲ್ ಗೆ ಪ್ರತಿಷ್ಠೆಯ ಕಣವಾಗಿರುವ 'ಅಮೇಥಿ' ಲೋಕಸಭಾ ಕ್ಷೇತ್ರ

ನಂತರ 2002ರಲ್ಲಿ ಭಾರತಕ್ಕೆ ಹಿಂದಿರುಗಿದ ರಾಹುಲ್ ಮುಂಬೈ ಮೂಲದ ಹೊರಗುತ್ತಿಗೆ ಸಂಸ್ಥೆ ಬ್ಯಾಕ್ ಕೋಪ್ಸ್ ಸರ್ವೀಸಸ್ ಪ್ರೈವೇಟ್ ಲಿ. ಎಂಬ ತಂತ್ರಜ್ಞಾನ ಹೊರಗುತ್ತಿಗೆ ಸಂಸ್ಥೆಯ ನಿರ್ದೇಶಕರಾಗಿದ್ದರು.

ರಾಹುಲ್ ಆಸ್ತಿ 15.88 ಕೋಟಿ, 72 ಲಕ್ಷ ಸಾಲ, ಎಮ್.ಫಿಲ್., ವಿದ್ಯಾಭ್ಯಾಸರಾಹುಲ್ ಆಸ್ತಿ 15.88 ಕೋಟಿ, 72 ಲಕ್ಷ ಸಾಲ, ಎಮ್.ಫಿಲ್., ವಿದ್ಯಾಭ್ಯಾಸ

2004ರಲ್ಲಿ ತಾಯಿ ಸೋನಿಯಾ ಗಾಂಧಿ ಒತ್ತಡದಿಂದ ರಾಜಕಾರಣಕ್ಕೆ ಬಂದು, ಮೊದಲ ಸಲ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ಅಮೇಥಿಯಲ್ಲಿ ಸ್ಪರ್ಧಿಸಿ ಗೆದ್ದರು. ಆದರೆ, ಸಕ್ರಿಯ ರಾಜಕಾರಣದಲ್ಲಿ ಅಷ್ಟಾಗಿ ಗುರುತಿಸಿಕೊಳ್ಳಲಿಲ್ಲ.

 ಕಾರ್ಯಕರ್ತರ ಸಂಖ್ಯೆ 2 ಲಕ್ಷದಿಂದ 25 ಲಕ್ಷಕ್ಕೇರಿಸಿದರು

ಕಾರ್ಯಕರ್ತರ ಸಂಖ್ಯೆ 2 ಲಕ್ಷದಿಂದ 25 ಲಕ್ಷಕ್ಕೇರಿಸಿದರು

2007 ರಲ್ಲಿ ರಾಹುಲ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸುವ ಜತೆಗೆ ಯುವ ಕಾಂಗ್ರೆಸ್ ಮತ್ತು ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾದ ಹೊಣೆಗಾರಿಕೆಯನ್ನೂ ವಹಿಸಲಾಯಿತು. ಈ ಅವಧಿಯಲ್ಲೇ ಎರಡೂ ಸಂಘಟನೆಗಳಲ್ಲಿನ ಕಾರ್ಯಕರ್ತರ ಸಂಖ್ಯೆ 2 ಲಕ್ಷದಿಂದ 25 ಲಕ್ಷಕ್ಕೆ ಏರಿಕೆಯಾಯಿತು.

ದುರಂತಗಳನ್ನು ಕಣ್ಣಾರೆ ಕಂಡಿರುವ ರಾಹುಲ್

ದುರಂತಗಳನ್ನು ಕಣ್ಣಾರೆ ಕಂಡಿರುವ ರಾಹುಲ್

ಚಿಕ್ಕಂದಿನಿಂದ ದುರಂತಗಳನ್ನು ಕಣ್ಣಾರೆ ಕಂಡಿರುವ ರಾಹುಲ್ ಗೆ ನಿಧಾನಗತಿಯಲ್ಲಿ ಯಶಸ್ಸು ಲಭಿಸುತ್ತಿದೆ. ಆದರೆ, ರಾಜಕೀಯವಾಗಿ ಮೋದಿ -ಅಮಿತ್ ಶಾ ಅವರನ್ನು ಎದುರಿಸಲು ರಾಹುಲ್ ಅವರಿಗೆ ಮಹಾ ಘಟಬಂಧನ್ ಹೆಸರಿನಲ್ಲಿ ಮೈತ್ರಿಕೂಟಕ್ಕೆ ಮೊರೆ ಹೋಗಬೇಕಾಗಿದೆ. ಸೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಸಕ್ರಿಯ ರಾಜಕೀಯಕ್ಕೆ ಕರೆ ತಂದಿರುವ ರಾಹುಲ್ ಅವರಿಗೆ 2019ರ ಲೋಕಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಜಯ ಲಭಿಸುವುದೇ ಕಾದು ನೋಡಬೇಕಿದೆ.

ಡೆಹ್ರಾಡೂನ್ ನ ದಿ ಡೂನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ

ಡೆಹ್ರಾಡೂನ್ ನ ದಿ ಡೂನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ

* ರಾಹುಲ್ ಗಾಂಧಿ ಜೂನ್- 19-1970 ರಲ್ಲಿ ಜನನ
* 1975ರಿಂದ 83 ರವರೆಗೆ ದೆಹಲಿಯ ಸೇಂಟ್ ಕೊಲಂಬಸ್ ಮತ್ತು ಡೆಹ್ರಾ ಡೂನ್ ನ ದಿ ಡೂನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ
* 1984- ಅಕ್ಟೋಬರ್ 31- ರಾಹುಲ್ ಅಜ್ಜಿ ಇಂದಿರಾ ಗಾಂಧಿ ಹತ್ಯೆ
* 1984-89- ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಗೆ ಭದ್ರತಾ ಕಾರಣದಿಂದ ದೆಹಲಿಯ ಮನೆಯಲ್ಲೇ ಶಿಕ್ಷಣ
* 1989- ದೆಹಲಿಯ ಸೇಂಟ್ ಸ್ಟ್ರೀಥನ್ ಕಾಲೇಜಿನಲ್ಲಿ ವ್ಯಾಸಂಗ. ಒಂದೇ ವರ್ಷದಲ್ಲಿ ವ್ಯಾಸಂಗ ಮೊಟಕು.

ರಾಹುಲ್ ವಿದ್ಯಾಭ್ಯಾಸ ವಿವರ

ರಾಹುಲ್ ವಿದ್ಯಾಭ್ಯಾಸ ವಿವರ

* 1990 ಅಮೆರಿಕಕ್ಕೆ ತೆರಳಿ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಆರಂಭ
* 1991- ತಂದೆಯ ಹತ್ಯೆಯ ಕಾರಣ ರಾಹುಲ್ ಗೂ ಜೀವ ಬೆದರಿಕೆ. ಅಮೆರಿಕಾದಲ್ಲಿ ರೌಲ್ ವಿನ್ಸಿ ಹೆಸರಿನಲ್ಲಿ ಓದು.
* 1994- ಬಿಎ ಪದವಿ ಪೂರ್ಣ
* 1995- ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜಿನಲ್ಲಿ ಉನ್ನತ ವ್ಯಾಸಂಗಕ್ಕೆ ಸೇರಿದ ರಾಹುಲ್ ಗಾಂಧಿಗೆ ಎಂಫಿಲ್ ಪದವಿ
* 2004- ರಾಜಕೀಯಕ್ಕೆ ಪ್ರವೇಶ- ಉತ್ತರ ಪ್ರದೇಶದ ಅಮೇಥಿಯಿಂದ ಲೋಕಸಭೆಗೆ ಆಯ್ಕೆ
* ಸುಮಾರು 2007ರಲ್ಲಿ ರಾಹುಲ್ ಗಾಂಧಿಯವರು IYC, NSUI ಸಂಘಟನೆಗಳ ಉಸ್ತುವಾರಿಯಾಗಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿದರು.

ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆ

ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆ

* 2009- ಅಮೇಥಿ ಕ್ಷೇತ್ರದಿಂದ ಪುನರಾಯ್ಕೆ: ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ 21 ಸ್ಥಾನ ಬಂದಿದ್ದರ ಹಿಂದೆ ಮಹತ್ವದ ಪಾತ್ರ
* 2011- ಉತ್ತರ ಪ್ರದೇಶದಲ್ಲಿ ಹೆದ್ದಾರಿ ಯೋಜನೆಗೆ ಭೂಮಿ ಕಳೆದುಕೊಂಡ ರೈತರ ಪರ ಹೋರಾಟ, ಬಂಧನ
* 2013- ಜೈಪುರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನ ಉಪಾಧ್ಯಕ್ಷರಾಗಿ ಆಯ್ಕೆ
* 2014- ಸಾರ್ವತ್ರಿಕ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ಲೋಕಸಭೆಗೆ 3ನೇ ಬಾರಿ ಆಯ್ಕೆ, ಆದರೆ, ಕಾಂಗ್ರೆಸ್ ಪಕ್ಷ ಕೇವಲ 44 ಸ್ಥಾನಗಳನ್ನು ಮಾತ್ರಗಳಿಸಿ ಕಳಪೆ ಪ್ರದರ್ಶನ ನೀಡಿತು.
* 2017- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆ

English summary
Lok Sabha Elections 2019 : AICC president, Amethi MP Rahul Gandhi is contesting from Amethi and Wayanad constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X