• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಾಮರಾಜನಗರದಲ್ಲಿ ಹ್ಯಾಟ್ರಿಕ್ ಸರದಾರರಾಗುವರೇ ಧ್ರುವನಾರಾಯಣ್?

|

ವಿಧಾನಸಭೆ ಚುನಾವಣೆಯಲ್ಲಿ ಒಂದೇ ಒಂದು ಮತದ ಅಂತರದಿಂದ ಗೆಲ್ಲುವ ಮೂಲಕ ರಾಜ್ಯದಾದ್ಯಂತ ಸುದ್ದಿಯಾದವರು ಆರ್. ಧ್ರುವನಾರಾಯಣ್. ಅದು ಇತಿಹಾಸ. ಈಗ ಅವರು ಚಾಮರಾಜನಗರದಲ್ಲಿ ಅಜೇಯ. ಸತತ ಎರಡು ಲೋಕಸಭೆ ಚುನಾವಣೆಗಳಲ್ಲಿ ಗೆಲುವು ಕಂಡಿರುವ ಅವರು ಹ್ಯಾಟ್ರಿಕ್ ಸಾಧನೆಗಾಗಿ ಕಾಯುತ್ತಿದ್ದಾರೆ.

ತಮಿಳುನಾಡು ಮತ್ತು ಕೇರಳ ರಾಜ್ಯಗಳ ಮಗ್ಗಲಿನಲ್ಲಿ ಅರಣ್ಯ ಪ್ರದೇಶದೊಂದಿಗೆ ಚಾಚಿಕೊಂಡಿರುವ ಚಾಮರಾಜನಗರ ಜಿಲ್ಲೆ ಒಂದು ಕಾಲದಲ್ಲಿ ಜೆಡಿಎಸ್‌ನ ಪ್ರಬಲ ಕೋಟೆ. ಬಳಿಕ ಅದು ಕಾಂಗ್ರೆಸ್‌ ಪಾಲಿನ ಮತಕೋಟೆಯಾಗಿ ಪರಿವರ್ತನೆಯಾಗಿತ್ತು. ಇದು ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರ. ಮೈಸೂರಿನ ಭಾಗಗಳಾದ ನಂಜನಗೂಡು, ಟಿ. ನರಸೀಪುರ, ನಂಜನಗೂಡು, ಹೆಗ್ಗಡದೇವನಕೋಟೆ ಮತ್ತು ವರುಣ ವಿಧಾನಸಭೆ ಕ್ಷೇತ್ರಗಳೂ ಸಹ ಇದರ ವ್ಯಾಪ್ತಿಗೆ ಒಳಪಟ್ಟಿವೆ.

ಕಾಂಗ್ರೆಸ್‌ನಿಂದ ಲೋಕಸಭೆಗೆ ಪ್ರವೇಶಿಸಿರುವ ಧ್ರುವನಾರಾಯಣ್ ಅವರಿಗೆ ಸ್ವಪಕ್ಷದಲ್ಲಿ ಈ ಬಾರಿಯೂ ಪೈಪೋಟಿ ನೀಡುವ ಅಭ್ಯರ್ಥಿಗಳಿಲ್ಲ. ಹೀಗಾಗಿ ಧ್ರುವನಾರಾಯಣ್ ಈ ಬಾರಿಯೂ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಧ್ರುವನಾರಾಯಣ್ ಅವರ ಎದುರಾಳಿಯಾಗಿ ಯಾರು ಸ್ಪರ್ಧಿಸುತ್ತಾರೆ ಎನ್ನುವುದು ಖಚಿತವಾಗಿಲ್ಲ.ಎರಡು ಬಾರಿ ವಿಧಾನಸಭೆ ಮತ್ತು ಎರಡು ಬಾರಿ ಲೋಕಸಭೆ ಪ್ರವೇಶಿಸಿರುವ ಧ್ರುವನಾರಾಯಣ್, ಕೇಂದ್ರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಸಮಿತಿಯ ಸದಸ್ಯರಾಗಿದ್ದಾರೆ.

ಪ್ರಸಕ್ತ ಅವಧಿಯಲ್ಲಿ ಅವರು ಲೋಕಸಭೆ ಕಲಾಪಗಳಲ್ಲಿ ಶೇ 83ರಷ್ಟು ಹಾಜರಾತಿ ಹೊಂದಿದ್ದಾರೆ. 114 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. 647 ಪ್ರಶ್ನೆಗಳನ್ನು ಅವರು ಕೇಳಿದ್ದಾರೆ.

ಕೃಷಿಯಲ್ಲಿ ಪದವಿ

ಕೃಷಿಯಲ್ಲಿ ಪದವಿ

ರಂಗಸ್ವಾಮಿ ಧ್ರುವನಾರಾಯಣ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಎಂಬ ಹಳ್ಳಿಯಲ್ಲಿ (1961 ಜುಲೈ 31) ಜನಿಸಿದರು. ಕೃಷಿ ಕುಟುಂಬದಲ್ಲಿ ಜನಿಸಿದ ಅವರು ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಕೃಷಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು.

ವಿದ್ಯಾರ್ಥಿದೆಸೆಯಿಂದಲೂ ಅವರು ಸಂಘಟನೆ, ಹೋರಾಟ ಚಟುವಟಿಕೆಗಳಲ್ಲಿ ಸಕ್ರಿಯ. ಅವರು ರಾಜಕೀಯದ ಅಂಗಳದೊಳಗೆ ಕಾಲಿಟ್ಟಿದ್ದು ವಿದ್ಯಾರ್ಥಿ ನಾಯಕರಾಗಿ. 1983ರಲ್ಲಿ ಕಾಂಗ್ರೆಸ್ ಕಾರ್ಯಕರ್ತರಾಗಿ ಪಕ್ಷ ಸೇರಿಕೊಂಡರು. 1984ರಲ್ಲಿ ಕೃಷಿ ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದರು. ಅದೇ ವರ್ಷ ಬೆಂಗಳೂರು ನಗರ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರೂ ಆದರು. ಎರಡು ವರ್ಷದಲ್ಲಿಯೇ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದುಕೊಂಡರು.

ಬಾರಾಮತಿ: ಅಪ್ಪನ ಪ್ರಭಾವಳಿಯ ಕ್ಷೇತ್ರದಲ್ಲಿ ಸುಪ್ರಿಯಾ ಪಾರುಪತ್ಯ

ಬಿಜೆಪಿಯಿಂದ ಸ್ಪರ್ಧೆ

ಬಿಜೆಪಿಯಿಂದ ಸ್ಪರ್ಧೆ

ಆದರೆ, ಅವರು ಬಳಿಕ ಕಾಣಿಸಿಕೊಂಡಿದ್ದು ಬಿಜೆಪಿ ಪಾಳಯದಲ್ಲಿ. ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ಅವರಿಗೆ 1999ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿತ್ತು. ಆಗ ಅಸ್ತಿತ್ವದಲ್ಲಿ ಸಂತೇಮರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸುವ ಕನಸು ಕಂಡಿದ್ದರು. ಆದರೆ, ಅದು ನನಸಾಗಲಿಲ್ಲ. ಮೊದಲ ಚುನಾವಣೆಯಲ್ಲಿ ಅವರು ಸೋಲಿನ ಕಹಿ ಅನುಭವಿಸಿದರು. ಧ್ರುವನಾರಾಯಣ್ 28071 ಮತಗಳನ್ನು ಗಳಿಸಿದ್ದರೆ, ಅವರ ಎದುರಾಳಿಯಾಗಿದ್ದ ಜೆಡಿಯುನ ಎ.ಆರ್. ಕೃಷ್ಣಮೂರ್ತಿ 33,977 ಮತಗಳನ್ನು ಗಳಿಸಿದ್ದರು.

ಬೆಂಗಳೂರು ಉತ್ತರ ಕ್ಷೇತ್ರ ಅಭ್ಯರ್ಥಿ ಸದಾನಂದ ಗೌಡರ ವ್ಯಕ್ತಿಚಿತ್ರ

ಒಂದು ಮತದ ಗೆಲುವು

ಒಂದು ಮತದ ಗೆಲುವು

ಈ ಸೋಲಿನ ಸೇಡನ್ನು ಧ್ರುವನಾರಾಯಣ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತೀರಿಸಿಕೊಂಡರು. ಅದು ಕೇವಲ ಒಂದು ಮತಗಳ ಅಂತರದಿಂದ ಎನ್ನುವುದು ವಿಶೇಷ.

ಈ ಬಾರಿ ಧ್ರುವನಾರಾಯಣ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಅವರು 40,752 ಮತಗಳನ್ನು ಪಡೆದರೆ, ಅವರ ಎದುರಾಳಿ ಜೆಡಿಎಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ 40,751 ಮತ ಪಡೆದುಕೊಂಡು ಏಕೈಕ ಮತದಿಂದ ಸೋಲಿನ ಆಘಾತ ಅನುಭವಿಸಿದ್ದರು. ಇದು ರಾಜ್ಯದ ಇತಿಹಾಸದಲ್ಲಿಯೇ ಈ ರೀತಿಯ ಮೊದಲ ಮತ್ತು ಏಕೈಕ ಪ್ರಸಂಗವಾಗಿದೆ.

ಇಲ್ಲಿಂದ ಮುಂದೆ ಧ್ರುವನಾರಾಯಣ್ ಹಿಂದೆ ತಿರುಗುವ ಪ್ರಸಂಗ ಎದುರಾಗಲಿಲ್ಲ. 2008ರ ಚುನಾವಣೆ ವೇಳೆ ಕ್ಷೇತ್ರ ವಿಭಜನೆಯಾದಾಗ ಸಂತೆಮರಹಳ್ಳಿ ಕ್ಷೇತ್ರ ರದ್ದುಗೊಂಡು ಚಾಮರಾಜನಗರ ಮತ್ತು ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರಗಳೊಂದಿಗೆ ಹಂಚಿ ಹೋಯಿತು. ಆಗ ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಿದ ಅವರು, 37,384 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಎಸ್ ಮಹೇಂದರ್ ಅವರ ಎದುರು ಸುಮಾರು 12 ಸಾವಿರ ಮತಗಳ ಅಂತರದ ಗೆಲುವು ಕಂಡಿದ್ದರು.

ಸಂಸತ್‌ನತ್ತ ಪಯಣ

ಸಂಸತ್‌ನತ್ತ ಪಯಣ

ಅದರ ಮರುವರ್ಷವೇ ಅವರ ಚಿತ್ತ ರಾಷ್ಟ್ರರಾಜಕಾರಣದತ್ತ ಹರಿಯಿತು. 2009ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಅವರು ಚಾಮರಾಜನಗರ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆಗ ಅವರಿಗೆ ಎದುರಾಳಿಯಾಗಿದ್ದ ಎ.ಆರ್. ಕೃಷ್ಣಮೂರ್ತಿ ಬಿಜೆಪಿಯಲ್ಲಿದ್ದರು. ಈ ಚುನಾವಣೆಯಲ್ಲಿ 3,69,970 ಮತಗಳನ್ನು ಪಡೆದ ಧ್ರುವನಾರಾಯಣ್, ಕೇವಲ 4 ಸಾವಿರ ಮತಗಳ ಅಂತರದಿಂದ ಗೆದ್ದು ನಿಟ್ಟುಸಿರುಬಿಟ್ಟರು.

2014ರ ಲೋಕಸಭೆ ಚುನಾವಣೆಯಲ್ಲಿಯೂ ಅವರಿಗೆ ಎ.ಆರ್. ಕೃಷ್ಣಮೂರ್ತಿ ವಿರೋಧಿ ಅಭ್ಯರ್ಥಿಯಾಗಿದ್ದರು. ಆದರೆ, ಈ ಚುನಾವಣೆಯಲ್ಲಿ ಧ್ರುವನಾರಾಯಣ್ ಗೆಲುವಿನ ಅಂತರವನ್ನು ಬರೋಬ್ಬರಿ 1.41 ಲಕ್ಷಕ್ಕೆ ಹೆಚ್ಚಿಸಿಕೊಂಡರು. ಧ್ರುವನಾರಾಯಣ್ 567,782 ಮತ ಪಡೆದರೆ, ಕೃಷ್ಣಮೂರ್ತಿ 426,600 ಮತಗಳಿಗೆ ತೃಪ್ತಿಪಟ್ಟುಕೊಂಡರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha Elections 2019: Sitting MP R Dhruvanarayan contesting from Congress in Chamarajanagar for the third time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more