ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕ ಸಮರ 2019: ಬಿಜೆಪಿ ಅಭ್ಯರ್ಥಿಗಳ ಅಂತಿಮ ಸಂಭಾವ್ಯ ಪಟ್ಟಿ

|
Google Oneindia Kannada News

Recommended Video

Lok Sabha Elections 2019:ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ ಕರ್ನಾಟಕ ಬಿಜೆಪಿ|Oneindia Kannada

2019ರ ಲೋಕಸಭಾ ಚುನಾವಣೆಗಾಗಿ ಕರ್ನಾಟಕ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದ್ದು, ಅಂತಿಮ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಳಿಸಿದ್ದಾರೆ.

ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೆಚ್ಚಿನ ಅಧಿಕಾರವನ್ನು ಅಮಿತ್ ಶಾ ಅವರು ನೀಡಿದ್ದರೂ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಠಿಣವಾಗಲಿದೆ. ಇತ್ತೀಚೆಗೆ ದೆಹಲಿಗೆ ತೆರಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಹೈಕಮಾಂಡ್​ಗೆ ತಲುಪಿಸಿದ್ದಾರೆ.

ಲೋಕಸಭಾ ಚುನಾವಣೆ : ಬಿಜೆಪಿ ಟಿಕೆಟ್‌ಗೆ 12 ಕ್ಷೇತ್ರದಲ್ಲಿ ಪೈಪೋಟಿ!ಲೋಕಸಭಾ ಚುನಾವಣೆ : ಬಿಜೆಪಿ ಟಿಕೆಟ್‌ಗೆ 12 ಕ್ಷೇತ್ರದಲ್ಲಿ ಪೈಪೋಟಿ!

ಕೆಲವು ಕ್ಷೇತ್ರಗಳಿಗೆ ಇಬ್ಬರಿಗಿಂತ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಎಚ್ .ಎನ್ ಅನಂತ್ ಕುಮಾರ್ ಅವರ ನಿಧನದಿಂದ ತೆರವಾದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಖಾಸಗಿ ಸಂಸ್ಥೆಯ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಸುಮಾರು 9 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಇದೆ ಎಂಬ ವರದಿ ಬಂದಿದೆ.ಆದರೆ, ಹಾಲಿ ಸಂಸದರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತ ಎಂಬ ಸುದ್ದಿ ಬಂದಿದೆ. 28 ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

 ಯಾವ ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳ ನಿರೀಕ್ಷೆ

ಯಾವ ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳ ನಿರೀಕ್ಷೆ

ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಅವಿಭಜಿತ ಕನ್ನಡ ಜಿಲ್ಲೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸಿ, ಗೆಲುವು ಕಾಣಲಾಗಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಈ ತಂತ್ರಗಾರಿಕೆ ಲೋಕಸಭೆ ಚುನಾವಣೆಯಲ್ಲೂ ಮುಂದುವರೆಸುವ ಸಾಧ್ಯತೆಯಿದೆ.

1. ಬೆಂಗಳೂರು ಉತ್ತರ - ಡಾ. ಎಚ್.ಎಂ ಚಂದ್ರಶೇಖರ್​
2. ಕೊಪ್ಪಳ - ಸಿಂಗನಾಳ್ ವಿರೂಪಾಕ್ಷಪ್ಪ / ಸಿ.ವಿ. ಚಂದ್ರಶೇಖರ್​
3. ತುಮಕೂರು- ಎಚ್.ಎನ್ ಚಂದ್ರಶೇಖರ್​
4. ಬಾಗಲಕೋಟೆ - ಪಿ.ಸಿ ಪೂಜಾರ್/ ಸಂಗಮೇಶ ನಿರಾಣಿ
5. ಬಳ್ಳಾರಿ - ವೆಂಕಟೇಶ್ ಪ್ರಸಾದ್ (ನಾಗೇಂದ್ರ ಸೋದರ )

ಬಿಜೆಪಿಯ 6 ಹಾಲಿ ಸಂಸದರಿಗೆ ಟಿಕೆಟ್ ನೀಡಲು ವಿರೋಧ ಬಿಜೆಪಿಯ 6 ಹಾಲಿ ಸಂಸದರಿಗೆ ಟಿಕೆಟ್ ನೀಡಲು ವಿರೋಧ

 ಬೆಂಗಳೂರು ವಲಯ

ಬೆಂಗಳೂರು ವಲಯ

1. ಬೆಂಗಳೂರು ದಕ್ಷಿಣ : ತೇಜಸ್ವಿನಿ ಅನಂತ್​​ ಕುಮಾರ್​

2. ಬೆಂಗಳೂರು ಕೇಂದ್ರ : ಪಿ.ಸಿ. ಮೋಹನ್
3. ಬೆಂಗಳೂರು ಉತ್ತರ : ಡಾ. ಎಚ್.ಎಂ ಚಂದ್ರಶೇಖರ್ / ಡಿ.ವಿ. ಸದಾನಂದಗೌಡ
4. ಬೆಂಗಳೂರು ಗ್ರಾಮಾಂತರ: ಸಿ.ಪಿ ಯೋಗೇಶ್ವರ್/ ಅಶ್ವಥ್​ನಾರಾಯಣ್ ಗೌಡ / ತುಳಸಿ ಮುನಿರಾಜು ಗೌಡ/ ಎಂ.ಆರ್ ರುದ್ರೇಶ್

ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಹೆಸರು ಶಿಫಾರಸುಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಹೆಸರು ಶಿಫಾರಸು

 ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ

ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ

5. ಚಿಕ್ಕಬಳ್ಳಾಪುರ :ಬಿ.ಎನ್ ಬಚ್ಚೇಗೌಡ / ಶರತ್ ಬಚ್ಚೇಗೌಡ, ಕಟ್ಟಾ ಸುಬ್ರಮಣ್ಯ ನಾಯ್ಡು
6. ಕೋಲಾರ: ಡಿ.ಎಸ್ ವೀರಯ್ಯ/ ಚಿ.ನಾ ರೌ / ಚಲವಾದಿ ನಾರಾಯಣ ಸ್ವಾಮಿ
7. ಮೈಸೂರು- ಕೊಡಗು : ಪ್ರತಾಪ್ ಸಿಂಹ/ಡಾ. ಮಂಜುನಾಥ್/ ಡಿ ಮಾದೇಗೌಡ
8. ತುಮಕೂರು - ಎಚ್.ಎನ್ ಚಂದ್ರಶೇಖರ್ / ಸೊಗಡು ಶಿವಣ್ಣ / ಜಿ.ಎಸ್ ಬಸವರಾಜ್

 ಚಾಮರಾಜನಗರ ಇನ್ನಿತರ ಕ್ಷೇತ್ರಗಳು

ಚಾಮರಾಜನಗರ ಇನ್ನಿತರ ಕ್ಷೇತ್ರಗಳು

9. ಚಾಮರಾಜನಗರ:ಎಂ.ಶಿವಣ್ಣ/ ವಿ ಶ್ರೀನಿವಾಸ ಪ್ರಸಾದ್
10. ಶಿವಮೊಗ್ಗ : ಬಿ.ವೈ. ರಾಘವೇಂದ್ರ
11. ಉಡುಪಿ, ಚಿಕ್ಕಮಗಳೂರು - ಶೋಭಾ ಕರಂದ್ಲಾಜೆ / ಡಿ.ಎನ್ ಜೀವರಾಜ್/ ಜಯಪ್ರಕಾಶ್ ಹೆಗ್ಡೆ
12. ಚಿತ್ರದುರ್ಗ : ಜನಾರ್ದನ ಸ್ವಾಮಿ / ಡಾ. ಲಕ್ಷ್ಮೀನಾರಾಯಣ್
13. ದಾವಣಗೆರೆ : ಜಿ.ಎಂ. ಸಿದ್ದೇಶ್ವರ

ಲೋಕಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ದಿನಾಂಕ ಪ್ರಕಟಲೋಕಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ದಿನಾಂಕ ಪ್ರಕಟ

 ದಕ್ಷಿಣ ಕನ್ನಡ ಇನ್ನಿತರ ಕ್ಷೇತ್ರಗಳು

ದಕ್ಷಿಣ ಕನ್ನಡ ಇನ್ನಿತರ ಕ್ಷೇತ್ರಗಳು

14. ದಕ್ಷಿಣ ಕನ್ನಡ : ನಳಿನ್ ಕುಮಾರ್ ಕಟೀಲ್
15. ಉತ್ತರ ಕನ್ನಡ : ಅನಂತ್ ಕುಮಾರ್ ಹೆಗಡೆ
16. ಚಿಕ್ಕೋಡಿ : ರಮೇಶ್ ಕತ್ತಿ
17. ಧಾರವಾಡ : ಪ್ರಹ್ಲಾದ್ ಜೋಶಿ / ವಿಜಯ್ ಸಂಕೇಶ್ವರ

 ಬೆಳಗಾವಿ ಇನ್ನಿತರ ಕ್ಷೇತ್ರಗಳು

ಬೆಳಗಾವಿ ಇನ್ನಿತರ ಕ್ಷೇತ್ರಗಳು

18. ಕೊಪ್ಪಳ :ಸಿ.ವಿ. ಚಂದ್ರಶೇಖರ್/ ಸಿಂಗನಾಳ್ ವಿರೂಪಾಕ್ಷಪ್ಪ/ ಸಂಗಣ್ಣ ಕರಡಿ
19. ಬೀದರ್ : ಭಗವಂತ ಖೂಬಾ / ಮಲ್ಲಿಕಾರ್ಜುನ ಖೂಬಾ
20. ಹಾವೇರಿ/ ಗದಗ : ಶಿವಕುಮಾರ್ ಉದಾಸಿ
21. ಬೆಳಗಾವಿ : ಸುರೇಶ್ ಅಂಗಡಿ / ಪ್ರಭಾಕರ್ ಕೋರೆ

ಕರ್ನಾಟಕ: 2014ರ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದ ಐವರು ಮುಖಂಡರುಕರ್ನಾಟಕ: 2014ರ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದ ಐವರು ಮುಖಂಡರು

 ಬಾಗಲಕೋಟೆ ಇನ್ನಿತರ ಕ್ಷೇತ್ರಗಳು

ಬಾಗಲಕೋಟೆ ಇನ್ನಿತರ ಕ್ಷೇತ್ರಗಳು

22. ಬಾಗಲಕೋಟೆ : ಪಿ.ಎಚ್ ಪೂಜಾರ್/ ಸಂಗಮೇಶ ನಿರಾಣಿ/ ಪಿ.ಸಿ ಗದ್ದಿಗೌಡರ್
23. ವಿಜಯಪುರ : ರಮೇಶ್ ಜಿಗಜಣಗಿ
24. ಹಾಸನ : ಯೋಗಾ ರಮೇಶ್/ ಎ ಮಂಜು
25. ಮಂಡ್ಯ - ಸಿದ್ದರಾಮಯ್ಯ / ಸುಮಲತಾ(ಬಿಜೆಪಿಗೆ ಸೇರಿದರೆ ಅಥವಾ ಬಾಹ್ಯ ಬೆಂಬಲ)

 ರಾಯೂರು ಇನ್ನಿತರ ಕ್ಷೇತ್ರಗಳು

ರಾಯೂರು ಇನ್ನಿತರ ಕ್ಷೇತ್ರಗಳು

26. ಬಳ್ಳಾರಿ - ವೆಂಕಟೇಶ್ (ನಾಗೇಂದ್ರ ಸೋದರ )/ ಜೆ.ಶಾಂತಾ
27. ರಾಯಚೂರು - ಸಣ್ಣ ಪಕ್ಕೀರಪ್ಪ/ ತಿಪ್ಪರಾಜ ಹವಾಲ್ದಾರ್
28. ಕಲಬುರಗಿ - ಉಮೇಶ್ ಜಾಧವ್

English summary
Karnataka BJP president B.S.Yeddyurappa finalized the probable candidate's list for Lok Sabha Elections 2019 and he has submitted it to high command leaders. The final list of candidates including Karnataka will be officially announced after March 18, 2019 meeting led by PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X