ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಂತಾಮಣಿ-5ಡಾಟ್ಸ್ ಪ್ರಕಾರ NDA-335, UPA ನೂರೂ ದಾಟಲ್ಲ!

|
Google Oneindia Kannada News

ನವದೆಹಲಿ, ಏಪ್ರಿಲ್ 10: ಪ್ರಸಿದ್ಧ ರಾಜಕೀಯ ವಿಶ್ಲೇಷಕರಾದ ಚಿಂತಾಮಣಿ ಅವರು 5ಡಾಟ್ಸ್ ನ್ಯೂಸ್ ಏಜೆನ್ಸಿಯೊಂದಿಗೆ ನಡೆಸಿದ ಲೋಕಸಭೆ ಚುನಾವಣೆ ಸಮೀಕ್ಷೆಯು ಎನ್ ಡಿಎ 335 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರುವುದಾಗಿ ಹೇಳಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಿಜೆಪಿಯು ಬಹುಮತ ಪಡೆಯಲು ಒಂದೇ ಒಂದು ಸೀಟುಗಳಿಂದ ಹಿಂದೆ ಬೀಳಲಿದ್ದು, 271(543) ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಈ ಸಮೀಕ್ಷೆ ತಿಳಿಸಿದೆ.

ಚಿಂತಾಮಣಿ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಯುಪಿಎ vs ಎನ್ಡಿಎ ರಿಸಲ್ಟ್ಚಿಂತಾಮಣಿ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಯುಪಿಎ vs ಎನ್ಡಿಎ ರಿಸಲ್ಟ್

ಆದರೆ ಯುಪಿಎ ಮೈತ್ರಿಕೂಟ ಮಾತ್ರ ಶತಕದಿಂದಲೂ ವಂಚಿತವಾಗಲಿದೆ ಎಂದು ಇದು ಹೇಳಿದ್ದು, ಕಾಂಗ್ರೆಸ್ ಕೇವಲ 66 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನೂ ಮಹತ್ವದ ಸಂಗತಿ ಎಂದರೆ ಈ ಬಾರಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕೇವಲ ಒಂದೇ ಒಂದು ಸ್ಥಾನದಲ್ಲಿ ಗೆಲುವು ಸಾಧಿಲಿದ್ದು, ರಾಹುಲ್ ಗಾಂಧಿ ಅವರು ಅಮೇಥಿಯಲ್ಲಿ ಸೋಲಬಹುದು ಎಂಮದು ಸಮೀಕ್ಷೆ ಹೇಳಿದೆ.

ಯಾರಿಗೆ ಎಷ್ಟು ಸ್ಥಾನ?

ಯಾರಿಗೆ ಎಷ್ಟು ಸ್ಥಾನ?

ಈ ಬಾರಿ ಮತ್ತೆ ಎನ್ ಡಿಎ ಸರ್ಕಾರವೇ ಅಧಿಕಾರಕ್ಕೆ ಬರುತ್ತದಾದರೂ, ಬಿಜೆಪಿಗೆ ಒಂದೇ ಒಂದು ಸ್ಥಾನದಿಂದ ಬಹುಮತ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ. ಈ ಸಮೀಕ್ಷೆ ಪ್ರಕಾರ 2019 ರಲ್ಲಿ ಬಿಜೆಪಿ-ಕಾಂಗ್ರೆಸ್ ಮತ್ತು ಎನ್ ಡಿಎ-ಯುಪಿಎ ಪಡೆಯಲಿರುವ ಸೀಟುಗಳ ಸಂಖ್ಯೆ:
ಬಿಜೆಪಿ 271
ಎನ್ ಡಿಎ 335
ಕಾಂಗ್ರೆಸ್ 66
ಯುಪಿಎ 97

2014 ಕ್ಕೆ ಹೋಲಿಸಿದರೆ?

2014 ಕ್ಕೆ ಹೋಲಿಸಿದರೆ?

2014 ರಲ್ಲಿ ಬರೋಬ್ಬರಿ 30 ವರ್ಷಗಳ ನಂತರ ಮೊದಲ ಬಾರಿಗೆ ಬಿಜೆಪಿಯು ಬಹುಮತ ಪಡೆದು ಅಧಿಕಾರಕ್ಕೆ ಬಮದಿತ್ತು. ಎನ್ ಡಿಎ 336 ಕ್ಷೇತ್ರಗಳಲ್ಲಿ ಗೆದ್ದಿತ್ತು.
ಬಿಜೆಪಿ 282
ಎನ್ ಡಿಎ 336
ಕಾಂಗ್ರೆಸ್ 44
ಯುಪಿಎ 60

ಟೈಮ್ಸ್ ನೌ ದಕ್ಷಿಣ ಭಾರತ ಸಮೀಕ್ಷೆ: ಎನ್ಡಿಎಗಿಂತ ಯುಪಿಎ ಪ್ಲಸ್ ಮೇಲುಗೈಟೈಮ್ಸ್ ನೌ ದಕ್ಷಿಣ ಭಾರತ ಸಮೀಕ್ಷೆ: ಎನ್ಡಿಎಗಿಂತ ಯುಪಿಎ ಪ್ಲಸ್ ಮೇಲುಗೈ

ರಾಹುಲ್ ಗಾಂಧಿಗೆ ಸೋಲು?

ರಾಹುಲ್ ಗಾಂಧಿಗೆ ಸೋಲು?

ಈ ಸಮೀಕ್ಷೆಯ ಪ್ರಕಾರ 80 ಲೋಕಸಭಾ ಕ್ಷೇತ್ರಗಳ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 2014 ರಲ್ಲಿ ಕೇವಲ ಎರಡೇ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಒಂದೇ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಅಂದರೆ ರಾಹುಲ್ ಗಾಂಧಿ ಅವರು ಅಮೇಥಿಯಲ್ಲಿ, ಅಥವಾ ಸೋನಿಯಾ ಗಾಂಧಿ ಅವರು ರಾಯ್ ಬರೇಲಿಯಲ್ಲಿ ಸೋಲಬಹುದು ಎಂದು ಈ ಸಮೀಕ್ಷೆ ಹೇಳಿದೆ.

ಪ್ರಮುಖ ರಾಜ್ಯಗಳಲ್ಲಿ ಬಲಾಬಲ

ಪ್ರಮುಖ ರಾಜ್ಯಗಳಲ್ಲಿ ಬಲಾಬಲ

ಉತ್ತರ ಪ್ರದೇಶ: ಬಿಜೆಪಿ+: 56, ಎಸ್ಪಿ-ಬಿಎಸ್ಪಿ: 23, ಕಾಂಗ್ರೆಸ್: 1
ಪಶ್ಚಿಮಬಂಗಾಳ- ಬಿಜೆಪಿ- 15, ಕಾಂಗ್ರೆಸ್ 2, ಟಿಎಂಸಿ: 25, ಸಿಪಿಎಂ: 0
ರಾಜಸ್ಥಾನ: ಬಿಜೆಪಿ: 21, ಕಾಂಗ್ರೆಸ್: 04
ಬಿಹಾರ: ಬಿಜೆಪಿ: 15, ಜೆಡಿಯು:13, ಎಲ್ ಜೆಪಿ:6, ಆರ್ಜೆಡಿ:4, ಕಾಂಗ್ರೆಸ್:2, ಎನ್ ಸಿಪಿ: 0
ಪಂಜಾಬ್: ಕಾಂಗ್ರೆಸ್:10, ಬಿಜೆಪಿ: 0, ಎಸ್ಎಡಿ: 3, ಎಎಪಿ: 0
ಒಡಿಶಾ: ಬಿಜೆಪಿ:13, ಬಿಜೆಡಿ: 8
ಮಹಾರಾಷ್ಟ್ರ: ಬಿಜೆಪಿ: 23, ಶಿವಸೇನೆ:17, ಕಾಂಗ್ರೆಸ್:4, ಎನ್ ಸಿಪಿ:4
ಮಧ್ಯಪ್ರದೇಶ: ಬಿಜೆಪಿ: 23, ಕಾಂಗ್ರೆಸ್: 6
ಗುಜರಾತ್: ಬಿಜೆಪಿ: 26, ಕಾಂಗ್ರೆಸ್: 0

ಸಮೀಕ್ಷೆಗಳ ಸರಾಸರಿ: ಎನ್ ಡಿಎ 274, ಯುಪಿಎ 140, ಇತರರು 129ಸಮೀಕ್ಷೆಗಳ ಸರಾಸರಿ: ಎನ್ ಡಿಎ 274, ಯುಪಿಎ 140, ಇತರರು 129

English summary
Lok Sabha elections 2019: According to Chintamani-5dots opinion polls, NDA will win 335 seats and UPA will not win even more than 100 seats. BJP will wi 271 and Congress 66.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X