ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಲಿಭಿಟ್ ಕ್ಷೇತ್ರದ ಬಿಜೆಪಿ ಸಂಸದೆ ಮನೇಕಾ ಗಾಂಧಿ ವ್ಯಕ್ತಿಚಿತ್ರ

|
Google Oneindia Kannada News

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ ಬಿಜೆಪಿಯ ಪ್ರಮುಖ ನಾಯಕಿಯರಲ್ಲಿ ಒಬ್ಬರು. ನೆಹರೂ-ಗಾಂಧಿ ಕುಟುಂಬದ ಸದಸ್ಯೆಯಾಗಿದ್ದರೂ ಪತಿ ಸಂಜಯ್ ಗಾಂಧಿ ಅವರ ಮರಣದ ನಂತರ ಕುಟುಂಬದಿಂದ ಪರಿತ್ಯಕ್ತರಾಗಿ ತಮ್ಮದೇ ಒಂದು ಪಕ್ಷ ಕಟ್ಟಿಕೊಂಡರು. ನಂತರ ಜನತಾ ಪಕ್ಷದೊಂದಿಗೆ ಸೇರಿ ಹಲವು ಬಾರಿ ಸಂಸದರೂ ಆದರು.

ಇದೀಗ ಬಿಜೆಪಿ ಜೊತೆ ಗುರುತಿಸಿಕೊಂಡಿರಿವ ಮನೇಕಾ ಗಾಂಧಿ, ಪ್ರಾಣಿ ಹಕ್ಕು ಹೋರಾಟಗಾರರಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ.

#MeToo ಪ್ರಕರಣ ನಿರ್ವಹಿಸಲು ನ್ಯಾಯಾಧೀಶರ ಸಮಿತಿ ರಚನೆ: ಮೇನಕಾ ಗಾಂಧಿ#MeToo ಪ್ರಕರಣ ನಿರ್ವಹಿಸಲು ನ್ಯಾಯಾಧೀಶರ ಸಮಿತಿ ರಚನೆ: ಮೇನಕಾ ಗಾಂಧಿ

ಉತ್ತರ ಪ್ರದೇಶದ ಪಿಲಿಭಿಟ್ ಕ್ಷೇತ್ರದಿಂದ ಆರು ಬಾರಿ ಮತ್ತು ಔನ್ಲಾ ಕ್ಷೇತ್ರದಿಂದ ಒಂದು ಭಾರಿ ಸ್ಪರ್ಧಿಸಿ ಗೆದ್ದ ಕೀರ್ತಿ ಮೇನಕಾ ಗಾಂಧಿ ಅವರಿಗೆ ಸಲ್ಲುತ್ತದೆ.

Lok Sabha elections 2019: BJP MP Maneka Gandhi profile

* 26 ಆಗಸ್ಟ್ 1956 ರಂದು ದೆಹಲಿಯ ಸಿಕ್ಖ್ ಕುಟುಂಬವೊಂದರಲ್ಲಿ ಮನೇಕಾ ಗಾಂಧಿ ಜನಿಸಿದರು.

* ತಂದೆ ಸೇನಾಧಿಕಾರಿ ಲೆ.ಕ.ತಾರಲೋಚನ್ ಸಿಂಗ್ ಆನಂದ್, ತಾಯಿ ಅಮ್ಟೇಶ್ವರ ಆನಂದ್

* ದೆಹಲಿಯ ಲೇಡಿ ಶ್ರೀರಾಮ ಕಾಲೇಜ್ ಮತ್ತು ಜವಾಹರಲಾಲ್ ನೆಹರು ವಿವಿಯಲ್ಲಿ ವಿದ್ಯಾಭ್ಯಾಸ

* ಕಾಲೇಜು ದಿನಗಳಲ್ಲಿ ರೂಪದರ್ಶಿಯಾಗಿದ್ದ ಮನೇಕಾ ಗಾಂಧಿ ಅವರನ್ನು ಪಾರ್ಟಿಯೊಂದರಲ್ಲಿ ನೋಡಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುತ್ರ ಸಂಜಯ್ ಗಾಂಧಿ 1974 ಸೆಪ್ಟೆಂಬರ್ 23 ರಂದು ಅವರನ್ನು ವಿವಾಹವಾದರು.

ಲೈಂಗಿಕ ದೌರ್ಜನ್ಯದ ದೂರು ನೀಡುವುದಕ್ಕೆ ಸಮಯದ ಮಿತಿಯಿಲ್ಲ: ಮನೇಕಾ ಗಾಂಧಿಲೈಂಗಿಕ ದೌರ್ಜನ್ಯದ ದೂರು ನೀಡುವುದಕ್ಕೆ ಸಮಯದ ಮಿತಿಯಿಲ್ಲ: ಮನೇಕಾ ಗಾಂಧಿ

* ತುರ್ತುಪರಿಸ್ಥಿಯ ಸಮಯದಲ್ಲಿ ಅಧಿಕಾರವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದ ಸಂಜಯ್ ಗಾಂಧಿ, 1977 ರಲ್ಲಿ ಸೋತರೂ, 1980 ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಆದರೆ ಅದಾಗಿ ಒಂದೇ ತಿಂಗಳಲ್ಲಿ ವಿಮಾನ ದುರಂತದಲ್ಲಿ ಸಂಜಯ್ ಗಾಂಧಿ ಮೃತರಾದರು.

Lok Sabha elections 2019: BJP MP Maneka Gandhi profile

* ತುರ್ತು ಪರಿಸ್ಥಿತಿಯ ನಂತರ 'ಸುರ್ಯ' ಎಂಬ ಪತ್ರಿಕೆಯನ್ನು ಆರಂಭಿಸಿದ್ದ ಮನೇಕಾ ಗಾಂಧಿ, ಪಕ್ಷ ಮತ್ತೆ ಪುಟಿದೇಳಲು ಸಹಕಾರಿಯಾಗಿದ್ದರು.

* ಸಂಜಯ್ ಗಾಂಧಿ ಮೃತರಾಗುವಾಗ ಮನೇಕಾ ಗಾಂಧಿ-ಸಂಜಯ್ ಗಾಂಧಿ ಅವರ ಪುತ್ರ ವರುಣ್ ಗಾಂಧಿ ಜನಸಿ, ಕೇವಲ 100 ದಿನವಾಗಿತ್ತು!

* ಸಂಜಯ್ ನಿಧನದ ನಂತರ ಮನೇಕಾ ಗಾಂಧಿ ಅವರನ್ನು ಇಂದಿರಾ ಗಾಂಧಿ ನಡೆಸಿಕೊಳ್ಳುವ ರೀತಿಯೇ ಬದಲಾಯಿತು.

* ಸಂಜಯ್ ಗಾಂಧಿ ನಿಧನದ ಕೆಲವು ದಿಗಳ ನಂತರ ಮನೇಕಾ ಗಾಂಧಿ ಅವರನ್ನು ಮನೆಯಿಂದ ಆಚೆ ಕಳಿಸಲಾಯಿತು.

* ಮನೆಯಿಂದ ಹೊರಬಂದ ಮನೇಕಾ ರಾಷ್ಟ್ರೀಯ ಸಂಜಯ ಮಂಚ್ ಎಂಬ ಪಕ್ಷ ಕಟ್ಟಿದರು. ಯುವಕರ ಸಬಲೀಕರಣ ಮತ್ತು ದುರುಯೋಗದ ಉದ್ದೇಶ ಈ ಪಕ್ಷದ್ದಾಗಿತ್ತು.

* ಆಂಧ್ರಪ್ರದೇಶದಲ್ಲಿ ಅದೇ ವರ್ಷ ಐದು ಸೀಟುಗಳಲ್ಲಿ ಈ ಪಕ್ಷ ಗೆಲುವು ಸಾಧಿಸಿತು.

* 1984 ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ಪತಿಯ ಸಹೋದರ ರಾಜೀವ್ ಗಾಂಧಿ ವಿರುದ್ಧ ಮನೇಕಾ ಗಾಂಧಿ ಚುನಾವಣೆಗೆ ಸ್ಪರ್ಧಿಸಿ ಸೋತರು.

* 1988 ರಲ್ಲಿ ವಿಪಿ ಸಿಂಗ್ ಅವರ ಜನತಾದಳ ಕ್ಕೆ ಸೇರಿದ ಮನೇಕಾ ಗಾಂಧಿಯವರನ್ನು ಪ್ರಧಾನಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು.

* 1989 ರಲ್ಲಿ ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದಿಂದ ಸ್ಪರ್ಧಿಸಿದ ಮನೇಕಾ ಗಾಂಧಿ ಗೆದ್ದು, ಸಂಸದೆಯಾದರು. ಜೊತೆಗೆ ಪರಿಸರ ಖಾತೆ ಸಚಿವೆಯೂ ಆದರು.

* 1996 ರಿಂದ ಮೊದಲ್ಗೊಂಡು, 2009 ರವರೆಗೆ ಸತತ ಐದು ಬಾರಿ ಪಿಲಿಭಿತ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು.

* 1998-99 ಮತ್ತು 1999-2004 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು, 2004 ರಿಂದ ಬಿಜೆಪಿಯಿಂದ ಸ್ಪರ್ಧಿಸಿದರು.

* 2009-14 ಉತ್ತರ ಪ್ರದೇಶದ ಔನ್ಲಾ ಕ್ಷೇತ್ರದಿಂದ ಗೆದ್ದರೆ, ಮತ್ತೆ 2014 ರಲ್ಲಿ ಪಿಲಿಭಿತ್ ಕ್ಷೇತ್ರದಿಂದ ಗೆಲುವು ಸಾಧಿಸಿದರು.

* ಪ್ರಸ್ತುತ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

* ರಾಜಕೀಯವಾಗಿ ಅಷ್ಟೇ ಅಲ್ಲದೆ, ಪ್ರಾಣಿ ಹಕ್ಕು ಕಾರ್ಯಕರ್ತೆಯಾಗಿಯೂ ಮನೇಕಾ ಗಾಂಧಿ ಸಾಕಷ್ಟು ಹೆಸರು ಮಾಡಿದ್ದಾರೆ.
* ಸಾಮಾಜಿಕ ಕಾರ್ಯಕರ್ತೆಯಾಗಿ ಅವರು ಮಾಡಿದ ಸೇವಾಕಾರ್ಯಗಳಿಗಾಗಿ ರುಕ್ಮಿಣಿ ದೇವಿ ಅರುಂದೇಳ್ ಪ್ರಾಣಿ ಹಿತರಕ್ಷಣಾ ಪ್ರಶಸ್ತಿ, ಎಎಸ್ ಜಿ ಜವಾಕರ್ ಪ್ರಶಸ್ತಿ, ಮಹಿಳಾ ಸಾಧಕಿ ಪ್ರಶಸ್ತಿ, ಪ್ರಾಣಿ ಮಿತ್ರ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳು ಲಭಿಸಿವೆ.

* ಸಂಜಯ್ ಗಾಂಧಿ, ದಿ ರೇನ್ ಬೋ ಅಂಡ್ ಅದರ್ ಸ್ಟೋರೀಸ್, 1001 ಅನಿಮಲ್ ಕ್ವಿಜ್ ಸೇರಿದಂತೆ 14 ಪುಸ್ತಕಗಳನ್ನು ಅವರು ಬರೆದಿದ್ದಾರೆ.

* ಪಿಲಿಭಿತ್ ಕ್ಷೇತ್ರದಲ್ಲಿ 2014 ರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮನೇಕಾ ಸಂಜಯ್ ಗಾಂಧಿ 5,46,934 ಮತಗಳನ್ನು ಪಡೆದು, ಸಮಾಜವಾದಿ ಪಕ್ಷದ ಬುದ್ಧಸೇನ್ ವರ್ಮಾ ಅವನ್ನು ಸೋಲಿಸಿದ್ದರು. ಸಮಾಜವಾದಿ ಪಕ್ಷದ ಅಭ್ಯರ್ಥಿ ಪಡೆದ ಮತಗಳು 2,39,882

English summary
Maneka Sanjay Gandhi is the Indian Union Cabinet Minister for Women and Child Development in the Government of PM Narendra Modi. She represents Pilibhit constituency in Uttar Pradesh. Here is her brief profile
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X