ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಕ್ತಿ ಚಿತ್ರ : ವಾರಣಾಸಿ ಸಂಸದ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ

By ಮಹೇಶ್ ಮಲ್ನಾಡ್
|
Google Oneindia Kannada News

Recommended Video

ವಾರಣಾಸಿ ಬಿಜೆಪಿ ಎಂಪಿ, ಪ್ರಧಾನಿ ನರೇಂದ್ರ ಮೋದಿ ವ್ಯಕ್ತಿಚಿತ್ರ | Oneindia Kannada

ಜನಪ್ರಿಯ ಪ್ರಧಾನಿ ಎಂಬ ಹೆಗ್ಗಳಿಕೆ ಗಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆರೆಸ್ಸೆಸ್, ಬಿಜೆಪಿ ಸಂಪರ್ಕದಿಂದ ಹಂತ ಹಂತವಾಗಿ ಬೆಳೆದು ಗುಜರಾತಿನ ಮುಖ್ಯಮಂತ್ರಿಯಾಗಿ ಮೂರು ಅವಧಿಗೆ ಆಯ್ಕೆಯಾಗಿ, ಪ್ರಸ್ತುತ ಭಾರತದ ಪ್ರಧಾನಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಲೋಕಸಭಾ ಕ್ಷೇತ್ರವಾದ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದ ಸಂಸದರಾಗಿರುವ ಮೋದಿ ಅವರ ಬದುಕಿನ ಚಿತ್ರಣ ಇಲ್ಲಿದೆ

ಉತ್ತರ ಗುಜರಾತಿನ ಮೆಹನ್ಸಾ ಜಿಲ್ಲೆಯ ವಡ್ನ್ ನಗರ ನರೇಂದ್ರ ಮೋದಿ 17 ಸೆಪ್ಟೆಂಬರ್, 1950ರಲ್ಲಿ ಹುಟ್ಟಿದರು. ದಾವೋದರ್ ಮುಲ್ ಚಂದ್ ಹಾಗೂ ಹೀರಾಬೆನ್ ದಂಪತಿಯ ಆರು ಮಕ್ಕಳ ಪೈಕಿ ಮೂರನೆಯವರು ನರೇಂದ್ರ ಮೋದಿ. ಬಾಲ್ಯದಿಂದಲೇ ಜೀವನ ಮೌಲ್ಯ, ಸೇವಾ ಮನೋಭಾವ, ಸಮಾಜ ಸೇವೆಯನ್ನೇ ಧ್ಯೇಯವಾಗಿಸಿಕೊಂಡಿದ್ದರು.

2019ರ ಲೋಕಸಭೆ ಯುದ್ಧ, ಬಿಜೆಪಿ ಘೋಷ ವಾಕ್ಯ ಪ್ರಕಟಿಸಿದ ಮೋದಿ 2019ರ ಲೋಕಸಭೆ ಯುದ್ಧ, ಬಿಜೆಪಿ ಘೋಷ ವಾಕ್ಯ ಪ್ರಕಟಿಸಿದ ಮೋದಿ

ಮೋದಿ ಅವರ ತಂದೆ ರೈಲ್ವೆ ನಿಲ್ದಾಣದಲ್ಲಿ ಚಹಾದಂಗಡಿ ಇಟ್ಟುಕೊಂಡಿದ್ದರು. ಬಾಲಕ ನರೇಂದ್ರ ಅವರು ತಂದೆ ನೆರವಾಗುತ್ತಾ, ವ್ಯಾಪಾರ, ವ್ಯವಹಾರದ ಮೊದಲ ಪಾಠ ಕಲಿತರು. ಮನೆಯ ನಿರ್ವಹಣೆಗಾಗಿ ಸೋದರನ ಜತೆಗೂಡಿ ಸ್ವಂತ ಚಹಾದಂಗಡಿಯನ್ನು ಕೆಲ ಕಾಲ ನಡೆಸಿದರು. ಮೋದಿ ಅವರ ಜೀವನ, ರಾಜಕೀಯ ಬದುಕಿನ ಇನ್ನಷ್ಟು ವಿಷಯಗಳನ್ನು ತಿಳಿಯಲು ಮುಂದೆ ಓದಿ...

ಆರೆಸ್ಸೆಸ್ ನಿಂದ ಶಿಸ್ತುಪಾಠ ಕಲಿತ ಮೊದಿ

ಆರೆಸ್ಸೆಸ್ ನಿಂದ ಶಿಸ್ತುಪಾಠ ಕಲಿತ ಮೊದಿ

13ನೇ ವಯಸ್ಸಿನಲ್ಲೇ ಮೋದಿಯವರಿಗೆ ಜಶೋದಾ ಬೆನ್ ಚಿಮಣ್ ಲಾಲ್ ಜೊತೆ ಮದುವೆ ನಿಶ್ಚಿತಾರ್ಥವಾಯಿತು. 18ನೇ ವರ್ಷದಲ್ಲಿ ಮದುವೆ ನೆರವೇರಿತು. ಬಾಲ ದಂಪತಿಗಳು ಜೊತೆಗಿದ್ದು, ನಂತರ ಪತ್ನಿಯನ್ನು ತೊರೆದರು. ಜಶೋದಾಬೆನ್ ತಮ್ಮ ಜೀವನವನ್ನೆಲ್ಲಾ ಶಿಕ್ಷಕಿಯಾಗಿ ಕಳೆದು ಈಗ ನಿವೃತ್ತರಾಗಿದ್ದಾರೆ.

ಅರವತ್ತರ ದಶಕದ ಮಧ್ಯದಲ್ಲಿ ಇಂಡೋ-ಪಾಕ್ ಯುದ್ಧ ನಡೆದಾಗ ಬಾಲಕ ಮೋದಿ, ರೈಲು ನಿಲ್ದಾಣಗಳಲ್ಲಿ ಸೈನಿಕರಿಗೆ ಸ್ವಯಂಪ್ರೇರಣೆಯಿಂದ ಸೇವೆ ಮಾಡಿದ್ದರು.1967ರಲ್ಲಿ ಪ್ರವಾಹ ಪೀಡಿತ ಗುಜರಾತ್ ಜನತೆಯ ಸೇವೆ ಮಾಡಿದ್ದರು. ಆರೆಸ್ಸೆಸ್ ನಿಂದ ಕಲಿತ ಶಿಸ್ತು ಮೋದಿ ಜೀವನದಲ್ಲಿ ಏಳಿಗೆಗೆ ಕಾರಣವಾಯಿತು.

ಸಂಘಟನೆ, ಸಾಮಾಜಿಕ ಜವಾಬ್ದಾರಿ, ಸಮರ್ಪಣಾ ಮನೋಭಾವ

ಸಂಘಟನೆ, ಸಾಮಾಜಿಕ ಜವಾಬ್ದಾರಿ, ಸಮರ್ಪಣಾ ಮನೋಭಾವ

ಅದ್ಭುತ ಸಂಘಟನಾ ಕೌಶಲ್ಯ ಮತ್ತು ಮನಶಾಸ್ತ್ರದ ಅಧ್ಯಯನ ಮಾಡಿದ್ದ ಮೋದಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನ ನಾಯಕರಾಗಿ ಆಯ್ಕೆಯಾಗಿದ್ದರು. ಗುಜರಾತಿನಲ್ಲಿ ಅನೇಕ ಸಾಮಾಜಿಕ-ರಾಜಕೀಯ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದೊಡನೆ ತಮ್ಮ ಸಾಂಗತ್ಯವನ್ನು ಆರಂಭಿಸಿದರು. ನಿಸ್ವಾರ್ಥತೆ, ಸಾಮಾಜಿಕ ಜವಾಬ್ದಾರಿ, ಸಮರ್ಪಣಾ ಮನೋಭಾವ ಮತ್ತು ರಾಷ್ಟ್ರೀಯತೆಯ ಬೀಜ ಅವರಲ್ಲಿ ಮೊಳಕೆಯೊಡೆಯಿತು.

ಗುಜರಾತ್ ರಾಜ್ಯವನ್ನು ದೇಶಕ್ಕೆ ಮಾದರಿಯಾಗಿಸಿದರು

ಗುಜರಾತ್ ರಾಜ್ಯವನ್ನು ದೇಶಕ್ಕೆ ಮಾದರಿಯಾಗಿಸಿದರು

ಇ-ಆಡಳಿತ, ಬಂಡವಾಳ ಹೂಡಿಕೆ, ಬಡತನ ನಿರ್ಮೂಲನ, ಇಂಧನ, ಎಸ್ಇಜೆಡ್, ರಸ್ತೆ ಅಭಿವೃದ್ಧಿ, ಹಣಕಾಸು ನಿರ್ವಹಣೆ ಮುಂತಾದ ಕ್ಷೇತ್ರಗಳಲ್ಲಿ ಗುಜರಾತ್ ಇಡೀ ದೇಶಕ್ಕೆ ಮಾದರಿಯಾಗಿ ನಿಲ್ಲುವಂತೆ ಮಾಡಿದರು. ಇದೇ ಅಭಿವೃದ್ಧಿ ಯೋಜನೆಗಳನ್ನು ಸಂಸದರಾಗಿ, ಪ್ರಧಾನಿಯಾಗಿ ಮುಂದುವರೆಸಿದರು. 2002ರ ಗೋಧ್ರಾ ಹತ್ಯಾಕಾಂಡ, ನಕಲಿ ಎನ್ ಕೌಂಟರ್ ಪ್ರಕರಣಗಳು ಮೋದಿ ಅವರ ರಾಜಕೀಯ ಬೆಳವಣಿಗೆಗೆ ಅಡ್ಡಿ ತರಲಿಲ್ಲ.

ಜಾಗತಿಕ ಮಟ್ಟದಲ್ಲೂ ಮೋದಿ ಜನಪ್ರಿಯತೆ

ಜಾಗತಿಕ ಮಟ್ಟದಲ್ಲೂ ಮೋದಿ ಜನಪ್ರಿಯತೆ

ಮೋದಿ ಅವರಿಗೆ ಜನಪ್ರಿಯ ಮುಖ್ಯಮಂತ್ರಿ, ವರ್ಷದ ವ್ಯಕ್ತಿ, ವಿಶ್ವದ 100 ಪ್ರಭಾವಿ ವ್ಯಕ್ತಿಗಳು, ಟೈಮ್ ಮ್ಯಾಗಜೀನ್ ನ ವರ್ಷದ ವ್ಯಕ್ತಿ, ಫೋರ್ಬ್ಸ್ ಮ್ಯಾಗಜೀನ್ ನ ಪ್ರಭಾವಿಗಳ ಪಟ್ಟಿಯಲ್ಲಿ 2014ರಲ್ಲಿ 15ನೇ ಸ್ಥಾನ, ಫಾರ್ಚ್ಯೂನ್ ಮ್ಯಾಗಜೀನ್ ನಲ್ಲಿ ವಿಶ್ವದ ಶ್ರೇಷ್ಠ ನಾಯಕ, ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಜನಪ್ರಿಯ ರಾಜಕಾರಣಿ, ಚಾಂಪಿಯನ್ಸ್ ಆಫ್ ದಿ ಅರ್ಥ್, ಸಿಯೋಲ್ ಶಾಂತಿ ಪುರಸ್ಕಾರ, ಸೌದಿ ಅರೇಬಿಯಾ,ಅಫ್ಘಾನಿಸ್ತಾನ ಹಾಗೂ ಪ್ಯಾಲೆಸ್ಟೇನ್ ದೇಶಗಳ ಅತ್ಯುನ್ನತ ನಾಗರಿಕ ಗೌರವಗಳು ಲಭಿಸಿವೆ.

ಮಾಸ್ಟರ್ ತಂತ್ರಗಾರ ಎನಿಸಿಕೊಂಡರು

ಮಾಸ್ಟರ್ ತಂತ್ರಗಾರ ಎನಿಸಿಕೊಂಡರು

* ದೆಹಲಿ ವಿಶ್ವವಿದ್ಯಾಲಯದಿಂದ ಬಿಎ ಹಾಗೂ ಗುಜರಾತ್ ವಿವಿಯಿಂದ ಎಂಎ ಪದವಿ ಪಡೆದಿದ್ದಾರೆ.
* 1985ರಲ್ಲಿ ಬಿಜೆಪಿಯ ಸಕ್ರಿಯ ಸದಸ್ಯರಾದರು.
* 1987ರಲ್ಲಿ ಗುಜರಾತ್ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡರು.
* ಅಹಮದಾಬಾದಿನ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮೊಟ್ಟ ಮೊದಲ ಗೆಲುವು ತಂದುಕೊಡುವಲ್ಲಿ ಸಫಲರಾದರು.
* 1988 ಮತ್ತು 1995ರ ನಡುವೆ ಗುಜರಾತಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ನರೇಂದ್ರ ಮೋದಿಯವರು ಮಾಸ್ಟರ್ ತಂತ್ರಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆ ಅವಧಿಯಲ್ಲಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರಮಟದಲ್ಲಿ ಎರಡು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸುವ ಜವಾಬ್ದಾರಿ ನೀಡಲಾಯಿತು.

ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಣೆ

ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಣೆ

* 1995ರಲ್ಲಿ ಅವರು ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕವಾದ ನರೇಂದ್ರ ಮೋದಿ ಅವರಿಗೆ ಭಾರತದ ಐದು ರಾಜ್ಯಗಳ ಉಸ್ತುವಾರಿಯನ್ನು ನೀಡಲಾಯಿತು. 1998ರಲ್ಲಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹುದ್ದೆ ಅಲಂಕರಿಸಿದರು. 2001ರ ಅಕ್ಟೋಬರ್ ವರೆಗೂ ಈ ಹುದ್ದೆಯನ್ನು ನಿಭಾಯಿಸಿದರು.

ಅಡ್ವಾಣಿ ರಥಯಾತ್ರೆ ಯಶಸ್ಸು

ಅಡ್ವಾಣಿ ರಥಯಾತ್ರೆ ಯಶಸ್ಸು

* ಎಲ್. ಕೆ. ಅಡ್ವಾಣಿಯವರ ಸೋಮನಾಥದಿಂದ ಅಯೋಧ್ಯಾವರೆಗಿನ ರಥಯಾತ್ರೆ (ಅತಿ ದೊಡ್ಡ ಯಾತ್ರೆ) ಮತ್ತು ದಕ್ಷಿಣದ ತುದಿಯಲ್ಲಿರುವ ಕನ್ಯಾಕುಮಾರಿ(ದಕ್ಷಿಣ ಭಾರತ ತುತ್ತತುದಿ)ಯಿಂದ ಉತ್ತರದ ತುದಿಯಲ್ಲಿರುವ ಕಾಶ್ಮೀರದವರೆಗೆ ಯಾತ್ರೆ ನಡೆಸುವ ಗುರುತರ ಜವಾಬ್ದಾರಿಯನ್ನು ಮೋದಿಯವರು ಹೊತ್ತುಕೊಂಡರು. 1998ರಲ್ಲಿ ನವದೆಹಲಿಯಲ್ಲಿ ಬಿಜೆಪಿ ಅಧಿಕಾರ ಸ್ಥಾಪನೆಗೆ ಮೋದಿ ನಿಭಾಯಿಸಿದ ಇದೇ ಎರಡು ರಥಯಾತ್ರೆಗಳು ಕಾರಣ ಎನ್ನಲಾಗಿದೆ.

ಜನಪ್ರಿಯ ಮುಖ್ಯಮಂತ್ರಿ ನಂತರ ಪ್ರಧಾನಮಂತ್ರಿ

ಜನಪ್ರಿಯ ಮುಖ್ಯಮಂತ್ರಿ ನಂತರ ಪ್ರಧಾನಮಂತ್ರಿ

* ಜನವರಿ 2001ರ ಭೀಕರ ಭೂಕಂಪದಿಂದ ಉಂಟಾದ ಹಾನಿಯನ್ನು ಸರಿಪಡಿಸುವುದು ಮತ್ತು ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸುವುದು, ಗುಜರಾತಿನ ಆರ್ಥಿಕ ಪರಿಸ್ಥಿತಿ ಸುಧಾರಣೆಯನ್ನು ಸಮರ್ಥವಾಗಿ ನಿಭಾಯಿಸಿದರು.
* 2007 ಹಾಗೂ 2012ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಪುನರಾಯ್ಕೆಯಾದರು.

* ಸತತ 13 ವರ್ಷಗಳ ಕಾಲ ಜನಪ್ರಿಯ ಸಿಎಂ ಎಂದು ಸಾರ್ವಜನಿಕರಿಂದ ಗುರುತಿಸಲ್ಪಟ್ಟರು.

ಮೋದಿ ಅವರಿಗೆ ಜನಪ್ರಿಯ ಮುಖ್ಯಮಂತ್ರಿ, ವರ್ಷದ ವ್ಯಕ್ತಿ, ವಿಶ್ವದ 100 ಪ್ರಭಾವಿ ವ್ಯಕ್ತಿಗಳು, ಟೈಮ್ ಮ್ಯಾಗಜೀನ್ ನ ವರ್ಷದ ವ್ಯಕ್ತಿ, ಫೋರ್ಬ್ಸ್ ಮ್ಯಾಗಜೀನ್ ನ ಪ್ರಭಾವಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡರು

ವಾರಣಾಸಿಯಿಂದಲೇ ಮೋದಿ ಸ್ಪರ್ಧೆ

ವಾರಣಾಸಿಯಿಂದಲೇ ಮೋದಿ ಸ್ಪರ್ಧೆ

* 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ವಡೋದರಾ ಹಾಗೂ ವಾರಣಾಸಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದರು.
* 2019ರಲ್ಲಿ ವಾರಣಾಸಿ ಕ್ಷೇತ್ರವಲ್ಲದೆ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಅದರಲ್ಲೂ ಕರ್ನಾಟಕ ಅಥವಾ ಪಶ್ಚಿಮ ಬಂಗಾಳದ ಒಂದು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಹೆಚ್ಚಾಗಿದೆ. ಈ ನಡುವೆ ಮಾರ್ಚ್ 21ರಂದು ಪ್ರಕಟವಾದ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಂತೆ ಮೋದಿ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ವಾರಣಾಸಿ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಲು ಬಯಸಿದ್ದಾರೆ.

English summary
Lok Sabha Elections 2019 : Narendra Damodardas Modi is the Member of Parliament for Varanasi. PM Modi is the key member of BJP, RSS a Hindu nationalist volunteer organisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X