ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿ-ವೋಟರ್ ಸಮೀಕ್ಷೆ : ಕರ್ನಾಟಕದಲ್ಲಿ ಅಚ್ಚರಿ ಫಲಿತಾಂಶ, ನಿಖಿಲ್ ಸೋಲು!

|
Google Oneindia Kannada News

Recommended Video

Lok Sabha Elections 2019: ಸಿ ವೋಟರ್ ಸಮೀಕ್ಷೆ | ಕರ್ನಾಟಕದ 28 ಕ್ಷೇತ್ರಗಳ ಫಲಿತಾಂಶ

ಬೆಂಗಳೂರು, ಮೇ 20 : 2019ರ ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ ಬಿಜೆಪಿ ಹೆಚ್ಚು ಸ್ಥಾನಗಳನ್ನುಗಳಿಸಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಕಾಂಗ್ರೆಸ್‌-ಜೆಡಿಎಸ್ ಮೈತ್ರಿಕೂಟಕ್ಕೆ ಹಿನ್ನಡೆ ಉಂಟಾಗಲಿದೆ ಎಂಬುದು ವರದಿ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಸೋಮವಾರ ಸಂಜೆ ಟಿವಿ 9 ಕರ್ನಾಟಕದ 28 ಕ್ಷೇತ್ರಗಳ ಫಲಿತಾಂಶವನ್ನು ಪ್ರಕಟಿಸಿದೆ. ಸಿ-ವೋಟರ್ ನಡೆಸಿದ ಸಮೀಕ್ಷೆಯ ಫಲಿತಾಂಶವಿದು ಎಂದು ಎಲ್ಲಾ ಕ್ಷೇತ್ರಗಳ ಫಲಿತಾಂಶವನ್ನು ಪ್ರಸಾರ ಮಾಡಿದೆ. ಇದರಲ್ಲಿಯೂ ಸಹ ಬಿಜೆಪಿ ಮೇಲುಗೈ ಸಾಧಿಸಲಿದೆ.

ಸಮೀಕ್ಷೆಗಳ ಸಮೀಕ್ಷೆ : ಕರ್ನಾಟಕದಲ್ಲಿ ಯಾರಿಗೆ ಎಷ್ಟು, ಸ್ಥಾನ?ಸಮೀಕ್ಷೆಗಳ ಸಮೀಕ್ಷೆ : ಕರ್ನಾಟಕದಲ್ಲಿ ಯಾರಿಗೆ ಎಷ್ಟು, ಸ್ಥಾನ?

ಕರ್ನಾಟಕದ 28 ಕ್ಷೇತ್ರಗಳಿಗೆ ಏಪ್ರಿಲ್ 18 ಮತ್ತು 23ರಂದು ಮತದಾನ ನಡೆದಿತ್ತು. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ 27 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಪಕ್ಷ ಬೆಂಬಲ ನೀಡಿತ್ತು.

ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಎದುರಾದರೆ ಟ್ರಬಲ್ ಶೂಟರ್ ಇಲ್ಲ!ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಎದುರಾದರೆ ಟ್ರಬಲ್ ಶೂಟರ್ ಇಲ್ಲ!

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಂಡಿದ್ದವು. 28 ಕ್ಷೇತ್ರಗಳ ಪೈಕಿ 21 ಕ್ಷೇತ್ರದಲ್ಲಿ ಕಾಂಗ್ರೆಸ್, 7 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು...... 28 ಕ್ಷೇತ್ರಗಳ ಫಲಿತಾಂಶ ಇಲ್ಲಿದೆ.....

ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ ಗೆಲುವು

ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ ಗೆಲುವು

ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಬೆಂಗಳೂರು ನಗರದ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಪಾಲಾಗಲಿದೆ.

* ಬೆಂಗಳೂರು ದಕ್ಷಿಣ : ತೇಜಸ್ವಿಸೂರ್ಯ ಗೆಲುವು, ಬಿ.ಕೆ.ಹರಿಪ್ರಸಾದ್ ಸೋಲು (ಕಾಂಗ್ರೆಸ್ - ಜೆಡಿಎಸ್)
* ಬೆಂಗಳೂರು ಉತ್ತರ : ಸದಾನಂದ ಗೌಡ ಗೆಲುವು, ಕೃಷ್ಣ ಬೈರೇಗೌಡ ಸೋಲು (ಮೈತ್ರಿಕೂಟ)
* ಬೆಂಗಳೂರು ಕೇಂದ್ರ : ಪಿ.ಸಿ.ಮೋಹನ್ ಗೆಲುವು, ರಿಜ್ವಾನ್ ಅರ್ಷದ್ ಸೋಲು (ಕಾಂಗ್ರೆಸ್ - ಜೆಡಿಎಸ್)
* ಬೆಂ.ಗ್ರಾಮಾಂತರ : ಡಿ.ಕೆ.ಸುರೇಶ್ ಗೆಲುವು, ಅಶ್ವಥ್ ನಾರಾಯಣ ಸೋಲು (ಬಿಜೆಪಿ)

ಚಿಕ್ಕೋಡಿಯಲ್ಲಿ ಪ್ರಕಾಶ್ ಹುಕ್ಕೇರಿ ಗೆಲುವು

ಚಿಕ್ಕೋಡಿಯಲ್ಲಿ ಪ್ರಕಾಶ್ ಹುಕ್ಕೇರಿ ಗೆಲುವು

ಸಿ ವೋಟರ್ ಸಮೀಕ್ಷೆ ಪ್ರಕಾರ ಬೆಳಗಾವಿ, ಬಾಗಲಕೋಟೆಯಲ್ಲಿ ಬಿಜೆಪಿ ಜಯಗಳಿಸಲಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಹಾಲಿ ಸಂಸದ ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ಜಯಗಳಿಸಲಿದ್ದಾರೆ.

* ಬೆಳಗಾವಿ : ಸುರೇಶ್ ಅಂಗಡಿ ಗೆಲುವು, ಡಾ.ವಿ.ಎಸ್.ಸಾಧುನವರ ಸೋಲು (ಕಾಂಗ್ರೆಸ್ - ಜೆಡಿಎಸ್)
* ಬಾಗಲಕೋಟೆ : ಪಿ.ಸಿ.ಗದ್ದಿಗೌಡರ್, ವೀಣಾ ಕಾಶಪ್ಪನವರ್ ಸೋಲು (ಕಾಂಗ್ರೆಸ್ - ಜೆಡಿಎಸ್)
* ಚಿಕ್ಕೋಡಿ : ಪ್ರಕಾಶ್ ಹುಕ್ಕೇರಿ ಗೆಲುವು, ಅಣ್ಣಾ ಸಾಹೇಬ್ ಜೊಲ್ಲೆ ಸೋಲು (ಕಾಂಗ್ರೆಸ್ - ಜೆಡಿಎಸ್)

* ವಿಜಯಪುರ : ರಮೇಶ್ ಜಿಗಜಿಣಗಿ ಗೆಲುವು, ಸುನೀತಾ ಚೌವ್ಹಾಣ್ (ಮೈತ್ರಿಕೂಟ)

ಕೊಪ್ಫಳದಲ್ಲಿ ಮೈತ್ರಿಕೂಟಕ್ಕೆ ಜಯ

ಕೊಪ್ಫಳದಲ್ಲಿ ಮೈತ್ರಿಕೂಟಕ್ಕೆ ಜಯ

ಸಿ-ವೋಟರ್ ಸಮೀಕ್ಷೆ ಪ್ರಕಾರ ಕೊಪ್ಪಳದಲ್ಲಿ ಬಿಜೆಪಿ ನಾಯಕ, ಹಾಲಿ ಸಂಸದ ಕರಡಿ ಸಂಗಣ್ಣ ಅವರು ಸೋಲು ಅನುಭವಿಸಲಿದ್ದಾರೆ. ಕಾಂಗ್ರೆಸ್ - ಜೆಡಿಎಸ್‌ನ ರಾಘವೇಂದ್ರ ಹಿಟ್ನಾಳ್ ಜಯಗಳಿಸಲಿದ್ದಾರೆ.

* ಕೊಪ್ಪಳ : ರಾಘವೇಂದ್ರ ಹಿಟ್ನಾಳ್ ಗೆಲುವು, ಕರಡಿ ಸಂಗಣ್ಣ ಸೋಲು (ಬಿಜೆಪಿ)
* ಹಾವೇರಿ : ಶಿವಕುಮಾರ್ ಉದಾಸಿ ಗೆಲುವು, ಡಿ.ಆರ್.ಪಾಟೀಲ್ ಸೋಲು (ಕಾಂಗ್ರೆಸ್ - ಜೆಡಿಎಸ್)
* ಧಾರವಾಡ : ಪ್ರಹ್ಲಾದ್ ಜೋಶಿ ಗೆಲುವು, ವಿನಯ್ ಕುಲಕರ್ಣಿ ಸೋಲು (ಕಾಂಗ್ರೆಸ್ - ಜೆಡಿಎಸ್)

ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಗೆಲುವು

ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಗೆಲುವು

ಸಿ-ವೋಟರ್ ಸಮೀಕ್ಷೆ ಪ್ರಕಾರ ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ಹಾಲಿ ಸಂಸದರು ಬಿಜೆಪಿಯವರೇ.

* ಶಿವಮೊಗ್ಗ : ಬಿ.ವೈ.ರಾಘವೇಂದ್ರ ಗೆಲುವು, ಮಧು ಬಂಗಾರಪ್ಪ ಸೋಲು (ಮೈತ್ರಿಕೂಟ)
* ಉತ್ತರ ಕನ್ನಡ : ಅನಂತ್ ಕುಮಾರ್ ಹೆಗಡೆ ಗೆಲುವು, ಆನಂದ್ ಅಸ್ನೋಟಿಕರ್ ಸೋಲು (ಮೈತ್ರಿಕೂಟ)
* ದಾವಣಗೆರೆ : ಜಿ.ಎಂ. ಸಿದ್ದೇಶ್ವರ ಗೆಲುವು, ಎಚ್.ಬಿ.ಮಂಜಪ್ಪ ಸೋಲು (ಕಾಂಗ್ರೆಸ್ - ಜೆಡಿಎಸ್)

ಮೈಸೂರಿನಲ್ಲಿ ಪ್ರತಾಪ್ ಸಿಂಹ ಸೋಲು

ಮೈಸೂರಿನಲ್ಲಿ ಪ್ರತಾಪ್ ಸಿಂಹ ಸೋಲು

ಸಿ-ವೋಟರ್ ಸಮೀಕ್ಷೆ ಪ್ರಕಾರ ಮೈಸೂರು-ಕೊಡಗು ಕ್ಷೇತ್ರದಲ್ಲಿ ಹಾಲಿ ಸಂಸದ ಬಿಜೆಪಿಯ ಪ್ರತಾಪ್ ಸಿಂಹ ಸೋಲು ಅನುಭವಿಸಲಿದ್ದಾರೆ.

* ಉಡುಪಿ-ಚಿಕ್ಕಮಗಳೂರು : ಶೋಭಾ ಕರಂದ್ಲಾಜೆ ಗೆಲುವು, ಪ್ರಮೋದ್ ಮಧ್ವರಾಜ್ ಸೋಲು (ಕಾಂಗ್ರೆಸ್‌-ಜೆಡಿಎಸ್)
* ದಕ್ಷಿಣ ಕನ್ನಡ : ನಳೀನ್ ಕುಮಾರ್ ಕಟೀಲ್ ಗೆಲುವು, ವಿಥುನ್ ರೈ ಸೋಲು (ಕಾಂಗ್ರೆಸ್‌-ಜೆಡಿಎಸ್‌)
* ಮೈಸೂರು-ಕೊಡಗು : ಸಿ.ಎಚ್.ವಿಜಯಶಂಕರ್ ಗೆಲುವು, ಪ್ರತಾಪ್ ಸಿಂಹ ಸೋಲು (ಬಿಜೆಪಿ)
* ಚಿತ್ರದುರ್ಗ : ಬಿ.ಎನ್.ಚಂದ್ರಪ್ಪ ಗೆಲುವು, ಎ.ನಾರಾಯಣಸ್ವಾಮಿ ಸೋಲು (ಬಿಜೆಪಿ)

ಬಳ್ಳಾರಿಯಲ್ಲಿ ಉಗ್ರಪ್ಪ ಸೋಲು

ಬಳ್ಳಾರಿಯಲ್ಲಿ ಉಗ್ರಪ್ಪ ಸೋಲು

ಸಿ-ವೋಟರ್ ಸಮೀಕ್ಷೆ ಪ್ರಕಾರ ಬಳ್ಳಾರಿಯಲ್ಲಿ ಹಾಲಿ ಸಂಸದ, ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಸೋಲು ಅನುಭವಿಸಲಿದ್ದಾರೆ.

* ಬಳ್ಳಾರಿ : ವೈ.ದೇವೇಂದ್ರಪ್ಪ ಗೆಲುವು, ವಿ.ಎಸ್.ಉಗ್ರಪ್ಪ ಸೋಲು (ಕಾಂಗ್ರೆಸ್-ಜೆಡಿಎಸ್)
* ಬೀದರ್ : ಭಗವಂತ ಖೂಬಾ ಗೆಲುವು, ಈಶ್ವರ ಖಂಡ್ರೆ ಸೋಲು (ಕಾಂಗ್ರೆಸ್-ಜೆಡಿಎಸ್)
* ರಾಯಚೂರು : ರಾಜಾ ಅಮರೇಶ್ವರ ನಾಯಕ ಗೆಲುವು, ಬಿ.ವಿ.ನಾಯಕ ಸೋಲು (ಕಾಂಗ್ರೆಸ್‌-ಜೆಡಿಎಸ್)

ಮಲ್ಲಿಕಾರ್ಜುನ ಖರ್ಗೆ ಸೋಲು

ಮಲ್ಲಿಕಾರ್ಜುನ ಖರ್ಗೆ ಸೋಲು

ಸಿ-ವೋಟರ್ ಸಮೀಕ್ಷೆ ಪ್ರಕಾರ ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲು ಅನುಭವಿಸಲಿದ್ದಾರೆ.

* ತುಮಕೂರು - ಎಚ್.ಡಿ.ದೇವೇಗೌಡ ಜಯ, ಜಿ.ಎಸ್.ಬಸವರಾಜು ಸೋಲು (ಬಿಜೆಪಿ)
* ಗುಲರ್ಗ - ಡಾ.ಉಮೇಶ್ ಜಾಧವ್ ಗೆಲುವು, ಮಲ್ಲಿಕಾರ್ಜುನ ಖರ್ಗೆ ಸೋಲು (ಕಾಂಗ್ರೆಸ್‌-ಜೆಡಿಎಸ್)
* ಹಾಸನ - ಪ್ರಜ್ವಲ್ ರೇವಣ್ಣ ಗೆಲುವು, ಎ.ಮಂಜು ಸೋಲು (ಬಿಜೆಪಿ)

ಚಾಮರಾಜನಗರದಲ್ಲಿ ಯಾರಿಗೆ ಗೆಲುವು?

ಚಾಮರಾಜನಗರದಲ್ಲಿ ಯಾರಿಗೆ ಗೆಲುವು?

ಸಿ-ವೋಟರ್ ಸಮೀಕ್ಷೆ ಪ್ರಕಾರ ಚಾಮರಾಜನಗರದಲ್ಲಿ ಹಾಲಿ ಸಂಸದ ಧ್ರುವ ನಾರಾಯಣ ಸೋಲು ಕಾಣಲಿದ್ದಾರೆ. ಕೋಲಾರದಲ್ಲಿ ಮುನಿಯಪ್ಪ ಗೆಲುವು ಸಾಧಿಸಲಿದ್ದಾರೆ.
* ಚಾಮರಾಜನಗರ : ವಿ.ಶ್ರೀನಿವಾಸ ಪ್ರಸಾದ್ ಗೆಲುವು, ಧ್ರುವ ನಾರಾಯಣ ಸೋಲು (ಮೈತ್ರಿಕೂಟ)
* ಕೋಲಾರ : ಮುನಿಯಪ್ಪ ಗೆಲುವು, ಎಸ್.ಮುನಿಸ್ವಾಮಿ ಸೋಲು (ಬಿಜೆಪಿ)
* ಚಿಕ್ಕಬಳ್ಳಾಪುರ : ವೀರಪ್ಪ ಮೊಯ್ಲಿ ಗೆಲುವು, ಬಚ್ಚೇಗೌಡ ಸೋಲು (ಬಿಜೆಪಿ)

ಮಂಡ್ಯದಲ್ಲಿ ಸುಮಲತಾಗೆ ಜಯ

ಮಂಡ್ಯದಲ್ಲಿ ಸುಮಲತಾಗೆ ಜಯ

ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರ ಮಂಡ್ಯ. ಸಿ-ವೋಟರ್ ಸಮೀಕ್ಷೆ ಪ್ರಕಾರ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಲಿದ್ದಾರೆ.

English summary
Lok sabha elections 2019 : C voter exit poll result of Karnataka's 28 lok sabha seats. Lok sabha elections 2019 result in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X