• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿ ಚುನಾವಣಾ ಪ್ರಣಾಳಿಕೆ: ವಿದೇಶಾಂಗ ನೀತಿಗೆ ಇನ್ನಷ್ಟು ಬಲ

|

ನವದೆಹಲಿ, ಏಪ್ರಿಲ್ 8: 'ಜಗತ್ತಿನಲ್ಲಿ ಭಾರತದ ಸಮಯ ಬಂದಿದೆ ಎಂದು ನಾವು ನಂಬುತ್ತೇವೆ. ಆಕೆ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾಳೆ ಮತ್ತು ಬಹು ಧ್ರುವದ ವಿಶ್ವದಲ್ಲಿ ದೇಶಗಳೊಂದಿಗೆ ಸಂಪರ್ಕ ಸಾಧಿಸಲಾಗುತ್ತಿದೆ. ಭಾರತದ ಉದಯ ಹೊಸ ವಾಸ್ತವ ಮತ್ತು 21ನೇ ಶತಮಾನದಲ್ಲಿ ಜಾಗತಿಕ ಕಾರ್ಯಸೂಚಿಯನ್ನು ರೂಪಿಸುವಲ್ಲಿ ನಾವು ಪ್ರಮುಖ ಪಾತ್ರ ವಹಿಸಬಹುದಾಗಿದೆ'

ಇದು ಬಿಜೆಪಿ ಸೋಮವಾರ ಬಿಡುಗಡೆ ಮಾಡಿದ ತನ್ನ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ವಿದೇಶಾಂಗ ನೀತಿಗಳ ಕುರಿತಾಗಿ ನೀಡಿದ ಹೇಳಿಕೆ. ಈ ಪ್ರಣಾಳಿಕೆಯಲ್ಲಿ ವಿದೇಶಗಳೊಂದಿಗೆ ಯಾವ ರೀತಿ ಬಾಂಧವ್ಯ ಮುಂದುವರಿಸಲಿದೆ ಎಂಬ ಬಗ್ಗೆ ವಿವರಿಸಲಾಗಿದೆ.

ಬಿಜೆಪಿ ಚುನಾವಣಾ ಪ್ರಣಾಳಿಕೆ: ಕೃಷಿ ಕ್ಷೇತ್ರಕ್ಕೆ ಭರವಸೆಗಳೇನು?

* 'ವಸುದೈವ ಕುಟುಂಬಕಂ' ಎಂಬ ಪ್ರಾಚೀನ ಭಾರತದ ದೃಷ್ಟಿಕೋನದಂತೆ ರಾಷ್ಟ್ರೀಯ ಅಭಿವೃದ್ಧಿ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಸಾಧಿಸುವಾಗ, ಸ್ನೇಹಿ ದೇಶಗಳು ಮತ್ತು ನೆರೆಹೊರೆಯವರೊಂದಿಗೆ ಪ್ರಗತಿ, ಸಮೃದ್ಧಿ, ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದ ಜಾಗತಿಕ ಸಹಕಾರ ಬೆಳೆಸಲಾಗುವುದು. ನೈಸರ್ಗಿಕ ಅವಘಡಗಳ ಪರಿಹಾರ ಮತ್ತು ಮಾನವೀಯ ನೆರವಿಗಾಗಿ ಮೊದಲ ಸ್ಪಂದನೆ ಮಾಡಲಾಗುವುದು.

* ನಮ್ಮ ರಾಜತಾಂತ್ರಿಕ ಸಂಬಂಧದವನ್ನು ಮುಖ್ಯವಾಗಿ ಗಮನದಲ್ಲಿ ಇರಿಸಿಕೊಂಡು ಎಲ್ಲ ದೇಶಗಳ ಅಭಿವೃದ್ಧಿಗಾಗಿ ತಂತ್ರಜ್ಞಾನದ ವರ್ಗಾವಣೆ ಮತ್ತು ಜ್ಞಾನದ ವಿನಿಮಯ ಮಾಡಿಕೊಳ್ಳಲಾಗುವುದು. ಬಾಹ್ಯಾಕಾಶ ತಂತ್ರಜ್ಞಾನದ ಲಾಭ ಎಲ್ಲ ದೇಶಗಳಿಗೂ, ಮುಖ್ಯವಾಗಿ ಸಣ್ಣ ರಾಷ್ಟ್ರಗಳಿಗೂ ದೊರಕುವಂತೆ ಮಾಡಲು ಬಾಹ್ಯಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳಿಗೆ ಸಂಬಂಧಿಸಿದಂತೆ ಸಹಕಾರ ಮತ್ತು ಉತ್ತಮ ಸಂಯೋಜನೆಗಾಗಿ 'ಅಂತಾರಾಷ್ಟ್ರೀಯ ಬಾಹ್ಯಾಕಾಶ ತಂತ್ರಜ್ಞಾನ ಮೈತ್ರಿ' ಮಾಡಿಕೊಳ್ಳಲಾಗುವುದು.

ಬಿಜೆಪಿ ಪ್ರಣಾಳಿಕೆ LIVE: ಏನಿದೆ 'ಸಂಕಲ್ಪ ಪತ್ರ'ದಲ್ಲಿ?

* ಭಾರತೀಯ ಸಮುದಾಯದೊಂದಿಗೆ ಸಂವಾದವನ್ನು ಹೆಚ್ಚಿಸಲು 'ಭಾರತ್ ಗೌರವ್' ಆಂದೋಲನವನ್ನು ಏಕಕಾಲದಲ್ಲಿ ಆರಂಭಿಸಲಾಗುವುದು.

* ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳು ಮತ್ತು ಸಂಘಟನೆಗಳ ವಿರುದ್ಧ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಠಿಣ ಹೆಜ್ಜೆ ತೆಗೆದುಕೊಳ್ಳಲಾಗುವುದು. ಅಂತಹ ದೇಶಗಳು ಮತ್ತು ಸಂಘಟನೆಗಳನ್ನು ಪ್ರತ್ಯೇಕಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ 'ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧ ರಾಷ್ಟ್ರಗಳ ಸಮಿತಿ' ಎಂಬ ಸ್ವಯಂ ಪ್ರೇರಿತ ಬಹು ರಾಷ್ಟ್ರೀಯ ಒಕ್ಕೂಟ ರಚಿಸಲು ಪ್ರಯತ್ನಿಸಲಾಗುವುದು.

ಬಿಜೆಪಿ ಚುನಾವಣಾ ಪ್ರಣಾಳಿಕೆ: ರಸ್ತೆ, ರೈಲು ಅಭಿವೃದ್ಧಿಗೆ ಭರಪೂರ ಘೋಷಣೆ

* ವಿಶ್ವಸಂಸ್ಥೆ, ಜಿ20, ಬ್ರಿಕ್ಸ್, ಎಸ್‌ಸಿಒ, ಕಾಮನ್‌ವೆಲ್ತ್ ಮುಂತಾದ ವೇದಿಕೆಗಳ ಮೂಲಕ ಜಾಗತಿಕ ವಿಪತ್ತುಗಳ ವಿರುದ್ಧ ಸಹಕಾರಯುತ ಹೋರಾಟ ನಡೆಸಲಾಗುವುದು. ರಷ್ಯಾ-ಭಾರತ-ಚೀನಾ ಮತ್ತು ಜಪಾನ್-ಅಮೆರಿಕ-ಭಾರತದಂತಹ ಪ್ರಮುಖ ಒಕ್ಕೂಟ ಬಾಂಧವ್ಯವನ್ನು ಬಲಗೊಳಿಸಲಾಗುವುದು. 'ನೆರೆಹೊರೆಯವರು ಮೊದಲು' ನೀತಿಯಲ್ಲಿ ಪ್ರಾದೇಶಿಕ ಸಂಯೋಜನೆ ಮತ್ತು ಆರ್ಥಿಕ ಸಹಕಾರವನ್ನು ವೃದ್ಧಿಸಲಾಗುವುದು.

ಬಿಜೆಪಿ ಚುನಾವಣೆ ಪ್ರಣಾಳಿಕೆ : ಎಲ್ಲಕ್ಕಿಂತ ದೇಶ ಮೊದಲು

* ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆದುಕೊಳ್ಳಲು ನಾವು ಬದ್ಧರಾಗಿದ್ದೇವೆ.

ಬಿಜೆಪಿ ಪ್ರಣಾಳಿಕೆ : ಗ್ರಾಮೀಣಾಭಿವೃದ್ಧಿಗೆ 5 ಸಂಕಲ್ಪಗಳು

* ಜಾಗತಿಕವಾಗಿ ಭಾರತದ ತೊಡಗಿಕೊಳ್ಳುವಿಕೆ ಮತ್ತು ಚಟುವಟಿಕೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜತಾಂತ್ರಿಕ ಮತ್ತು ಅದರ ಅಧೀನ ಕೇಂದ್ರಗಳನ್ನು ಬಲಗೊಳಿಸಲಾಗುವುದು. ವಿದೇಶಾಂಗ ನೀತಿ ಪರಿಣತರ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಲಾಗುವುದು. ವಿದೇಶಾಂಗ ನೀತಿಗಾಗಿಯೇ ಮೀಸಲಾದ ವಿಶ್ವವಿದ್ಯಾಲಯ ಆರಂಭಿಸಲಾಗುವುದು. ಶೈಕ್ಷಣಿಕ ಅಧ್ಯಯನ ಮತ್ತು ವಿದೇಶಾಂಗ ನೀತಿಗಳು ಸಂಶೋಧನೆಗೆ ಆದ್ಯತೆ ನೀಡಲಾಗುವುದು.

English summary
Lok Sabha elections 2019: BJP has released its manifesto on Monday. It assured many programmes in Foreign Policy with the theme of 'Vasudaiva Kutumbakam'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X