ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಪ್ರಣಾಳಿಕೆ : ಗ್ರಾಮೀಣಾಭಿವೃದ್ಧಿಗೆ 5 ಸಂಕಲ್ಪಗಳು

|
Google Oneindia Kannada News

Recommended Video

Lok Sabha Elections 2019: ಬಿಜೆಪಿ ಪ್ರಣಾಳಿಕೆಯಲ್ಲಿ ಗ್ರಾಮೀಣಾಭಿವೃದ್ಧಿಗೆ 5 ಸಂಕಲ್ಪಗಳು

ಬೆಂಗಳೂರು, ಏಪ್ರಿಲ್ 08 : 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆಯಾಗಿದೆ. 'ಸಂಕಲ್ಪ ಪತ್ರ' ಎಂಬ ಶೀರ್ಷಿಕೆಯ ಪ್ರಣಾಳಿಕೆ ಮೂಲಕ ದೇಶದ ಜನರಿಗೆ ಆಡಳಿತಾರೂಢ ಪಕ್ಷ ಹಲವು ಭರವಸೆಗಳನ್ನು ನೀಡಿದೆ.

ಸೋಮವಾರ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು 45 ಪುಟಗಳ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಕೃಷಿ, ರಾಷ್ಟ್ರೀಯ ಸುರಕ್ಷತೆ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿ ಹಲವು ಹೊಸ ಭರವಸೆಗಳನ್ನು ನೀಡಲಾಗಿದೆ.

ಬಿಜೆಪಿ ಪ್ರಣಾಳಿಕೆ : ಏನಿದೆ 'ಸಂಕಲ್ಪ ಪತ್ರ'ದಲ್ಲಿ?ಬಿಜೆಪಿ ಪ್ರಣಾಳಿಕೆ : ಏನಿದೆ 'ಸಂಕಲ್ಪ ಪತ್ರ'ದಲ್ಲಿ?

ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಪ್ರಣಾಳಿಕೆ ರಚನೆ ಮಾಡಲು 12 ಸದಸ್ಯರ ಸಮಿತಿಯನ್ನು ರಚನೆ ಮಾಡಲಾಗಿತ್ತು. 'ಸಂಕಲ್ಪ ಭಾರತ್ ಸಶಕ್ತ ಭಾರತ್ ಎಂಬ ಶೀರ್ಷಿಕೆಯ ಪ್ರಣಾಳಿಕೆ ಮೂಲಕ ನವ ಭಾರತ ನಿರ್ಮಾಣದತ್ತ ಒಂದು ಹೆಜ್ಜೆ ಮುಂದಿಡುತ್ತಿದ್ದೇವೆ' ಎಂದು ರಾಜನಾಥ್ ಸಿಂಗ್ ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆ : ಯಾರಿಗೆ ಮೊದಲ ಆದ್ಯತೆ?ಕಾಂಗ್ರೆಸ್ ಪ್ರಣಾಳಿಕೆ : ಯಾರಿಗೆ ಮೊದಲ ಆದ್ಯತೆ?

ಬಿಜೆಪಿ ಪ್ರಣಾಳಿಕೆಯಲ್ಲಿ ಗ್ರಾಮೀಣಾಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗಿದೆ. ಗ್ರಾಮ ಸ್ವರಾಜ್‌ಗಾಗಿ 5 ಅಂಶಗಳ ಕಾರ್ಯಕ್ರಮವನ್ನು ಘೋಷಣೆ ಮಾಡಲಾಗಿದೆ. ಡಿಜಿಟಲ್ ಭಾರತ್ ಅಡಿಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಆಫ್ಟಿಕಲ್ ಫೈಬರ್ ಸೌಲಭ್ಯ ಒದಗಿಸಲು ಸಂಕಲ್ಪ ಮಾಡಲಾಗಿದೆ....

ಎಲ್ಲಾ ಪಕ್ಷಗಳ ಪ್ರಣಾಳಿಕೆ ಓದಿ

2022ರ ವೇಳೆಗೆ ಎಲ್ಲರಿಗೂ ಮನೆ

2022ರ ವೇಳೆಗೆ ಎಲ್ಲರಿಗೂ ಮನೆ

ಸಾಶ್ರಯ ಎಂಬ ಸಂಕಲ್ಪದೊಂದಿಗೆ ಬಿಜೆಪಿ ದೇಶದ ಪ್ರತಿಯೊಬ್ಬರ ಪ್ರಜೆಗೂ ಸೂರು ಕಲ್ಪಿಸುವ ಭರವಸೆ ನೀಡಿದೆ. ಪ್ರತಿಯೊಬ್ಬ ಪ್ರಜೆಗೂ ಪಕ್ಕಾ ಮನೆ ನಿರ್ಮಾಣ ಮಾಡಲಾಗುತ್ತದೆ. ಕಚ್ಚಾ ಮನೆ ಹೊಂದಿರುವ ಅಥವ ಮನೆಯೇ ಇಲ್ಲದ ವ್ಯಕ್ತಿಗೂ 2022ರ ವೇಳೆಗೆ ತಲೆಯ ಮೇಲೊಂದು ಸೂರು ಸಿಗಲಿದೆ.

ಕುಡಿಯುವ ನೀರು

ಕುಡಿಯುವ ನೀರು

ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ಪೈಪ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಸಂಕಲ್ಪವನ್ನು ಬಿಜೆಪಿ ಮಾಡಿದೆ. 'ಜಲ್ ಮಿಷನ್' ಎಂಬ ಘೋಷಣೆಯಡಿ 'ನಲ್ ಸೇ ಜಲ್' (ನಲ್ಲಿಯ ಮೂಲಕ ನೀರು) ಎಂಬ ಯೋಜನೆಡಿ ಪ್ರತಿ ಮನೆಗೂ 2024ರ ವೇಳೆಗೆ ಕುಡಿಯುವ ನೀರು ಕೊಡುವ ಭರವಸೆ ನೀಡಲಾಗಿದೆ.

ಸಡಕ್ ಸೇ ಸಮೃದ್ಧಿ

ಸಡಕ್ ಸೇ ಸಮೃದ್ಧಿ

ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿ ಮಾಡುವ ಭರವಸೆಯನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. 'ಸಡಕ್‌ ಸೇ ಸಮೃದ್ಧಿ' ಎಂಬ ಸಂಕಲ್ಪವನ್ನು ಪಕ್ಷ ಮಾಡಿದೆ. 'ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ' ಯಡಿ ಪ್ರತಿ ಕುಗ್ರಾಮದಿಂದ ಶಾಲೆ, ಆಸ್ಪತ್ರೆ, ಮಾರುಕಟ್ಟೆಗಳಿಗೆ ಸಂಪರ್ಕಿಸಲು ಉತ್ತಮ ರಸ್ತೆ ನಿರ್ಮಾಣವಾಗಲಿದೆ.

ಗ್ರಾಮ ಪಂಚಾಯಿತಿಗೆ ಇಂಟರ್‌ ನೆಟ್

ಗ್ರಾಮ ಪಂಚಾಯಿತಿಗೆ ಇಂಟರ್‌ ನೆಟ್

ದೇಶದ ಪ್ರತಿ ಗ್ರಾಮ ಪಂಚಾಯಿತಿಗೆ ಆಫ್ಟಿಕಲ್ ಕೇಬಲ್ ಮೂಲಕ ಹೈ ಸ್ಪೀಡ್ ಇಂಟರ್‌ನೆಟ್ ನೀಡುವ ಭರವಸೆನ್ನು ಬಿಜೆಪಿ ನೀಡಿದೆ. 2022ರ ವೇಳೆಗೆ ಈ ಗುರಿಯನ್ನು ತಲುಪುವ ಸಂಕಲ್ಪ ಮಾಡಲಾಗಿದೆ. ಸೂಚನಾ ಸೇ ಸಶಕ್ತಿಕರಣ್ ಎಂಬ ಶೀರ್ಷಿಕೆಯಡಿ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತದೆ.

ಸ್ವಚ್ಛ ಭಾರತ್ ಮಿಷನ್

ಸ್ವಚ್ಛ ಭಾರತ್ ಮಿಷನ್

ಗ್ರಾಮೀಣ ಪ್ರದೇಶದಲ್ಲಿ ಕೊಳಚೆ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬಿಜೆಪಿ ಸಂಕಲ್ಪ ತೊಟ್ಟಿದೆ. ಶೇ 100ರಷ್ಟು ಕೊಳಚೆ ನೀರಿನ ಸಮಸ್ಯೆ ಬಗೆಹರಿಸುವುದು ಮತ್ತು ನೀರಿನ ಸಂಸ್ಕರಣೆಗೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಹೇಳಿದೆ.

English summary
BJP on April 8, 2019 released the party manifesto for the Lok sabha elections 2019. Manifesto promises 5 programs for the development of village in the name of Gram Swaraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X