ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಚುನಾವಣಾ ಪ್ರಣಾಳಿಕೆ: ರಸ್ತೆ, ರೈಲು ಅಭಿವೃದ್ಧಿಗೆ ಭರಪೂರ ಘೋಷಣೆ

|
Google Oneindia Kannada News

ನವದೆಹಲಿ, ಏಪ್ರಿಲ್ 8: ಬಿಜೆಪಿ ಸೋಮವಾರ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಮೂಲಸೌಕರ್ಯಕ್ಕೆ ಸಾಕಷ್ಟು ಒತ್ತು ನೀಡಲಾಗಿದೆ. ಅದರಲ್ಲಿಯೂ ರಸ್ತೆ ಮತ್ತು ರೈಲ್ವೆ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಯೋಜನೆಗಳನ್ನು ಕೈಗೊಳ್ಳುವ ಭರವಸೆ ನೀಡಲಾಗಿದೆ.

ಹೊಸ ಹೆದ್ದಾರಿಗಳ ನಿರ್ಮಾಣ, ರಸ್ತೆಗಳ ಸಂಪರ್ಕ, ಬ್ರಾಡ್‌ಗೇಜ್‌ಗಳ ವಿಸ್ತರಣೆ, ನಿಲ್ದಾಣಗಳನ್ನು ಮತ್ತು ರೈಲ್ವೆ ಬೋಗಿಗಳನ್ನು ಮೇಲ್ದರ್ಜೆಗೇರಿಸುವುದು ಮುಂತಾದ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ಬಿಜೆಪಿ ಪ್ರಣಾಳಿಕೆ LIVE: ಏನಿದೆ 'ಸಂಕಲ್ಪ ಪತ್ರ'ದಲ್ಲಿ?ಬಿಜೆಪಿ ಪ್ರಣಾಳಿಕೆ LIVE: ಏನಿದೆ 'ಸಂಕಲ್ಪ ಪತ್ರ'ದಲ್ಲಿ?

* ಮುಂದಿನ ಐದು ವರ್ಷಗಳಲ್ಲಿ 60,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗುವುದು.

* 2022ರ ವೇಳೆಗೆ ರಾಷ್ಟ್ರೀಯ ಹೆದ್ದಾರಿಗಳ ಉದ್ದವನ್ನು ದ್ವಿಗುಣಗೊಳಿಸಲಾಗುವುದು.

Lok Sabha elections 2019 BJP Manifesto road railway track and airport developments

* ಭಾರತಮಾಲಾ ಯೋಜನೆಯ ಮೊದಲ ಹಂತವನ್ನು ಬೇಗನೆ ಪೂರ್ಣಗೊಳಿಸಲಾಗುವುದು. ಜತೆಗೆ ಮುಖ್ಯ ರಸ್ತೆಗಳಿಗೆ ಒಳ ರಸ್ತೆಗಳನ್ನು ಜೋಡಿಸಲು ರಾಜ್ಯ ರಸ್ತೆ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸುವ ಭಾರತ್ ಮಾಲಾ 2.0 ಯೋಜನೆಯನ್ನು ಆರಂಭಿಸಲಾಗುವುದು.

ಬಿಜೆಪಿ ಚುನಾವಣಾ ಪ್ರಣಾಳಿಕೆ: ಕೃಷಿ ಕ್ಷೇತ್ರಕ್ಕೆ ಭರವಸೆಗಳೇನು? ಬಿಜೆಪಿ ಚುನಾವಣಾ ಪ್ರಣಾಳಿಕೆ: ಕೃಷಿ ಕ್ಷೇತ್ರಕ್ಕೆ ಭರವಸೆಗಳೇನು?

* ರಸ್ತೆ ನಿರ್ಮಾಣ, ನಿರ್ವಹಣೆ ಮತ್ತು ಕಾರ್ಯಾಚರಣೆಗಳಲ್ಲಿ ಹೊಸ ತಂತ್ರಜ್ಞಾನ ಮತ್ತು ವಿನ್ಯಾಸಗಳನ್ನು ತರಲಾಗುವುದು.

* ಶುದ್ಧ ಇಂಧನ ಮತ್ತು ಬ್ಯಾಟರಿ ಚಾಲಿತ ವಾಹನಗಳಿಗೆ ಉತ್ತೇಜನ ಕೊಡುವ ಇ-ಮೊಬಿಲಿಟಿಯನ್ನು ವಿಸ್ತರಿಸಲಾಗುವುದು.

ಬಿಜೆಪಿ ಚುನಾವಣೆ ಪ್ರಣಾಳಿಕೆ : ಎಲ್ಲಕ್ಕಿಂತ ದೇಶ ಮೊದಲುಬಿಜೆಪಿ ಚುನಾವಣೆ ಪ್ರಣಾಳಿಕೆ : ಎಲ್ಲಕ್ಕಿಂತ ದೇಶ ಮೊದಲು

ರೈಲ್ವೆ ಯೋಜನೆ

* 2022ರ ವೇಳೆಗೆ ಎಲ್ಲ ರೈಲ್ವೆ ಹಳಿಗಳನ್ನು ಬ್ರಾಡ್‌ಗೇಜ್‌ಗೆ ಪರಿವರ್ತಿಸಲಾಗುವುದು.

* 2022ರ ವೇಳೆಗೆ ಎಲ್ಲ ರೈಲ್ವೆ ಹಳಿಗಳನ್ನು ವಿದ್ಯುದೀಕರಿಸಲು ಸರ್ವ ಪ್ರಯತ್ನ ಮಾಡಲಾಗುವುದು.

* 2022ರ ವೇಳೆಗೆ ಸರಕು ಸಾಗಾಡ ಕಾರಿಡಾರ್ ಅನ್ನು ಪೂರ್ಣಗೊಳಿಸಲಾಗುವುದು.

* 2022ರ ಅವಧಿಗೆ ಎಲ್ಲ ಮುಖ್ಯ ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಸಿಗುವಂತೆ ಮಾಡಲಾಗುವುದು.

ಬಿಜೆಪಿ ಪ್ರಣಾಳಿಕೆ : ಗ್ರಾಮೀಣಾಭಿವೃದ್ಧಿಗೆ 5 ಸಂಕಲ್ಪಗಳುಬಿಜೆಪಿ ಪ್ರಣಾಳಿಕೆ : ಗ್ರಾಮೀಣಾಭಿವೃದ್ಧಿಗೆ 5 ಸಂಕಲ್ಪಗಳು

ಹೊಸ ವಿಮಾನ ನಿಲ್ದಾಣಗಳು

2014ರ ಅವಧಿಯಲ್ಲಿ ದೇಶದಲ್ಲಿ 65 ವಿಮಾನ ನಿಲ್ದಾಣಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಇಂದು 101 ವಿಮಾನ ನಿಲ್ದಾಣಗಳು ಕಾರ್ಯಾಚರಣೆ ನಡೆಸುತ್ತಿವೆ. ಮುಂದಿನ ಐದು ವರ್ಷಗಳಲ್ಲಿ ಕಾರ್ಯನಿರತ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಲಾಗುವುದು.

English summary
Lok Sabha elections 2019: BJP has released its manifesto on Monday. It assured many programmes for road and railway connectivity. And also on Airport functional.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X