ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಸೋಲು: ಚಿಂತಾಮಣಿ ಸಮೀಕ್ಷೆ

|
Google Oneindia Kannada News

ನವದೆಹಲಿ, ಏಪ್ರಿಲ್ 10: ಚಿಂತಾಮಣಿ-5 ಡಾಟ್ಸ್ ನಡೆಸಿದ ಚುನಾವಣಾ ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಭದ್ರಕೋಟೆಯಾದ ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರು ಈ ಬಾರಿ ಸೋಲಬಹುದು ಎನ್ನಲಾಗಿದೆ.

ರಾಹುಲ್ ಗೆ ಪ್ರತಿಷ್ಠೆಯ ಕಣವಾಗಿರುವ 'ಅಮೇಥಿ' ಲೋಕಸಭಾ ಕ್ಷೇತ್ರರಾಹುಲ್ ಗೆ ಪ್ರತಿಷ್ಠೆಯ ಕಣವಾಗಿರುವ 'ಅಮೇಥಿ' ಲೋಕಸಭಾ ಕ್ಷೇತ್ರ

ಉತ್ತರ ಪ್ರದೇಶದ ಒಟ್ಟು 80 ಕ್ಷೇತ್ರಗಳಲ್ಲಿ 2014 ರಲ್ಲಿ ಎರಡಉ ಸ್ಥಾನವನ್ನಷ್ಟೇ ಗೆದ್ದಿದ್ದ ಕಾಂಗ್ರೆಸ್, ಈ ಬಾರಿ ಅಷ್ಟು ಸ್ಥಾನವನ್ನೂ ಗೆಲ್ಲಲಾಗದೆ, ಕೇವಲ ಒಂದೇ ಸ್ಥಾನದಲ್ಲಿ ಗೆಲುವು ಸಾಧಿಸಲಿದೆ ಎಂದು ಈ ಸಮೀಕ್ಷೆ ತಿಳಿಸಿದೆ.

 ಚಿಂತಾಮಣಿ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಯುಪಿಎ vs ಎನ್ಡಿಎ ರಿಸಲ್ಟ್ ಚಿಂತಾಮಣಿ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಯುಪಿಎ vs ಎನ್ಡಿಎ ರಿಸಲ್ಟ್

ಅಂದರೆ ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರು ಸೋಲುವ ಸಂಭವ ತೀರಾ ಕಡಿಮೆ. ಆದ್ದರಿಂದ ಬಿಜೆಪಿಯ ಸ್ಮೃತಿ ಇರಾನಿ ಅವರ ಎದುರು ರಾಹುಲ್ ಗಾಂಧಿ ಅವರು ಸೋಲಬಹುದು ಎಂಬ ವದಂತಿಗೆ ಈ ಸಮೀಕ್ಷೆ ಪುಷ್ಠಿ ನೀಡಿದೆ. ರಾಹುಲ್ ಗಾಂಧಿ ಅವರೂ ಕೇರಳದ ವಯನಾಡಿನಿಂದ ಸ್ಪರ್ಧಿಸುತ್ತಿರುವುದೂ ಇದೇ ಆತಂಕದಿಂದಲೇ ಎಂಬ ಪ್ರಶ್ನೆಯೂ ಎದ್ದಿದೆ!

Lok Sabha elections 2019: Chintamani opinion polls: Rahul Gandhi may lose Amethi seat

ಈ ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶದ ಒಟ್ಟು 80 ಕ್ಷೇತ್ರಗಳಲ್ಲಿ ಬಿಜೆಪಿ+ 56 ಸ್ಥಾನಗಳನ್ನು ಗೆದ್ದರೆ, ಬಿಎಸ್ಪಿ-ಎಸ್ಪಿ ಮೈತ್ರಿಕೂಟ ಒಟ್ಟು 23 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. 2014 ರಲ್ಲಿ ಬಿಜೆಪಿ ಒಟ್ಟು 71 ಮತ್ತು ಅದರ ಮೈತ್ರಿ ಪಕ್ಷ ಅಪ್ನಾದಳ 2 ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ ಕೇವಲ 2ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ ಈ ಬಾರಿ ಕೇವಲ ಒಂದೇ ಒಂದು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಈ ಸಮೀಕ್ಷೆ ಹೇಳಿದೆ.

ಟೈಮ್ಸ್ ನೌ ದಕ್ಷಿಣ ಭಾರತ ಸಮೀಕ್ಷೆ: ಎನ್ಡಿಎಗಿಂತ ಯುಪಿಎ ಪ್ಲಸ್ ಮೇಲುಗೈ ಟೈಮ್ಸ್ ನೌ ದಕ್ಷಿಣ ಭಾರತ ಸಮೀಕ್ಷೆ: ಎನ್ಡಿಎಗಿಂತ ಯುಪಿಎ ಪ್ಲಸ್ ಮೇಲುಗೈ

2014 ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರಿಗೆ 408,651 ಮತಗಳನ್ನು ಪಡೆದು 107,903 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ ಸ್ಮೃತಿ ಇರಾನಿ ಅವರು 300,748 ಮತಗಳನ್ನು ಪಡೆದಿದ್ದರು.

English summary
Lok Sabha elections 2019: According to Chintamani-5dots opinion polls, Congress will win only 1 seat in Uttar Pradesh. That means Congress president Rahul Gandhi or UPA president Sonia Gandhi, one of them may lose their seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X